Union Budget 2024: ಎಲೆಕ್ಟ್ರಾನಿಕ್ಸ್, ಕೈಗಾರಿಕೆ ಹಾಗೂ ಟೆಕ್ ಕ್ಷೇತ್ರಕ್ಕೆ ದೊರೆತ ಕೊಡುಗೆಗಳ ಹೈಲೈಟ್ಸ್!
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಸತತ ಏಳನೇ ಕೇಂದ್ರ ಬಜೆಟ್ ( Union Budget 2024-25) ಅನ್ನು ಮಂಡಿಸುತ್ತಿದ್ದಾರೆ. ಈ ಬಜೆಟ್ ನರೇಂದ್ರ ಮೋದಿ 3.0 ಸರ್ಕಾರದ ಮುಂದಿನ ಐದು ವರ್ಷಗಳ ಭಾರತದ ಅಭಿವೃದ್ಧಿಯ ಮಾರ್ಗಸೂಚಿಯನ್ನು ರೂಪಿಸಲು ಕ್ರಿಯಾ ಯೋಜನೆ ಎಂದು ಹೇಳಲಾಗಿದೆ. ದೇಶದ ಗ್ರಾಹಕ ಎಲೆಕ್ಟ್ರಾನಿಕ್ಸ್ ವಲಯವು ದೇಶದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುತ್ತದೆ, ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಜಿಡಿಪಿ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಈ ಕ್ಷೇತ್ರದ ಮೇಲೆ ನಿರೀಕ್ಷೆಗಳು ಹೆಚ್ಚಿವೆ.
ಪ್ರಮುಖ ಹೈಲೈಟ್ಸ್ ಇಲ್ಲಿವೆ
ಜಾಗತಿಕ ಆರ್ಥಿಕತೆಗೆ ಹೋಲಿಸಿದರೆ ಭಾರತದ ಹಣದುಬ್ಬರ ಕಡಿಮೆ ಮತ್ತು ಸ್ಥಿರವಾಗಿದೆ ಎಂದು ವಿತ್ತ ಸಚಿವೆ ಎಂದಿದ್ದಾರೆ. ಜಾಗತಿಕ ಆರ್ಥಿಕತೆಯು ಇನ್ನೂ ಅನಿಶ್ಚಿತತೆಯ ಹಿಡಿತದಲ್ಲಿದೆ ಎಂದು ಸೀತಾರಾಮನ್ ಹೇಳುತ್ತಾರೆ. ಐದು ವರ್ಷಗಳ ಅವಧಿಯಲ್ಲಿ ಮಧ್ಯಮ ವರ್ಗ ಮತ್ತು ಯುವಕರ ಕೌಶಲ್ಯವನ್ನು ಕೇಂದ್ರೀಕರಿಸುವ ಐದು ಪ್ರಮುಖ ಯೋಜನೆಗಳಿಗಾಗಿ ನಿರ್ಮಲಾ ಸೀತಾರಾಮನ್ 2 ಲಕ್ಷ ಕೋಟಿ ರೂ. ಗಳನ್ನು ಬಜೆಟ್ ಭಾಷಣೆದಲ್ಲಿ ಘೋಷಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಮಧ್ಯಂತರ ಬಜೆಟ್‌ನಲ್ಲಿ ಹೇಳಲಾದ ಮೋದಿ 3.0 ಸಮಾಜದ ಪ್ರಮುಖ ವಿಭಾಗಗಳಾದ ಮಹಿಳೆಯರು, ಯುವಕರು, ಬಡವರು ಮತ್ತು ರೈತರ ಮೇಲೆ ಕೇಂದ್ರೀಕರಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಇನ್ನು ಉದ್ಯೋಗ ಸೃಷ್ಟಿಗೆ 9 ಆದ್ಯತೆಗಳ ಮೇಲೆ ನಿರಂತರ ಪ್ರಯತ್ನಗಳನ್ನು ಮಾಡುತ್ತದೆ ಎಂದು ಹಣಕಾಸು ಸಚಿವೆ ಸೀತಾರಾಮನ್ ಹೇಳಿದ್ದಾರೆ. ಅವುಗಳೆಂದರೆ - ಇನ್ಫ್ರಾ, ನಗರಾಭಿವೃದ್ಧಿ, ಉದ್ಯೋಗ ಮತ್ತು ಕೌಶಲ್ಯ, ಇಂಧನ ಭದ್ರತೆ, ಉತ್ಪಾದನೆ ಮತ್ತು ಸೇವೆಗಳು ಆಗಿವೆ.
ಮುದ್ರಾ ಯೋಜನೆಯಡಿ ಸಾಲದ ಮಿತಿಯನ್ನು 20 ಲಕ್ಷಕ್ಕೆ ದ್ವಿಗುಣಗೊಳಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಹೆಚ್ಚುವರಿಯಾಗಿ, ಸರ್ಕಾರವು 100 ನಗರಗಳಲ್ಲಿ ಹೂಡಿಕೆಗೆ ಸಿದ್ಧವಾದ ಕೈಗಾರಿಕಾ ಪಾರ್ಕ್‌ಗಳನ್ನು ಉತ್ತೇಜಿಸುತ್ತದೆ.
ಕೈಗಾರಿಕಾ ಕಾರ್ಮಿಕರನ್ನು ಬೆಂಬಲಿಸಲು, ಸರ್ಕಾರವು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮೂಲಕ ಡಾರ್ಮಿಟರಿ-ಶೈಲಿಯ ಬಾಡಿಗೆ ವಸತಿಗಳನ್ನು ಸುಗಮಗೊಳಿಸುತ್ತದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೊದಲ ಕಡಲಾಚೆಯ ಗಣಿಗಾರಿಕೆ ಬ್ಲಾಕ್‌ಗಳ ಹರಾಜನ್ನು ಪ್ರಾರಂಭಿಸಲು ಮತ್ತು ಸಾಗರೋತ್ತರ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಕ್ರಿಟಿಕಲ್ ಮಿನರಲ್ ಮಿಷನ್ ಅನ್ನು ಸ್ಥಾಪಿಸುವ ಯೋಜನೆಯನ್ನು ತಿಳಿಸಿದ್ದಾರೆ.
ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗಾಗಿ - MSME ಖರೀದಿದಾರರಿಗೆ TReds ಪ್ಲಾಟ್‌ಫಾರ್ಮ್‌ನಲ್ಲಿ ಆನ್‌ಬೋರ್ಡ್ ಮಾಡಲು ಅಗತ್ಯವಿರುವ ವಹಿವಾಟು ಮಿತಿಯನ್ನು ಸರ್ಕಾರವು 500 ಕೋಟಿಯಿಂದ 250 ಕೋಟಿಗೆ ಇಳಿಸುತ್ತದೆ ಎಂದು ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದರು.
ಮೊಬೈಲ್ ಫೋನ್‌ಗಳು, ಮೊಬೈಲ್ ಚಾರ್ಜರ್‌ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ. 15 ಕ್ಕೆ ಇಳಿಕೆ ಮಾಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಘೋಷಿಸಿದ್ದರಿಂದ ಈ ಉತ್ಪನ್ನಗಳು ಅಗ್ಗ ಆಗಲಿವೆ. ಹಾಗೆಯೇ ಸೋಲಾರ್ ಪ್ಯಾನೆಲ್‌ಗಳ ತಯಾರಿಕೆಯಲ್ಲಿ ಬಳಸಲಾಗುವ ಸರಕುಗಳ ಪಟ್ಟಿ ವಿನಾಯಿತಿ ಪಡೆದ ವಸ್ತುಗಳಲ್ಲಿ ಸೇರಿಸಲಾಗಿದೆ.
ಮುಂದಿನ ಎರಡು ವರ್ಷಗಳಲ್ಲಿ 1 ಕೋಟಿ ರೈತರನ್ನು ನೈಸರ್ಗಿಕ ಕೃಷಿಗೆ ತರಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಹಾಗೆಯೇ 2025 ರ ಬಜೆಟ್‌ನಲ್ಲಿ ಯುವಕರ ಉದ್ಯೋಗ, ಶಿಕ್ಷಣ ಕೌಶಲ್ಯಕ್ಕಾಗಿ 1.48 ಲಕ್ಷ ಕೋಟಿ ರೂ. ಗಳನ್ನು ನಿಗದಿಪಡಿಸಲಾಗಿದೆ ಎಂದು ಬಜೆಟ್ ಭಾಷಣೆದಲ್ಲಿ ತಿಳಿಸಿದ್ದಾರೆ.
ಬಿಹಾರ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಬಂಪರ್ ಕೊಡುಗೆ.. ಬಿಹಾರಕ್ಕೆ 26,000 ಕೋಟಿ ರೂ. ಪ್ಯಾಕೇಜ್ ಘೋಷಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆಂಧ್ರಪ್ರದೇಶದ ರಾಜಧಾನಿಯಾಗಿ ಅಮರಾವತಿಯನ್ನು ಅಭಿವೃದ್ಧಿಪಡಿಸಲು 15,000 ಕೋಟಿ ರೂ. ಪ್ಯಾಕೇಜ್ ಸಹ ಬಜೆಟ್‌ನಲ್ಲಿ ಘೋಷಿಸಿದ್ದಾರೆ.


Click it and Unblock the Notifications








