Home
ಸುದ್ದಿಜಾಲ

ಈ 5G ಸ್ಮಾರ್ಟ್‌ಫೋನಿನ ಡಿಸ್ಕೌಂಟ್‌ ಬೆಲೆ ಕೇಳಿದ್ರೆ, ನೀವು ಅಚ್ಚರಿ ಪಡ್ತೀರಾ!

ಹಬ್ಬಗಳ ಪ್ರಯುಕ್ತ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ ಆಯೀಜಿಸಿರುವ ಸೇಲ್‌ ಮುಂದುವರಿದಿದ್ದು, ಎಲ್ಲ ಮಾದರಿಯ ಸ್ಮಾರ್ಟ್‌ಫೋನ್‌ಗಳು ಸಹ ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿವೆ. ಕೊಡುಗೆಯಲ್ಲಿ ಇನ್ಫಿನಿಕ್ಸ್‌ ಕಂಪನಿಯ ಕೆಲವು ಆಯ್ದ ಮೊಬೈಲ್‌ಗಳು ಕೂಡಾ ಆಕರ್ಷಕ ರಿಯಾಯಿತಿ ಪಡೆದಿದ್ದು, ಅವುಗಳಲ್ಲಿ ಇನ್ಫಿನಿಕ್ಸ್‌ ಜಿರೋ 30 5G ವಾವ್ ಎನಿಸುವಂಥ ಡಿಸ್ಕೌಂಟ್‌ ಪಡೆದಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಇನ್ಫಿನಿಕ್ಸ್‌ ಜಿರೋ 30 5G ಮೊಬೈಲ್‌ ಶೇ 40% ರಷ್ಟು ರಿಯಾಯಿತಿ ಪಡೆದುಕೊಂಡಿದೆ. ಈ ಮೊಬೈಲ್‌ನ 8GB RAM + 256GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 23,999ರೂ. ಆಗಿದ್ದು, ಆದರೆ ಗ್ರಾಹಕರು ಲಭ್ಯ ಇರುವ ಎಲ್ಲ ಕೊಡುಗೆ ಪಡೆದುಕೊಂಡರೆ ಈ ಮೊಬೈಲ್‌ ಅನ್ನು 22,749ರೂ. ಗಳ ಸ್ಪೆಷಲ್‌ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಈ 5G ಸ್ಮಾರ್ಟ್‌ಫೋನಿನ ಡಿಸ್ಕೌಂಟ್‌ ಬೆಲೆ ಕೇಳಿದ್ರೆ, ನೀವು ಅಚ್ಚರಿ ಪಡ್ತೀರಾ!

ಇನ್ನು ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8020 SoC ಪ್ರೊಸೆಸರ್‌ ಪವರ್‌ ಪಡೆದಿದ್ದು, 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಕೂಡಾ ಹೊಂದಿದೆ. ಇನ್ನು ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗಾದರೆ ಇನ್ಫಿನಿಕ್ಸ್‌ ಜಿರೋ 30 5G ಫೋನ್ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಕರ್ವ್ಡ್‌ ಡಿಸ್‌ಪ್ಲೇ ರಚನೆಯ ಮಾಹಿತಿ

ಇನ್ಫಿನಿಕ್ಸ್‌ ಜಿರೋ 30 5G ಮೊಬೈಲ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಪಡೆದಿದ್ದು, ಈ ಡಿಸ್‌ಪ್ಲೇ 2,400x1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿದೆ. ಇದರ ಡಿಸ್‌ಪ್ಲೇ 60 ಡಿಗ್ರಿ ಕರ್ವ್ಡ್ ಅಮೋಲೆಡ್‌ ಡಿಸ್‌ಪ್ಲೇ ಆಗಿದ್ದು, 144Hz ರಿಫ್ರೆಶ್ ರೇಟ್‌ ಬೆಂಬಲಿಸಲಿದೆ. ಇದಲ್ಲದೆ ಡಿಸ್‌ಪ್ಲೇ 950 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಹೊಂದಿದೆ. ಇದು 360Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಪಡೆದುಕೊಂಡಿದೆ.

ಈ 5G ಸ್ಮಾರ್ಟ್‌ಫೋನಿನ ಡಿಸ್ಕೌಂಟ್‌ ಬೆಲೆ ಕೇಳಿದ್ರೆ, ನೀವು ಅಚ್ಚರಿ ಪಡ್ತೀರಾ!

ವೇಗದ ಪ್ರೊಸೆಸರ್‌ ಪವರ್ ಮಾಹಿತಿ

ಈ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8020 SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಆಧಾರಿತ XOS 13 ಸಪೋರ್ಟ್ ಪಡೆದುಕೊಂಡಿದೆ. ಹಾಗೆಯೇ 12GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ Memfusion RAM ಫೀಚರ್ಸ್‌ ಮೂಲಕ ಆನ್‌ಬೋರ್ಡ್ ಮೆಮೊರಿಯನ್ನು 21GB ವರೆಗೆ ವಿಸ್ತರಿಸುವ ಅವಕಾಶ ಇದೆ.

ಈ 5G ಸ್ಮಾರ್ಟ್‌ಫೋನಿನ ಡಿಸ್ಕೌಂಟ್‌ ಬೆಲೆ ಕೇಳಿದ್ರೆ, ನೀವು ಅಚ್ಚರಿ ಪಡ್ತೀರಾ!

ಟ್ರಿಪಲ್ ಕ್ಯಾಮೆರಾ ರಚನೆ ಹೀಗಿದೆ

ಇನ್ಫಿನಿಕ್ಸ್‌ ಸಂಸ್ಥೆಯ ಈ ಮೊಬೈಲ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದ್ದು, ಇದರಲ್ಲಿ ಮೊದಲ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದುಕೊಂಡಿದೆ. ಮುಂಭಾಗದಲ್ಲಿ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಹೊಂದಿದ್ದು, ಡ್ಯುಯಲ್ LED ಫ್ಲ್ಯಾಶ್ ಸೌಲಭ್ಯ ಇದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಇನ್ಫಿನಿಕ್ಸ್‌ ಜಿರೋ 30 5G ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಜೊತೆಗೆ 68W ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇದರಿಂದ ಫೋನ್‌ ಅನ್ನು ಕೇವಲ 30 ನಿಮಿಷಗಳಲ್ಲಿ ಶೂನ್ಯದಿಂದ 80% ವರೆಗೆ ಚಾರ್ಜಿಂಗ್‌ ಪಡೆದುಕೊಳ್ಳಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, NFC, GPS, USB ಟೈಪ್-C ಪೋರ್ಟ್, ಬ್ಲೂಟೂತ್ 5.3, ಮತ್ತು Wi-Fi 6 ಅನ್ನು ಒಳಗೊಂಡಿವೆ.

Best Mobiles in India

English summary
Unbelievable price drop on infinix zero 30 5g in flipkart website. check all details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+