ಈಗಲೇ ಅನ್‌ಇನ್‌ಸ್ಟಾಲ್ ಮಾಡಿ! ಈ ಆಪ್‌ಗಳು ನಿಮ್ಮ ಎಲ್ಲಾ ಡೇಟಾವನ್ನು ಕದಿಯುತ್ತಿವೆ!
ಸ್ಮಾರ್ಟ್‌ಫೋನ್ (smartphone) ಇಂದು ನಮ್ಮ ನಿತ್ಯದ ಅವಶ್ಯಕತೆಗಳಲ್ಲಿ ಒಂದಾಗಿದ್ದು, ಫೋನ್ ಇಲ್ಲದೆ ದಿನ ದೂಡಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ಆದರೆ, ನಾವು ವಿವಿಧ ಸೇವೆ ಪಡೆದುಕೊಳ್ಳುವ ಉದ್ದೇಶದಿಂದ ಬಳಕೆ ಮಾಡುವ ಆಪ್‌ಗಳು ಮಾತ್ರ ಸ್ಮಾರ್ಟ್‌ಫೋನ್ ಸಹವಾಸವೇ ಸಾಕು ಎನ್ನುವಂತೆ ಮಾಡಿಬಿಡುತ್ತವೆ.
ಹೌದು, ಪ್ಲೇ ಸ್ಟೋರ್ (Google play store) ಹಾಗೂ ಆಪ್ ಸ್ಟೋರ್‌ನಲ್ಲಿ (Apple app store) ಲಕ್ಷಾಂತರ ಆಪ್‌ಗಳಿದ್ದು, ಇವು ಬಳಕೆದಾರರಿಗೆ ಭಿನ್ನ ಸೇವೆ ನೀಡುತ್ತವೆ. ಆದರೆ, ಈ ಆಪ್‌ಗಳು ತಾವು ನೀವು ಸೇವೆಯ ಜೊತೆಗೆ ಅಡ್ಡದಾರಿಯನ್ನೂ ಸಹ ಹಿಡಿಯಲಿದ್ದು, ಇವುಗಳನ್ನು ಪತ್ತೆ ಮಾಡುವ ಗೂಗಲ್ ಪ್ಲೇ ಸ್ಟೋರ್ ತನ್ನ ಲಿಸ್ಟ್‌ನಿಂದ ಹೊರದಬ್ಬುತ್ತದೆ. ಈ ನಡುವೆ ಈ ಎರಡು ಆಪ್‌ಗಳು ನಿಮ್ಮ ಎಲ್ಲಾ ಡೇಟಾವನ್ನು ಕಳ್ಳತನ ಮಾಡುತ್ತಿವೆ ಎಂದು ಕಂಡುಕೊಳ್ಳಲಾಗಿದೆ.

ಎರಡು ಡೇಂಜರ್ ಆಪ್‌ಗಳು: ಪ್ಲೇ ಸ್ಟೋರ್‌ನಲ್ಲಿ ಸಾಕಷ್ಟು ಆಪ್‌ಗಳಿದ್ದರೂ ಕೆಲವರು ಕೆಲವಷ್ಟು ಆಪ್‌ಗಳನ್ನು ಮಾತ್ರ ಹೆಚ್ಚಾಗಿ ಇಷ್ಟ ಪಡುತ್ತಾರೆ. ಯಾಕೆಂದರೆ ಅವು ಹೆಚ್ಚು ಭದ್ರತಾ ಫೀಚರ್ಸ್ ಹೊಂದಿರಲಿವೆ ಎಂದು. ಆದರೆ, ಅದೇ ಆಪ್‌ಗಳು ಬೇರೆ ಸೋಗಿನಲ್ಲಿ ನಿಮ್ಮ ಸಂಪೂರ್ಣ ಡೇಟಾ ಅಂದರೆ ಫೋಟೋ, ವಿಡಿಯೋ, ಬ್ಯಾಂಕ್ ವಿವರ, ಸಂಪರ್ಕಗಳು ಸೇರಿದಂತೆ ಎಲ್ಲಾ ಅಗತ್ಯ ಮಾಹಿತಿಯನ್ನು ಕದಿಯಲು ಮುಂದಾಗುತ್ತವೆ ಎಂದರೆ ಖಂಡಿತಾ ಬಳಕೆದಾರರಿಗೆ ಶಾಕ್ ಆಗದೆ ಇರದು.
'ಫೈಲ್ ಮ್ಯಾನೇಜರ್' (File Manager) ಮತ್ತು'ಫೈಲ್ ರಿಕವರಿ ಮತ್ತು ಡೇಟಾ ರಿಕವರಿ' (File Recovery Apps) ಎಂಬ ಎರಡು ಆಪ್‌ಗಳು ಈಗ ಸಾಮಾಜಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಈ ಆಪ್‌ಗಳು ಒಂದೇ ಡೆವಲಪರ್‌ಗೆ ಸೇರಿದ್ದು, ಇವನ್ನು ಫೈಲ್ ಮ್ಯಾನೇಜ್‌ಮೆಂಟ್ ಪ್ಯಾಕೇಜ್‌ಗಳಾಗಿ ಡಬ್ ಮಾಡಲಾಗಿದೆ. ಈ ಮೂಲಕ ಸ್ಕ್ಯಾಮರ್ಸ್ ನಿಮಗೆ ತಿಳಿಯದಂತೆ ನಿಮ್ಮ ಫೋನ್‌ಗೆ ಎಂಟ್ರಿ ಕೊಡುತ್ತಾರೆ. ಸೈಬರ್ ಸೆಕ್ಯುರಿಟಿ ಸಂಸ್ಥೆಯಾದ ಪ್ರಡಿಯೊ ಪ್ರಕಾರ ಇವು ಒಟ್ಟು 1.5ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿವೆಯಂತೆ.
ಚೀನಾಕ್ಕೆ ನಿಮ್ಮ ಡೇಟಾ ವರ್ಗಾವಣೆ: ಇದರಲ್ಲಿ ಗಮನಿಸಬೇಕಾದ ಪ್ರಮುಖ ವಿಷಯ ಏನೆಂದರೆ ಈ ಆಪ್‌ಗಳ ಮೂಲಕ ಕದಿಯಲಾದ ಡೇಟಾವನ್ನು ಚೀನಾದಲ್ಲಿ ಮೂರನೇ ವ್ಯಕ್ತಿಯ ಸರ್ವರ್‌ಗೆ ರವಾನಿಸುತ್ತಿರಬಹುದು ಎಂದು ಶಂಕಿಸಲಾಗಿದೆ. ಈ ಕಾರಣಕ್ಕೆ ನೀವು ಈ ಆಪ್‌ಗಳನ್ನು ಈವರೆಗೂ ಬಳಕೆ ಮಾಡಿದ್ದೇ ಆದರೆ ಇನ್ಮುಂದೆ ನಿಮ್ಮ ಫೋನ್‌ಗಳಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ ಎಚ್ಚೆತ್ತುಕೊಳ್ಳಿ. ಇಲ್ಲವಾದರೆ ತೊಂದರೆ ಅನುಭವಿಸಬೇಕಾಗುತ್ತದೆ.
ಅದರಂತೆ ಈ 'ಫೈಲ್ ಮ್ಯಾನೇಜರ್' ಐದು ಲಕ್ಷಕ್ಕೂ ಹೆಚ್ಚು ಇನ್‌ಸ್ಟಾಲ್ ಆಗಿದ್ದರೆ 'ಫೈಲ್ ರಿಕವರಿ ಮತ್ತು ಡೇಟಾ ರಿಕವರಿ' ಒಂದು ಮಿಲಿಯನ್‌ಗೂ ಹೆಚ್ಚು ಡೌನ್‌ಲೋಡ್ ಪಡೆದಿದೆ. ಜೊತೆಗೆ ಇವು ದುರುದ್ದೇಶಪೂರಿತ ಚಟುವಟಿಕೆಗಳ ಗುಣಲಕ್ಷಣಗಳನ್ನು ಹೊಂದಿವೆ. ವರದಿಯ ಪ್ರಕಾರ, ಈ ಎರಡೂ ಆಪ್‌ಗಳು ವೈಯಕ್ತಿಕ ಡೇಟಾಗೆ ನುಸುಳುವುದಿಲ್ಲ ಎಂದು ಹೇಳಿಕೊಳ್ಳುತ್ತವೆ. ಆದರೆ, ಇದು ಶುದ್ಧ ಸುಳ್ಳು ಎಂದು ವರದಿಯಾಗಿದೆ.

ಯಾವೆಲ್ಲಾ ದಾಖಲೆಗಳನ್ನು ಕದಿಯಲಾಗಿದೆ?: ಈ ಆಪ್‌ಗಳನ್ನು ಬಳಕೆ ಮಾಡಿಕೊಂಡು ಸ್ಕ್ಯಾಮರ್‌ಗಳು ಸಂಪರ್ಕಿತ ಖಾತೆಗಳ ಸಂಪರ್ಕ ಲಿಸ್ಟ್, ಆಪ್ ಮೀಡಿಯಾ ಅಂದರೆ ಚಿತ್ರಗಳು, ಆಡಿಯೋ ಮತ್ತು ವಿಡಿಯೋ, ಬಳಕೆದಾರರ ಸ್ಥಳ, ದೇಶದ ಕೋಡ್ ಮತ್ತು ನೆಟ್ವರ್ಕ್ ಒದಗಿಸುವವರ ವಿವರಗಳು, ಓಎಸ್ ಆವೃತ್ತಿ, ಡಿವೈಸ್ ಹೆಸರು ಮತ್ತು ಮಾದರಿ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಕದಿಯುವ ಕೆಲಸವನ್ನು ಮಾಡಲಾಗಿದೆ.
ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರ ಈ ಆಪ್‌ಗಳು ಹೆಚ್ಚಿನ ಸಂಖ್ಯೆಯ ಡೌನ್‌ಲೋಡ್‌ಗಳನ್ನು ಹೊಂದಿದ್ದರೂ ಸಹ ಒಂದೇ ಒಂದು ವಿಮರ್ಶೆಯನ್ನು ಸಹ ಪಡೆದಿಲ್ಲ. ಈ ಕಾರಣದಿಂದಲೇ ಬಳಕೆದಾರರು ಇದರ ಬಗ್ಗೆ ಸಂಶಯ ವ್ಯಕ್ತಪಡಿಸಬಹುದಿತ್ತು. ಇನ್ನು ಈ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿದ ಮೇಲೆ ತಮ್ಮ ಲೋಗೋಗಳನ್ನು ಹೋಮ್ ಸ್ಕ್ರೀನ್‌ನಿಂದ ಮರೆ ಮಾಡಿಕೊಳ್ಳುವ ಸಾಮರ್ಥ್ಯ ಸಹ ಪಡೆದುಕೊಂಡಿವೆ. ಹೀಗಾಗಿ ಸೆಟ್ಟಿಂಗ್‌ಗಳಲ್ಲಿನ ಆಪ್ ಪಟ್ಟಿಯಿಂದಲೇ ನೀವು ಇವನ್ನು ಅನ್‌ಇನ್‌ಸ್ಟಾಲ್ ಮಾಡಿ.
ಈ ರೀತಿಯ ಆಪ್‌ಗಳಿಂದ ಸುರಕ್ಷಿತವಾಗಿರುವುದು ಹೇಗೆ?: ಇನ್ನು ಈ ರೀತಿಯ ಆಪ್‌ಗಳ ಬಗ್ಗೆ ಆಗಾಗ್ಗೆ ಗೂಗಲ್ ಪ್ಲೇ ಸ್ಟೋರ್ ಎಚ್ಚರಿಕೆ ನೀಡುತ್ತಲೇ ಬರುತ್ತಿದೆ. ಆದರೂ ಸಹ ಬಳಕೆದಾರರು ಮಾತ್ರ ಗೊತ್ತು ಗೊತ್ತಿದ್ದೂ ಹಳ್ಳಕ್ಕೆ ಬೀಳುವ ಅದೆಷ್ಟೊ ಘಟನೆಗಳು ವರದಿಯಾಗುತ್ತಿವೆ. ಅದರಂತೆ ಯಾವುದೇ ವಿಮರ್ಶೆಗಳನ್ನು ಹೊಂದಿರದ ಆಪ್‌ಗಳನ್ನು ಡೌನ್‌ಲೋಡ್ ಮಾಡಬಾರದು. ಹಾಗೂ ಆಪ್ ಕಾನೂನು ಬದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಹಲವಾರು ಮಾನದಂಡಗಳನ್ನು ಗಮನಿಸಿ.


Click it and Unblock the Notifications








