Home
ಸುದ್ದಿಜಾಲ

Twitter ಬಳಕೆದಾರರಿಗೆ ಗುಡ್‌ ನ್ಯೂಸ್‌: 5 ಲಕ್ಷಕ್ಕೂ ಹೆಚ್ಚಿನ ಹಣ ಗಳಿಸಿದ ಅನೇಕ ಬಳಕೆದಾರರು, ಹೇಗೆ?

ಟ್ವಿಟ್ಟರ್‌ (Twitter) ಈವರೆಗೂ ಕೆಲವು ಬಳಕೆದಾರರಿಗೆ ಬೇಸರದ ಸುದ್ದಿಯನ್ನೇ ನೀಡುತ್ತಿತ್ತು. ಆದರೆ, ಇದೀಗ ಟ್ವಿಟ್ಟರ್‌ ಬಳಕೆದಾರರು ಕುಣಿದು ಕುಪ್ಪಳಿಸುವ ಸುದ್ದಿ ನೀಡಿದೆ. ಟ್ವಿಟ್ಟರ್‌ ಬಳಕೆದಾರರು ಲಕ್ಷಗಟ್ಟಲೆ ಹಣವನ್ನು ಈ ಟ್ವಿಟ್ಟರ್‌ನಿಂದ ಸ್ವೀಕರಿಸಲು ಅರ್ಹರಾಗಿದ್ದಾರೆ. ಜೊತೆಗೆ ಕೆಲವು ಜನರು ಐದು ಲಕ್ಷಕ್ಕೂ ಅಧಿಕ ಹಣ ಗಳಿಸಿದ್ದಾರೆ.

ಹೌದು, ಟ್ವಿಟ್ಟರ್ ಆಯ್ದ ಬಳಕೆದಾರರೊಂದಿಗೆ ಜಾಹೀರಾತು ಆದಾಯವನ್ನು ಹಂಚಿಕೊಳ್ಳಲು ಈಗಾಗಲೇ ಆರಂಭ ಮಾಡಿದೆ. ಇನ್ನು ಯೂಟ್ಯೂಬ್‌, ಫೇಸ್‌ಬುಕ್‌ ಕ್ರಿಯೇಟರ್ಸ್‌ಗಳು ತಮ್ಮ ವಿಡಿಯೋಗಳ ಮೂಲಕ ಹೇಗೆ ಗಳಿಕೆ ಮಾಡುತ್ತಿದ್ದಾರೋ ಅದೇ ರೀತಿ ಇನ್ಮುಂದೆ ಟ್ವಿಟ್ಟರ್‌ ಬಳಕೆದಾರರು ಸಹ ಟ್ವಿಟ್ಟರ್‌ನಿಂದ ಹಣ ಪಡೆದುಕೊಳ್ಳಬಹುದು. ಹಾಗಿದ್ರೆ, ಏನಿದು ಜಾಹೀರಾತು ಆದಾಯ ಹಂಚಿಕೆ?, ಹಣ ಗಳಿಸಲು ಅರ್ಹತೆ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

Twitter ಬಳಕೆದಾರರಿಗೆ ಗುಡ್‌ ನ್ಯೂಸ್‌....

ಜಾಹೀರಾತು ಆದಾಯ ಹಂಚಿಕೆ: ಟ್ವಿಟ್ಟರ್ ಬಳಕೆದಾರರು ಅಥವಾ ವೃತ್ತಿಪರ ಕ್ರಿಯೇಟರ್ಸ್‌ ಈ ಹಣ ಪಡೆದುಕೊಳ್ಳಲು ಜಾಹೀರಾತು ಆದಾಯ ಹಂಚಿಕೆ ಮತ್ತು ಕ್ರಿಯೇಟರ್ ಚಂದಾದಾರಿಕೆ ಪ್ಲ್ಯಾನ್‌ಗಳಿಗೆ ಸೈನ್ ಅಪ್ ಆಗಬೇಕಿದೆ. ಆಗ ಮಾತ್ರ ಹಣ ಗಳಿಸಲು ಅರ್ಹತೆ ಪಡೆಯುತ್ತಾರೆ. ಅದರಂತೆ ಜನಪ್ರಿಯ ಯೂಟ್ಯೂಬರ್ ಮಿಸ್ಟರ್ ಬೀಸ್ಟ್ (ಜೇಮ್ಸ್ ಡೊನಾಲ್ಡ್ಸನ್) ಜಾಹೀರಾತು ಹಂಚಿಕೆ ಆದಾಯದ ಭಾಗವಾಗಿ ಟ್ವಿಟ್ಟರ್‌ನಿಂದ $25,000 ಅಂದರೆ 21 ಲಕ್ಷ ಹಣ ಗಳಿಸಿದ್ದಾರೆ. ಉಳಿದಂತೆ ಅನೇಕ ಬಳಕೆದಾರರು 5 ಲಕ್ಷ ರೂ.ಗೂ ಹೆಚ್ಚು ಪಡೆದಿದ್ದಾರೆ.

ಹಣ ಗಳಿಸಲು ಅರ್ಹತೆ ಏನು?: ಈ ಸಂಬಂಧ ಬ್ಲಾಗ್ ಪೋಸ್ಟ್‌ನಲ್ಲಿ ಮಾಹಿತಿ ನೀಡಲಾಗಿದ್ದು, ಈ ಟ್ವಿಟರ್ ಜಾಹೀರಾತುಗಳ ಆದಾಯ ಹಂಚಿಕೆ ಪ್ರೋಗ್ರಾಂ ಅನ್ನು ಆರಂಭಿಕ ಗುಂಪಿಗೆ ಪರಿಚಯಿಸಲಾಗಿದೆ. ಈಗ ಅವರನ್ನು ಹಣ ಸ್ವೀಕಾರ ಮಾಡಲು ಆಹ್ವಾನಿಸಲಾಗಿದೆ. ಈ ಪ್ರೋಗ್ರಾಂಗೆ ಸೈನ್ ಅಪ್ ಮಾಡಲು ಬ್ಲೂ ಟಿಕ್‌ ಚಂದಾದಾರರಾಗಿರಬೇಕು. ಜೊತೆಗೆ ಕಳೆದ ಮೂರು ತಿಂಗಳುಗಳಲ್ಲಿ ಕನಿಷ್ಠ ಐದು ಮಿಲಿಯನ್ ಇಂಪ್ರೆಶನ್ ಪೋಸ್ಟ್‌ಗಳನ್ನು ಹೊಂದಿರಬೇಕಿದೆ.

ಇದೆಲ್ಲದರ ಜೊತೆಗೆ ಬಳಕೆದಾರರು ಅಥವಾ ಕ್ರಿಯೇಟರ್ಸ್‌ ಟ್ವಿಟ್ಟರ್‌ನ ಕ್ರಿಯೇಟರ್ ಮಾನಿಟೈಸೇಶನ್ ಸ್ಟ್ಯಾಂಡರ್ಡ್‌ಗಳನ್ನು ಪಾಸ್ ಮಾಡಬೇಕಾಗಿದೆ ಎಂದು ಟ್ವಿಟ್ಟರ್‌ ಮಾಹಿತಿ ನೀಡಿದೆ. ಇದರಲ್ಲಿ ವಯಸ್ಸು, ದೇಶ ಮತ್ತು ಅವರ ಚಟುವಟಿಕೆಯಂತಹ ಪ್ರಮುಖ ಮಾಹಿತಿ ಇರುತ್ತವೆ. ಅದರಂತೆ ಈ ಹಣ ಪಾವತಿ ಸಂಬಂಧ ಶೀಘ್ರದಲ್ಲೇ ಆಪ್‌ ಅಥವಾ ಪೋರ್ಟಲ್‌ ಅನ್ನು ಆರಂಭಿಸಲಾಗುವುದು ಎಂದೂ ಸಹ ತಿಳಿಸಲಾಗಿದೆ.

ಈವರೆಗೂ ಟ್ವಿಟ್ಟರ್‌ ವಿರುದ್ಧ ಕಿಡಿ ಕಾರುತ್ತಿದ್ದ ಅದೆಷ್ಟೋ ಜನರು ಜಾಹೀರಾತುಗಳ ಆದಾಯ ಹಂಚಿಕೆ ಕಾರ್ಯಕ್ರಮದ ಭಾಗವಾಗಿ ತಾವು ಗಳಿಸಿದ ಹಣದ ಕುರಿತು ಪೋಸ್ಟ್ ಮಾಡಲು ಆರಂಭ ಮಾಡಿದ್ದಾರೆ. ಜೊತೆಗೆ ಟಿಟ್ಟರ್‌ ಡೈಲಿ ಪೇಜ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಓರ್ವ ಬಳಕೆದಾರ (RaptalkSK) ಟ್ವಿಟ್ಟರ್‌ನಿಂದ $2,236 ಅಂದರೆ 1.8 ಲಕ್ಷ ರೂ. ಪಡೆದಿದ್ದಾರೆ ಎಂದು ಉಲ್ಲೇಖಿಸಿದೆ.

ಹಣ ಗಳಿಸಲು ಎಲೋನ್ ಮಸ್ಕ್ ಸಹ ಅರ್ಹರು: ಈ ನಡುವೆ ಎಲೋನ್ ಮಸ್ಕ್ ಅವರು ಸಹ ಜಾಹೀರಾತು ಆದಾಯ ಹಂಚಿಕೆ ಕಾರ್ಯಕ್ರಮಕ್ಕೆ ಅರ್ಹರಾಗಿದ್ದಾರೆ. ಅವರ ಪ್ರೊಫೈಲ್ ಅನ್ನು ಪರಿಶೀಲಿಸಲಾಗಿದ್ದು, ಎಲ್ಲಾ ಇತರ ನಿಯತಾಂಕಗಳಿಗೆ ಸರಿಹೊಂದಿದೆ. ಈ ಸಂಬಂಧ ಓರ್ವ ಬಳಕೆದಾರ ಮಸ್ಕ್‌ ಅವರು ಎಷ್ಟು ಸಂಪಾದಿಸಿರಬಹುದು ಎಂದು ಕೇಳಿದ್ದಾರೆ. ಇದಕ್ಕೆ ಮರು ಟ್ವೀಟ್‌ ಮಾಡಿರುವ ಮಸ್ಕ್‌ ಕ್ರಿಯೇಟರ್ ಪೇಔಟ್‌ ಪೂಲ್ ಗೆ ತಮ್ಮ ಪಾಲನ್ನು ನೀಡಲಾಗಿದೆ ಎಂದಿದ್ದಾರೆ.

Twitter ಬಳಕೆದಾರರಿಗೆ ಗುಡ್‌ ನ್ಯೂಸ್‌....

ಕೆಲವು ದಿನಗಳಿಂದ ಮೆಟಾ ಮಾಲೀಕತ್ವದ ಥ್ರೆಡ್ಸ್‌ ಹಾಗೂ ಟ್ವಿಟ್ಟರ್‌ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಟ್ವಿಟ್ಟರ್‌ ಮಾದರಿಯಲ್ಲೇ ಇರುವ ಥ್ರೆಡ್ಸ್‌ ಗೆ ಈಗಾಗಲೇ ಮಿಲಿಯನ್‌ ಲಾಗಿನ್ ಕಂಡುಬಂದಿವೆ. ಇದು ಮಸ್ಕ್‌ ಅವರಿಗೆ ನುಂಗಲಾರದ ತುತ್ತಾಗಿದ್ದು, ಇಷ್ಟೆಲ್ಲಾ ಬೆಳವಣಿಗೆ ನಡುವೆ ಈಗ ಟ್ವಿಟ್ಟರ್‌ ಬಳಕೆದಾರರಿಗೆ ಆದಾರ ಹಂಚಿಕೆ ಮಾಡುತ್ತಿದ್ದಾರೆ. ಇದರಿಂದ ಬಳಕೆದಾರರು ಮತ್ತೆ ಟ್ವಿಟ್ಟರ್‌ ಕಡೆ ಇಣುಕಿ ನೋಡುವಂತೆ ಮಾಡಿದೆ.
Best Mobiles in India

English summary
Twitter has already started sharing ad revenue with select users. From now on Twitter users can also get money from Twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+