ಇನ್ಮುಂದೆ ಟ್ವಿಟ್ಟರ್‌ನಲ್ಲೂ ಹಣ ಗಳಿಸಬಹುದು; ಮಸ್ಕ್‌ರ ಹೊಸ ನಿರ್ಧಾರ ಏನು!?
ಮೈಕ್ರೋ-ಬ್ಲಾಗಿಂಗ್ ಸೈಟ್‌ಗಳಲ್ಲಿ ಪ್ರಮುಖವಾಗಿರುವ ಟ್ವಿಟ್ಟರ್ ಪ್ಲಾಟ್‌ಫಾರ್ಮ್‌ನಲ್ಲಿ ಈಗಾಗಲೇ ಸಾಕಷ್ಟು ಬದಲಾವಣೆಗಳು ಸಂಭವಿಸಿವೆ. ಅದರಲ್ಲೂ ಬಳಕೆದಾರರನ್ನು ಕೇಂದ್ರೀಕರಿಸಿಕೊಂಡು ಮಾಡಲಾಗುತ್ತಿರುವ ಈ ಬದಲಾವಣೆ ಹಾಗೂ ಕೆಲವು ಕ್ರಮಗಳು ಹಲವರಿಗೆ ಇಷ್ಟವಾದರೆ, ಇನ್ನೊಂದಷ್ಟು ಬಳಕೆದಾರರಿಗೆ ತಲೆನೋವಿನ ವಿಚಾರವಾಗಿದೆ. ಇದರ ನಡುವೆ ಈಗ ಟ್ವಿಟ್ಟರ್ ಬಳಕೆದಾರರಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ.

ಹೌದು, ಇನ್ಮುಂದೆ ಪರಿಶೀಲಿಸಿದ ಖಾತೆ ಹೊಂದಿರುವ ಬಳಕೆದಾರರು ಹಣ ಸಂಪಾದನೆ ಮಾಡಬಹುದಾಗಿದೆ. ಅಂದರೆ ಬ್ಲೂ ಟಿಕ್ ಚಂದಾದಾರರೊಂದಿಗೆ ಜಾಹೀರಾತು ಆದಾಯವನ್ನು ಹಂಚಿಕೊಳ್ಳಲು ಟ್ವಿಟ್ಟರ್ ಮುಂದಾಗಿದೆ ಎಂದು ಎಲಾನ್‌ಮಸ್ಕ್ ತಿಳಿಸಿದ್ದಾರೆ. ಹಾಗಿದ್ರೆ, ಇದರಿಂದ ಹೇಗೆ ಹಣ ಸಂಪಾದನೆ ಮಾಡಬಹುದು, ಎಲಾನ್ ಮಸ್ಕ್‌ಅವರು ಯಾವ ಉದ್ದೇಶಕ್ಕಾಗಿ ಈ ನಿರ್ಧಾರ ಪ್ರಕಟಿಸಿದ್ದಾರೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.
ಜಾಹೀರಾತು ಆದಾಯವನ್ನು ಶೇರ್ ಮಾಡಲು ಮುಂದಾದ ಟ್ವಿಟ್ಟರ್
ಟ್ವಿಟ್ಟರ್ ತನ್ನ ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಭಾಗವಾಗಿ ಈಗಾಗಲೇ ಸಾಕಷ್ಟು ಪ್ರಮುಖ ಬದಲಾವಣೆಯನ್ನು ಮಾಡಿದೆ. ಆದರೆ, ಈ ಬಾರಿ ಮಾಡಲಾದ ನಿರ್ಧಾರ ಟ್ವಿಟ್ಟರ್ ಜೊತೆಗೆ ಬಳಕೆದಾರರು ಸಹ ಹಣ ಗಳಿಸಬಹುದಾಗಿದೆ. ಅರ್ಹ ಬಳಕೆದಾರರ ಖಾತೆಗಳಲ್ಲಿ ಜಾಹೀರಾತುಗಳು ಕಾಣಿಸಿಕೊಳ್ಳಲಿದ್ದು, ಈ ಮೂಲಕ ಬಳಕೆದಾರರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಟ್ವಿಟ್ಟರ್ ಹೊಂದಿದೆಯಂತೆ.

ಟ್ವಿಟ್ಟರ್ ಬಳಕೆದಾರರಿಗೆ ಫುಲ್ ಹ್ಯಾಪಿ
ಇನ್ನು ಎಲಾನ್ ಮಸ್ಕ್‌ಅವರ ಈ ನಿರ್ಧಾರ ಹಲವಾರು ಟ್ವಿಟ್ಟರ್ ಬಳಕೆದಾರರಿಗೆ ಸಂತೋಷ ಉಂಟಾಗಿದೆ. ಈವರೆಗೂ ಬಳಕೆದಾರರಿಂದ ಹಣ ಪಡೆಯಲು ಮುಂದಾಗುತ್ತಿದ್ದ ಟ್ವಿಟ್ಟರ್ ಈಗ ಬಳಕೆದಾರರಿಗೆ ಹಣ ನೀಡಲು ಮುಂದಾಗಿದೆ. ಇದರಿಂದಾಗಿ ಅದೆಷ್ಟೋ ಬಳಕೆದಾರರು ಈ ಮೂಲಕ ಹಣ ಸಂಪಾದನೆ ಮಾಡಬಹುದಾಗಿದೆ. ಇನ್ನು ಟ್ವಿಟರ್ ಬ್ಲೂ ವೆರಿಫೈಡ್ ಚಂದಾದಾರರಾಗಿರುವ ಕ್ರಿಯೇಟರ್ಸ್‌ಗಳ ಜೊತೆಗೆ ಜಾಹೀರಾತು ಆದಾಯವನ್ನು ಹಂಚಿಕೊಳ್ಳುತ್ತದೆ ಎಂದು ಸ್ವತಃ ಮಸ್ಕ್ ಟ್ವಿಟ್ಟರ್‌ನಲ್ಲಿ ಉಲ್ಲೇಖಿಸಿದ್ದಾರೆ.
ಈ ಜಾಹೀರಾತುಗಳು ಎಲ್ಲಿ ಕಾಣಿಸಿಕೊಳ್ಳುತ್ತವೆ?
ಟ್ವಿಟ್ಟರ್ ಬಳಕೆದಾರರ ಅರ್ಹ ಖಾತೆಗಳ ಪ್ರತ್ಯುತ್ತರ ಥ್ರೆಡ್‌ಗಳಲ್ಲಿ ಈ ಜಾಹೀರಾತುಗಳು ಕಾಣಿಸಿಕೊಳ್ಳಲಿದ್ದು, ಈ ಮೂಲಕ ಕ್ರಿಯೇಟರ್ಸ್‌ಗಳ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದೂ ಸಹ ಟ್ವಿಟ್ಟರ್‌ನಲ್ಲಿ ತಿಳಿಸಲಾಗಿದೆ. ಅಂತೆಯೇ ಜಾಹೀರಾತು ಪಡೆಯಲು ಕಡ್ಡಾಯವಾಗಿ ಬಳಕೆದಾರರು ಬ್ಲೂಟಿಕ್ ಚಂದಾದಾರಿಕೆ ಪಡೆಯಲೇಬೇಕಿದೆ. ಟ್ವಿಟ್ಟರ್ ಕಳೆದ ವರ್ಷದ ಡಿಸೆಂಬರ್‌ನಲ್ಲಿ ತನ್ನ ಬ್ಲೂಟಿಕ್ ಸೇವೆಗಳನ್ನು ಪರಿಚಯಿಸಿದೆ.

ಇನ್ನು ಚಂದಾದಾರರು 1080p ರೆಸಲ್ಯೂಶನ್ ಮತ್ತು 2GB ಫೈಲ್ ಗಾತ್ರದೊಂದಿಗೆ 60 ನಿಮಿಷಗಳವರೆಗೆ ವಿಡಿಯೋಗಳನ್ನು ಅಪ್‌ಲೋಡ್ ಮಾಡಬಹುದಾಗಿದೆ. ಆದರೆ, ಅಪ್‌ಲೋಡ್ ಮಾಡಲಾಗುವ ಎಲ್ಲಾ ವಿಡಿಯೋಗಳು ಟ್ವಿಟ್ಟರ್‌ನ ನೀತಿ ನಿಯಮಗಳನ್ನು ಅನುಸರಿಸಬೇಕಿದೆ.
ಮಸ್ಕ್ ಅವರ ಈ ಹೊಸ ಕ್ರಮವು ಟ್ವಿಟ್ಟರ್ ಬಳಕೆದಾರರಿಗೆ ಧನಾತ್ಮಕ ಹೆಜ್ಜೆಯಾಗಿ ಕಂಡುಬಂದಿದ್ದು, ಈ ಮೂಲಕ ಬ್ಲೂಟಿಕ್ ಚಂದಾದಾರಿಕೆ ಪಡೆದುಕೊಳ್ಳಲು ಹಲವಾರು ಬಳಕೆದಾರರು ಮುಂದೆ ಬರುತ್ತಾರೆ ಎನ್ನಲಾಗಿದೆ. ಇದು ಮಸ್ಕ್‌ಗೆ ಎರಡು ರೀತಿಯಲ್ಲಿ ಪ್ರಯೋಜನ ಆಗಲಿದೆ.
ಬಳಕೆದಾರರಿಗೆ ಟ್ವಿಟ್ಟರ್ ನೀಡುವ ಆದಾಯದ ಪಾಲು ಎಷ್ಟು?
ಇನ್ನು ಟ್ವಿಟ್ಟರ್‌ನ ಈ ಹೊಸ ನಿರ್ಧಾರ ಬಹುಪಾಲು ಮಂದಿಗೆ ಇಷ್ಟವಾಗಿದೆಯಾದರೂ ಈ ಜಾಹೀರಾತು ಆದಾಯದಲ್ಲಿ ಎಷ್ಟು ಪಾಲು ಬಳಕೆದಾರರಿಗೆ ಸಿಗಲಿದೆ ಎನ್ನುವ ಬಗ್ಗೆ ನಿಖರ ಮಾಹಿತಿಯನ್ನು ಟ್ವಿಟ್ಟರ್ ಇನ್ನೂ ಬಹಿರಂಗಪಡಿಸಿಲ್ಲ. ಈ ಸಂಬಂಧ ಟ್ವಿಟ್ಟರ್ ಎಷ್ಟು ಪಾಲನ್ನು ನೀಡುತ್ತದೆ ಎನ್ನುವುದರ ಬಗ್ಗೆ ಬಳಕೆದಾರರು ಭಾರೀ ಉತ್ಸುಕರಾಗಿದ್ದಾರೆ.
ಇನ್ನು ಈ ವರ್ಷದ ಜನವರಿಯಲ್ಲಿ ಟ್ವಿಟರ್ ಹೋಮ್ ಮತ್ತು ಲೇಟೆಸ್ಟ್ ಟ್ಯಾಬ್‌ಗಳನ್ನು ಫಾರ್ ಯೂ ಹಾಗೂ ಫಾಲೋವರ್ಸ್ ಎಂದು ಬದಲಾಯಿಸುತ್ತಿದೆ. ಇವುಗಳನ್ನು ನಿಮ್ಮ ಟೈಮ್‌ಲೈನ್‌ನ ಮೇಲ್ಭಾಗಕ್ಕೆ ಪಿನ್ ಮಾಡಲಾಗುತ್ತಿದ್ದು, ಬಳಕೆ ಮಾಡುವಾಗ ವಿಶೇಷ ಅನುಭವ ಸಿಗಲಿದೆ. ಇದರಲ್ಲಿ ನೀವು ಸ್ಟಾರ್ ಐಕಾನ್ ಅನ್ನು ಟ್ಯಾಪ್ ಮಾಡುವ ಬದಲು ಟೈಮ್‌ಲೈನ್‌ಗಳನ್ನು ಬದಲಾಯಿಸಲು ಮತ್ತಷ್ಟು ಸ್ವೈಪ್ ಮಾಡಬಹುದಾಗಿದೆ ಎಂದು ಟ್ವಿಟ್ಟರ್ ಹೇಳಿದೆ.

ಈ ಫೀಚರ್ಸ್ ಐಓಎಸ್‌ನಲ್ಲಿ ಪ್ರಾರಂಭವಾಗಿದ್ದು, ನಿಮಗಾಗಿ ಶಿಫಾರಸು ಮಾಡಲಾದ ಟ್ವೀಟ್‌ಗಳನ್ನು ನೋಡಲು ಟ್ಯಾಬ್‌ಗಳ ನಡುವೆ ಸ್ವೈಪ್ ಮಾಡಬಹುದಾಗಿದೆ. ಹಾಗೆಯೇ ನೀವು ಅನುಸರಿಸುತ್ತಿರುವ ಖಾತೆಗಳಿಂದ ಟ್ವೀಟ್‌ಗಳನ್ನು ನೋಡಿ ಎಂದು ಇದು ತಿಳಿಸುತ್ತದೆ. ಇದರಿಂದಾಗಿ ಟ್ವಿಟರ್ ಬಳಕೆದಾರರು ತಾವು ಅನುಸರಿಸುವ ಕಂಟೆಂಟ್‌ಗಳು ಮತ್ತು ಟ್ರೆಂಡಿಂಗ್ ವಿಷಯಗಳ ನಡುವೆ ಬದಲಾವಣೆ ಮಾಡಲು ಸುಲಭ ಮಾರ್ಗ ಅನುಸರಿಸಬಹುದಾಗಿದೆ.


Click it and Unblock the Notifications








