Home
ಸುದ್ದಿಜಾಲ

online fraud: ನಿಲ್ಲುತ್ತಿಲ್ಲ ಆನ್‌ಲೈನ್‌ ವಂಚನೆ! ಅರ್ಧಕೋಟಿಗೂ ಅಧಿಕ ಹಣ ಕಳೆದುಕೊಂಡ ಉಡುಪಿ ಮಹಿಳೆ

ಆನ್‌ಲೈನ್ ವಂಚನೆ (Online fraud) ಪ್ರಕರಣದಿಂದ ಸಾಕಷ್ಟು ಜನರು ಭಾರೀ ಮೊತ್ತದ ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಸರ್ಕಾರ ಎಷ್ಟೇ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡರೂ ಸಹ ಸ್ಕ್ಯಾಮರ್‌ಗಳು ವಿವಿಧ ಮಾರ್ಗಗಳ ಮೂಲಕ ಜನರನ್ನು ವಂಚನೆ ಮಾಡುತ್ತಲೇ ಬರುತ್ತಿದ್ದು, ಇದರ ಭಾಗವಾಗಿ ಈಗ ಉಡುಪಿ (Udupi) ಮೂಲದ ಮಹಿಳೆ 54 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.

ಹೌದು, ಈವರೆಗೂ ಸಾಕಷ್ಟು ಆನ್‌ಲೈನ್ ವಂಚನೆ ಪ್ರಕರಣಗಳು ಬೆಂಗಳೂರು ಅಥವಾ ಇತರೆ ರಾಜ್ಯಗಳಿಂದ ವರದಿಯಾಗುತ್ತಿದ್ದವು. ಆದರೆ, ಈಗ ದೊಡ್ಡ ಮೊತ್ತದ ವಂಚನೆ ಪ್ರಕರಣ ಉಡುಪಿಯಿಂದ ವರದಿಯಾಗಿದೆ. ಈ ಸಂಬಂಧ ಕನ್ನಡದ ಪ್ರಮುಖ ಪತ್ರಿಕೆ ಉದಯವಾಣಿ ವರದಿ ಮಾಡಿದೆ. ಅಲ್ಲಿ ಉಲ್ಲೇಖ ಮಾಡಿದಂತೆ ಸ್ಕ್ಯಾಮರ್‌ ಮಿಲಿಟರಿ ಅಧಿಕಾರಿ ಎಂದು ನಂಬಿಸಿ ಮಹಿಳೆಗೆ ಮೂರು ನಾಮ ಹಾಕಿದ್ದಾನೆ. ಹಾಗಿದ್ರೆ, ಈ ಆನ್‌ಲೈನ್‌ ವಂಚನೆಯನ್ನು ಯಾವ ರೀತಿ ಮಾಡಲಾಗಿದೆ?, ಈ ರೀತಿಯ ಪ್ರಕರಣಗಳಿಂದ ಎಚ್ಚರಿಕೆ ವಹಿಸುವುದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ನಿಲ್ಲುತ್ತಿಲ್ಲ ಆನ್‌ಲೈನ್‌ ವಂಚನೆ!ಅರ್ಧಕೋಟಿಗೂ ಅಧಿಕ ಹಣ ಕಳೆದುಕೊಂಡ ಉಡುಪಿ ಮಹಿಳೆ

54 ಲಕ್ಷ ರೂ. ಕಳೆದುಕೊಂಡ ಮಹಿಳೆ: ಮಿಹಿಯಾಲ್ ನಿಲ್ಜೆನ್ ಎಂಬ ಹೆಸರಿನ ಫೇಸ್‌ಬುಕ್‌ ಖಾತೆ ಮೂಲಕ ಪೇತ್ರಿಯ ಲವೀನಾ ಸ್ಟೆಫನಿ ಕ್ರಾಸ್ಟೊ ಅವರಿಗೆ ವಂಚನೆ ಮಾಡಲಾಗಿದೆ. ನಿಲ್ಜೆನ್ ಎಂಬ ಹೆಸರಿನ ಸ್ಕ್ಯಾಮರ್ ಜರ್ಮನಿಯಲ್ಲಿ ಮಿಲಿಟರಿ ಅಧಿಕಾರಿ ಎಂದು ಹೇಳಿಕೊಂಡು ಫೆ.10ರಂದು ಫೇಸ್‌ಬುಕ್‌ನಲ್ಲಿ ಪೇತ್ರಿಯ ಲವೀನಾ ಸ್ಟೆಫನಿ ಕ್ರಾಸ್ಟೊ ಅವರನ್ನು ಪರಿಚಯ ಮಾಡಿಕೊಂಡಿದ್ದಾನೆ.

ಇದಾದ ನಂತರದಲ್ಲಿ ವಾಟ್ಸಪ್ ಮೂಲಕ ಇಬ್ಬರು ಸಂವಹನ ನಡೆಸಿ ಸ್ನೇಹಿತರಾಗಿದ್ದಾರೆ. ಇದನ್ನು ನಿಜವೆಂದು ಕ್ರಾಸ್ಟೊ ತಿಳಿದುಕೊಂಡಿದ್ದಾರೆ. ಅಲ್ಲದೆ ಈಕೆಗೆ ಗಿಫ್ಟ್ವೊಂದನ್ನು ಕಳುಹಿಸುವುದಾಗಿ ಆತ ತಿಳಿಸಿದ್ದಾನೆ. ಇದೆಲ್ಲಾ ಆದ ಮೇಲೆ ಫೆ.15ರಂದು ಲವೀನಾಗೆ ಒಂದು ಕರೆ ಬಂದಿದೆ. ಆ ಕರೆಯಲ್ಲಿ ದೆಹಲಿಯ ಪಾರ್ಸೆಲ್ ಕಚೇರಿ ಎಂದು ಅಪರಿಚಿತ ವ್ಯಕ್ತಿ ಮಾತನಾಡಿದ್ದಾನೆ. ಜರ್ಮನಿಯಿಂದ ಬಂದಿರುವ ಪಾರ್ಸೆಲ್‌ನಲ್ಲಿ ಜ್ಯುವೆಲರಿ, ಯುರೋ ಕರೆನ್ಸಿ ಇದೆ. ಆದರೆ, ನೀವು ಇದನ್ನು ಪಡೆಯಬೇಕು ಎಂದರೆ ಪಾರ್ಸೆಲ್ ಚಾರ್ಜ್, ಮನಿ ಲ್ಯಾಂಡಿಂಗ್ ಸರ್ಟಿಫಿಕೇಟ್, ಕಸ್ಟಂ ಸರ್ಟಿಫಿಕೇಟ್ ಪಡೆಯಬೇಕು ಅಲ್ಲದೆ ಇದಕ್ಕಾಗಿ ಹಣ ಪಾವತಿ ಮಾಡಬೇಕು ಎಂದು ತಿಳಿಸಿದ್ದಾನೆ.

ನಿಲ್ಲುತ್ತಿಲ್ಲ ಆನ್‌ಲೈನ್‌ ವಂಚನೆ!ಅರ್ಧಕೋಟಿಗೂ ಅಧಿಕ ಹಣ ಕಳೆದುಕೊಂಡ ಉಡುಪಿ ಮಹಿಳೆ

ಸ್ಕ್ಯಾಮರ್‌ ಹೇಳಿದ್ದನ್ನೆಲ್ಲಾ ನಂಬಿದ ಮಹಿಳೆ ಸ್ಕ್ಯಾಮರ್‌ ತಿಳಿಸಿದ ಬ್ಯಾಂಕ್‌ ಖಾತೆಗೆ ಹಂತಹಂತವಾಗಿ ಒಟ್ಟಾರೆ 54,74,000ರೂ. ಗಳನ್ನು ಪಾವತಿ ಮಾಡಿದ್ದಾರೆ. ಆದರೆ, ಕೋಟ್ಯಂತರ ಬೆಲೆ ಬಾಳುವ ಗಿಫ್ಟ್‌ ಬಾಕ್ಸ್‌ ಬರುತ್ತದೆ ಎಂದು ಕಾದು ಕುಳಿದಿದ್ದ ಈಕೆಗೆ ಈ ಸ್ಕ್ಯಾಮರ್ ಹಣ ಪಡೆದು ಕಾಗೆ ಹಾರಿಸಿದ್ದಾನೆ. ಇದರಿಂದ ತಾವು ಮೋಸ ಹೋಗಿದ್ದೇನೆ ಎಂದು ತಿಳಿದುಕೊಂಡು ಉಡುಪಿ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದೇ ರೀತಿಯ ಘಟನೆಗಳು ನಿತ್ಯವೂ ಒಂದಲ್ಲಾ ಒಂದು ರೀತಿಯಲ್ಲಿ ನಡೆಯುತ್ತಲೇ ಇರುತ್ತವೆ. ಜನರು ಹಣದ ಆಸೆಗೆ ಈ ಹಗರಣಕ್ಕೆ ಬಿದ್ದು ಕಷ್ಟಪಟ್ಟು ಕೂಡಿ ಇಟ್ಟಿದ್ದ ಹಣವನ್ನು ಕ್ಷಣಮಾತ್ರದಲ್ಲಿ ಕಳೆದುಕೊಳ್ಳುತ್ತಿದ್ದಾರೆ. ಪರಿಣಾಮ ನಿಮಗೆ ಈ ಸಮಸ್ಯೆಗಳು ಏನಾದರೂ ಎದುರಾದರೆ ಇವುಗಳಿಂದ ಪಾರಾಗುವುದು ಹೇಗೆ ಅನ್ನೋದನ್ನು ತಿಳಿಸಿಕೊಡಲಾಗಿದೆ ಓದಿರಿ.

ಅಪೇಕ್ಷಿಸದ ಇಮೇಲ್‌ಗಳು ಹಾಗೂ ಮೆಸೆಜ್‌ಗಳ ಬಗ್ಗೆ ಎಚ್ಚರ: ನಿಮಗೆ ಪರಿಚಯವಿಲ್ಲದವರಿಂದ ನೀವು ಇಮೇಲ್ ಅಥವಾ ಮೆಸೆಜ್‌ಳನ್ನು ಸ್ವೀಕರಿಸಿದರೆ, ಅದನ್ನು ಓಪನ್‌ ಮಾಡುವ ಅಥವಾ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಆಲೋಚನೆ ಮಾಡಬೇಡಿ. ಮಾಲ್ವೇರ್ ಹರಡಲು ಅಥವಾ ವೈಯಕ್ತಿಕ ಮಾಹಿತಿಯನ್ನು ಕದಿಯಲು ಸ್ಕ್ಯಾಮರ್‌ಗಳು ಸಾಮಾನ್ಯವಾಗಿ ಈ ವಿಧಾನಗಳನ್ನು ಬಳಕೆ ಮಾಡುತ್ತಾರೆ.

ನಿಲ್ಲುತ್ತಿಲ್ಲ ಆನ್‌ಲೈನ್‌ ವಂಚನೆ!ಅರ್ಧಕೋಟಿಗೂ ಅಧಿಕ ಹಣ ಕಳೆದುಕೊಂಡ ಉಡುಪಿ ಮಹಿಳೆ

ಆಫರ್‌ಗಳ ಬಗ್ಗೆ ಸಂಶಯ ಇರಲಿ: ನೀವು ಯಾವುದೇ ಅಸುರಕ್ಷಿತ ಸೈಟ್‌ ಮೂಲಕ ಭಾರೀ ಆಫರ್ ಇರುವ ಪ್ರೊಡಕ್ಟ್‌ ಅನ್ನು ಖರೀದಿ ಮಾಡಲು ಮುಂದಾದಾಗ ದೊಡ್ಡ ಎಚ್ಚರಿಕೆ ಅಗತ್ಯ ಇದೆ. ಜನರನ್ನು ಆಕರ್ಷಿಸಲು ಮತ್ತು ನಂತರ ಅವರಿಂದ ಹಣವನ್ನು ಕದಿಯಲು ಸ್ಕ್ಯಾಮರ್‌ಗಳು ಈ ಕೊಡುಗೆಗಳನ್ನು ನೀಡುತ್ತಾರೆ. ಇದು ಕೆಲವೊಮ್ಮೆ ಫ್ಲಿಪ್‌ಕಾರ್ಟ್‌, ಅಮೆಜಾನ್‌ ಸೇರಿದಂತೆ ಇತರೆ ಪ್ರಮುಖ ಇ ಕಾಮರ್ಸ್ ಸೈಟ್‌ಗಳ ಹೆಸರಿನಲ್ಲಿ ಪಡೆಯುತ್ತದೆ.

ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಸುರಕ್ಷಿತ ಪಾವತಿ ಮಾಡಿ: ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ನೀವು ಕ್ರೆಡಿಟ್ ಕಾರ್ಡ್ ಅಥವಾ ಪೇಪಾಲ್‌ ನಂತಹ ಸುರಕ್ಷಿತ ಪಾವತಿ ವಿಧಾನವನ್ನು ಬಳಕೆ ಮಾಡಿ. ಇದರ ಜೊತೆಗೆ ನಿಮ್ಮ ಡಿವೈಸ್‌ನ ಆಪರೇಟಿಂಗ್ ಸಿಸ್ಟಂ, ವೆಬ್ ಬ್ರೌಸರ್ ಮತ್ತು ಭದ್ರತಾ ಸಾಫ್ಟ್‌ವೇರ್ ಸೇರಿದಂತೆ ನಿಮ್ಮ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್‌ ಮಾಡಿ.

ಇಷ್ಟಾಗಿಯೂ ನೀವು ಆನ್‌ಲೈನ್ ವಂಚನೆಗೆ ಬಲಿಯಾಗಿದ್ದೀರಿ ಎಂದು ನೀವು ಭಾವಿಸಿದರೆ, ತಕ್ಷಣ ಸಂಬಂಧಿಸಿ ಅಧಿಕಾರಿಗಳಿಗೆ ವರದಿ ಮಾಡಬೇಕು. ಇದೆಲ್ಲದರ ಜೊತೆಗೆ ನೀವು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ವೈಯಕ್ತಿಕ ಮಾಹಿತಿ ಕುರಿತು ಜಾಗರೂಕರಾಗಿರಿ. ಅನಗತ್ಯ ಎನಿಸುವ ಯಾವುದೇ ಮಾಹಿತಿಯನ್ನು ಶೇರ್‌ ಮಾಡಿಕೊಳ್ಳಬೇಡಿ. ಆನ್‌ಲೈನ್ ಸುರಕ್ಷತೆಯ ಬಗ್ಗೆ ನಿಮ್ಮ ಕುಟುಂಬದ ಜೊತೆ ಚರ್ಚೆ ಮಾಡಿ. ಅದರಲ್ಲೂ ನಿಮ್ಮ ಮಕ್ಕಳಿಗೆ ಈ ವಿಷಯದ ಬಗ್ಗೆ ಹೆಚ್ಚು ಮಾಹಿತಿ ನೀಡಿ.

Best Mobiles in India

English summary
Online fraud cases were reported from Bangalore or other states. However, now a case of fraud of a large amount has been reported from Udupi. A woman lost Rs 54 lakh money.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+