ಜನಪ್ರಿಯ Vivo T3 Ultra ಫೋನ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಇದೀಗ ಸ್ಮಾರ್ಟ್‌ಫೋನ್ ಫೆಸ್ಟಿವಲ್ ಡೇಸ್ ಮಾರಾಟ ಮೇಳ ಆಯೋಜಿಸದ್ದು, ಆಯ್ದ ಮೊಬೈಲ್‌ಗಳಿಗೆ ಅತ್ಯುತ್ತಮ ಡಿಸ್ಕೌಂಟ್ ಲಭ್ಯ ಮಾಡಿದೆ. ಆ ಪೈಕಿ ವಿವೋ ಸಂಸ್ಥೆಯು ವಿವೋ T3 ಅಲ್ಟ್ರಾ ಫೋನ್ ಭರ್ಜರಿ ಡಿಸ್ಕೌಂಟ್ ಬೆಲೆ ಪಡೆದುಕೊಂಡಿದೆ. ಇನ್ನು ಈ ಮೊಬೈಲ್ 12 GB RAM + 256 GBಸ್ಟೋರೇಜ್‌ನ ವೇರಿಯಂಟ್ ಆಯ್ಕೆ ಪಡೆದಿದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅಗಿದೆ.
ಹೌದು, ಫ್ಲಿಪ್‌ಕಾರ್ಟ್ ತಾಣದಲ್ಲಿ ಸ್ಮಾರ್ಟ್‌ಫೋನ್ ಫೆಸ್ಟಿವಲ್ ಡೇಸ್ ಸೇಲ್‌ನಲ್ಲಿ ವಿವೋ T3 ಅಲ್ಟ್ರಾ ಫೋನ್ ಶೇ. 10% ರಷ್ಟು ನೇರ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್‌ನ 12 GB RAM + 256 GB ಸ್ಟೋರೇಜ್ ವೇರಿಯಂಟ್ ಆಫರ್‌ನಲ್ಲಿ 35,999ರೂ. ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಹೆಚ್ಚುವರಿಯಾಗಿ ಕೆಲವು ಆಯ್ದ ಬ್ಯಾಂಕ್‌ಗಳಿಂದ ಡಿಸ್ಕೌಂಟ್ ಸಹ ಪಡೆಯಬಹುದಾಗಿದೆ.

ಹಾಗೆಯೇ ವಿವೋ (vivo) ಸಂಸ್ಥೆಯ ಈ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದೆ. ಅಲ್ಲದೇ ಇದರ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇನ್ನುಳಿದಂತೆ ವಿವೋ T3 ಅಲ್ಟ್ರಾ ಮೊಬೈಲ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.
ವಿವೋ T3 ಅಲ್ಟ್ರಾ ಫೋನ್ - ಫೀಚರ್ಸ್
ವಿವೋ T3 ಅಲ್ಟ್ರಾ ಮೊಬೈಲ್ 6.78 ಇಂಚಿನ 3D ಕರ್ವ್ ಹೆಚ್‌ಡಿ+ ಅಮೋಲೆಡ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು 2800 x 1260 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಅಲ್ಲದೇ 120Hz ರಿಫ್ರೆಶ್ ರೇಟ್ ಆಯ್ಕೆ ಒಳಗೊಂಡಿದ್ದು, ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 9200+ SoC ಚಿಪ್‌ಸೆಟ್ ಪ್ರೊಸೆಸರ್ ಬಲದಲ್ಲಿ ಕಾರ್ಯ ನಿರ್ವಹಿಸಲಿದೆ. ಅಲ್ಲದೇ ಇದು ಇತ್ತೀಚಿನ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಸಹ ಹೊಂದಿದೆ.
ವಿವೋ T3 ಅಲ್ಟ್ರಾ ಮೊಬೈಲ್ 8GB + 128GB, 8GB + 256GB ಹಾಗೂ 12GB + 256GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಅಲ್ಲದೇ ಇದು ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಈ ಮೊಬೈಲ್‌ನ ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸರ್ ಸೌಲಭ್ಯ ಪಡೆದಿದೆ. ಇನ್ನು ಇದರ ಸೆಲ್ಫಿ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಸೌಲಭ್ಯ ಪಡೆದಿದೆ.
ವಿವೋ T3 ಅಲ್ಟ್ರಾ ಮೊಬೈಲ್ 5500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಸಹ ಪಡೆದಿದ್ದು, ಇದಕ್ಕೆ ಅನುಗುಣವಾಗಿ 80W ಫಾಸ್ಟ್ ಚಾರ್ಜಿಂಗ್ ಬೆಂಬಲ ಸಹ ಇದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್ ಡ್ಯುಯಲ್ 4G VoLTE, ವೈ ಫೈ 6, ಜಿಪಿಎಸ್, ಯುಎಸ್‌ಬಿ ಟೈಪ್-ಸಿ, ಸೈಡ್ ಮೌಂಟ್ ಫಿಂಗರ್‌ಫ್ರಿಂಟ್ ಸೆನ್ಸಾರ್ ಆಯ್ಕೆಗಳನ್ನು ಒಳಗೊಂಡಿದೆ.
ವಿವೋ T3 ಅಲ್ಟ್ರಾ ಮೊಬೈಲ್ 8GB + 128GB ವೇರಿಯಂಟ್, 8GB + 256GB ವೇರಿಯಂಟ್ ಹಾಗೂ 12GB + 256GB ವೇರಿಯಂಟ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಇನ್ನು ಖರೀದಿದಾರರು ಈ ಫೋನ್ ಗ್ರೀನ್ ಹಾಗೂ ಗ್ರೇ ಕಲರ್ ಆಯ್ಕೆಯಲ್ಲಿ ಖರೀದಿ ಮಾಡಬಹುದು.


Click it and Unblock the Notifications








