Home
ಸುದ್ದಿಜಾಲ

U&I ನಿಂದ ಕಾರ್ ಚಾರ್ಜರ್, ಪವರ್ ಬ್ಯಾಂಕ್ ಲಾಂಚ್; ಆತ್ಯಾಕರ್ಷಕ ಶೈಲಿ, ಬೆಲೆ ಎಷ್ಟು?

ಪ್ರಮುಖ ಸ್ಮಾರ್ಟ್‌ಡಿವೈಸ್‌ ತಯಾರಿಕಾ ಸಂಸ್ಥೆಯಾದ U&I ಈಗಾಗಲೇ ವಿವಿಧ ಧರಿಸಬಹುದಾದ ಡಿವೈಸ್‌ಗಳನ್ನು ಅನಾವರಣ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ನಥಿಂಗ್‌ ಡಿವೈಸ್‌ಗಳನ್ನು ನೆನಪಿಸುವ ಎರಡು ಅಗತ್ಯ ಡಿವೈಸ್‌ಗಳನ್ನು ಅನಾವರಣ ಮಾಡಲಾಗಿದ್ದು, ಇವು ದೊಡ್ಡ ಸಂಚಲನವನ್ನೇ ಉಂಟು ಮಾಡಲು ಮುಂದಾಗಿವೆ.

ಹೌದು, U&I ಇದೀಗ ಹೊಸ ಕಾರ್ ಚಾರ್ಜರ್ ಮತ್ತು ಪವರ್ ಬ್ಯಾಂಕ್ ಅನ್ನು ಲಾಂಚ್‌ ಮಾಡಿದೆ. ಈ ಹೆಚ್ಚಿನ ದಕ್ಷತೆಯ ಚಾರ್ಜಿಂಗ್ ಡಿವೈಸ್‌ಗಳು ನಿಮ್ಮ ಪ್ರಯಾಣ ಸುಖಕರವಾಗಿರುವಂತೆ ಮಾಡುತ್ತವೆ. ಅದೆಲ್ಲಕ್ಕೂ ಮಿಗಿಲಾಗಿ ಇವುಗಳ ವಿನ್ಯಾಸ ಮಾತ್ರ ಇತರೆ ಡಿವೈಸ್‌ಗಳಿಗೆ ನಡುಕ ಹುಟ್ಟುವಂತೆ ಆಗಿದೆ. ಯಾಕೆಂದರೆ ಆಕರ್ಷಕ ಶೈಲಿಯೊಂದಿಗೆ ಟ್ರಾನ್ಸ್ಪರೆಂಟ್‌ನಿಂದ ಕೂಡಿವೆ. ಹಾಗಿದ್ರೆ, ಬನ್ನಿ ಈ ಡಿವೈಸ್‌ಗಳ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇವುಗಳ ಬೆಲೆ ಎಷ್ಟೆಂದು ಗಮನಿಸೋಣ.

U&I ನಿಂದ ಕಾರ್ ಚಾರ್ಜರ್, ಪವರ್ ಬ್ಯಾಂಕ್ ಲಾಂಚ್; ಆತ್ಯಾಕರ್ಷಕ ಶೈಲಿ,ಬೆಲೆ ಎಷ್ಟು?

U&i ಟ್ರಾನ್ಸ್ ಸರಣಿ ಕಾರ್ ಚಾರ್ಜರ್ : ಈ ವಿಶೇಷ ಕಾರ್ ಚಾರ್ಜರ್ (U&i Trans series 38W car charger) ಕ್ವಿಕ್ ಚಾರ್ಜ್ ಮತ್ತು ಪವರ್ ಡೆಲಿವರಿ (QC+PD) ಡ್ಯುಯಲ್ ಎಂಜಿನ್ ತಂತ್ರಜ್ಞಾನವನ್ನು ಹೊಂದಿದ್ದು, ಇದು ಎಲ್ಲಾ ರೀತಿಯ ಡಿವೈಸ್‌ಗಳಿಗೆ ಬೆಂಬಲ ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ. ಜೊತೆಗೆ ಇದು ಸುರಕ್ಷಿತ ಮತ್ತು ಸ್ಥಿರವಾದ ಶಕ್ತಿಯನ್ನು ತಲುಪಿಸುವ ಬಹು ವಿದ್ಯುತ್ ತಂತ್ರಜ್ಞಾನಗಳನ್ನು ಒಳಗೊಂಡಿದ್ದು ಸಂಬಂಧಿತ ಡಿವೈಸ್‌ಗಳಿಗೆ ಯಾವುದೇ ರೀತಿಯ ಹಾನಿ ಉಂಟು ಮಾಡುವುದಿಲ್ಲ.

ಇದರೊಂದಿಗೆ ಈ ಕಾರ್ ಚಾರ್ಜರ್‌ನಲ್ಲಿ ಏಕಕಾಲದಲ್ಲಿ ಎರಡು ಡಿವೈಸ್‌ಗಳನ್ನು ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಒಂದು ಪೋರ್ಟ್ ಯುಎಸ್‌ಬಿ ಟೈಪ್-ಸಿ ಮೂಲಕ 18 ವ್ಯಾಟ್‌ಗಳವರೆಗೆ ಶಕ್ತಿಯನ್ನು ನೀಡುತ್ತದೆ. ಹಾಗೆಯೇ ಮತ್ತೊಂದು ಟೈಪ್-ಎ ಪೋರ್ಟ್ ಮೂಲಕ 20 ವ್ಯಾಟ್‌ಗಳವರೆಗೆ ಶಕ್ತಿಯನ್ನು ಒದಗಿಸುತ್ತದೆ. ಇದರಿಂದಾಗಿ ನಿಮಗೆ ಅಗತ್ಯ ಇರುವ ಡಿವೈಸ್‌ಗಳನ್ನು ಒಂದೇ ಸಮನೆ ಚಾರ್ಜಿಂಗ್‌ಗೆ ಇಡಬಹುದು.

ಉಳಿದಂತೆ ಈ ಚಾರ್ಜರ್ ನಿಮ್ಮ ಯಾವುದೇ ಡಿವೈಸ್‌ ಅನ್ನು ಅಂದರೆ ಕನೆಕ್ಟ್‌ ಮಾಡಲಾದ ಯಾವುದೇ ಡಿವೈಸ್‌ ಅನ್ನಾದರೂ ಸಹ ಓವರ್ವೋಲ್ಟೇಜ್, ಓವರ್ಕರೆಂಟ್, ಮಿತಿಮೀರಿದ ಮತ್ತು ಓವರ್ಚಾರ್ಜಿಂಗ್‌ನಂತರ ತೊಂದರೆಗಳಿಂದ ರಕ್ಷಣೆ ಮಾಡುತ್ತಿದೆ. ಈ ರೀತಿಯ ಸುರಕ್ಷತಾ ಫೀಚರ್ಸ್‌ ಅನ್ನು ಈ ಡಿವೈಸ್‌ನಲ್ಲಿ ಅಳವಡಿಸಲಾಗಿದೆ. ಬನ್ನಿ ಮತ್ತೊಂದು ಡಿವೈಸ್‌ನ ವಿವರ ತಿಳಿಯೋಣ.

U&i ಪವರ್ ಕಿಂಗ್ ಸರಣಿ 22.5W 20000mAh ಪವರ್ ಬ್ಯಾಂಕ್: ಈ ಡಿವೈಸ್‌ (U&i Power King series 22.5W 20000mAh power bank) 20000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, ಇದರಿಂದ ನಿಮ್ಮ ಮನೆಯಲ್ಲಿರುವ ಅಥವಾ ನೀವು ನಿತ್ಯ ಬಳಕೆ ಮಾಡುವ ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಹಗುರವಾದ ಲ್ಯಾಪ್‌ಟಾಪ್‌ಗಳನ್ನು ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಈ ಪವರ್ ಕಿಂಗ್ ಸರಣಿಯು 2A ವರೆಗೆ ಡಿವೈಸ್‌ಗಳನ್ನು ಚಾರ್ಜ್ ಮಾಡಲು ಪ್ರಮಾಣಿತ USB-A ಪೋರ್ಟ್ ಅನ್ನು ಪಡೆದಿದೆ.

ಹಾಗೆಯೇ 22.5 ವ್ಯಾಟ್‌ಗಳವರೆಗೆ ಶಕ್ತಿಯನ್ನು ತಲುಪಿಸುವ ಸಾಮರ್ಥ್ಯವಿರುವ PD ಪೋರ್ಟ್ ಅನ್ನೂ ಸಹ ಹೊಂದಿದ್ದು, ಉಳಿದಂತೆ ಇನ್‌ಬಿಲ್ಟ್ ಎಲ್‌ಇಡಿ ಸಿಓಬಿ ಎಮರ್ಜೆನ್ಸಿ ಲೈಟ್‌ಆಯ್ಕೆಯನ್ನೂ ಸಹ ಪಡೆದುಕೊಂಡಿದೆ. ಜೊತೆಗೆ ಬ್ಯಾಟರಿ ಸ್ಟೇಟಸ್‌ ಮತ್ತು ಪವರ್ ರೇಟಿಂಗ್‌ನಲ್ಲಿ ನೈಜ-ಸಮಯದ ನವೀಕರಣಗಳನ್ನು ಒದಗಿಸುವ ಎಲ್ಇಡಿ ಡಿಸ್‌ಪ್ಲೇ ಈ ಪವರ್‌ ಬ್ಯಾಂಕ್‌ನ ಅಂದವನ್ನು ಇನ್ನಷ್ಟು ಹೆಚ್ಚಿಗೆ ಮಾಡುತ್ತದೆ.

U&I ನಿಂದ ಕಾರ್ ಚಾರ್ಜರ್, ಪವರ್ ಬ್ಯಾಂಕ್ ಲಾಂಚ್; ಆತ್ಯಾಕರ್ಷಕ ಶೈಲಿ,ಬೆಲೆ ಎಷ್ಟು?

U&i ಕಾರ್‌ ಚಾರ್ಜರ್‌ ಹಾಗೂ ಪವರ್‌ ಬ್ಯಾಂಕ್‌ ಬೆಲೆ ವಿವರ: U&i ಟ್ರಾನ್ಸ್ ಸರಣಿಯ 38W ಕಾರ್ ಚಾರ್ಜರ್ ಮತ್ತು ಪವರ್ ಕಿಂಗ್ ಸರಣಿಯ ಪವರ್ ಬ್ಯಾಂಕ್ ಕ್ರಮವಾಗಿ 1,999ರೂ.ಗಳು ಹಾಗೂ 2,999ರೂ.ಗಳ ಬೆಲೆ ಹೊಂದಿವೆ. ಇವುಗಳನ್ನು ನೀವು U&i ಔಟ್‌ಲೆಟ್‌ಗಳು ಮತ್ತು ಭಾರತದಾದ್ಯಂತದ ಪ್ರಮುಖ ಚಿಲ್ಲರೆ ಸ್ಟೋರ್‌ಗಳ ಮೂಲಕ ಖರೀದಿ ಮಾಡಬಹುದಾಗಿದೆ.

Best Mobiles in India

English summary
U&I has just launched a new car charger and power bank. These high-efficiency charging devices make your journey a pleasant one.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+