Smallest Smartphone: ವಿಶ್ವದ ಅತಿ ಚಿಕ್ಕ ಟ್ರಾನ್ಫರೆಂಟ್ ಸ್ಮಾರ್ಟ್‌ಫೋನ್ ಇದು: ಫೀಚರ್ಸ್ ಅಂತೂ ಸೂಪರ್!
ಸ್ಮಾರ್ಟ್‌ಫೋನ್‌ಗಳು ಇಂದು ಜನರ ಅಗತ್ಯವಾದ ಡಿವೈಸ್‌ಗಳ ಲಿಸ್ಟ್‌ನಲ್ಲಿ ಪ್ರಮುಖವಾಗಿದ್ದು, ವಿಶೇಷ ಪೀಚರ್ಸ್ ಮೂಲಕ ಕೇವಲ ಸಂಪರ್ಕಕ್ಕಷ್ಟೇ ಅಲ್ಲದೆ ವಿವಿಧ ರೀತಿಯಲ್ಲೂ ಈ ಫೋನ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ನಡುವೆ ವಿಶ್ವದ ಅತಿ ಚಿಕ್ಕ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಾಗಿದ್ದು, ಇದು ಟ್ರಾನ್ಫರೆಂಟ್‌ಆಯ್ಕೆಯಲ್ಲಿ ಲಭ್ಯ ಇದೆ. ಅಂದರೆ ಇದು ನಥಿಂಗ್ ಫೋನ್ ಅನ್ನು ನೆನಪಿಸುತ್ತದೆ.
ಹೌದು, ಚೈನೀಸ್ ಕಂಪನಿ ಯುನಿಹರ್ಟ್ಜ್ ಇದೀಗ ಈ ಫೋನ್ ಅನ್ನು ಲಾಂಚ್ ಮಾಡಿದೆ. ಇದು ಮೂರು ಇಂಚಿನ ಡಿಸ್‌ಪ್ಲೇ ಹೊಂದಿದ್ದು, 13 ಓಎಸ್‌ನೊಂದಿಗೆ ಕಾರ್ಯನಿರ್ವಹಿಸುವ ಚಿಕ್ಕ ಫೋನ್ ಆಗಿ ಗುರುತಿಸಿಕೊಂಡಿದೆ. ಈ ಫೋನ್‌ಗೆ ಜೆಲ್ಲಿ ಸ್ಟಾರ್ (Jelly Star) ಎಂದು ಹೆಸರಿಡಲಾಗಿದ್ದು, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರ ಸೇರಿದಂತೆ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಚೀನಾದ ಕಂಪನಿಗಳು ನವೀನ ಚಿಂತನೆ ಮತ್ತು ಉತ್ಪನ್ನಗಳ ತಯಾರಿಕೆಯಲ್ಲಿ ಸದಾಮುಂಚೂಣಿಯಲ್ಲಿರುತ್ತವೆ. ಅದರಲ್ಲೂ ಇತರೆ ಟೆಕ್ ಕಂಪನಿಗಳ ಕಲ್ಪನೆಗೂ ಮೀರಿದ ರೀತಿಯಲ್ಲಿ ಇದು ಪ್ರೊಡಕ್ಟ್ ಅನ್ನು ತಯಾರಿಸುತ್ತವೆ. ಈ ಕಾರಣಕ್ಕಾಗಿಯೇ ಈಗ ಜಗತ್ತಿನ ಅತಿ ಚಿಕ್ಕ ಸ್ಮಾರ್ಟ್‌ಫೋನ್ ಅಗಿರುವ ಈ ಜೆಲ್ಲಿ ಸ್ಟಾರ್ ಅನ್ನು ಅನಾವರಣ ಮಾಡಿದೆ. ಇದೆಲ್ಲಕ್ಕೂ ಮಿಗಿಲಾಗಿ ಈ ಫೋನ್ ಇತ್ತೀಚಿನ ಆಂಡ್ರಾಯ್ಡ್ 13 ಆವೃತ್ತಿ ಹೊಂದಿರುವುದು ಮತ್ತಷ್ಟು ವಿಶೇಷ.
ಸಾಮಾನ್ಯವಾಗಿ ಆಂಡ್ರಾಯ್ಡ್ 13 ಆವೃತ್ತಿ ಹೊಂದಿರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಸುಮಾರು ಆರು ಇಂಚಿನ ಡಿಸ್‌ಪ್ಲೇಯೊಂದಿಗೆ ಬರುತ್ತವೆ. ಆದರೆ, ಚೀನಾದ ಯುನಿಹರ್ಟ್ಜ್ ಕಂಪನಿ ತಯಾರಿಸಿರುವ ಈ ಫೋನ್ ಮಾತ್ರ ಕೇವಲ 3 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಮೂಲಕ ಆಕರ್ಷಕ ವಿನ್ಯಾಸವನ್ನು ಸಹ ಪಡೆದುಕೊಂಡಿದೆ. ಇದು ತುಂಬಾ ಚಿಕ್ಕದಾಗಿ ಇರುವುದರಿಂದ ಎಲ್ಲರ ಗಮನವನ್ನು ಸೆಳೆಯುತ್ತಿದೆ.
ಜೆಲ್ಲಿ ಸ್ಟಾರ್ ಪ್ರಮುಖ ಫೀಚರ್ಸ್: ಈ ಫೋನ್ ನಿಮ್ಮ ಅಂಗೈಯಲ್ಲಿ ಹೊಂದಿಕೊಳ್ಳುವಷ್ಟು ಚಿಕ್ಕದಾಗಿದ್ದು, ಇದರ ತೂಕ ಕೇವಲ 116 ಗ್ರಾಂ.ಮಾತ್ರ. ಎಲ್ಇಡಿ ಡಿಸ್‌ಪ್ಲೇ ಹೊಂದಿರುವ ಈ ಫೋನ್ 480*584 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಇದೆಲ್ಲಕ್ಕೂ ಮಿಗಿಲಾಗಿ ಮೀಡಿಯಾ ಟೆಕ್ ಹಿಲಿಯೊ G 99 ಆಕ್ಟಾಕೋರ್ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಉತ್ತಮ ಕಾರ್ಯಕ್ಷಮತೆ ನಿರೀಕ್ಷೆ ಮಾಡಬಹುದು.
ಇದರ ಸ್ಟೋರೇಜ್ ವಿಚಾರಕ್ಕೆ ಬರುವುದಾದರೆ 8GB RAM + 256GB ಸಿಂಗಲ್ ಸ್ಟೋರೇಜ್ ವೇರಿಯಂಟ್‌ನಲ್ಲಿ ಈ ಫೋನ್ ಕಾಣಿಸಿಕೊಂಡಿದೆ. ಜೊತೆಗೆ ಮೈಕ್ರೊ ಎಸ್‌ಡಿ ಕಾರ್ಡ್‌ಗಾಗಿ ಮೀಸಲಾದ ಪೋರ್ಟ್ ಅನ್ನು ಸಹ ಹೊಂದಿದ್ದು, ಈ ಮೂಲಕ ಇಂಟರ್ ಸ್ಟೋರೇಜ್ ಅನ್ನು ಇನ್ನಷ್ಟು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ. ಇನ್ನು ಫೋನ್ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ಆಯ್ಕೆ ಹೊಂದಿರುವುದು ಸಹ ಗಮನಾರ್ಹ.

ಕ್ಯಾಮೆರ ವಿಷಯದಲ್ಲೂ ಇದು ಒಂದು ಉತ್ತಮ ಅಂಡ್ರಾಯ್ಡ್‌ಫೋನ್‌ನಲ್ಲಿ ಇರುವಷ್ಟೇ ಕ್ಯಾಮೆರಾ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ. ಅಂದರೆ ಈ ಜೆಲ್ಲಿ ಸ್ಟಾರ್‌ನಲ್ಲಿ 48 ಮೆಗಾಪಿಕ್ಸೆಲ್‌ನ ಸಿಂಗಲ್ ರಿಯರ್ ಕ್ಯಾಮೆರಾ ಆಯ್ಕೆ ಇದ್ದು, ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್‌ನ ಮುಂಭಾಗದ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಚಿಕ್ಕ ಫೋನ್ 2000mAH ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಪೂರ್ಣ ಚಾರ್ಜಿಂಗ್‌ನಲ್ಲಿ ದಿನದ ಬ್ಯಾಕಪ್ ನೀಡುತ್ತದೆ.
ಜೆಲ್ಲಿ ಸ್ಟಾರ್ ಬೆಲೆ ಹಾಗೂ ಲಭ್ಯತೆ: ಯಾವುದೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೂ ಕಡಿಮೆ ಇಲ್ಲದ ಫೀಚರ್ಸ್ ಪಡೆದುಕೊಂಡಿರುವುದರಿಂದ ಬೆಲೆ ಸಹ ಅದೇ ರೀತಿಯಲ್ಲಿ ಇದೆ. ಅಂದರೆ ಇದನ್ನು 17 ಸಾವಿರ ರೂ.ಗಳ ಪ್ರೈಸ್ ಟ್ಯಾಗ್ ಅನ್ನು ಹೊಂದಿದೆ. ಅದಾಗ್ಯೂ ಹೊಸದಾಗಿ ಲಾಂಚ್ ಆದ ಕಾರಣಕ್ಕೆ ಪರಿಚಯಾತ್ಮಕ ಬೆಲೆಯಾಗಿ 14,000 ರೂ.ಗಳಿಗೆ ಲಭ್ಯ ಇದೆ.ಪ್ರಮುಖ ವಿಷಯ ಏನೆಂದರೆ ಈ ಫೋನ್ ಅನ್ನು ಭಾರತದಲ್ಲಿ ಖರೀದಿ ಮಾಡಲು ಸಾಧ್ಯ ಇಲ್ಲ. ಯಾಕೆಂದರೆ ಇದು ಈಗ ಹಾಂಗ್ ಕಾಂಗ್‌ನಲ್ಲಿ ಲಾಂಚ್ ಆಗಿದ್ದು, ಅಲ್ಲಿ ಲಭ್ಯ ಇದೆ.


Click it and Unblock the Notifications