Home
ಸುದ್ದಿಜಾಲ

ಆಧಾರ್ ಕಾರ್ಡ್ ಬಳಕೆದಾರರೇ ಗಮನಿಸಿ: ಈ ಹೊಸ ಸೌಲಭ್ಯದ ಲಾಭ ಪಡೆದುಕೊಳ್ಳಿ!

ಭಾರತದ ಪ್ರಮುಖ ಗುರುತಿನ ಚೀಟಿಯಾಗಿರುವ ಆಧಾರ್‌ ಭಾರತದ ಎಲ್ಲಾ ಪ್ರಜೆಗಳಿಗೆ ಅಗತ್ಯವಾದ ದಾಖಲೆಯಾಗಿದ್ದು, ಹಲವು ರೀತಿಯಲ್ಲಿ ಬಳಕೆಯಲ್ಲಿದೆ. ಈ ನಡುವೆ ಹೊಸ ಬೆಳವಣಿಗೆ ಕಂಡುಬಂದಿದ್ದು, ಈ ಮೂಲಕ ಆಧಾರ್‌ನೊಂದಿಗೆ ಸೀಡ್ ಮಾಡಿದ ನಿಮ್ಮ ಮೊಬೈಲ್ ಸಂಖ್ಯೆಗಳು ಮತ್ತು ಇಮೇಲ್ ಐಡಿಗಳನ್ನು ಪರಿಶೀಲಿಸಲು ಅವಕಾಶ ಮಾಡಿಕೊಟ್ಟಿದೆ.

ಹೌದು, ಬಳಕೆದಾರರ ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನಿವಾಸಿಗಳು ತಮ್ಮ ಆಧಾರ್‌ನೊಂದಿಗೆ ಸೀಡ್ ಮಾಡಿದ ಮೊಬೈಲ್ ಸಂಖ್ಯೆಗಳು ಮತ್ತು ಇಮೇಲ್ ಐಡಿಗಳನ್ನು ಪರಿಶೀಲಿಸಲು ಅವಕಾಶ ಮಾಡಿಕೊಡಲಾಗಿದೆ. ಹಾಗಿದ್ರೆ, ಯಾವ ಉದ್ದೇಶಕ್ಕೆ ಬೆಳವಣಿಗೆ ಸಂಭವಿಸಿದೆ, ಇದರಿಂದ ಬಳಕೆದಾರರಿಗೆ ಆಗುವ ಅನುಕೂಲ ಏನು? ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಆಧಾರ್ ಕಾರ್ಡ್ ಬಳಕೆದಾರರೇ ಗಮನಿಸಿ: ಈ ಹೊಸ ಸೌಲಭ್ಯದ ಲಾಭ ಪಡೆದುಕೊಳ್ಳಿ!

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತನ್ನ ವೆಬ್‌ಸೈಟ್ ಮತ್ತು ಮೊಬೈಲ್ ಆಪ್ ಮೂಲಕ ಫೀಚರ್ಸ್‌ ಆರಂಭಿಸಿದೆ. ಇದರ ಸಹಾಯದಿಂದ ಜನರು ಆಧಾರ್‌ಗೆ ಲಿಂಕ್ ಮಾಡಿದ ಮೊಬೈಲ್ ಫೋನ್ ಮತ್ತು ಇ-ಮೇಲ್ ಐಡಿಯನ್ನು ಸುಲಭವಾಗಿ ಪರಿಶೀಲಿಸಲು ಸಾಧ್ಯವಾಗುತ್ತದೆ. ಯಾಕೆಂದರೆ ಕೆಲವು ಸಂದರ್ಭಗಳಲ್ಲಿ ಜನರು ತಮ್ಮ ಆಧಾರ್‌ಗೆ ಯಾವ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿದ್ದಾರೆ ಎಂಬುದೇ ತಿಳಿದಿರುವುದಿಲ್ಲ. ಈ ಕಾರಣವನ್ನೇ ಗಮನದಲ್ಲಿ ಇರಿಸಿಕೊಂಡು ಈ ಸೌಲಭ್ಯ ಕಲ್ಪಿಸಿಕೊಡಲಾಗಿದೆ.

ಈ ಸಂಬಂಧ UIDAI ಹೇಳಿಕೆ ನೀಡಿದ್ದು, ಆಧಾರ್ OTP ಬೇರೆ ಯಾವುದಾದರೂ ಮೊಬೈಲ್ ಸಂಖ್ಯೆಗೆ ಹೋದರೆ ಅವರಿಗೆ ತಿಳಿಯುವುದಿಲ್ಲ ಎಂದು ಜನರು ಚಿಂತಿಸುತ್ತಿದ್ದರು. ಈಗ ಈ ಸೌಲಭ್ಯದೊಂದಿಗೆ, ಜನರು ತಮ್ಮ ಆಧಾರ್‌ಗೆ ಯಾವ ಮೊಬೈಲ್ ಅಥವಾ ಇ-ಮೇಲ್ ಐಡಿಯನ್ನು ಲಿಂಕ್ ಮಾಡಲಾಗಿದೆ ಎಂಬುದನ್ನು ಸುಲಭವಾಗಿ ಕಂಡುಕೊಳ್ಳಬಹುದು. ಇದಕ್ಕಾಗಿ ಬಳಕೆದಾರರು ಅಧಿಕೃತ ವೆಬ್‌ಸೈಟ್ ಅಥವಾ ಎಂ-ಆಧಾರ್ ಆಪ್‌ ಮೂಲಕ ಇಮೇಲ್ ಹಾಗೂ ಮೊಬೈಲ್ ಸಂಖ್ಯೆ ಪರಿಶೀಲನೆ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಉಲ್ಲೇಖಿಸಿದೆ.

ಆಧಾರ್ ಕಾರ್ಡ್ ಬಳಕೆದಾರರೇ ಗಮನಿಸಿ: ಈ ಹೊಸ ಸೌಲಭ್ಯದ ಲಾಭ ಪಡೆದುಕೊಳ್ಳಿ!

ಮೊಬೈಲ್ ಸಂಖ್ಯೆ ಸಂಪರ್ಕಿಸದಿದ್ದರೂ ಕೆಲಸ ಪರವಾಗಿಲ್ಲ: ಈ ಹೊಸ ಸೌಲಭ್ಯದ ಪ್ರಕಾರ ಯಾವುದೇ ಮೊಬೈಲ್ ಸಂಖ್ಯೆಗೆ ಸಂಪರ್ಕ ಹೊಂದಿಲ್ಲದಿದ್ದರೂ ಸಹ ಜನರಿಗೆ ಇದು ಮಾಹಿತಿಯನ್ನು ತಿಳಿಸುತ್ತದೆ. ಹಾಗೆಯೇ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸುವ ಬಗ್ಗೆ ಬಳಕೆದಾರರಿಗೆ ಇದು ಮಾಹಿತಿ ನೀಡುತ್ತದೆ. ಅದಾಗ್ಯೂ ಮೊಬೈಲ್ ಸಂಖ್ಯೆಯನ್ನು ಈಗಾಗಲೇ ನೀವು ಪರಿಶೀಲನೆ ಮಾಡಿದ್ದೀರಿ ಎಂದರೆ ಡಿಸ್‌ಪ್ಲೇ ಮೇಲೆ ಸಂದೇಶ ಕಾಣಿಸಿಕೊಳ್ಳುತ್ತದೆ. ಹಾಗೆಯೇ ನೀವು ನಮೂದಿಸಿದ ಮೊಬೈಲ್ ಸಂಖ್ಯೆಯನ್ನು ನಮ್ಮ ದಾಖಲೆಗಳಿಂದ ಈಗಾಗಲೇ ಪರಿಶೀಲಿಸಲಾಗಿದೆ ಎಂದು ಉಲ್ಲೇಖ ಮಾಡಿರಲಾಗುತ್ತದೆ.

ಇನ್ನು ಒಂದು ವೇಳೆ ನೀವು ಆಧಾರ್ ಸಂಖ್ಯೆಯನ್ನು ಪಡೆದುಕೊಳ್ಳುವಾಗ ನೀಡಿದ ಮೊಬೈಲ್ ಸಂಖ್ಯೆ ನೆನಪಿಲ್ಲದಿದ್ದರೆ ಆ ಸಂದರ್ಭದಲ್ಲ 'ನನ್ನ ಆಧಾರ್' ವಿಭಾಗದಲ್ಲಿ ಮೊಬೈಲ್ ಸಂಖ್ಯೆಯ ಕೊನೆಯ ಮೂರು ಅಂಕೆಗಳನ್ನಾದರೂ ನಮೂದಿಸಬಹುದು. ಅದಾಗ್ಯೂ UIDAI ಪ್ರಕಾರ ಇಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.

ಆನ್‌ಲೈನ್‌ನಲ್ಲಿ ಆಧಾರ್‌ ಡೌನ್‌ಲೋಡ್ ಮಾಡುವುದು ಹೇಗೆ?: ನಿಮ್ಮ ಬಳಿ ಇರುವ ಆಧಾರ್ ಕಾರ್ಡ್‌ ಏನಾದರೂ ಕಾಣೆಯಾಗಿದ್ದರೆ ಹೊಸ ಆಧಾರ್‌ ಅನ್ನು ಸುಲಭವಾಗಿ ಬೆರಳತುದಿಯಲ್ಲಿ ಡೌನ್‌ಲೋಡ್ ಮಾಡಬಹುದು. ಇದಕ್ಕಾಗಿ ನೀವು uidai.gov.in ಅಥವಾ eaadhaar.uidai.gov.in ಲಿಂಕ್‌ ಅನ್ನು ಬಳಕೆ ಮಾಡಿಕೊಳ್ಳಬಹುದು.

ಇದಾದ ನಂತರ ಮೇನ್‌ ಪೇಜ್‌ನಲ್ಲಿ ಕಂಡುಬರುವ ನನ್ನ ಆಧಾರ್ ವಿಭಾಗದಲ್ಲಿ ಕಾಣಿಸಿಕೊಳ್ಳುವ ಡೌನ್‌ಲೋಡ್ ಆಧಾರ್ ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ. ಬಳಿಕ ನಿಮ್ಮ ಆಧಾರ್ ಸಂಖ್ಯೆ ಅಥವಾ ದಾಖಲಾತಿ ಐಡಿ (EID) ಅನ್ನು ನಮೂದಿಸಬೇಕಾದ ಹೊಸ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ. ಅಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ನಂತರ ಇಮೇಜ್ ಕ್ಯಾಪ್ಚಾ ಕೋಡ್ ಎಂಟ್ರಿ ಮಾಡಿ.

ಆಧಾರ್ ಕಾರ್ಡ್ ಬಳಕೆದಾರರೇ ಗಮನಿಸಿ: ಈ ಹೊಸ ಸೌಲಭ್ಯದ ಲಾಭ ಪಡೆದುಕೊಳ್ಳಿ!

ಬಳಿಕ ನೀವು ನೋಂದಣಿ ಮಾಡಿರುವ ನಂಬರ್‌ಗೆ ಒಂದು OTP ಬರಲಿದೆ ಅದನ್ನು ಅಗತ್ಯ ಜಾಗದಲ್ಲಿ ಭರ್ತಿ ಮಾಡಿ. ನಂತರ ಡೌನ್‌ಲೋಡ್ ಆಧಾರ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ. ಈ ಮೂಲಕ ನೀವು ನಿಮ್ಮ ಆಧಾರ್‌ ಅನ್ನು PDF ಫೈಲ್ ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

Best Mobiles in India

English summary
Keeping in mind the benefits of the users, the Unique Identification Authority of India (UIDAI) has allowed residents to verify mobile numbers and email IDs seeded with their Aadhaar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+