ಜಿಯೋದ 296ರೂ.ಗಳ ಪ್ಲ್ಯಾನ್‌ನಲ್ಲಿ ಮಿತಿಯಿಲ್ಲದ ದೈನಂದಿನ ಡೇಟಾ; 30 ದಿನಗಳ ಮಾನ್ಯತೆ
ಜಿಯೋ ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದು, ಈ ನಡುವೆ ಬಳಕೆದಾರರಿಗೆ ಅನುಕೂಲ ಆಗುವ ಹಲವಾರು ರೀತಿಯ ರೀಚಾರ್ಜ್ ಪ್ಲ್ಯಾನ್‌ಗಳನ್ನು ನೀಡುವ ಜೊತೆಗೆ ಹಲವು ಉಚಿತ ಸೇವೆಗಳನ್ನೂ ಸಹ ನೀಡುತ್ತಿದೆ. ಇದರ ಜೊತೆಗೆ ಯಾವುದೇ ದೈನಂದಿನ ಡೇಟಾ ಮಿತಿಯಿಲ್ಲದೆ ಮಾಸಿಕ ಯೋಜನೆಯನ್ನು ಪರಿಚಯಿಸಿದ್ದು,ಇದು ಬಳಕೆದಾರರಿಗೆ ಹಲವು ರೀತಿಯಲ್ಲಿ ಸಹಕಾರಿಯಾಗಲಿದೆ.
ಹೌದು, ದೈನಂದಿನ ಡೇಟಾ ಮಿತಿಯಿಲ್ಲದೆ 30 ದಿನಗಳವರೆಗೆ ಅನಿಯಮಿತ ದೈನಂದಿನ ಡೇಟಾ ಮತ್ತು ಇತರ ಪ್ರಯೋಜನಗಳನ್ನು ನೀಡುವ ಸೂಪರ್ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್‌ಬಗ್ಗೆ ನಿಮಗೆ ಗೊತ್ತಾ?. ಅಂದರೆ ಈ ಪ್ಲ್ಯಾನ್‌ನಲ್ಲಿ ನೀವು ಯಾವುದೇ ಮಿತಿಯಿಲ್ಲದೆ ಡೇಟಾ ಬಳಕೆ ಮಾಡಬಹುದು. ಹಾಗಿದ್ರೆ, ಮತ್ಯಾಕೆ ತಡಯಾಕೆ ಬನ್ನಿ ಯಾವುದು ಈ ರೀಚಾರ್ಜ್ ಪ್ಲ್ಯಾನ್, ಇದರಲ್ಲಿ ಸಿಗುವ ಇತರೆ ಪ್ರಯೋಜನಗಳು ಏನು ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

296ರೂ.ಗಳ ಜಿಯೋ ಪ್ರಿಪೇಯ್ಡ್ ಪ್ಲ್ಯಾನ್: ಜಿಯೋದ 296ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್ ಅನ್ನು ಇತ್ತೀಚೆಗೆ ಪರಿಚಯಿಸಲಾಗಿದ್ದು, ಇದು 30 ದಿನಗಳ ಮಾನ್ಯತೆ ಹೊಂದಿರುವ ಹೊಸ ಯೋಜನೆಯಾಗಿದೆ. ಈ ಹಿಂದೆ ಒಂದು ತಿಂಗಳ ಪೂರ್ಣ ಪ್ಲ್ಯಾನ್‌ಗಳನ್ನು ಪರಿಚಯಿಸಬೇಕು ಎಂದು ಹಲವಾರು ಗ್ರಾಹಕರು ಆಗ್ರಹ ಮಾಡಿದ್ದರಿರು, ಅದರಂತೆ ಗ್ರಾಹಕ ವ್ಯವಹಾರಗಳ ನಿಯಂತ್ರಕರಿಗೆ ದೂರು ಸಹ ನೀಡಲಾಗಿತ್ತು. ಇದರನ್ವಯ ಟೆಲಿಕಾಂ ಕಂಪೆಗಳು ಇದೀಗ 30 ದಿನಗಳ ಮಾನ್ಯತೆಯೊಂದಿಗೆ ಹೊಸ ಹೊಸ ಪ್ಲ್ಯಾನ್ ಪರಿಚಯಿಸುತ್ತಿವೆ.
ಈ ರೀಚಾರ್ಜ್ ಪ್ಲ್ಯಾನ್‌ನಲ್ಲಿ ಯಾವುದೇ ದೈನಂದಿನ ಡೇಟಾ ಮಿತಿ ಇಲ್ಲ ಎಂಬುದು ಪ್ರಮುಖವಾದ ವಿಷಯವಾಗಿದೆ. ಈ ಮೂಲಕ ಬಳಕೆದಾರರು ಒಟ್ಟು 25GB ಡೇಟಾದೊಂದಿಗೆ ಈ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಳ್ಳಬಹುದು. ಇದರಲ್ಲಿ ಬೇಸರ ಪಡುವ ವಿಷಯ ಏನೆಂದರೆ ಈ ಪ್ಲ್ಯಾನ್‌ನಲ್ಲಿ ದಿನಕ್ಕೆ 1GB ಡೇಟಾ ಸಹ ನೀಡಲಾಗಿಲ್ಲ. ಈ ರೀತಿ ನೀಡಿದ್ದರೆ ಒಟ್ಟಾರೆ 30GB ಡೇಟಾ ಲಭ್ಯವಾಗುತ್ತಿತ್ತು. ಈ ಕಾರಣಕ್ಕೆ ಇದು ಸೀಮಿತ ಡೇಟಾವನ್ನು ಹೊಂದಿದೆ ಎಂದು ಹೇಳಬಹುದು.

ಒಂದೇ ಬಾರಿಗೆ ಬಳಕೆ ಮಾಡಿದ್ರೂ ಏನು ಸಮಸ್ಯೆ ಇಲ್ಲ: ಇನ್ನು ಇತರೆ ರೀಚಾರ್ಜ್ ಪ್ಲ್ಯಾನ್‌ಗಳಲ್ಲಿ ದಿನಕ್ಕೆ 1GB ಅಥವಾ 1.5GB , 2GB ಬಳಕೆ ಮಾಡಲು ನಿಯಮ ಇರುತ್ತದೆ. ಆದರೆ, ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ಸಂಪೂರ್ಣ 25GB ಡೇಟಾವನ್ನು ಒಂದೇ ಬಾರಿಗೆ ಬಳಕೆ ಮಾಡಿಕೊಳ್ಳಬಹುದು. ಅಥವಾ ದಿನವೂ ಅಗತ್ಯವಿದ್ದಷ್ಟು ಮಾತ್ರ ಬಳಕೆ ಮಾಡಿಕೊಳ್ಳಬಹುದು. ಇದರೊಂದಿಗೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಹಾಗೂ ಜಿಯೋ ಸೆಕ್ಯೂರಿಟಿಯಂತಹ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.
ಇನ್ನುಳಿದಂತೆ ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ಅನಿಯಮಿತ ವಾಯಿಸ್ ಕಾಲ್ ಸೌಲಭ್ಯ, ದಿನವೂ 100 ಎಸ್‌ಎಮ್‌ಎಸ್ ನಂತಹ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದ್ದು, ಯಾರೆಲ್ಲಾ 5G ವ್ಯಾಪ್ತಿಯಲ್ಲಿ ಇದ್ದಾರೋ ಅವರು ಅನಿಯಮಿತ 5G ಡೇಟಾವನ್ನು ಸಹ ಪಡೆದುಕೊಳ್ಳಲು ಅರ್ಹರಾಗಿದ್ದಾರೆ. ಈ ಪ್ಲ್ಯಾನ್‌ನಲ್ಲಿ ಲಭ್ಯವಿರುವ 25GB ಡೇಟಾ ಮುಗಿದ ನಂತರ ಇಂಟರ್ನೆಟ್ ವೇಗವು 64 Kbps ಗೆ ಕಡಿಮೆಯಾಗುತ್ತದೆ. ಅದಾಗ್ಯೂ ನಿಮಗೆ ಹೆಚ್ಚಿನ ಡೇಟಾ ಬೇಕು ಎಂದಾದರೆ ನೀವು 4G ಡೇಟಾ ವೋಚರ್‌ಗಳನ್ನು ಖರೀದಿ ಮಾಡಬಹುದು.

ಇದರೊಂದಿಗೆ ರಿಲಯನ್ಸ್ ಜಿಯೋ ಭಾರತದಲ್ಲಿ 5G ಯೊಂದಿಗೆ 4000 ನಗರಗಳು ಹಾಗೂ ಪಟ್ಟಣಗಳನ್ನು ಆವರಿಸಿದೆ. ಹಾಗೆಯೇ ಈ ವರ್ಷದ ಅಂತ್ಯದಲ್ಲಿ ಅಂದರೆ 2023ರ ಅಂತ್ಯದ ವೇಳೆಗೆ ಪ್ರತಿ ನಗರ ಮತ್ತು ತಾಲೂಕಿಗೆ 5G ಪರಿಚಯಿಸುವ ಗುರಿಯನ್ನು ಸಾಧಿಸಲು ಟೆಲಿಕಾಂ ತನ್ನದೇ ಆದ ಕೆಲಸದಲ್ಲಿ ಬ್ಯುಸಿಯಾಗಿದೆ. ಜೊತೆಗೆ ವಿವಿಧ ಹೊಸ ಹೊಸ ರೀಚಾರ್ಜ್ ಪ್ಲ್ಯಾನ್‌ಗಳನ್ನು ಸಹ ಪರಿಚಯಿಸಿಕೊಂಡು ಬರುತ್ತಿದೆ.


Click it and Unblock the Notifications








