Subscribe to Gizbot

ಫೇಸ್‌ಬುಕ್‌ನಲ್ಲಿ ಸುಲಭವಾಗಿ ಕನ್ನಡ ಟೈಪ್‌ ಮಾಡಿ

Posted By:

ಕರ್ನಾಟಕದಲ್ಲಿ ಬಹಳಷ್ಟು ಮಂದಿ ಫೇಸ್‌ಬುಕ್‌ ಬಳಸುತ್ತಾರೆ. ಆದರೆ ಫೇಸ್‌ಬುಕ್‌ನಲ್ಲಿ ಕನ್ನಡ ಟೈಪ್‌ ಮಾಡಲು ಕಷ್ಟಪಡುತ್ತಿದ್ದಾರೆ. ಆದರೆ ಇನ್ನು ಮುಂದೆ ನೀವು ಕಷ್ಟಪಡಬೇಕಾಗಿಲ್ಲ. ಹೊಸದಾಗಿ QuillPad Roaming ಬಂದಿದ್ದು ಇದರ ಮೂಲಕ ಸುಲಭವಾಗಿ ಕನ್ನಡ ಟೈಪ್‌ ಮಾಡಬಹುದಾಗಿದೆ.

ಬೆಂಗಳೂರು ಮೂಲದ Tachyon Technologies  ಇಂಟರ್‌ನೆಟ್‌ನಲ್ಲಿ ಕನ್ನಡ  ಟೈಪ್‌ ಮಾಡಬಹುದಾದ ಟೂಲ್‌ನ್ನು ಈಗಾಗ್ಲೇ ತಯಾರಿಸಿದೆ. ಈಗ ಹೊಸದಾಗಿ QuillPad Roaming ಟೂಲನ್ನು ತಯಾರಿಸಿದ್ದು ನೀವು ಇದರಲ್ಲಿ ಲಾಗಿನ್‌ ಆಗುವ ಮೂಲಕ ಫೇಸ್‌ಬುಕ್‌,ಟ್ವಿಟರ್‌, ಬ್ಲಾಗ್‌ನಲ್ಲಿ ಸುಲಭವಾಗಿ ಕನ್ನಡದ ಟೈಪ್‌ ಮಾಡಬಹುದಾಗಿದೆ.

ಫೇಸ್‌ಬುಕ್‌ನಲ್ಲಿ ಸುಲಭವಾಗಿ ಕನ್ನಡ ಟೈಪ್‌ ಮಾಡಿ

ಕನ್ನಡ ಸೇರಿದಂತೆ ತಮಿಳು,ತೆಲುಗು,ಮಲೆಯಾಳಂ,ಮರಾಠಿ,ಗುಜರಾತಿ,ಹಿಂದಿ,ಮರಾಠಿ,ಪಂಜಾಬಿ ಭಾಷೆಯಲ್ಲಿ ಈ ಸೇವೆ ಲಭ್ಯವಿದೆ. ಕನ್ನಡ ಟೈಪ್‌ ಮಾಡಲು ಕಷ್ಟವಾದ ಪಕ್ಷದಲ್ಲಿ ಅದರಲ್ಲೇ ಒಂದು ಮಾಹಿತಿ ವೀಡಿಯೋವಿದ್ದು ಅದನ್ನು ನೋಡಿ ಕಲಿತು ಕನ್ನಡ ಟೈಪಿಸಬಹುದಾಗಿದೆ.

ಸದ್ಯ ಈ ಟೂಲ್‌ ಗೂಗಲ್‌ ಕ್ರೋಮ್‌ ಬ್ರೌಸರ್‌ ಬಳಸುವ ಗ್ರಾಹಕರಿಗೆ ಮಾತ್ರ ಲಭ್ಯವಿದ್ದು, ಸದ್ಯದಲ್ಲೇ ಉಳಿದ ಬ್ರೌಸರ್‌ನ್ನು ಬಳಸುವ ಗ್ರಾಹಕರಿಗೂ ಲಭ್ಯವಾಗಲಿದೆ.

ಲಿಂಕ್‌ : ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot