Google: ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೊಸ ಸೌಲಭ್ಯ! ಒಂದೇ ಬಾರಿಗೆ ಎರಡು ಆಪ್ ಇನ್‌ಸ್ಟಾಲ್ ಸಾಧ್ಯ..
ಗೂಗಲ್ ಪ್ಲೇ ಸ್ಟೋರ್ (Google Play Store) ಮೂಲಕ ನಿಮ್ಮಿಷ್ಟದ ಅಥವಾ ನಿಮಗೆ ಅಗತ್ಯ ಎನಿಸುವ ಆಪ್‌ಗಳನ್ನು ನೀವು ಇನ್‌ಸ್ಟಾಲ್ ಮಾಡಿಕೊಂಡಿರಬಹುದು. ಅದರಲ್ಲೂ ಗೂಗಲ್ ಪ್ಲೇ ಸ್ಟೋರ್ ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರಿಂದ ಇಲ್ಲಿ ಲಭ್ಯ ಇರುವ ಆಪ್‌ಗಳು ನ್ಯಾಯೋಚಿತವಾಗಿರುತ್ತವೆ.
ಹೌದು, ಯಾವುದೇ ಅಗತ್ಯ ಸೇವೆ ಪಡೆಯಬೇಕು ಎಂದರೆ ಸ್ಮಾರ್ಟ್‌ಫೋನ್‌ಗಳಲ್ಲಿ ಆಪ್‌ಗಳು ಪ್ರಮುಖವಾಗಿವೆ. ಈ ನಡುವೆ ಗೂಗಲ್ ಪ್ಲೇ ಸ್ಟೋರ್ ಬಳಕೆದಾರರಿಗೆ ವಿಶೇಷ ಸೌಲಭ್ಯ ಕಲ್ಪಿಸಿಕೊಟ್ಟಿದ್ದು, ಒಂದೇ ಬಾರಿಗೆ ಎರಡು ಆಪ್ ಇನ್‌ಸ್ಟಾಲ್ (Install) ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಹಾಗಿದ್ರೆ, ಈ ಸೌಲಭ್ಯ ಪಡೆಯುವುದು ಹೇಗೆ?,ಯಾರಿಗೆಲ್ಲಾ ಈ ಸೌಲಭ್ಯ ಲಭ್ಯ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೊಸ ಸೌಲಭ್ಯ: ಗೂಗಲ್ ಪ್ಲೇ ಸ್ಟೋರ್ ಇತ್ತೀಚೆಗೆ ಹೊಸ ಫೀಚರ್ಸ್ ಅನ್ನು ಪರಿಚಯಿಸಿದ್ದು, ಅದು ಒಂದೇ ಸಮಯದಲ್ಲಿ ಎರಡು ಆಪ್‌ಗಳನ್ನು ಡೌನ್‌ಲೋಡ್ ಮಾಡಲು ನಿಮಗೆ ಅನುಮತಿಸುತ್ತದೆ. ಇದು ಸಣ್ಣ ಬದಲಾವಣೆಯಂತೆ ಕಾಣಿಸಬಹುದು. ಆದರೆ, ಸಾಕಷ್ಟು ಬಳಕೆದಾರರಿಗೆ ಇದು ಉತ್ತಮ ಸೌಲಭ್ಯವಾಗಿದೆ. ಈ ಹಿಂದೆ, ಆಂಡ್ರಾಯ್ಡ್ ಡಿವೈಸ್‌ಗಳಿಗಾಗಿ ಗೂಗಲ್ ಪ್ಲೇ ಸ್ಟೋರ್ ಒಂದು ಸಮಯದಲ್ಲಿ ಒಂದು ಡೌನ್‌ಲೋಡ್ ಅನ್ನು ಮಾತ್ರ ಅನುಮತಿಸಿತ್ತು.
ಅಂದರೆ ಡೌನ್‌ಲೋಡ್‌ಗಾಗಿ ಇತರ ವಿನಂತಿಗಳನ್ನು ಸರದಿಯಲ್ಲಿ ಇರಿಸುತ್ತಿತ್ತು. ಈ ನಡುವೆ ಸ್ಯಾಮ್‌ಸಂಗ್, ಶಿಯೋಮಿ ಮತ್ತು ಒಪ್ಪೋ ನಂತಹ ಪರ್ಯಾಯ ಆಂಡ್ರಾಯ್ಡ್ ಆಪ್ ಸ್ಟೋರ್‌ಗಳು ಏಕಕಾಲಿಕ ಆಪ್ ಡೌನ್‌ಲೋಡ್‌ಗಳನ್ನು ಅನುಮತಿಸಿವೆ. ಆದರೆ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಎರಡು ಆಪ್‌ಗಳನ್ನು ಡೌನ್‌ಲೋಡ್ ಮಾಡಲು ಆಯ್ಕೆ ಮಾಡಬಹುದು.

ಗಮನಿಸಬೇಕಾದ ವಿಷಯ ಏನೆಂದರೆ ಪ್ಲೇ ಸ್ಟೋರ್ ನಲ್ಲಿನ ಬದಲಾವಣೆಗಳಿಗೆ ಸಂಬಂಧಿಸಿದಂತೆ ಗೂಗಲ್ ಯಾವುದೇ ನವೀಕರಣವನ್ನು ಹಂಚಿಕೊಂಡಿಲ್ಲ. ಆದರೆ ಏಕಕಾಲಿಕ ಆಪ್ ಡೌನ್‌ಲೋಡ್ ಈಗ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ವ್ಯಾಪಕವಾಗಿ ಲಭ್ಯವಿದೆ. ಇನ್ನು ಎರಡಕ್ಕಿಂತ ಹೆಚ್ಚು ಆಪ್‌ಗಳನ್ನು ಒಂದೇ ಸಮಯದಲ್ಲಿ ಡೌನ್‌ಲೋಡ್ ಮಾಡಲು ಅನುಮತಿಸುವುದಿಲ್ಲ ಅನ್ನೋದು ಸಹ ನಿಮ್ಮ ಗಮನಕ್ಕೆ ಇರಲಿ.
ನಮ್ಮ ಪರೀಕ್ಷೆಯಲ್ಲಿ ಗೂಗಲ್ ಪ್ಲೇ ಸ್ಟೋರ್ ನಿಜವಾಗಿಯೂ ಎರಡು ಆಪ್‌ಗಳನ್ನು ಒಂದೇ ಸಮಯದಲ್ಲಿ ಡೌನ್‌ಲೋಡ್ ಮಾಡಲು ಅನುಮತಿಸುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ. ಆದರೂ ಸಹ ಆಪ್ ಸ್ಟೋರ್ ಮೂರನೇ ಆಪ್ ಡೌನ್‌ಲೋಡ್ ವಿನಂತಿಯನ್ನು ಕ್ಯೂನಲ್ಲಿ ಇರಿಸುತ್ತದೆ ಎಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. ಈ ವಿಷಯದಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಆಪಲ್‌ನ ಆಪ್ ಸ್ಟೋರ್ ಮೂರು ಏಕಕಾಲೀನ ಡೌನ್‌ಲೋಡ್‌ಗಳು ಮತ್ತು ಇನ್‌ಸ್ಟಾಲ್ ನಿರ್ವಹಿಸುತ್ತದೆ.

ಇನ್ನು ಈ ವಿಶೇಷ ಸೌಲಭ್ಯ ಕೇವಲ ಇನ್‌ಸ್ಟಾಲ್ ವಿಷಯಕ್ಕೆ ಮಾತ್ರ ಸಂಭವಿಸಿದೆ. ಬದಲಾಗಿ ಯಾವುದೇ ಆಪ್ ನವೀಕರಣಗಳಿಗಾಗಿ ಅಲ್ಲ. ಆದಾಗ್ಯೂ, ವರದಿಗಳ ಪ್ರಕಾರ, ಆಪ್ ನವೀಕರಣಗಳಿಗಾಗಿ ಈ ಫೀಚರ್ಸ್ ಅನ್ನು ವಿಸ್ತರಿಸಲು ಗೂಗಲ್ ಯೋಜಿಸುತ್ತಿದೆ. ಅದರಲ್ಲೂ ಮೇ 14 ರಂದು ಕಂಪನಿಯು ತನ್ನ ಡೆವಲಪರ್ಸ್ ಕಾನ್ಫರೆನ್ಸ್, ಗೂಗಲ್ ಐ/ಒ ಅನ್ನು ಆಯೋಜಿಸಲು ಯೋಜಿಸುತ್ತಿರುವುದರಿಂದ ಪ್ಲೇ ಸ್ಟೋರ್ ಮತ್ತು ಇತರ ಗೂಗಲ್ ಸೇವೆಗಳಿಗೆ ಇಂತಹ ಇನ್ನಷ್ಟು ಸುಧಾರಣೆಗಳು ಮತ್ತು ಹೊಸ ಫೀಚರ್ಸ್‌ಗಳು ಬರುವ ನಿರೀಕ್ಷೆಯಿದೆ.
ಈವೆಂಟ್‌ನಲ್ಲಿ, ಟೆಕ್ ದೈತ್ಯ ಸಾಕಷ್ಟು ಹೊಸ ಹೊಸ ತಂತ್ರಜ್ಞಾನವನ್ನು ಘೋಷಣೆ ಮಾಡಲಿದೆ ಎನ್ನಲಾಗಿದೆ. ಜೊತೆಗೆ ಮುಂದಿನ ಪೀಳಿಗೆಯ ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್ ಮತ್ತು ಅದರ ಉತ್ಪನ್ನಗಳು ಮತ್ತು ಸೇವೆಗಳಿಗೆ ಪ್ರಮುಖ ಬದಲಾವಣೆಗಳನ್ನು ತರಲಿದೆ. ಪ್ರಮುಖವಾಗಿ ಜೆಮಿನಿ ಎಐ, ಕಾರ್ಯಸ್ಥಳ ಮತ್ತು ಹೆಚ್ಚಿನವು ಸೇರಿವೆ. ಹಾರ್ಡ್‌ವೇರ್ ಭಾಗದಲ್ಲಿ, ಗೂಗಲ್ ಐ/ಒ ಕೀನೋಟ್ ಸೆಷನ್‌ನಲ್ಲಿ ಪಿಕ್ಸೆಲ್ 8 ಎ ಸ್ಮಾರ್ಟ್‌ಫೋನ್ ಅನ್ನು ಗೂಗಲ್ ಅನಾವರಣಗೊಳಿಸುವ ನಿರೀಕ್ಷೆಯಿದೆ.


Click it and Unblock the Notifications








