Home
ಸುದ್ದಿಜಾಲ

ಫ್ರೀಯಾಗಿ ಆಧಾರ್ ಅಪ್ಡೇಟ್ ಮಾಡಬೇಕೆಂದರೆ ಇದೇ ಕರೆಕ್ಟ್ ಟೈಂ! ಅವಧಿ ಮುಗಿದರೆ ಅವಕಾಶವಿಲ್ಲ!

ಆಧಾರ್‌ ಭಾರತೀಯ ಪ್ರಜೆಗಳಿಗೆ ಪ್ರಮುಖ ಪುರಾವೆಯಾಗಿ ಕೆಲಸ ಮಾಡುತ್ತಿದ್ದು, ಈ ಮೂಲಕ ಸರ್ಕಾರದ ಬಹುಪಾಲು ಸವಲತ್ತುಗಳನ್ನು ಪಡೆದುಕೊಳ್ಳಲು ಅಗತ್ಯವಾದ ದಾಖಲೆಯಾಗಿ ಮಾರ್ಪಟ್ಟಿದೆ. ಇದರ ನಡುವೆ UIDAI ನಿಮಗೊಂದು ಗುಡ್‌ ನ್ಯೂಸ್‌ ನೀಡಿದ್ದು, ಈ ಮೂಲಕ ನೀವು ಉಚಿತ ಸೇವೆ ಪಡೆದುಕೊಳ್ಳಬಹುದಾಗಿದೆ.

ಹೌದು, ನಾಗರಿಕರು ತಮ್ಮ ಆಧಾರ್‌ ಅನ್ನು ಉಚಿತವಾಗಿ ನವೀಕರಿಸಿಕೊಳ್ಳಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಅವಕಾಶ ಮಾಡಿಕೊಟ್ಟಿದೆ. ಈ ಕ್ರಮವು ದೇಶಾದ್ಯಂತ ಲಕ್ಷಾಂತರ ನಿವಾಸಿಗಳಿಗೆ ಪ್ರಯೋಜನ ನೀಡಲಿದ್ದು, ಈ ನಿರ್ಧಾರವನ್ನು ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ಘೋಷಣೆ ಮಾಡಲಾಗಿದೆ. ಹಾಗಿದ್ರೆ, ಉಚಿತವಾಗಿ ಹೇಗೆ ಇದರ ಸೌಲಭ್ಯ ಪಡೆದುಕೊಳ್ಳುವುದು, ಎಷ್ಟು ದಿನಗಳ ವರೆಗೆ ಈ ಸೇವೆ ಇರಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಫ್ರೀಯಾಗಿ ಆಧಾರ್ ಅಪ್ಡೇಟ್ ಮಾಡಬೇಕೆಂದರೆ ಇದೇ ಕರೆಕ್ಟ್ ಟೈಂ!

ಆಧಾರ್ ಸಂಖ್ಯೆಯು ಭಾರತದಲ್ಲಿನ ನಿವಾಸಿಗಳಿಗೆ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಗುರುತಿನ ಪುರಾವೆಯಾಗಿದ್ದು, ಈಗಂತೂ ಎಲ್ಲಾ ಸರ್ಕಾರಿ ಕೆಲಸಗಳಿಗೂ ಅತ್ಯಗತ್ಯವಾಗಿದೆ. ಹಾಗೆಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸುಮಾರು 1,200 ಸರ್ಕಾರಿ ಯೋಜನೆಗಳನ್ನು ಪಡೆದುಕೊಳ್ಳಲು ಈ ಆಧಾರ್‌ಅನ್ನು ಕಡ್ಡಾಯ ಮಾಡಲಾಗಿದೆ. ಇಷ್ಟು ಮಾತ್ರವಲ್ಲದೆ ಬ್ಯಾಂಕ್‌ ವ್ಯವಹಾರ, ಎನ್‌ಬಿಎಫ್‌ಸಿ ಸೇರಿದಂತೆ ಇನ್ನಿತರೆ ಹಣಕಾಸಿನ ವ್ಯವಹಾರಕ್ಕೆ ಈ ಆಧಾರ್‌ ಅನಿವಾರ್ಯವಾಗಿದೆ.

ಈ ನಡುವೆ ನಿಮ್ಮ ಆಧಾರ್‌ನಲ್ಲಿ ಏನಾದರೂ ಸಣ್ಣ ತಪ್ಪು ಕಂಡುಬಂದರೂ ಸಹ ಇಲಾಖೆಗಳು ಅದನ್ನು ಸ್ವೀಕಾರ ಮಾಡುವುದಿಲ್ಲ. ಹೀಗಾಗಿ ನೀವು ಅದನ್ನು ಇಂತಿಷ್ಟು ಎಂದು ಹಣ ಪಾವತಿ ಮಾಡಿ ಅಪ್‌ಡೇಟ್‌ ಮಾಡಿಸಬೇಕಾಗಿತ್ತು. ಆದರೆ, ಇದೀಗ ಭಾರತದ ಜನರು ಉಚಿತವಾಗಿ ತಮ್ಮ ಆಧಾರ್‌ ಅನ್ನು ಅಪ್‌ಡೇಟ್‌ ಮಾಡಬಹುದಾಗಿದೆ. ಈ ಸೇವೆಯು ಮಾರ್ಚ್ 15 ರಿಂದ ಜೂನ್ 14, 2023 ರ ವರೆಗೆ ಇರಲಿದೆ. ಅಂದರೆ ಬರೋಬ್ಬರಿ ಮೂರು ತಿಂಗಳವರೆಗೆ ಕಾಲಾವಕಾಶ ನೀಡಲಾಗಿದೆ.

ಫ್ರೀಯಾಗಿ ಆಧಾರ್ ಅಪ್ಡೇಟ್ ಮಾಡಬೇಕೆಂದರೆ ಇದೇ ಕರೆಕ್ಟ್ ಟೈಂ!

ಈ ಸೇವೆ ಮೈಆಧಾರ್‌ನಲ್ಲಿ ಮಾತ್ರ ಲಭ್ಯವಿದೆ. ಇನ್ನುಳಿದಂತೆ ನೀವೇ ಆಧಾರ್ ಕೇಂದ್ರಗಳಿಗೆ ಹೋಗಿ ಅಪ್‌ಡೇಟ್ ಮಾಡಿಸುತ್ತೇವೆ ಎಂದರೂ ಅದಕ್ಕೂ ಈ ಹಿಂದೆ ಯಾವ ರೀತಿಯ ಪ್ರಕ್ರಿಯೆ ಇತ್ತೋ ಅದೇ ರೀತಿ 50 ರೂ. ಗಳನ್ನು ಪಾವತಿ ಮಾಡಿ ಈ ಸೇವೆ ಪಡೆದುಕೊಳ್ಳಬಹುದಾಗಿದೆ. ಈ ಸೇವೆಯು ದೇಶಾದ್ಯಂತ ಎಲ್ಲಾ ಬ್ಯಾಂಕ್‌ ಹಾಗೂ ಇನ್ನಿತರೆ ಕೇಂದ್ರಗಳಲ್ಲಿ ಲಭ್ಯವಿದೆ. 50 ರೂ. ಗಳನ್ನು ಉಳಿಸಬೇಕು ಎಂದಾದರೆ ನೀವೇ ಆನ್‌ಲೈನ್‌ ಮೂಲಕ ಅಪ್‌ಡೇಟ್‌ ಮಾಡಿಕೊಳ್ಳಿ.

ಆನ್‌ಲೈನ್‌ನಲ್ಲಿ ಆಧಾರ್ ಅನ್ನು ನೀವು ಈ ರೀತಿಯಲ್ಲಿ ನವೀಕರಿಸಬಹುದಾಗಿದೆ. ಮೊದಲು ನೀವು ನಿಮ್ಮ ಫೋನ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ https://myaadhaar.uidai.gov.in/ ಗೆ ಭೇಟಿ ನೀಡಬೇಕು. ಅಲ್ಲಿ ನಿಮ್ಮ ಆಧಾರ್‌ ಸಂಖ್ಯೆ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದು ಮಾಡಿದರೆ ನಿಮಗೆ ಒನ್ ಟೈಮ್ ಪಾಸ್‌ವರ್ಡ್ (OTP) ಬರುತ್ತದೆ. ಅದನ್ನು ಕೇಳಲಾದ ಜಾಗದಲ್ಲಿ ಭರ್ತಿ ಮಾಡಬೇಕು.

ಇದಾದ ನಂತರ ಡಾಕ್ಯುಮೆಂಟ್ ಅಪ್‌ಡೇಟ್ ಎಂಬ ಆಯ್ಕೆ ಕೆಳಭಾಗದಲ್ಲಿ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ಕೆಲವು ಷರತ್ತು ಹಾಗೂ ನಿಯಮಗಳನ್ನು ತೋರಿಸಲಾಗುತ್ತದೆ. ಅದನ್ನು ಸರಿಯಾಗಿ ಓದಿಕೊಂಡು ಮುಂದಿನ ಪ್ರಕ್ರಿಯೆ ನಡೆಸಿ. ಬಳಿಕ ಡ್ರಾಪ್‌ಡೌನ್ ಪಟ್ಟಿಯಿಂದ ಗುರುತಿನ ಪುರಾವೆ (PoI) ಮತ್ತು ವಿಳಾಸದ ಪುರಾವೆ (PoA) ಡಾಕ್ಯುಮೆಂಟ್‌ಗಳನ್ನು ಆರಿಸಬೇಕಾಗುತ್ತದೆ. ಜೊತೆಗೆ ದಾಖಲೆಗಳನ್ನು ನವೀಕರಿಸಲು ಅದರ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

ಫ್ರೀಯಾಗಿ ಆಧಾರ್ ಅಪ್ಡೇಟ್ ಮಾಡಬೇಕೆಂದರೆ ಇದೇ ಕರೆಕ್ಟ್ ಟೈಂ!

ಆಧಾರ್ ನೋಂದಣಿ ಮತ್ತು ನವೀಕರಣ ನಿಯಮಗಳ ಪ್ರಕಾರ ಪ್ರತಿ ಹತ್ತು ವರ್ಷಕ್ಕೆ ಒಮ್ಮೆ ಕಡ್ಡಾಯವಾಗಿ ತಮ್ಮ ಮಾಹಿತಿಯ ನಿರಂತರ ನಿಖರತೆಯನ್ನು ಖಚಿತಪಡಿಸಿಕೊಳ್ಳಲು POI ಮತ್ತು POA ದಾಖಲೆಗಳನ್ನು ಸಲ್ಲಿಸುವ ಮೂಲಕ ಆಧಾರ್‌ನಲ್ಲಿ ತಮ್ಮ ಪೋಷಕ ದಾಖಲೆಗಳನ್ನು ಒಮ್ಮೆಯಾದರೂ ನವೀಕರಿಸಬೇಕಿದೆ. ಇದರಿಂದ ಸರ್ಕಾರಕ್ಕೆ ಹಾಗೂ ನಿಮಗೆ ಹಲವಾರು ಪ್ರಯೋಜನ ಲಭ್ಯವಾಗಲಿದೆ.

Best Mobiles in India

English summary
The Unique Identification Authority of India (UIDAI) has allowed citizens to update their Aadhaar for free. This opportunity will last for three months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+