Subscribe to Gizbot

ಬೆಂಗಳೂರಲ್ಲಿ ಒಲಾ ಆಟೋಗೆ ಮೂಗುದಾರ: ಬರುತ್ತಿದೆ ಊಬರ್ ಆಟೋ...!

Written By:

ಭಾರತದಲ್ಲಿ ಉಬರ್ ಭದ್ರವಾಗಿ ತಳವೂರಲು ಮುಂದಾಗಿದ್ದು, ಇದೇ ಹಿನ್ನಲೆಯಲ್ಲಿ ಈ ಹಿಂದೆ ಅರಂಭಿಸಿ ಕೈ ಸುಟ್ಟುಕೊಂಡಿದ್ದ ಸೇವೆಯನ್ನು ಮತ್ತೊಮ್ಮೆ ಆರಂಭಿಸಲು ಮುಂದಾಗಿದೆ. ಈಗಾಗಲೇ ಬೆಂಗಳೂರು ನಗರದಲ್ಲಿ ಒಲಾ ಆಟೋಗಳು ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿದ್ದು, ಇದೇ ಮಾದರಿಯಲ್ಲಿ ಉಬರ್ ಸಹ ತನ್ನ ಆಟೋ ಸೇವೆಯನ್ನು ನೀಡಲಿದೆ.

ಬೆಂಗಳೂರಲ್ಲಿ ಒಲಾ ಆಟೋಗೆ ಮೂಗುದಾರ: ಬರುತ್ತಿದೆ ಊಬರ್ ಆಟೋ...!

ಓದಿರಿ: ಗೂಗಲ್‌ನಲ್ಲಿಯೇ ಕಳ್ಳತನ: ಚಾಲಕಿ ಕಳ್ಳರು ಯಾರು? ಕದ್ದಿದ್ದೇನು..?

ಬೆಂಗಳೂರು ಮತ್ತು ಪುಣೆಯಲ್ಲಿ ಮಾತ್ರವೇ ಸದ್ಯ ಉಬರ್ ಆಟೋ ಸೇವೆಯನ್ನು ನೀಡಲಿದೆ ಎನ್ನಲಾಗಿದೆ. ಇದಾದ ನಂತರದಲ್ಲಿ ವಿವಿಧ ನಗರಗಳಿಗೆ ಸೇವೆಯನ್ನು ವಿಸ್ತರಿಸುವ ಆಲೋಚನೆಯನ್ನು ಹೊಂದಿದೆ ಎನ್ನಲಾಗಿದ್ದು, ಮಾರುಕಟ್ಟೆಯಲ್ಲಿ ಮತ್ತೊ೦ದು ಅಲೆಯನ್ನು ಎಬ್ಬಿಸಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉಬರ್ ಮಾರುಕಟ್ಟೆ:

ಉಬರ್ ಮಾರುಕಟ್ಟೆ:

ಈಗಾಗಲೇ ಮಾರುಕಟ್ಟೆಯಲ್ಲಿ ಒಲಾ ಆಟೋಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದು, ಇದನ್ನು ಮೀರಿಸುವಂತೆ ಆಕರ್ಷಕ ಆಫರ್ ನೀಡುವ ಮೂಲಕ ಉಬರ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ. ಒಂದು ವೇಳೆ ಆಟೋ ವಿಚಾರದಲ್ಲಿಯೂ ದರ ಸಮರವನ್ನು ಕಾಣುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿವಿಧ ಪೇಮೆಂಟ್ ಮಾದರಿ:

ವಿವಿಧ ಪೇಮೆಂಟ್ ಮಾದರಿ:

ಇದಲ್ಲದೇ ಉಬರ್ ತನ್ನ ಸೇವೆಯಲ್ಲಿ ವಿಶೇಷತೆಯನ್ನು ಹೊಂದಿದ್ದು, ಗ್ರಾಹಕರಿಗೆ ಕ್ಯಾಷ್, ಪೇಟಿಎಂ ಹಾಗೂ ಡೆಬಿಟ್ ಇಲ್ಲವೇ ಕ್ರೆಡಿಟ್ ಕಾರ್ಡ್ ಮೂಲಕವೂ ಹಣವನ್ನು ಸಂದಾಯ ಮಾಡುವ ಅವಕಾಶವನ್ನು ಮಾಡಿಕೊಡಲಿದೆ ಎನ್ನಲಾಗಿದೆ.

ಹೊಸ ವರ್ಷಕ್ಕೆ ಮತ್ತೊಂದು Jio Surprise Cashback ಆಫರ್!!
ಒಲಾಗೆ ಸೆಡ್ಡು:

ಒಲಾಗೆ ಸೆಡ್ಡು:

ಒಲಾಗೆ ಸೆಡ್ಡು ಹೊಡೆಯುವ ಸಲುವಾಗಿ ಉಬರ್ ತನ್ನ ಸೇವೆಯನ್ನು ನೀಡಲು ಮುಂದಾಗಿದೆ. ಈಗಾಗಲೇ ಮಾರುಕಟ್ಟೆಗೆ ಬಂದ ಟೈಗರ್ ಕ್ಯಾಬ್ ಸಹ ಅಂದುಕೊಂಡಷ್ಟು ಸದ್ದು ಮಾಡಲಿಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Uber AUTO Service in Bengaluru. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot