Ubon PB-X35 ಟ್ರಾನ್ಸ್ಪರೆಂಟ್ ಪವರ್ ಬ್ಯಾಂಕ್ ಲಾಂಚ್; ಡಿಸೈನ್‌ಗೆ ವ್ಹಾವ್ ಅಂತೀರಾ!
ತಂತ್ರಜ್ಞಾನ ಇಂದು ಎಲ್ಲರಿಗೂ ಮುಕ್ತವಾಗುತ್ತಿದ್ದಂತೆ ಆಕರ್ಷಕ ಫೀಚರ್ಸ್ ಇರುವ ಡಿವೈಸ್‌ಗಳು ಸಹ ಹೆಚ್ಚು ಪಾರದರ್ಶಕ ರೂಪ ಪಡೆಯುತ್ತಿವೆ. ಯಾಕೆಂದರೆ ಕಾಲಕ್ಕೆ ತಕ್ಕಂತೆ ಶೈಲಿಯ ಬದಲಾವಣೆಗೆ ಪ್ರಮುಖವಾಗಿ ಕೇಂದ್ರೀಕರಿಸಿರುವ ಬ್ರ್ಯಾಂಡ್‌ಗಳು ಗ್ರಾಹಕರನ್ನು ಸೆಳೆಯುವಲ್ಲಿ ಹಾಗೂ ತಂತ್ರಜ್ಞಾನ ವಿಷಯದಲ್ಲಿ ತಮ್ಮದೇ ಆದ ವಿಶೇಷ ಕೊಡುಗೆಯನ್ನು ನೀಡಲು ಸದಾ ಮುಂದಿರುತ್ತವೆ. ಈ ಕಾರಣಕ್ಕಾಗಿಯೇ ಈ ರೀತಿಯ ಕೆಲವು ಗ್ಯಾಜೆಟ್‌ಗಳು ಭಾರೀ ಜನಮನ್ನಣೆ ಪಡೆದಿವೆ.

ಹೌದು, ಬಹುಪಾಲು ಮಂದಿಗೆ ಯಾವುದೇ ಡಿವೈಸ್ ನೋಡಿದರೂ ಅದರ ಒಳಗೆ ಏನೆಲ್ಲಾ ಇರಬಹುದು ಎಂಬ ಕುತೂಹಲ ಮನೆ ಮಾಡುತ್ತದೆ. ಆ ಕುತೂಹಲ ತಣಿಸಿಕೊಳ್ಳಬೇಕು ಎಂದು ಡಿವೈಸ್ ಓಪನ್ ಮಾಡಲು ಮುಂದಾದರೆ ಆ ಡಿವೈಸ್ ಹಾಳಾಗುವ ಸಂಭವ ಹೆಚ್ಚು. ಈ ಕುತೂಹಲ ತಣಿಸಲು ಹಾಗೂ ಜನರನ್ನು ಆಕರ್ಷಿಸಲು ನಿರ್ಮಾಣ ಮಾಡುವಾಗಲೇ ಡಿವೈಸ್‌ಗಳಿಗೆ ಟ್ರಾನ್ಸ್ಪರೆಂಟ್ ರೂಪ ನೀಡಿ ಕೆಲವು ಬ್ರ್ಯಾಂಡ್‌ಗಳು ತಮ್ಮ ಕೆಲವೇ ಕೆಲವು ಡಿವೈಸ್‌ಗಳನ್ನು ಪರಿಚಯಿಸುತ್ತಾ ಬರುತ್ತಿವೆ. ಇದರ ಸಾಲಿನಲ್ಲಿ ಈಗ Ubon PB-X35 ಟ್ರಾನ್ಸ್ಪರೆಂಟ್ ಪವರ್ ಬ್ಯಾಂಕ್ ವಿಶೇಷವಾಗಿ ಗುರುತಿಸಿಕೊಳ್ಳಲಿದೆ.
Ubon PB-X35 ಟ್ರಾನ್ಸ್ಪರೆಂಟ್ ಪವರ್ ಬ್ಯಾಂಕ್
ದೇಶೀಯ ಗ್ರಾಹಕ ಎಲೆಕ್ಟ್ರಾನಿಕ್ ಬ್ರಾಂಡ್ ಆಗಿರುವ Ubon ಹೊಸದಾಗಿ ಹಾಗೂ ವಿಶೇಷವಾಗಿ Ubon PB-X35 ಪವರ್ ಬ್ಯಾಂಕ್ ಅನ್ನು ಅನಾವರಣ ಮಾಡಿದೆ. ಹಾಗೆಯೇ ಭಾರತದ ಮೊದಲ ಟ್ರಾನ್ಸ್ಪರೆಂಟ್ ಪವರ್ ಬ್ಯಾಂಕ್ ಎಂದು ಸಹ ಗುರುತಿಸಿಕೊಳ್ಳಲಿದೆ. ಇನ್ನು ಈ ಡಿವೈಸ್ 10000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.
Ubon PB-X35 ಟ್ರಾನ್ಸ್ಪರೆಂಟ್ ಪವರ್ ಬ್ಯಾಂಕ್ ಫೀಚರ್ಸ್
10000mAh ಸಾಮರ್ಥ್ಯ ಈ ಪವರ್ ಬ್ಯಾಂಕ್ ಈ ಹಿಂದೆ ಲಾಂಚ್ ಆಗಿರುವ ಅದೆಷ್ಟೋ ಪವರ್ ಬ್ಯಾಂಕ್‌ಗಳಿಗೆ ಭಿನ್ನವಾಗಿ ತನ್ನ ಕಾರ್ಯಕ್ಷಮತೆ ಹೊಂದಿದೆ. ಇದಕ್ಕೆ ಪ್ರಮುಖ ಕಾರಣ ಏನೆಂದರೆ ಯಾವುದೇ ಫೋನ್ ಅನ್ನು ಶೀಘ್ರವಾಗಿ ಚಾರ್ಜ್ ಮಾಡಲಿದೆ. ಈ ಬಗ್ಗೆ ಕಂಪೆನಿಯೇ ಮಾಹಿತಿ ದೃಢಪಡಿಸಿದೆ. UBON PB-X35 ಕಾಂಪ್ಯಾಕ್ಟ್ ವಿನ್ಯಾಸ ಹೊಂದಿದ್ದು ಅದು ನಿಮ್ಮ ಅಂಗೈನಲ್ಲಿ ಸುಲಭವಾಗಿ ಹಿಡಿದಿಟ್ಟುಕೊಳ್ಳಬಹುದು. ಇಲ್ಲವಾದರೆ ನೀವು ಸಾಮಾನ್ಯವಾಗಿ ದೈನಂದಿನ ಬಳಕೆಯ ಕ್ಯಾರಿ ಬ್ಯಾಗ್‌ನಲ್ಲಿಯೂ ಇರಿಸಿಕೊಳ್ಳಬಹುದಾಗಿದೆ.

ಇದರೊಂದಿಗೆ ಈ ಪವರ್ ಬ್ಯಾಂಕ್ 2 ಇನ್ 1 ಟೈಪ್ ಸಿ/ವಿ 8 ಮತ್ತು 2.0ಎ ಔಟ್‌ಪುಟ್ ಚಾರ್ಜಿಂಗ್ ಪೋರ್ಟ್ ಆಯ್ಕೆ ಪಡೆದಿದ್ದು, ಇದು ಗ್ರಾಹಕರಿಗೆ ಏಕಕಾಲದಲ್ಲಿ ಎರಡು ಡಿವೈಸ್‌ಗಳನ್ನು ಚಾರ್ಜ್ ಮಾಡಲು ಅನುಮತಿಸುತ್ತದೆ. ಅದರಂತೆ ಲಿಥಿಯಂ ಪಾಲಿಮರ್ ಬ್ಯಾಟರಿ ವೇಗದ ಚಾರ್ಜಿಂಗ್ ತಂತ್ರಜ್ಞಾನ ಮತ್ತು ದೀರ್ಘ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ ಎಂದು ಕಂಪೆನಿ ಮಾಹಿತಿ ನೀಡಿದೆ.
ಈ ಸಮಸ್ಯೆಗಳಿಂದ ಪವರ್ ಬ್ಯಾಂಕ್ ಮುಕ್ತ
ಯಾವುದೇ ಪವರ್ ಬ್ಯಾಂಕ್ ಖರೀದಿ ಮಾಡುವ ಮೊದಲು ಬಳಕೆದಾರರು ಸುರಕ್ಷತೆ ವಿಷಯಕ್ಕೆ ಗಮನಹರಿಸಬೇಕು. ಯಾಕೆಂದರೆ ಬೇಗನೇ ಬಿಸಿಯಾಗುವುದು, ಶಾರ್ಟ್ ಸರ್ಕ್ಯೂಟ್ ಆಗುವುದು ಹಾಗೂ ಓವರ್‌ಚಾರ್ಜ್ ನಿಂದ ಸಮಸ್ಯೆ ನಿರ್ಮಾಣ ಅಗುವುದು ಸಾಮಾನ್ಯ. ಆದರೆ, ಈ ಹೊಸ Ubon PB-X35 ಪವರ್ ಬ್ಯಾಂಕ್ ಇದೆಲ್ಲದರಿಂದ ಮುಕ್ತವಾಗಿದೆ. ಅಂದರೆ ಇದು ಹೆಚ್ಚು ಬಿಸಿಯಾಗುವುದಿಲ್ಲ, ಓವರ್ ಚಾರ್ಜ್ ನಿಂದಲೂ ಸಮಸ್ಯೆ ಆಗುವುದಿಲ್ಲವಂತೆ ಹಾಗೂ ಶಾರ್ಟ್ ಸರ್ಕ್ಯೂಟ್ ಸಮಸ್ಯೆ ಅಂತೂ ಸುಳಿಯುವುದಿಲ್ಲ ಎನ್ನಲಾಗಿದೆ. ಈ ಮೂಲಕ ಸುಧಾರಿತ ಫೀಚರ್ಸ್ ಅನ್ನು ಈ ಡಿವೈಸ್‌ನಲ್ಲಿ ನೀಡಲಾಗಿದೆ.

UBON PB-X35 ಪವರ್ ಬ್ಯಾಂಕ್ ಬೆಲೆ ಮತ್ತು ಲಭ್ಯತೆ
UBON PB-X35 ಪವರ್ ಬ್ಯಾಂಕ್ ಅನ್ನು ಭಾರತದಲ್ಲಿ ನೀವು 3,699 ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಪವರ್ ಬ್ಯಾಂಕ್ ಸದ್ಯಕ್ಕೆ ಕಂಪೆನಿಯ ಅಧಿಕೃತ ವೆಬ್‌ಸೈಟ್ ಆದ
UBON ಮೂಲಕ ಕೊಂಡುಕೊಳ್ಳಬಹುದು.


Click it and Unblock the Notifications








