Home
ಸುದ್ದಿಜಾಲ

ಟ್ವಿಟ್ಟರ್‌ ಆಪ್‌ನಲ್ಲಿ ಯೂಟ್ಯೂಬ್‌ ವಿಡಿಯೋ ವೀಕ್ಷಣೆ ಈಗ ಸುಲಭ!

ಜನಪ್ರಿಯ ಸಾಮಾಜಿಕ ಮೀಡಿಯಾಗಳಲ್ಲಿ ಒಂದಾದ ಟ್ವಿಟರ್ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಇದೀಗ ಟ್ವಿಟ್ಟರ್ ಯೂಟ್ಯೂಬ್ ವೀಡಿಯೊಗಳನ್ನು ನೇರವಾಗಿ ತಮ್ಮ ಹೋಮ್ ಟೈಮ್‌ಲೈನ್‌ನಲ್ಲಿ ವೀಕ್ಷಿಸಲು ಅನುವು ಮಾಡಿಕೊಡುವ ಹೊಸ ಫೀಚರ್‌ ಅನ್ನು ಪರಿಚಯಿಸಲು ಪ್ರಾರಂಭಿಸಿದೆ. ಈ ಫೀಚರ್‌ ಅನ್ನು ಪ್ರಸ್ತುತ ಐಒಎಸ್‌ನಲ್ಲಿ ಪರೀಕ್ಷಿಸಲಾಗುತ್ತಿದೆ ಮತ್ತು ಆಂಡ್ರಾಯ್ಡ್ ಸಾಧನಗಳಿಗೆ ಇನ್ನೂ ಲಭ್ಯವಿಲ್ಲ.

ವೀಕ್ಷಿಸುವ

ಟ್ವಿಟ್ಟರ್ ಯೂಟ್ಯೂಬ್ ವೀಡಿಯೊಗಳನ್ನು ನೇರವಾಗಿ ವೀಕ್ಷಿಸುವ ಫೀಚರ್ ಪ್ರಸ್ತುತ ಪರೀಕ್ಷಾರ್ಥ ಫೀಚರ್‌ ಆಗಿ ಹೊರತರಲಾಗುತ್ತಿದೆ. ಇನ್ನು ಈ ಫೀಚರ್ ಎಲ್ಲಾ ಟ್ವಿಟ್ಟರ್ ಬಳಕೆದಾರರಿಗೆ ಲಭ್ಯವಾಗುವುದಕ್ಕೆ ಸ್ವಲ್ಪ ಕಾಲಾವಕಾಶ ತೆಗೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಅದರ ಬಳಕೆದಾರರು ವಿಷಯವನ್ನು ಹೇಗೆ ವೀಕ್ಷಿಸುತ್ತಾರೆ ಎಂಬುದನ್ನು ಸುಧಾರಿಸಲು ಕಂಪನಿಯು ಪರೀಕ್ಷಿಸುತ್ತಿರುವ ಇತರ ಹಲವು ಫೀಚರ್‌ಗಳ ಒಂದು ಭಾಗವಾಗಿ ಈ ಫೀಚರ್ ಬರುತ್ತದೆ.

ಹೋಮ್

ಹೊಸ ಫೀಚರ್‌ ಬಳಕೆದಾರರಿಗೆ ತಮ್ಮ ಹೋಮ್ ಟೈಮ್‌ಲೈನ್‌ನಲ್ಲಿ ಯೂಟ್ಯೂಬ್ ವೀಡಿಯೊಗಳನ್ನು ಶೇರ್‌ ಮಾಡಲು ಅನುವು ಮಾಡಿಕೊಡುತ್ತದೆ. ಇದು ಟ್ವೀಟ್‌ನೊಂದಿಗೆ ವೀಡಿಯೊವನ್ನು ಪೂರ್ವವೀಕ್ಷಣೆಯಾಗಿ ತೋರಿಸುತ್ತದೆ. ಇತರ ಬಳಕೆದಾರರು ವೀಡಿಯೊ ಪೂರ್ವವೀಕ್ಷಣೆಯಲ್ಲಿ ಪ್ಲೇ ಬಟನ್ ಒತ್ತಿದಾಗ, ಅದು ಯೂಟ್ಯೂಬ್ ಅಪ್ಲಿಕೇಶನ್‌ನ ಒಳಗೆ ತೆರೆಯುವ ಬದಲು ವೀಡಿಯೊವನ್ನು ನೇರವಾಗಿ ಟ್ವಿಟರ್‌ನಲ್ಲಿ ವೀಕ್ಷಿಸಲು ಅನುಮತಿಸುತ್ತದೆ.

ಟೈಮ್‌ಲೈನ್‌ಗಳಲ್ಲಿ

ಈ ಫೀಚರ್ ಬಳಕೆದಾರರು ಟ್ವೀಟ್‌ಗಳ ಒಳಗೆ ಹುದುಗಿರುವ ಯೂಟ್ಯೂಬ್ ವೀಡಿಯೊಗಳನ್ನು ಮಾತ್ರ ನೋಡುವಂತೆ ಮಾಡುತ್ತದೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಇತರ ಪ್ಲ್ಯಾಟ್‌ಫಾರ್ಮ್‌ಗಳ ವೀಡಿಯೊಗಳು ಬಳಕೆದಾರರನ್ನು ಅಗತ್ಯ ಅಪ್ಲಿಕೇಶನ್‌ಗಳಿಗೆ ಮರುನಿರ್ದೇಶಿಸುತ್ತದೆ. ಇದಲ್ಲದೆ, ಕಂಪನಿಯು ಬಳಕೆದಾರರ ಟೈಮ್‌ಲೈನ್‌ಗಳಲ್ಲಿ ಏಕ ಚಿತ್ರಗಳನ್ನು ಪ್ರದರ್ಶಿಸುವ ಸುಧಾರಿತ ಮಾರ್ಗವನ್ನು ಸಹ ಪರೀಕ್ಷಿಸುತ್ತಿದೆ. ಈ ಫೀಚರ್ ಟ್ವೀಟ್‌ಗಳಿಗೆ ಲಗತ್ತಿಸಲಾದ ಪೂರ್ವವೀಕ್ಷಣೆಯ ಒಳಗೆ ಸಂಪೂರ್ಣ ಚಿತ್ರಗಳನ್ನು ನೋಡಲು ಬಳಕೆದಾರರನ್ನು ಅನುಮತಿಸುತ್ತದೆ. ಈ ವೈಶಿಷ್ಟ್ಯವನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಪರೀಕ್ಷಿಸಲಾಗುತ್ತಿದೆ.

ಫೀಚರ್‌

ಈ ಮೊದಲು, ಮೊಬೈಲ್ ಡಿವೈಸ್‌ಗಳಲ್ಲಿ ಟ್ವಿಟ್ಟರ್ ಅಪ್ಲಿಕೇಶನ್ ನಿಂದ ಹೊರಬರದೇ ನೇರವಾಗಿ ವೀಡಿಯೊವನ್ನು ನೋಡುವ ಆಯ್ಕೆ ಇರಲಿಲ್ಲ. ಈ ಹೊಸ ಕಾರ್ಯದಿಂದ, ಟ್ವಿಟ್ಟರ್ ಆಪ್‌ನಿಂದ ಹೊರಬರದೇ ಯೂಟ್ಯೂಬ್ ವೀಡಿಯೊಗಳನ್ನು ನೋಡುವುದನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ. ಇದು ಯೂಟ್ಯೂಬ್ ಲಿಂಕ್ ತೆರೆಯುವುದಕ್ಕಿಂತ ಉತ್ತಮವಾಗಿರುತ್ತದೆ. ಕಂಪನಿಯು ಹೊಸ ವೈಶಿಷ್ಟ್ಯವನ್ನು ಸಹ ಪರೀಕ್ಷಿಸುತ್ತಿದೆ, ಅದು ಬಳಕೆದಾರರಿಗೆ ಪ್ಲಾಟ್‌ಫಾರ್ಮ್‌ನಲ್ಲಿ hi-res 4K ಇಮೇಜ್‌ಗಳನ್ನು ಅಪ್‌ಲೋಡ್ ಮಾಡಲು ಮತ್ತು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಈ ಫೀಚರ್‌ ಅನ್ನು ಸಕ್ರಿಯಗೊಳಿಸಲು ಬಳಕೆದಾರರು ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳ ಪ್ಯಾನೆಲ್‌ಗೆ ಹೋಗಬೇಕು ಮತ್ತು ಇದಕ್ಕಾಗಿ ಟಾಗಲ್ ಅನ್ನು ಸಕ್ರಿಯಗೊಳಿಸಬೇಕು.

ಆಂಡ್ರಾಯ್ಡ್

ಹಾಗೆಯೇ ಟ್ವಿಟ್ಟರ್ ಸಾಮಾಜಿಕ ಜಾಲತಾಣ ಕ್ಲಬ್‌ಹೌಸ್‌ಗೆ ಹೋಲುವ ಹೊಸ "ಸ್ಪೇಸಸ್" ಚಾಟ್ ರೂಮ್ ಫೀಚರ್‌ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಟ್ವಿಟರ್ ಸ್ಪೇಸ್ ಟೂಲ್ ಪ್ರಸ್ತುತ ಐಒಎಸ್ ಬೀಟಾದಲ್ಲಿ ವಾಯಿಸ್‌ ಟ್ವೀಟ್‌ಗಳಂತಹ ಐಒಎಸ್-ವಿಶೇಷ ಫೀಚರ್‌ಗಳೊಂದಿಗೆ ಲಭ್ಯವಿದೆ. ಕೆಲವು ಆಂಡ್ರಾಯ್ಡ್ ಬಳಕೆದಾರರು ಟ್ವಿಟರ್ ಅಪ್ಲಿಕೇಶನ್‌ನ ನಿರ್ದಿಷ್ಟ ಬೀಟಾ ಆವೃತ್ತಿಯನ್ನು ಇನ್‌ಸ್ಟಾಲ್‌ ಮಾಡಿದ ನಂತರ ಸ್ಪೇಸಸ್ ಫೀಚರ್‌ ಅವರಿಗೆ ಕೆಲಸ ಮಾಡುತ್ತಿದೆ ಎಂದು ಹೇಳಲಾಗಿದೆ.

Best Mobiles in India

English summary
Twitter has announced that it is testing a new way to watch YouTube videos directly in the Home timeline of users, without leaving the conversation on the platform.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+