Home
ಸುದ್ದಿಜಾಲ

ಅನಿಯಮಿತ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳ ಮಾಹಿತಿ ಇಲ್ಲಿದೆ!

ಪ್ರಸ್ತುತ ಬಹುತೇಕ ಕೆಲಸಗಳು ಇಂಟರ್ನೆಟ್ ಆಧಾರಿತವಾಗಿದ್ದು, ಅದಕ್ಕಾಗಿ ಅಧಿಕ ಡೇಟಾ ಸೌಲಭ್ಯದ ಅವಶ್ಯಕತೆ ಇರುತ್ತದೆ. ಇಂಟರ್ನೆಟ್ ದಾಹವನ್ನು ನಿಗಿಸಲು ಬ್ರಾಡ್‌ಬ್ಯಾಂಡ್‌ ಸೇವಾ ಸಂಸ್ಥೆಗಳು ಆಕರ್ಷಕ ಯೋಜನೆಗಳನ್ನು ಪರಿಚಯಿಸಿವೆ. ಅವುಗಳಲ್ಲಿ ಪ್ರಮುಖ ಬ್ರಾಡ್‌ಬ್ಯಾಂಡ್‌ ಕಂಪನಿಗಳು ಅನಿಯಮಿತ ಡೇಟಾ ಪ್ರಯೋಜನದ ಯೋಜನೆಗಳನ್ನು ಪರಿಚಯಿಸಿವೆ. ಈ ಯೋಜನೆಗಳು ಭಿನ್ನ ಬೆಲೆಯನ್ನು ಹೊಂದಿವೆ.

ಡೇಟಾ

ಉದ್ಯೋಗದ ಕೆಲಸಗಳಿಗಾಗಿ ಮತ್ತು ಮನರಂಜನಾ ಅಗತ್ಯಗಳನ್ನು ಪೂರೈಸಲು ಪ್ರತಿ ತಿಂಗಳು ಹೆಚ್ಚಿನ ಡೇಟಾದ ಅಗತ್ಯ ಇರುತ್ತದೆ. ಈ ನಿಟ್ಟಿನಲ್ಲಿ ಅನಿಯಮಿತ ಡೇಟಾ ಯೋಜನೆಗಳು ಸೂಕ್ತ ಅನಿಸುತ್ತವೆ. ಹೀಗಾಗಿಯೇ ಅನ್‌ಲಿಮಿಡೆಟ್ ಡೇಟಾ ಒದಗಿಸುವ ಬ್ರಾಡ್‌ಬ್ಯಾಂಡ್‌ ಯೋಜನೆಗಳಿಗೆ ಹೆಚ್ಚು ಬೇಡಿಕೆ. ಪ್ರಮುಖ ಬ್ರಾಡ್‌ಬ್ಯಾಂಡ್‌ ಕಂಪನಿಗಳ ಅನಿಯಮಿತ ಡೇಟಾ ಯೋಜನೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಏರ್‌ಟೆಲ್‌ ಎಕ್ಸ್‌ಸ್ಟ್ರೀಮ್ ಫೈಬರ್

ಏರ್‌ಟೆಲ್‌ ಎಕ್ಸ್‌ಸ್ಟ್ರೀಮ್ ಫೈಬರ್

ಏರ್‌ಟೆಲ್‌ ಹಲವು ಬ್ರಾಡ್‌ಬ್ಯಾಂಡ್‌ ಯೋಜನೆಗಳ ಆಯ್ಕೆಯನ್ನು ಹೊಂದಿದ್ದು, ಯೋಜನೆಗಳ ಇಂಟರ್ನೆಟ್ ವೇಗವು 100Mbps ನಿಂದ ಗರಿಷ್ಠ 1 Gbps ವರೆಗೆ ಇದೆ. ಏರ್‌ಟೆಲ್ ಗ್ರಾಹಕರು ಕೇವಲ 299 ರೂ.ಗಳನ್ನು ಪಾವತಿಸುವ ಮೂಲಕ ತಮ್ಮ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಅನಿಯಮಿತ ಯೋಜನೆಗೆ ಬದಲಾಯಿಸಬಹುದು. ಪ್ರತಿ ತಿಂಗಳು 299 ರೂ.ಗಳ ಮೊತ್ತವನ್ನು ಪಾವತಿಸುವ ಮೂಲಕ ನಿಮ್ಮ ಯೋಜನೆಯನ್ನು ಅನಿಯಮಿತ ಯೋಜನೆಗೆ ಸುಲಭವಾಗಿ ಅಪ್‌ಗ್ರೇಡ್ ಮಾಡಬಹುದು.

ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್

ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್

ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿ ಗುರುತಿಸಿಕೊಂಡಿರುವ ಜಿಯೋ ಸಹ ಹಲವು ಬ್ರಾಡ್‌ಬ್ಯಾಂಡ್‌ ಯೋಜನೆಗಳ ಆಯ್ಕೆ ನೀಡಿದೆ. ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಗಳು 699 ರೂ.ಗಳಿಂದ ಪ್ರಾರಂಭವಾಗಿ 8,4999 ರೂ.ವರೆಗೂ ಆಯ್ಕೆಗಳಿವೆ. ಈ ಎಲ್ಲಾ ಜಿಯೋಫೈಬರ್ ಯೋಜನೆಗಳು ಅನಿಯಮಿತ ಡೇಟಾ ಯೋಜನೆಯ ಸೌಲಭ್ಯ ಪಡೆದಿವೆ. ಆದರೆ ಎಫ್‌ಯುಪಿ ಮಿತಿ ಮುಗಿದ ನಂತರ ಇಂಟರ್‌ನೆಟ್‌ನ ವೇಗ ಕಡಿಮೆಯಾಗುತ್ತದೆ.

ಬಿಎಸ್ಎನ್ಎಲ್ ಬ್ರಾಡ್‌ಬ್ಯಾಂಡ್

ಬಿಎಸ್ಎನ್ಎಲ್ ಬ್ರಾಡ್‌ಬ್ಯಾಂಡ್

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಹ ತನ್ನ ಗ್ರಾಹಕರಿಗೆ ವಿವಿಧ ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ನೀಡುತ್ತದೆ. ಆದಾಗ್ಯೂ, ಬಿಎಸ್‌ಎನ್‌ಎಲ್‌ನ ಎಲ್ಲಾ ಬ್ರಾಡ್‌ಬ್ಯಾಂಡ್ ಯೋಜನೆಗಳು ಎಫ್‌ಯುಪಿ ಮಿತಿಯನ್ನು ಹೊಂದಿವೆ, ಮತ್ತು ಮಿತಿ ಮುಗಿದ ನಂತರ ಇಂಟರ್ನೆಟ್ ವೇಗ ಕಡಿಮೆಯಾಗುತ್ತದೆ. ಬಿಎಸ್ಎನ್ಎಲ್ ಬ್ರಾಡ್ಬ್ಯಾಂಡ್ ಯೋಜನೆಗಳು 499 ರೂಗಳಿಂದ ಪ್ರಾರಂಭವಾಗುತ್ತವೆ ಮತ್ತು ಡೇಟಾ ಮಿತಿ ಮತ್ತು ಇಂಟರ್ನೆಟ್ ವೇಗವನ್ನು ಅವಲಂಬಿಸಿ ಇದು 16,999 ರೂ. 600 ಜಿಬಿ ಸಿಯುಎಲ್ ಯೋಜನೆಯು 600 ಜಿಬಿ ವರೆಗೆ 50 ಎಮ್‌ಬಿಪಿಎಸ್ ವೇಗವನ್ನು ನೀಡುತ್ತದೆ.

Best Mobiles in India

English summary
There are endless service providers in the markets who offer unlimited high-speed broadband plans with lucrative offers and price.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+