ಇದು ಜನಪ್ರಿಯ ಫೋನ್..256GB ಸ್ಟೋರೇಜ್ ಇದೆ!..ಬೆಲೆಯಲ್ಲಿ ಸಖತ್ ಇಳಿಕೆ!
ದಿಗ್ಗಜ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್‌ಗಳಿಗೆ ಒಂದಿಲ್ಲೊಂದು ವಿಶೇಷ ಮಾರಾಟದ ಮೂಲಕ ಡಿಸ್ಕೌಂಟ್ ನೀಡುತ್ತಾ ಸಾಗಿದೆ. ಕೆಲವೊಮ್ಮೆ ಹಳೆಯ ಫೋನ್‌ಗಳು ಸೇರಿದಂತೆ ಹೊಸ ಫೋನ್‌ಗಳಿಗೂ ಭಾರೀ ಆಕರ್ಷಕ ಡಿಸ್ಕೌಂಟ್ ನೀಡುತ್ತಿರುತ್ತದೆ. ಹಾಗೆಯೇ ಇದೀಗ ಆ ಪೈಕಿ ರೆಡ್ಮಿ 12 5G ಫೋನ್ ಹುಬ್ಬೇರಿಸುವಂತಹ ಬೆಲೆ ಇಳಿಕೆ ಪಡೆದಿದ್ದು, ರೆಡ್ಮಿ ಮೊಬೈಲ್ ಖರೀದಿ ಮಾಡುವ ಗ್ರಾಹಕರ ಗಮನ ಸೆಳೆಯುತ್ತಿದೆ.
ಹೌದು, ಲೀಡಿಂಗ್ ಫ್ಲಿಪ್‌ಕಾರ್ಟ್ ತಾಣದಲ್ಲಿ ರೆಡ್ಮಿ 12 5G ಮೊಬೈಲ್ ಶೇ. 35% ರಷ್ಟು ನೇರ ಡಿಸ್ಕೌಂಟ್ ಪಡೆದಿದೆ. ಈ ಫೋನ್ 8 GB RAM + 256 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಇದೀಗ 12,999ರೂ. ಗಳ ಭರ್ಜರಿ ಡಿಸ್ಕೌಂಟ್ ಪ್ರೈಸ್ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಬ್ಯಾಂಕ್ ಕೊಡುಗೆ ಸೇರಿದಂತೆ ಇತರೆ ಕೆಲವು ರಿಯಾಯಿತಿಗಳು ಸಹ ದೊರೆಯುತ್ತವೆ.

ಈ ಫೋನ್ ಸ್ನಾಪ್‌ಡ್ರಾಗನ್ 4 ಜನ್ 2 ಪ್ರೊಸೆಸರ್ ಬಲ ಪಡೆದಿದ್ದು, ಇದು 5,000 mAh ಬ್ಯಾಟರಿ ಸಾಮರ್ಥ್ಯದ ಸೌಲಭ್ಯ ಸಹ ಪಡೆದಿದೆ. ಅಂದಹಾಗೆ ರೆಡ್ಮಿ ಸಂಸ್ಥೆಯ ಈ ಮೊಬೈಲ್ 4GB + 128GB, 6GB + 128GB ಹಾಗೂ 8GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳಲ್ಲಿ ಖರೀದಿಗೆ ದೊರೆಯುತ್ತದೆ. ಇನ್ನುಳಿದಂತೆ ರೆಡ್ಮಿ 12 5G ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರೆಡ್ಮಿ 12 5G - ಫೀಚರ್ಸ್ ಹೀಗಿವೆ
ರೆಡ್ಮಿ 12 5G ಫೋನ್ 6.79 ಇಂಚಿನ FHD ಡಿಸ್‌ಪ್ಲೇ ಪಡೆದಿದ್ದು, 90 Hz ನ ರಿಫ್ರೆಶ್ ರೇಟ್ ಸೌಲಭ್ಯವನ್ನು ಸಹ ಒಳಗೊಂಡಿದೆ. ಇದರೊಂದಿಗೆ 1080 X 2400 ಪಿಕ್ಸೆಲ್‌ನ ಸ್ಕ್ರೀನ್ ರೆಸಲ್ಯೂಶನ್ ಹಾಗೂ 240Hz ಟಚ್ ಮಾದರಿ ರೇಟ್ ಆಯ್ಕೆ ಯಾವುದೇ ವಿಡಿಯೋ ವೀಕ್ಷಣೆ ಹಾಗೂ ಗೇಮಿಂಗ್ ಸಂದರ್ಭದಲ್ಲಿ ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ.
ರೆಡ್ಮಿ 12 5G ಫೋನ್ ಉತ್ತಮ ಕಾರ್ಯಕ್ಷಮತೆಗಾಗಿ ಸ್ನಾಪ್‌ಡ್ರಾಗನ್ 4 ಜನ್ 2 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಸಹ ಪಡೆದಿದೆ. ಹಾಗೆಯೇ ಈ ಫೋನ್ ಮೂರು ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದ್ದು, ಅವು ಕ್ರಮವಾಗಿ 4GB + 128GB, 6GB + 128GB ಹಾಗೂ 8GB + 256GB ಆಗಿವೆ. ಅಲ್ಲದೇ 8GB RAM ನೊಂದಿಗೆ 8 GB ವರ್ಚುವಲ್ RAM ಆಯ್ಕೆ ಸಹ ಇದೆ.
ರೆಡ್ಮಿ 12 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಪ್ರೈಮರಿ ಶೂಟರ್ ಪಡೆದಿದೆ. ಎರಡನೇ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಆಯ್ಕೆ ಪಡೆದಿದೆ. ಇದರ ಜೊತೆಗೆ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಈ ಮೊಬೈಲ್ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಸಹ ಪಡೆದುಕೊಂಡಿದೆ.
ರೆಡ್ಮಿ 12 5G ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಆಯ್ಕೆ ಅನ್ನು ಪಡೆದುಕೊಂಡಿದ್ದು, ಇದಕ್ಕೆ ಅನುಗುಣವಾಗಿ 18W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಅನ್ನು ಪಡೆದಿದೆ. ಇದರ ಜೊತೆಗೆ ಈ ಮೊಬೈಲ್ ಆಂಡ್ರಾಯ್ಡ್ 13 ಅನ್ನು ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, IP53 ರೇಟಿಂಗ್ ಪಡೆದುಕೊಂಡಿದ್ದು, ಧೂಳು ನಿರೋಧಕವಾಗಿದೆ. ಇನ್ನು ಬಳಕೆದಾರರು ಈ ಫೋನ್ ಅನ್ನು ಸಿಲ್ವರ್, ಬ್ಲ್ಯಾಕ್ ಹಾಗೂ ಬ್ಲೂ ಕಲರ್ ಆಯ್ಕೆಗಳಲ್ಲಿ ಖರೀದಿ ಮಾಡಬಹುದು.


Click it and Unblock the Notifications








