Ubon ನಿಂದ SP-8010 ಪವರ್ ಬೀಟ್ ವಾಯರ್‌ಲೆಸ್ ಸ್ಪೀಕರ್ ಲಾಂಚ್: ಬೆಲೆ ಎಷ್ಟು?
UBON ಕಂಪೆನಿಯು ಗ್ಯಾಜೆಟ್ ಲೋಕದಲ್ಲಿ ಬ್ಲೂಟೂತ್ ಸ್ಪೀಕರ್‌ಗಳು, ಹೆಡ್‌ಫೋನ್, ಚಾರ್ಜರ್ ಹಾಗೂ ಕೇಬಲ್ ಸೇರಿದಂತೆ ಇನ್ನಿತರೆ ಸ್ಮಾರ್ಟ್ ಡಿವೈಸ್‌ಗಳನ್ನು ತಯಾರಿಸಿ ಜನಪ್ರಿಯತೆ ಗಳಿಸಿಕೊಂಡಿದೆ. ಈ ನಡುವೆ ಈಗ ವಾಯರ್‌ಲೆಸ್ ಸ್ಪೀಕರ್ ಲಾಂಚ್ ಮಾಡಿದ್ದು, ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವುದರ ಜೊತೆಗೆ ಆಕರ್ಷಕ ಡಿಸೈನ್ ಹೊಂದಿದೆ.

ಹೌದು, UBON ಕಂಪೆನಿಯು ಭಾರತದಲ್ಲಿ SP-8010 ಪವರ್ ಬೀಟ್ ವಾಯರ್‌ಲೆಸ್ ಸ್ಪೀಕರ್ ಅನಾವರಣ ಮಾಡಿದೆ. ಈ ಸ್ಪೀಕರ್ ವಿವಿಧ ಫೀಚರ್ಸ್ ಆಯ್ಕೆ ಪಡೆದಿದ್ದು, ಅದರಲ್ಲೂ ಪ್ರಮುಖವಾಗಿ ಈ ಪೋರ್ಟಬಲ್ ಸ್ಪೀಕರ್ 1200mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ. ಜೊತೆಗೆ 4 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್ ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

SP-8010 ಸ್ಪೀಕರ್ ಸಂಗೀತ ಪ್ರಿಯರಿಗೆ ಇಷ್ಟವಾಗಲಿದ್ದು, ಈ ಡಿವೈಸ್ ಅನ್ನು ಟ್ರಾವೆಲ್ ಬ್ಯಾಗ್, ಹ್ಯಾಂಡ್‌ಬ್ಯಾಗ್ ಹಾಗೆಯೇ ಸೂಟ್‌ಕೇಸ್‌ನಲ್ಲಿ ಸುಲಭವಾಗಿ ಎಲ್ಲಿಗೆ ಬೇಕೆಂದರಲ್ಲಿಗೆ ಕೊಂಡೊಯ್ಯಬಹುದು. ಅದರಲ್ಲೂ ಚಿಕ್ಕ ಪಾರ್ಟಿಗಳಿಗೆ ಈ ಸ್ಪೀಕರ್ ಹೊಂದಿಕೊಳ್ಳುತ್ತದೆ. ಇದರ ಜೊತೆಗೆ ಆರ್‌ಜಿಬಿ ಕಲರ್‌ನ ಆಯ್ಕೆಯನ್ನು ನೀಡಲಾಗಿದ್ದು ಸಂಗೀತ ಆಲಿಸುವಾಗ ವಿಶೇಷ ಅನುಭವ ಸಿಗಲಿದೆ. ಹಾಗಾದ್ರೆ ಇದರ ಇನ್ನಷ್ಟು ಫೀಚರ್ಸ್‌ಗಳನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.

ಬಾಹ್ಯ ಡಿಸೈನ್
SP-8010 ಸ್ಪೀಕರ್ ಲೋಹದ ನೆಟ್ ಫಿನಿಶ್ ಹೊಂದಿದ್ದು, ನಾವು ಪ್ಲೇ ಮಾಡುವ ಸಂಗೀತಕ್ಕೆ ತಕ್ಕಂತೆ ಇದರಲ್ಲಿ ನೀಡಲಾಗಿರುವ ಆರ್‌ಜಿಬಿ ಲೈಟ್‌ಗಳು ಸಂಗೀತದ ಲಯವನ್ನು ಹೆಚ್ಚು ಮಾಡಲಿವೆ. ಇದು ಆಡಿಯೋಗೆ ಸಿಂಕ್ ಆಗುವ ಹಿನ್ನೆಲೆ ಅತ್ಯಾಕರ್ಷಕ ನೋಟದ ಅನುಭವ ನೀಡಲಿದೆ. ಇನ್ನು ಹಲವು ಬಟನ್‌ಗಳ ಆಯ್ಕೆ ಇದರಲ್ಲಿದ್ದು, ವಾಲ್ಯೂಮ್ ನಿಯಂತ್ರಿಸಲು, ಹಾಡನ್ನು ಪ್ಲೇ ಮಾಡಲು/ಸ್ಟಾಪ್ ಮಾಡಲು ಹಾಗೆಯೇ ಮೋಡ್‌ಗಳನ್ನು ಬದಲಾಯಿಸಲು ಇವು ಸಹಕಾರಿಯಾಗಲಿವೆ.

ಕನೆಕ್ಟಿವಿಟಿ ಆಯ್ಕೆ
Ubonನ ವೈರ್‌ಲೆಸ್ ಸ್ಪೀಕರ್ ಆಂಡ್ರಾಯ್ಡ್ ಹಾಗೂ ಐಓಎಸ್ ಡಿವೈಸ್‌ಗಳಿಗೆ ಸಪೋರ್ಟ್ ಮಾಡಲಿದೆ. ಇದರ ಜೊತೆಗೆ ಲ್ಯಾಪ್‌ಟಾಪ್ ಹಾಗೂ ಕಂಪ್ಯೂಟರ್, ಸ್ಮಾರ್ಟ್‌ಟಿವಿ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಗೆ ಹೊಂದಿಕೆಯಾಗಲಿದೆ. ಈ ಸ್ಪೀಕರ್ USB ಪೋರ್ಟ್, ಮೈಕ್ರೋ TF/SD ಕಾರ್ಡ್ ಸ್ಲಾಟ್ ಹಾಗೂ AUX ಸೇರಿದಂತೆ ಇನ್ನಿತರೆ ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದೆ. ಇದೆಲ್ಲದರ ಜೊತೆಗೆ ಎಫ್‌ಎಂ ಆಯ್ಕೆ ಸಹ ಇದರಲ್ಲಿದೆ. ಹಾಗೆಯೇ ಬ್ಲೂಟೂತ್ ಆವೃತ್ತಿ v5.0ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದು 10 ಮೀಟರ್‌ಗಳ ವೈರ್‌ಲೆಸ್ ಸಂಪರ್ಕ ವ್ಯಾಪ್ತಿಯನ್ನು ಹೊಂದಿದೆ.

ಬ್ಯಾಟರಿ ಸಾಮರ್ಥ್ಯ, ಇತರೆ ಫೀಚರ್ಸ್
ಈ ಸ್ಪೀಕರ್‌ನಲ್ಲಿ 1200mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಮಾಡಲಾಗಿದ್ದು, ಒಂದು ಪೂರ್ಣ ಚಾರ್ಜ್‌ನಲ್ಲಿ 4 ರಿಂದ 5 ಗಂಟೆಗಳ ವರೆಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಡಿವೈಸ್ ಸ್ಟಿರಿಯೋ ಸೌಂಡ್ ಅನುಭವ ನೀಡಲಿದ್ದು, ವೈರ್ಡ್ ಹಾಗೂ ವಾಯರ್‌ಲೆಸ್ ಎರಡೂ ಆಯ್ಕೆಯಲ್ಲಿ ಕನೆಕ್ಟಿವಿಟಿ ಪಡೆದುಕೊಳ್ಳಬಹುದು. ಹಾಗೆಯೇ 100-240 V Ac ಪವರ್ ಇನ್‌ಪುಟ್ ನಲ್ಲಿ ಕೆಲಸ ಮಾಡಲಿದ್ದು, 10 W ಪವರ್ ಔಟ್‌ಪುಟ್ ಫೀಚರ್ ಪಡೆದಿದೆ.

ಬೆಲೆ ಹಾಗೂ ಲಭ್ಯತೆ
SP-8010 ಪವರ್ ಬೀಟ್ ವೈರ್‌ಲೆಸ್ ಸ್ಪೀಕರ್‌ಗಳು ಭಾರತದಾದ್ಯಂತ ಆಫ್‌ಲೈನ್ ಸ್ಟೋರ್‌ಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯ ಇದೆ. ಅದರಲ್ಲೂ ರಿಟೇಲ್ ಸ್ಟೋರ್‌ಗಳಲ್ಲಿ ಇದಕ್ಕೆ 2,999ರೂ. ಗಳನ್ನು ನಿಗದಿ ಮಾಡಲಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಡಿವೈಸ್ ಲಭ್ಯ ಇದ್ದು, 58% ರಿಯಾಯಿತಿ ಪಡೆದುಕೊಂಡಿದೆ. ಈ ಮೂಲಕ ಇದನ್ನು ನೀವು ಕೇವಲ 1,249ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಜೊತೆಗೆ ಕೆಲವು ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ಗಳ ಮೇಲೂ ರಿಯಾಯಿತಿ ಸಿಗಲಿದೆ ಮತ್ತು ಕೂಪನ್ ಮೂಲಕವೂ ಇನ್ನಷ್ಟು ರಿಯಾಯಿತಿ ಪಡೆಯಬಹುದು. ಇದರ ನಡುವೆ ಪ್ರಮುಖವಾಗಿ ಕಂಪೆನಿಯು 6 ತಿಂಗಳ ವಾರಂಟಿಯನ್ನು ನೀಡಿದೆ.


Click it and Unblock the Notifications








