Subscribe to Gizbot

ಗೂಗಲ್‌ನಲ್ಲಿಯೇ ಕಳ್ಳತನ: ಚಾಲಕಿ ಕಳ್ಳರು ಯಾರು? ಕದ್ದಿದ್ದೇನು..?

Written By:

ಸರ್ಚ್ ಇಂಜಿನ್‌ ದೈತ್ಯ ತನ್ನ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಕ್ಯಾಂಪನ್‌ನಲ್ಲಿ ತನ್ನ ನೌಕರರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡಲು ಬಳಕೆ ಮಾಡಿಕೊಳ್ಳುವ ಸಲುವಾಗಿ ಮೊಟ್ಟ ಮೊದಲ ಬಾರಿಗೆ ಪರಿಚಯಿಸಿದ್ದ ಜಿ-ಬೈಕ್‌ ಹೆಸರಿನ GPS ಇರುವ ಬೈಸಿಕಲ್‌ ದಿನದಿಂದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಳ್ಳತನವಾಗುತ್ತಿದೆ ಎನ್ನಲಾಗಿದೆ.

ಗೂಗಲ್‌ನಲ್ಲಿಯೇ ಕಳ್ಳತನ: ಚಾಲಕಿ ಕಳ್ಳರು ಯಾರು? ಕದ್ದಿದ್ದೇನು..?

ಓದಿರಿ: ಜಿಯೋ ಸುನಾಮಿ ಆಫರ್: ಹೆಚ್ಚು ವ್ಯಾಲಿಡಿಟಿ - 50% ಹೆಚ್ಚು ಡೇಟಾ - ರೂ.50 ಕಡಿತ...!

1100 ಜಿ-ಬೈಕ್‌ಗಳನ್ನು ಕ್ಯಾಂಪಸ್‌ನಲ್ಲಿ ಇಟ್ಟಿದ್ದ ಗೂಗಲ್ ಇದರಿಂದ ಅನೇಕ ಕಂಪನಿಗಳಿಗೆ ಮಾದರಿಯಾಗಿತ್ತು. ಅಲ್ಲದೇ ಕ್ಯಾಂಪಸ್‌ನಲ್ಲಿ ವಾಹನಗಳ ಮಾಲಿನ್ಯವನ್ನು ಕಡಿಮೆ ಮಾಡಿತ್ತು. ಇದರಿಂದಾಗಿ ಅನೇಕ ದೈತ್ಯ ಕಂಪನಿಗಳು ಗೂಗಲ್ ಮಾದರಿಯನ್ನು ಅನುಕರಿಸಲು ಮುಂದಾಗಿದ್ದವು. ಆದರೆ ಈ ಗೂಗಲ್ ಬೈಕ್‌ಗಳು ಕಾಣೆಯಾಗುತ್ತಿರುವುದು ವರದಿಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
250 ಸೈಕಲ್ ನಾಪತ್ತೆ:

250 ಸೈಕಲ್ ನಾಪತ್ತೆ:

ಗೂಗಲ್ $300 ವೆಚ್ಚದಲ್ಲಿ ಈ ಸೈಕಲ್ ಗಳನ್ನು ನಿರ್ಮಿಸಿತ್ತು ಎನ್ನಲಾಗಿದ್ದು, 1100 ಜಿ-ಬೈಕ್‌ಗಳಲ್ಲಿ ಸುಮಾರು 250 ಜಿ-ಬೈಕ್‌ಗಳು ನಾಪತ್ತೆಯಾಗಿದೆ ಎಂದು ವರದಿ ಮಾಡಲಾಗಿದೆ. ಈ ಸೈಕಲ್‌ಗಳು ಎಲ್ಲೇಲ್ಲಿ ಬಿದ್ದಿವೆ ಎಂಬುದು ಇನ್ನು ತಿಳಿದಿಲ್ಲ ಎನ್ನಲಾಗಿದೆ.

ಹುಡುಕಲು ಟೀಮ್:

ಹುಡುಕಲು ಟೀಮ್:

GPS ಸಾಧನಗಳನ್ನು ಹೊಂದಿರುವ ಜಿ- ಬೈಕ್‌ಗಳನ್ನು ಹುಡುಕಲು ಗೂಗಲ್ 30 ಜನರ ಟೀಮ್ ವೊಂದನ್ನು ಕಟ್ಟಿದ್ದು, ಅಲ್ಲದೇ ಎಲ್ಲಿ ಬೈಕ್‌ಗಳಿವೆ ಎಂಬುದನ್ನು ಪತ್ತೇ ಹಚ್ಚಿ ತರುವುದು ಈ ಟೀಮ್ ಕೆಲಸವಾಗಿದೆ ಎನ್ನಲಾಗಿದೆ.

How to Sharing a Mobile Data Connection with Your PC (KANNADA)
ಹೊಸ ಮಾದರಿ ಲಾಕ್:

ಹೊಸ ಮಾದರಿ ಲಾಕ್:

ಈ ಬಾರಿ ತನ್ನ ಸೈಕಲ್‌ಗಳಿಗೆ ಸುಕ್ಷತೆಯನ್ನು ನೀಡುವ ಸಲುವಾಗಿ ತನ್ನ ನೌಕರು ಸ್ಮಾರ್ಟ್‌ಫೋನ್‌ನಿಂದ ಬೈಕ್‌ಗಳನ್ನು ಆನ್‌ಲಾಕ್ ಮಾಡುವ ಮಾದರಿಯಲ್ಲಿ ವಿನ್ಯಾಸ ಮಾಡಲು ಮುಂದಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Google employees lose nearly 250 Gbikes a week. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot