Home
ಸುದ್ದಿಜಾಲ

ಬಜೆಟ್‌ 2023: ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಬದಲಾವಣೆಯಾಗಬಹುದು!

ಕೇಂದ್ರ ಬಜೆಟ್‌ 2023 ಸಾಕಷ್ಟು ನಿರೀಕ್ಷೆಗಳೊಂದಿಗೆ ಮಂಡನೆಯಾಗಿದೆ. ಬಜೆಟ್‌ ಮಂಡನೆ ಮಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಲವು ವಲಯಗಳಿಗೆ ಅಚ್ಚರಿ ಎನಿಸುವ ಘೋಷಣೆಗಳನ್ನು ಮಾಡಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಕೆಲವು ವಲಯಗಳಿಗೆ ತೆರಿಗೆಯ ಭಾರ ಇಳಿಕೆಯಾಗಿದ್ದರೆ, ಇನ್ನು ಕೆಲವು ವಲಯಗಳಲ್ಲಿ ತೆರಿಗೆಯ ಭಾರ ಹೆಚ್ಚಾಗಿದೆ. ಇದರ ಬಿಸಿ ಟೆಕ್‌ ವಲಯಕ್ಕೂ ಕೂಡ ತಟ್ಟಿದ್ದು, ಸ್ಮಾರ್ಟ್‌ಫೋನ್‌ ಸೇರಿದಂತೆ ಕೆಲವು ಸ್ಮಾರ್ಟ್‌ ಆಕ್ಸಿಸರೀಸ್‌ಗಳ ಬೆಲೆಯಲ್ಲಿ ದೊಡ್ಡ ಬದಲಾವಣೆಯಾಗುವ ಸೂಚನೆ ದೊರೆತಿದೆ.

ಬಜೆಟ್‌ 2023:ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಬದಲಾವಣೆಯಾಗಬಹುದು!

ಹೌದು, ಭಾರತದಲ್ಲಿ ಮೊಬೈಲ್ ಫೋನ್ ಉತ್ಪಾದನೆ ಸಂಬಂಧ ಸಚಿವೆ ನಿರ್ಮಲಾ ಸೀತಾರಾಮ್‌ ಅವರು ಬಜೆಟ್‌ ಮಂಡನೆ ವೇಳೆ ಪ್ರಮುಖವಾದ ವಿಷಯ ಉಲ್ಲೇಖಿಸಿದ್ದಾರೆ. ಅಂದರೆ 2014-15 ರಲ್ಲಿ 5.8 ಯುನಿಟ್‌ಗಳಿಂದ 2022-23 ಹಣಕಾಸು ವರ್ಷದಲ್ಲಿ ಮೌಲ್ಯದ 31 ಕೋಟಿ ಯುನಿಟ್‌ಗಳಿಗೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಅದಾಗ್ಯೂ ಈ ವಿಷಯಕ್ಕೆ ಹೆಚ್ಚು ಕೇಂದ್ರೀಕರಿಸಿರುವ ಸರ್ಕಾರ ಹೆಚ್ಚಿನ ಸೌಲಭ್ಯ ನೀಡಲು ಮುಂದಾಗಿದೆ. ಹಾಗಿದ್ರೆ ಮೊಬೈಲ್ ಫೋನ್ ಉತ್ಪಾದನೆ ಸಂಬಂಧ ಈ ಸಾಲಿನ ಬಜೆಟ್‌ನಲ್ಲಿ ಏನೆಲ್ಲಾ ಸೌಕರ್ಯ ನೀಡಲಾಗಿದೆ ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಮೊಬೈಲ್‌ ಬಿಡಿ ಭಾಗಗಳ ಆಮದಿನ ಮೇಲೆ ಕಸ್ಟಮ್ಸ್ ಸುಂಕ ವಿನಾಯಿತಿ
ದೇಶದಲ್ಲಿ ಮೊಬೈಲ್ ಫೋನ್ ಉತ್ಪಾದನಾ ಘಟಕಗಳನ್ನು ಇನ್ನಷ್ಟು ಹೆಚ್ಚಿಗೆ ಮಾಡುವ ಉದ್ದೇಶದಿಂದ ಸರ್ಕಾರವು ಕೆಲವು ಬಿಡಿ ಭಾಗಗಳ ಆಮದಿನ ಮೇಲೆ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ ನೀಡುತ್ತದೆ ಎಂದು ತಿಳಿಸಿದ್ದಾರೆ. ಹಾಗೆಯೇ ಭಾರತದಲ್ಲಿ ಮೊಬೈಲ್ ಉತ್ಪಾದನೆಯು 2014-15 ರಲ್ಲಿ ರೂ 18,900 ಕೋಟಿ ಮೌಲ್ಯದ 5.8 ಕೋಟಿ ಯುನಿಟ್‌ಗಳಿಂದ ಆರಂಭವಾಗಿ 31 ಕೋಟಿ ಯುನಿಟ್‌ಗಳಿಗೆ ತಲುಪಿದೆ. ಇದರ ಮೌಲ್ಯ 2,75,000 ಕೋಟಿ ರೂ.ಗಳಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಬಜೆಟ್‌ 2023:ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಬದಲಾವಣೆಯಾಗಬಹುದು!

ಯಾವೆಲ್ಲಾ ಬಿಡಿಭಾಗಗಳಿಗೆ ಸುಂಕ ವಿನಾಯಿತಿ
ಕ್ಯಾಮೆರಾ ಲೆನ್ಸ್‌ನಂತಹ ಕೆಲವು ಭಾಗಗಳ ಆಮದಿನ ಮೇಲೆ ಕಸ್ಟಮ್ಸ್ ಸುಂಕದ ವಿಚಾರದಲ್ಲಿ ವಿನಾಯಿತಿ ನೀಡಲಿದ್ದು, ಇದರೊಂದಿಗೆ ಈ ಹಿಂದೆ ಸರ್ಕಾರ ಘೋಷಣೆ ಮಾಡಿದ್ದ ಬ್ಯಾಟರಿ ತಯಾರಿಕೆಗೆ ಲಿಥಿಯಂ ಅಯಾನ್ ಸೆಲ್‌ಗಳಿಗೆ ನೀಡಲಾಗುತ್ತಿದ್ದ ರಿಯಾಯಿತಿ ಸುಂಕಗಳು ಇನ್ನೂ ಒಂದು ವರ್ಷ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ. ಹಾಗೂ ಟಿವಿ ಪ್ಯಾನಲ್‌ಗಳ ಓಪನ್ ಸೆಲ್‌ಗಳ ಭಾಗಗಳ ಮೇಲಿನ ಮೂಲ ಕಸ್ಟಮ್ ಸುಂಕವನ್ನು 2.5% ಕ್ಕೆ ಇಳಿಸುವ ನಿರ್ಧಾರ ಮಾಡಲಾಗಿದ್ದು, ಈ ಮೂಲಕ ದೇಶದಲ್ಲಿ ಟೆಲಿವಿಷನ್ ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರ ಮುಂದಾಗಿದೆ.

ಬಜೆಟ್‌ 2023:ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಬದಲಾವಣೆಯಾಗಬಹುದು!

ಭಾರತದಲ್ಲಿ ವಿವಿಧ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆ
ಶಿಯೋಮಿ, ಸ್ಯಾಮ್‌ಸಂಗ್‌, ಆಪಲ್‌ ಸೇರಿದಂತೆ ಇತರೆ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳು ಇಲ್ಲಿ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಜೋಡಿಸುತ್ತಿವೆ. ಅದರಲ್ಲೂ ಆಪಲ್‌ ಕಳೆದ ವರ್ಷದಿಂದ ಭಾರತದಲ್ಲಿ ತನ್ನ ಪ್ರಮುಖ ಐಫೋನ್ 14 ಅನ್ನು ಜೋಡಿಸಲು ಪ್ರಾರಂಭಿಸಿರುವುದು ವಿಶೇಷ. ಹಾಗೆಯೇ ಭಾರತದಿಂದ ಅತಿ ಹೆಚ್ಚು ಐಫೋನ್‌ಗಳನ್ನು ರಪ್ತು ಮಾಡಿದ ಕಂಪೆನಿಯಾಗಿ ಈ ಮೂಲಕ ಆಪಲ್‌ ಗುರುತಿಸಿಕೊಂಡಿದೆ.

ಇದರೊಂದಿಗೆ ಆಪಲ್‌ ತನ್ನ ಎಲ್ಲಾ ಐಫೋನ್‌ಗಳಲ್ಲಿ 25% ರಷ್ಟನ್ನು ಭಾರತದಲ್ಲಿ ಉತ್ಪಾದಿಸಲು ಎದುರು ನೋಡುತ್ತಿದೆ ಎಂದು ತಿಳಿದುಬಂದಿದ್ದು, ಈ ಮೂಲಕ ಭಾರತ ಇತರೆ ಸ್ಮಾರ್ಟ್‌ಫೋನ್‌ ತಯಾರಿಕಾ ರಾಷ್ಟ್ರಗಳಿಗೆ ಪೈಪೋಟಿ ನೀಡಲು ಮುಂದಾಗುತ್ತಿದೆ. ಅದರಲ್ಲೂ ಆಪಲ್ ಐಫೋನ್‌ಗಳನ್ನು ಉತ್ಪಾದಿಸುವ ಅತಿದೊಡ್ಡ ಘಟಕವನ್ನು ಬೆಂಗಳೂರು ಸಮೀಪದ ಹೊಸೂರಿನಲ್ಲಿ ಸ್ಥಾಪಿಸಲಾಗುವುದು ಎಂದು ಕಳೆದ ವರ್ಷ ನವೆಂಬರ್‌ನಲ್ಲಿ ಟೆಲಿಕಾಂ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದರು.

ಬಜೆಟ್‌ 2023:ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಬದಲಾವಣೆಯಾಗಬಹುದು!

ಇನ್ನು ಈ ಸಾಲಿನ ಬಜೆಟ್‌ನಲ್ಲಿ ಕೆಲವು ಉತ್ಪನ್ನಗಳ ಬೆಲೆಯನ್ನು ಇಳಿಸಲಾಗಿದ್ದು, ಇನ್ನೂ ಕೆಲವು ದುಬಾರಿಯಾಗಿವೆ. ದುಬಾರಿಯಾಗಲಿರುವ ಉತ್ಪನ್ನಗಳಲ್ಲಿ ಚಿನ್ನ, ಸಿಗರೇಟ್ ಮತ್ತು ಹೆಡ್‌ಫೋನ್‌ಗಳು ಸಹ ಸೇರಿವೆ. ಆದರೆ ಹೆಡ್‌ಫೋನ್‌ಗಳನ್ನು ಹೊರಗಿಟ್ಟು ಮೊಬೈಲ್ ಫೋನ್‌ಗಳು, ಎಲೆಕ್ಟ್ರಿಕ್ ವಾಹನಗಳು ಮತ್ತು ಟಿವಿಗಳು ಅಗ್ಗವಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Best Mobiles in India

English summary
Nirmala Sitharaman said that government will reduce customs duty on import of some parts for mobile phone manufacturing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+