Subscribe to Gizbot

‘ಮುಖ ಗುರುತಿಸುವಿಕೆ’ ತಂತ್ರಜ್ಞಾನ ಆಧಾರ್‌ನಲ್ಲಿ ಹೇಗೆ ಬಳಕೆಯಾಗಲಿದೆ ಗೊತ್ತಾ?

Written By:

ಆಧಾರ್ ಕೂಡ ಮುಖವನ್ನು ಗುರುತಿಸುವ ವೈಶಿಷ್ಟ್ಯವನ್ನು ಆಧಾರ್ ಕಾರ್ಡ್‌ಗೆ ಸೇರಿಸಲಾಗುತ್ತಿದೆ ಎಂದು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಸೋಮವಾರ ಹೇಳಿದೆ.! ಹಾಗಾಗಿ, ವಿವಿಧ ಸೇವೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಸಂದರ್ಭದಲ್ಲಿ ಇನ್ನು ಮುಂದೆ 'ಮುಖ ಗುರುತಿಸುವಿಕೆ' ತಂತ್ರಜ್ಞಾನ ಬಳಕೆಯಾಗಲಿದೆ.!!

ಈ ಹೊಸ ವೈಶಿಷ್ಟ್ಯವನ್ನು 2018ರ ಜುಲೈ 1 ರಂದು ಪ್ರಾರಂಭವಾಗಲಿದ್ದು, ಆಧಾರ್ ತಂದಿರುವ ಈ ಹೊಸ ವಿಧಾನವು ದೇಶದ ಎಲ್ಲ ನಾಗರಿಕರಿಗೆ ತಮ್ಮ ಗುರುತನ್ನು ದೃಢಪಡಿಸಿಕೊಳ್ಳಲು ಹೆಚ್ಚುವರಿ ಆಯ್ಕೆಯಾಗಿದೆ.! ಹಾಗಾದರೆ,'ಮುಖ ಗುರುತಿಸುವಿಕೆ' ತಂತ್ರಜ್ಞಾನ ಆಧಾರ್‌ನಲ್ಲಿ ಹೇಗೆ ಬಳಕೆಯಾಗಲಿದೆ ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸುರಕ್ಷತೆ ಇನ್ನಷ್ಟು ಹೆಚ್ಚಲಿದೆ!!

ಸುರಕ್ಷತೆ ಇನ್ನಷ್ಟು ಹೆಚ್ಚಲಿದೆ!!

ಮುಖ ಗುರುತಿಸುವಿಕೆಯ ಹೊಸ ವಿಧಾನವು ದೇಶದ ಎಲ್ಲ ನಾಗರಿಕರಿಗೆ ತಮ್ಮ ಗುರುತನ್ನು ದೃಢಪಡಿಸಿಕೊಳ್ಳಲು ಹೆಚ್ಚುವರಿ ಆಯ್ಕೆಯಾಗಿದ್ದು, ನೂತನ ವಿಧಾನದಿಂದಾಗಿ ಇದರಿಂದಾಗಿ ಜನರ ವೈಯಕ್ತಿಕ ವಿವರಗಳ ಸುರಕ್ಷತೆ ಇನ್ನಷ್ಟು ಹೆಚ್ಚಲಿದೆ ಎಂದು ಯುಐಡಿಎಐ ಹೇಳಿದೆ.!!

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?
ಹೊಸ ಮುಖ ಗುರುತಿಸುವಿಕೆ ವಿಧಾನ!

ಹೊಸ ಮುಖ ಗುರುತಿಸುವಿಕೆ ವಿಧಾನ!

ಬೆರಳಚ್ಚು, ಕಣ್ಣಿನ ಪಾಪೆಯನ್ನು ಸ್ಕ್ಯಾನ್‌ ಮಾಡುವ ಗುರುತು ದೃಢಪಡಿಸಲು ಸಾಧ್ಯವಾಗದಿದ್ದವರಿಗೆ ‘ಮುಖ ಗುರುತಿಸುವಿಕೆಯ' ಹೊಸ ವಿಧಾನ ನೆರವಾಗಲಿದೆ. ಈಗ ಅನುಸರಿಸಲಾಗುತ್ತಿರುವ ದೃಢೀಕರಣ ವಿಧಾನಗಳ ಜೊತೆಯಲ್ಲೇ ಈ ಹೊಸ ವಿಧಾನವನ್ನೂ ಬಳಸಲಾಗುವುದು ಎಂದು ಯುಐಡಿಎಐ ತಿಳಿಸಿದೆ.!!

ಜನರಿಗೆ ತೊಂದರೆ ಇಲ್ಲ.!!

ಜನರಿಗೆ ತೊಂದರೆ ಇಲ್ಲ.!!

ಮುಖ ಗುರುತಿಸುವಿಕೆಯ ಹೊಸ ವಿಧಾನ ಜಾರಿಯಾಗುತ್ತಿರುವುದರಿಂದ ಮತ್ತೆ ಫೇಸ್‌ ಸ್ಕ್ಯಾನ್ ಮಾಡಿಸುವ ತೊಂದರೆ ಜನರಿಗಿಲ್ಲ.!! ಏಕೆಂದರೆ ಯುಐಎಡಿಎ ದತ್ತಾಂಶ ಸಂಗ್ರಹದಲ್ಲಿ ಈಗಾಗಲೇ ಆಧಾರ್‌ನೋಂದಣಿದಾರರ ಭಾವಚಿತ್ರ ಇರುವುದರಿಂದ ಚಿತ್ರಗಳನ್ನು ಹೊಸದಾಗಿ ಸೆರೆಹಿಡಿಯುವ ಅಗತ್ಯವಿಲ್ಲ ಎಂದು ತಿಳಿಸಿದೆ.!!

ಹೆಚ್ಚಿನ ಸಲಕರಣೆಗಳು ಬೇಕಿಲ್ಲ.!!

ಹೆಚ್ಚಿನ ಸಲಕರಣೆಗಳು ಬೇಕಿಲ್ಲ.!!

ಕ್ಯಾಮೆರಾಗಳು ಲ್ಯಾಪ್‌ಟಾಪ್‌, ಮೊಬೈಲ್‌ಗಳಲ್ಲೂ ಸುಲಭವಾಗಿ ಲಭ್ಯವಿರುವುದರಿಂದ ವಿವಿಧ ಸಂಸ್ಥೆಗಳು ಮುಖದ ಗುರುತು ದೃಢೀಕರಣಕ್ಕಾಗಿ ಹೆಚ್ಚುವರಿ ಸಲಕರಣೆಗಳನ್ನು ಹೊಂದಬೇಕಾಗಿಲ್ಲ. ಅನಿವಾರ್ಯವಾದರೆ ಹೊಸ ದೃಢೀಕರಣ ವ್ಯವಸ್ಥೆಗಾಗಿ ಪ್ರತ್ಯೇಕ ಉಪಕರಣಗಳನ್ನೂ ಪೂರೈಸುವುದಾಗಿ ಯುಐಎಡಿಐ ಹೇಳಿದೆ.!!

ಪರ್ಯಾಯ ಗುರುತಿನ ಸಂಖ್ಯೆ!!

ಪರ್ಯಾಯ ಗುರುತಿನ ಸಂಖ್ಯೆ!!

ಆಧಾರ್‌ ದತ್ತಾಂಶದಲ್ಲಿ ದಾಖಲಾಗಿರುವ ನಾಗರಿಕರ ವೈಯಕ್ತಿಕ ವಿವರಗಳನ್ನು ಕಾಪಾಡುವ ಉದ್ದೇಶದಿಂದ ಆಧಾರ್‌ ನೋಂದಣಿ ಮಾಡಿಸಿಕೊಂಡವರಿಗೆ 16 ಸಂಖ್ಯೆಗಳ ಪರ್ಯಾಯ ಗುರುತಿನ ಸಂಖ್ಯೆಯನ್ನು ನೀಡುವ ವ್ಯವಸ್ಥೆ ಜಾರಿಗೆ ತರುವುದಾಗಿ ಕಳೆದ ವಾರ ಯುಐಎಡಿಐ ಹೇಳಿತ್ತು.!!

ಓದಿರಿ:ಸ್ಮಾರ್ಟ್‌ಫೋನ್ ಬ್ಯಾಟರಿಯ ಎಲ್ಲಾ ಸಮಸ್ಯೆಗಳಿಗೆ ಇದೊಂದೇ ಪರಿಹಾರ!..ಎಲ್ಲರೂ ತಿಳಿಯಲೇಬೇಕು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
UIDAI to introduce Facial Authentication for Aadhaar – Will Start from 1st of July 2018
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot