Home
ಸುದ್ದಿಜಾಲ

ಏನಿದು IP ರೇಟಿಂಗ್?..ನಿಮ್ಮ ಸ್ಮಾರ್ಟ್‌ಫೋನಿನ ವಾಟರ್‌ ಪ್ರೊಫ್‌ ರೇಟಿಂಗ್ ಎಷ್ಟು?

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ತರಹೇವಾರಿ ಫೀಚರ್ಸ್‌ಗಳುಳ್ಳ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಡುತ್ತಿವೆ. ಅವುಗಳಲ್ಲಿ ಬ್ರ್ಯಾಂಡೆಡ್‌ ಸಂಸ್ಥೆಗಳ ಬಹುತೇಕ ಹೊಸ ಸ್ಮಾರ್ಟ್‌ಫೋನ್‌ಗಳು ವಾಟರ್‌ ಪ್ರೂಫ್‌, ಡಸ್ಟ್‌ ಪ್ರೂಫ್‌, ಸ್ಲಾಶ್‌ ಪ್ರೊಫ್‌ ಸೌಲಭ್ಯ ಪಡೆದಿರುತ್ತವೆ. ವಾಟರ್‌ ಪ್ರೂಫ್‌ ಸೌಲಭ್ಯವುಳ್ಳ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ಆ ಫೋನ್ ಎಷ್ಟು ರೇಟಿಂಗ್‌ನಲ್ಲಿ ವಾಟರ್‌ ಪ್ರೂಫ್‌ ಸಾಮರ್ಥ್ಯ ಪಡೆದಿದೆ ಎಂಬುದು ತಿಳಿದಿರುವುದಲ್ಲ.

ವಾಟರ್‌ ಪ್ರೂಫ್‌

ಹೌದು, ಪ್ರಸ್ತುತ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟರ್‌ ಪ್ರೂಫ್‌, ಡಸ್ಟ್‌ ಪ್ರೂಫ್‌, ಸ್ಲಾಶ್‌ ಪ್ರೊಫ್‌ ಸೌಲಭ್ಯಗಳು ಸಾಮಾನ್ಯವಾಗಿವೆ. ಸ್ಮಾರ್ಟ್‌ಫೋನ್‌ಗಳು IP68, IP66, IP67 ರೇಟಂಗ್ ಸಾಮರ್ಥ್ಯ ಹೊಂದಿರುವುದರ ಬಗ್ಗೆ ನೋಡಿದ್ದೆವೆ. ಆದರೆ ಅವುಗಳು ಎಷ್ಟರ ಮಟ್ಟಿಗೆ ವಾಟರ್‌ ಪ್ರೊಫ್‌ ಒದಗಿಸುತ್ತವೆ ಎಂಬದು ಬಹುತೇಕರಿಗೆ ಗೊತ್ತಿರುವುದಿಲ್ಲ. ಹಾಗಾದರೆ ಏನಿದು IP68, IP66, IP67 ರೇಟಂಗ್.? ನೀರಿನಲ್ಲಿ ಫೋನ್ ಒದ್ದೆ ಮಾಡಬಹುದಾ.? ಎನ್ನುವ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಸಲಾಗಿದೆ. ಮುಂದೆ ಓದಿರಿ.

ಏನಿದು IP ರೇಟಿಂಗ್?

ಏನಿದು IP ರೇಟಿಂಗ್?

ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್‌ ಡಿವೈಸ್‌ಗಳಲ್ಲಿ IP (Ingress Protection) ರೇಟಿಂಗ್ ಎನ್ನುವುದು ವಾಟರ್‌ಪ್ರೊಫ್‌ ಸಾಮರ್ಥ್ಯದ ಮಟ್ಟವನ್ನು ತಿಳಿಸುವ ಸೂಚಕವಾಗಿದೆ. ಇತ್ತೀಚಿನ ಬಹುತೇಕ ಸ್ಮಾರ್ಟ್‌ಫೋನ್‌ಗಳು ಹಾಗೂ ಸ್ಮಾರ್ಟ್‌ ಡಿವೈಸ್‌ಗಳು ಭಿನ್ನ IP ರೇಟಿಂಗ್ ಸಾಮರ್ಥ್ಯವನ್ನು ಹೊಂದಿರುತ್ತವೆ. ಅವುಗಳಲ್ಲಿ ಹೆಚ್ಚಾಗಿ ಡಿವೈಸ್‌ಗಳು IP68, IP66, IPXX ಮತ್ತು IP67 ರೇಟಂಗ್ ಸಾಮರ್ಥ್ಯದಲ್ಲಿ ಇರುತ್ತವೆ.

IP ರೇಟಿಂಗ್ ಪ್ರಮಾಣ

IP ರೇಟಿಂಗ್ ಪ್ರಮಾಣ

ಸ್ಮಾರ್ಟ್‌ಫೋನ್‌ಗಳು ಭಿನ್ನ ಭಿನ್ನ IP ರೇಟಿಂಗ್‌ ಸಾಮರ್ಥ್ಯದಲ್ಲಿ ವಾಟರ್‌ಪ್ರೊಫ್‌ ಸೌಲಭ್ಯಗಳನ್ನು ಪಡೆದಿರುತ್ತವೆ. ಈ IP ರೇಟಿಂಗ್‌ ಸಂಖ್ಯೆಯು ಸ್ಮಾರ್ಟ್‌ಫೋನ್ ಹೊಂದಿರುವ ಧೂಳು ಮತ್ತು ಜಲ ನಿರೋಧಕ ಪ್ರಮಾಣಗಳನ್ನು ಸೂಚಿಸುತ್ತದೆ. ಉದಾಹರಣೆಗೆ ಸ್ಮಾರ್ಟ್‌ಫೋನ್ IP68 ರೇಟಿಂಗ್‌ ಸೌಲಭ್ಯ ಪಡೆದಿದ್ದರೇ 6 ಧೂಳ ನಿರೋಧಕದ ಪ್ರಮಾಣವನ್ನು ಮತ್ತು 8 ಜಲ ನಿರೋಧಕದ ಪ್ರಮಾಣವನ್ನು ಸೂಚಿಸುತ್ತದೆ.

ಸ್ಮಾರ್ಟ್‌ಫೋನ್ IP ರೇಟಿಂಗ್ ತಿಳಿಯುವುದು ಹೇಗೆ?

ಸ್ಮಾರ್ಟ್‌ಫೋನ್ IP ರೇಟಿಂಗ್ ತಿಳಿಯುವುದು ಹೇಗೆ?

ಸ್ಮಾರ್ಟ್‌ಫೋನ್ ಯಾವ IP ರೇಟಿಂಗ್ ಪಡೆದಿದೆ ಎಂಬುದನ್ನು ಸುಲಭವಾಗಿ ತಿಳಿಯಲು ಸಾಧ್ಯ ಮಾರ್ಗಗಳಿಲ್ಲ. ಫೋನಿನ ಬಾಹ್ಯವಾಗಿ ನಮೂದಿಸಿರಲ್ಲ ಹಾಗೂ ಫೋನ್ ಸೆಟ್ಟಿಂಗ್‌ನಲ್ಲಿಯೂ ಆ ಬಗ್ಗೆ ಮಾಹಿತಿ ಇರುವುದಿಲ್ಲ. ಸರ್ಚ್ ಮಾಡುವ ತಿಳಿಯಬೇಕು ಅಷ್ಟೇ. ಇನ್ನು ಇತ್ತೀಚಿಗೆ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿರುವ ನೂತನ ಸ್ಮಾರ್ಟ್‌ಫೋನ್‌ಗಳು ಸಾಮಾನ್ಯವಾಗಿ IP66 ರೇಟಿಂಗ್ ಹೊಂದಿರುತ್ತವೆ. ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು IP68 ರೇಟಿಂಗ್ ಸಾಮರ್ಥ್ಯ ಪಡೆದಿರುತ್ತವೆ.

ಏನಿದು ಸ್ಲಾಶ್‌ ಫ್ರೊಫ್?

ಏನಿದು ಸ್ಲಾಶ್‌ ಫ್ರೊಫ್?

ವಾಟರ್‌ ಪ್ರೊಫ್‌ ಬಗ್ಗೆ ತಿಳಿದಾಯ್ತು ಹಾಗಾದರೆ ಈ ಸ್ಲಾಶ್‌ ಪ್ರೊಫ್‌ ಅಂದರೇನು ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದರೇ ಅದಕ್ಕೆ ಇಲ್ಲಿದೆ ಉತ್ತರ. ಸ್ಲಾಶ್‌ ಪ್ರೊಫ್‌ ಎನ್ನುವುದು IP ರೇಟಿಂಗ್‌ಗಿಂತ ಭಿನ್ನ. ಸ್ಮಾರ್ಟ್‌ಫೋನ್‌ ಸ್ಲಾಶ್‌ ಪ್ರೊಫ್ ಕೋಟಿಂಗ್ ಪಡೆದಿದೆ ಅಂದರೇ ಅದು ತೇವಾಂಶ ಮತ್ತು ನೀರು ನಿರೋಧಕ ಕವಚವಾಗಿ ರಕ್ಷಣೆ ಒದಗಿಸುತ್ತದೆ. ಆದರೆ ಅದೆಲ್ಲವೋ ಸ್ಮಾರ್ಟ್‌ಫೋನ್ ಡಿಸೈನ್ ಮತ್ತು ಕ್ವಾಲಿಟಿ ಮೇಲೆ ಅವಲಂಭಿತವಾಗಿರುತ್ತದೆ.

Best Mobiles in India

English summary
Here’s a short explainer on what it means and how it determines the water and dust resistant levels of your smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+