Just In
Don't Miss
- News
ಬರಲಿವೆ ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲುಗಳು: ಭಾರತ ಹಾಗೂ ಕರ್ನಾಟಕದ ಯಾವ ನಗರಗಳ ನಡುವೆ ಸಂಚಾರ?
- Automobiles
ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ
- Movies
ವಾಣಿ ಜಯರಾಂ ಸಾವು: ಮರಣೋತ್ತರ ಪರೀಕ್ಷೆ ವಿವರ ಬಹಿರಂಗ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿಮ್ಮ 'ಸಿಮ್' ಜೋಪಾನ..ಈ ಒಂದು ತಪ್ಪಿನಿಂದ ಮನೆ ಮಠ ಕಳೆದುಕೊಳ್ಳಬಹುದು!
ಈ ಮೊದಲು ಆಮಿಷಗಳನ್ನು ತೋರಿಸಿ ಜನರಿಗೆ ವಂಚಿಸುತ್ತಿದ್ದ ಸೈಬರ್ ಕ್ರಿಮಿನಲ್‌ಗಳು ಈಗ 'ಸಿಮ್ ಸ್ವ್ಯಾಪ್' ಎಂಬ ಹೊಸ ಮಾದರಿಯ ಅಪರಾಧ ದಾರಿಯನ್ನು ಕಂಡುಕೊಂಡಿದ್ದಾರೆ. ತಂತ್ರಜ್ಞಾನಗಳ ಬಗ್ಗೆ ಸಾಕಷ್ಟು ಮಾಹಿತಿ ಇರುವವರನ್ನು ಸಹ ಸುಲಭವಾಗಿ ವಂಚಿಸಬಹುದಾದ ಈ 'ಸಿಮ್ ಸ್ವ್ಯಾಪ್ ವಂಚನೆ' ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತಕೇಳಿ ಬರುತ್ತಿದೆ.
ಹೌದು, ಈ ಸ್ಮಾರ್ಟ್‌ಫೋನ್, ಡಿಜಿಟಲ್ ವ್ಯವಹಾರದ ಬಗ್ಗೆ ಅಜ್ಞಾನ ಇದ್ದವರು ಮಾತ್ರ ಹಣ ಕಳೆದುಕೊಳ್ಳುತ್ತಾರೆ ಎನ್ನಲಾಗುತ್ತಿತ್ತು. ಆದರೆ, ಸಿಮ್ ಸ್ವ್ಯಾಪ್ ಹಗರಣದಲ್ಲಿ ನಗರದ ಪ್ರದೇಶದ ಯುವಕರೇ ಬಲೆಗೆ ಬಿದ್ದಿದ್ದಾರೆ. ಮೊಬೈಲ್ ವಾಲೆಟ್ ಸೇವೆ ಹೆಚ್ಚು ಬಳಕೆಗೆ ಬಂದ ನಂತರ, ಆನ್‌ಲೈನ್ ಬಗ್ಗೆ ತಿಳಿದಿರುವವರನ್ನು ಸಹ ಮೋಸ ಮಾಡಲು ಕ್ರಿಮಿನಲ್‌ಗಳು ಮುಂದಾಗಿದ್ದಾರೆ.

ಸ್ಮಾರ್ಟ್‌ಫೋನ್ ಮೂಲಕವೇ ಬ್ಯಾಂಕ್ ಖಾತೆ, ಮೊಬೈಲ್ ವ್ಯಾಲೆಟ್ ಎಲ್ಲವನ್ನು ಉಪಯೋಗಿಸುವ ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಬಗ್ಗೆ ಸಾಕಷ್ಟು ಎಚ್ಚರವಾಗಿರಬೇಕಾದ್ದು ಅನಿವಾರ್ಯವಾಗಿದೆ. ಇತ್ತೀಚಿಗೆ ಗ್ರಾಹಕರಿಗೆ ವಂಚಿಸಿ ಅವರ ಖಾತೆಯನ್ನು ತಮ್ಮಲ್ಲಿರುವ ಸಿಮ್‌ಗೆ ಜೋಡಿಸಲು ಪ್ರಯತ್ನಿಸುವ 'ಸಿಮ್ ಸ್ವಾಪ್' ಹಗರಣ ಭಯಹುಟ್ಟಿಸುತ್ತಿದೆ. ಹಾಗಾದರೆ, ಏನಿದು 'ಸಿಮ್ ಸ್ವ್ಯಾಪ್ ವಂಚನೆ'? ಈ ವಂಚನೆ ಪೊಲೀಸರಿಗೂ ತಲೆನೋವಾಗಿರುವುದೇಕೆ? ನಾವುಗಳು ಎಷ್ಟು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ಮುಂದೆ ತಿಳಿಯಿರಿ
ಓದಿರಿ: ಮೊಬೈಲ್‌ನಲ್ಲಿ ಪೋರ್ನ್ ವೀಕ್ಷಿಸುವವರಿಗೆ ಶಾಕಿಂಗ್ ಸುದ್ದಿ!..ಗಾಬರಿ ಹುಟ್ಟಿಸುತ್ತಿದೆ ವರದಿ!!

ಏನಿದು 'ಸಿಮ್ ಸ್ವ್ಯಾಪ್'?
'ಸಿಮ್ ಸ್ವ್ಯಾಪ್' ಎಂದರೇ, 'ನಿಮ್ಮ ಬಳಿ ಈಗಾಗಲೇ ಇರುವ ಫೋನ್ ನಂಬರ್ ಅನ್ನು ಹೊಸ ಸಿಮ್ ಕಾರ್ಡ್‌ಗೆ ನೋಂದಣಿ ಮಾಡಿಸುವುದು' ಎಂದರ್ಥ. ಈ ಕೆಲಸವನ್ನು ನೀವೇ ಮಾಡಿದ್ದರೆ ಯಾವ ತೊಂದರೆಯಿಲ್ಲ. ಆದರೆ, ನಿಮ್ಮ ಮಾಹಿತಿಯನ್ನು ಕದ್ದಿರುವ ಅಪರಿಚಿತರು ಈ ಕೆಲಸ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆ ಕ್ಷಣಾರ್ಧದಲ್ಲಿ ಖಾಲಿಯಾಗುವ ಹಗರಣ ಇದಾಗಿದೆ.!

ಏನಿದು ಸಿಮ್ ಸ್ವ್ಯಾಪ್ ಹಗರಣ ?
ಸಿಮ್ ಬಳಸಿಕೊಂಡು ನಡೆಯುತ್ತಿರುವ ಮೊಬೈಲ್ ವಾಲೆಟ್ ಸೇವೆ ಹೆಚ್ಚು ಬಳಕೆಗೆ ಬಂದ ನಂತರ ಸೈಬರ್ ಕ್ರಿಮಿನಲ್‌ಗಳು ಈಗ ಸಿಮ್ ಅನ್ನು ಸಹ ನಕಲು ಮಾಡಹೊರಟಿದ್ದಾರೆ. ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಯನ್ನು ಹೇಗಾದರೂ ಪಡೆದುಕೊಂಡಿರುವ ಅವರಿಗೆ ಬೇಕಾಗಿರುವುದು ಒಟಿಪಿ ಮಾತ್ರ. ಅದಕ್ಕಾಗಿಯೇ ನಡೆಯುತ್ತಿರುವುದು 'ಸಿಮ್ ಸ್ವ್ಯಾಪ್' ಹಗರಣ.

'ಸಿಮ್ ಸ್ವ್ಯಾಪ್'ನ ಹೆಜ್ಜೆಗಳು!
ನಿಮ್ಮ ಫೋನ್ ನಂಬರ್ ಅನ್ನು ಬ್ಲಾಕ್ ಮಾಡಿ, ಅದೇ ನಂಬರ್‌ನ ಹೊಸ ಸಿಮ್ ಖರೀದಿಸುವುದು ವಂಚಕರ ಮೊದಲ ಹೆಜ್ಜೆಯಾಗಿರುತ್ತದೆ. ಅದಕ್ಕಾಗಿ ಅವರು ನಿಮ್ಮ ದಾಖಲೆಗಳನ್ನು ಹುಡುಕಬಹುದು ಅಥವಾ ನಿಮ್ಮಿಂದಲೇ ಸಿಮ್ ಅನ್ನು ಅವರು ನಕಲಿಸಿಕೊಳ್ಳಬಹುದು. ಈ ಎರಡೂ ರೀತಿಯಿಂದಲೂ ಅವರು ನಿಮ್ಮನ್ನು ಕ್ಷಣಾರ್ಧದಲ್ಲಿ ಮೋಸಗೊಳಿಸಬಹುದು.

ವಿಶಿಷ್ಟ 20 ಡಿಜಿಟ್ ನಂಬರ್
ಕಾಲ್‌ಡ್ರಾಫ್ಸ್ ಸೇರಿದಂತೆ ಕರೆ ಸೇವೆಯವನ್ನು ಮತ್ತಷ್ಟು ಸುಲಭಗೊಳಿಸುತ್ತೇವೆ ಎಂದು ನಿಮಗೊಂದು ಕರೆ ಬರುತ್ತದೆ. ಕಸ್ಟಮರ್ ಕೇರ್ ಸೂಗಿನಲ್ಲಿ ಕರೆ ಮಾಡುವ ಇವರು ಕರೆ ಮಾಡುವುದೇ ನಿಮ್ಮ ಸಿಮ್ ಹಿಂಬದಿಯ ನಂಬರ್ ಯಾವುದೆಂದು ತಿಳಿದುಕೊಳ್ಳಲು. ಒಮ್ಮೆ ನೀವು ಅವರ ಆದೇಶವನ್ನು ಚಾಚು ತಪ್ಪದೆ ಪಾಲಿಸಿದರೆ ನಿಮ್ಮ ಬ್ಯಾಂಕ್ ಅಂಕೌಂಟ್ ಖಾಲಿ ಖಾಲಿ.!

ಒಂದನ್ನು ಪ್ರೆಸ್ ಮಾಡಲು ಹೇಳುತ್ತಾರೆ!
ನಿಮ್ಮ ಸಿಮ್‌ನ 20 ಡಿಜಿಟ್ ಸಂಖ್ಯೆ ಪಡೆದ ವಂಚಕ, ಅಧಿಕೃತವಾಗಿಹೊಸ ಸಿಮ್ ಪಡೆಯಲು ಮುಂದಾಗುತ್ತಾನೆ. ಆಗ, ನಿಮ್ಮ ಫೋನ್‌ಗೆ ಟೆಲಿಕಾಂ ಕಂಪೆನಿಯಿಂದ ಕನ್ಫರ್ಮೇಷನ್ ಎಸ್‌ಎಂಎಸ್ ಬರುತ್ತದೆ. ಆಗ ವಂಚಕ, ನಿಮಗೆ ಕರೆ ಮಾಡಿ ಒಂದನ್ನು ಪ್ರೆಸ್ ಮಾಡಲು ಸೂಚಿಸುತ್ತಾನೆ. ನೀವು ಒತ್ತಿದರೆ, ನಿಮ್ಮ ಸಿಮ್ ಬ್ಲಾಕ್ ಆಗಿ ಅವನ ಬಳಿ ನಿಮ್ಮ ಸಿಮ್ ಇರುತ್ತದೆ.

ಹಣ ಹೇಗೆ ಕಳೆದುಕೊಳ್ಳುತ್ತೀರಾ?
ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಯನ್ನು ಪಡೆದ ವಂಚಕರು ಎಟಿಎಂ ಕಾರ್ಡ್‌ನಲ್ಲಿರುವ "ಸಿವಿವಿ" ನಂಬರ್ ಮೂಲಕ ಆನ್‌ಲೈನ್ ವ್ಯವಹಾರ ಮಾಡುತ್ತಾರೆ. ಈಗ ಸಿವಿವಿ ನಂಬರ್ ಮತ್ತು ಮೊಬೈಲ್ ಒಟಿಪಿ ಇದ್ದರೆ ಆನ್‌ಲೈನಿನಲ್ಲಿ ಹಣ ವರ್ಗಾವಣೆ ಕ್ಷಣಾರ್ಧದಲ್ಲಿ ನಡೆಯುತ್ತದೆ. ಈ ಎರಡು ಮಾಹಿತಿಗಳನ್ನು ನಿಮ್ಮಿಂದ ಪಡೆದ ಅವರು ನಿಮ್ಮ ಹಣ ದೋಚುತ್ತಾರೆ.

ಎಟಿಎಂ ಕಾರ್ಡ್ ಮಾಹಿತಿ ಅವರಿಗೆ ಸಿಗುವುದು ಹೇಗೆ?
ನಕಲಿ ವೆಬ್‌ಸೈಟ್ ಅನ್ನು ತೆರೆಯುವ ಕ್ರಿಮಿನಲ್‌ಗಳು ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿ ಮಾಡಲು ಪ್ರೇರೇಪಿಸುತ್ತಾರೆ. ಒಮ್ಮೆ ವ್ಯವಹಾರ ನಡೆದರೆ ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿ ಪಡೆಯುತ್ತಾರೆ.

ತಕ್ಷಣ ಪಾರಾಗುವುದು ಸಾಧ್ಯ.
ಮೊಬೈಲ್‌ನ ಎಲ್ಲಾ ಚಟುವಟಿಕೆಗಳ ಬಗ್ಗೆ ನಿಗಾವಹಿಸುವ ಮೂಲಕ ಇಂತಹ ಹಗರಣದಿಂದ ಪಾರಾಗುವುದು ಸಾಧ್ಯ. ಯಾವುದೇ ಸಂದರ್ಭದಲ್ಲಿ ನಮ್ಮ ಸಂಪರ್ಕ ಸ್ಥಗಿತವಾದರೆ, ಬಿಲ್‌ನಲ್ಲಿ ಅಪರಿಚಿತ ಚಟುವಟಿಕೆಗಳು ಕಾಣಿಸಿಕೊಂಡರೆ ತಕ್ಷಣವೇ ಮೊಬೈಲ್ ಟೆಲಿಕಾಂ ಕಂಪೆನಿ ಸಂಪರ್ಕಿಸುವುದು ಒಳ್ಳೆಯದು ಎಂದು ಕನ್ನಡದ ಪ್ರಮುಖ ತಂತ್ರಜ್ಞಾನ ಲೇಖಕರಾದ ಟಿ.ಜಿ ಶ್ರೀನಿಧಿ ಅವರು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಿಮ್ ಮಾಹಿತಿ ನಕಲಿಸಬಹುದು
ಸಿಮ್ ಅನ್ನು ಮೊಬೈಲಿನಿಂದ ಹೊರತೆಗೆದಾಗ ಅದನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟಿರುವುದು ಮತ್ತು ಮೊಬೈಲ್ ಫೋನನ್ನು ರಿಪೇರಿಗೆಂದು ಕೊಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಸಿಮ್ ತೆಗೆದಿಟ್ಟುಕೊಳ್ಳುವುದು ಅಪೇಕ್ಷಣೀಯ. ಈ ಮೂಲಕ ನಮ್ಮ ಸಿಮ್ ಮಾಹಿತಿಯನ್ನು ಬೇರೊಬ್ಬರು ನಕಲಿಸಿ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ತಜ್ಞರು ಹೇಳುವುದು ಏನು?
ಟಿ.ಜಿ ಶ್ರೀನಿಧಿ ಅವರು ತಮ್ಮ ಇಜ್ಞಾನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ವಿಸ್ಕೃತ ವರದಿಯನ್ನೇ ಪ್ರಕಟಿಸಿದ್ದು, ಅವರು ತಮ್ಮ ಲೇಖನದಲ್ಲಿ ಉಲ್ಲೆಖಿಸಿರುವಂತೆ, ಕ್ರೆಡಿಟ್ ಕಾರ್ಡ್- ಡೆಬಿಟ್ ಕಾರ್ಡುಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವಂತೆ, ನಾವು ಬಳಸುವ ಸಿಮ್ ಬಗೆಗೂ ಅಷ್ಟೇ ಎಚ್ಚರಿಕೆ ವಹಿಸುವುದು ಒಳ್ಳೆಯದು ಎಂದು ತಿಳಿಸಿದ್ದಾರೆ.
ಓದಿರಿ: ಮನೆಯಲ್ಲಿ ನೆಟ್‌ವರ್ಕ್ ಸರಿಯಾಗಿ ಸಿಗುತ್ತಿಲ್ಲವೇ? ಇಲ್ಲಿದೆ ಪರಿಹಾರ!!
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470