Subscribe to Gizbot

ಭಾರತಕ್ಕೆ ಬರಲಿರುವ ವಿಶೇಷ ಗ್ಯಾಜೆಟ್‌‌ಗಳು

Posted By:

ಎಲೆಕ್ಟ್ರಾನಿಕ್ಸ್‌ ಮಾರುಕಟ್ಟೆಗೆ ಪ್ರತಿದಿನ ಹೊಸ ಹೊಸ ಗ್ಯಾಜೆಟ್‌ಗಳು ಬರುತ್ತಲೇ ಇರುತ್ತದೆ. ಇದರಲ್ಲಿ ಎಲ್ಲಾ ಗ್ಯಾಜೆಟ್‌ಗಳು ಮಾರುಕಟ್ಟೆಯಲ್ಲಿ ಕ್ಲಿಕ್‌ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ.ಆದರೆ ಇಲ್ಲಿ ಕೆಲವು ಗ್ಯಾಜೆಟ್‌‌ಗಳಿವೆ.ಈ ಗ್ಯಾಜೆಟ್‌ಗಳ ತಂತ್ರಜ್ಞಾನಕ್ಕೆ ಜನ ಬೌಲ್ಡ್‌ ಆಗಿದ್ದಾರೆ .ಈ ಗ್ಯಾಜೆಟ್‌ಗಳು ಈಗಾಗಲೇ ಬೇರೆ ದೇಶಗಳಲ್ಲಿ ಲಭ್ಯವಿದ್ದರೂ ಭಾರತಕ್ಕೆ ಇನ್ನೂ ಬಂದಿಲ್ಲ. ಕೆಲವೇ ತಿಂಗಳಿನಲ್ಲಿ ಈ ಗ್ಯಾಜೆಟ್‌ಗಳು ಭಾರತದಲ್ಲೂ ಲಭ್ಯವಾಗಲಿದೆ.

ಬೆಲೆ ದುಬಾರಿಯಾದರೂ ಇದರಲ್ಲಿ ಬಳಸಲಾಗಿರುವ ತಂತ್ರಜ್ಞಾನ ಮಾತ್ರ ಗ್ರೇಟ್‌. ಹೀಗಾಗಿ ಆ ಗ್ಯಾಜೆಟ್‌‌ಗಳು ಯಾವುದು ಎನ್ನುವುದಕ್ಕೆ ಆ ಸ್ಮಾರ್ಟ್‌ ಟೆಕ್‌ ಗ್ಯಾಜೆಟ್‌ಗಳ ವಿವರ ಇಲ್ಲಿವೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.


ಇದನ್ನೂ ಓದಿ: ಭಾರತೀಯಳಿಂದ ಟಚ್‌ಫ್ರೀ ಮೊಬೈಲ್‌ ತಂತ್ರಜ್ಞಾನ ಆವಿಷ್ಕಾರ

Click Here For New Gadgets Gallery

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಮಿಮೋಟೊ ಕ್ಯಾಮ್‌(Memoto Cam)

ಮಿಮೋಟೊ ಕ್ಯಾಮ್‌(Memoto Cam)


ಸಿಂಪಲ್ಲಾಗಿ ಒಂದು ಲವ್‌ಸ್ಟೋರಿ ಸಿನಿಮಾದಲ್ಲಿ ಹೀರೋಯಿನ್‌ ಕುತ್ತಿಗೆಯಲ್ಲಿರುವ ಮಿನಿ ಕ್ಯಾಮೆರಾ ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ. ಜಿಪಿಎಸ್‌ ಕ್ಯಾಮೆರಾವನ್ನು ಧರಿಸಿ ಎಲ್ಲಿಗೆ ಬೇಕಾದ್ರೂ ಹೋಗಬಹುದು. ಒಂದು ನಿಮಿಷಕ್ಕೆ ಎರಡು ಫೋಟೋಗಳನ್ನು ಇದು ಆಟೋಮ್ಯಾಟಿಕ್‌ ಆಗಿ ತೆಗೆದು ಜಿಪಿಎಸ್‌ ಡೇಟಾಕ್ಕೆ ಟ್ಯಾಗ್‌ ಮಾಡುತ್ತದೆ.

ಬೆಲೆ: ಅಂದಾಜು16,500

ಜಿಟಾರ್‌ (Gtar)

ಜಿಟಾರ್‌ (Gtar)


ಗಿಟಾರ್‍ ಪ್ರೇಮಿಗಳಿಗೆ ಹೊಸ ರೀತಿಯ ಗಿಟಾರ್‌ ಮಾರುಕಟ್ಟೆಗೆ ಬರಲಿದೆ. ಈ ಗಿಟಾರ್‌ ನುಡಿಸಬೇಕು ಎಂದು ಆಲೋಚಿಸಿದ್ದಾರೆ ನಿಮ್ಮಲ್ಲಿ ಐಫೋನ್‌ ಇರಬೇಕು. ಮೊದಲು ನೀವು gTar ಎನ್ನುವ ಐಫೋನ್‌ ಆಪ್‌ ಡೌನ್‌ಲೋಡು ಮಾಡಿ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ಈ ಆಪ್‌ನಲ್ಲಿ ಬೇಕಾದ ರೀತಿಯ ಗಿಟಾರ್‌ ಸೆಟ್ಟಿಂಗ್ಸ್‌ನ್ನು ಸೆಟ್ ಮಾಡಿ ಗಿಟಾರ್‍ ನುಡಿಸಬಹುದು.

ಅಂದಾಜು ಬೆಲೆ: 23,500

LIFX

LIFX


ಹೊಸ ರೀತಿಯ ವೈಫೈ ಎಲ್‌ಇಡಿ ಬಲ್ಬ್‌ LIFX.ಈಗ ಇರುವ ಬಲ್ಬ್‌ನ್ನು ತೆಗೆದು ಈ ಬಲ್ಬ್‌ನ್ನು ಆ ಜಾಗಕ್ಕೆ ಸೇರಿಸಬಹುದು. ವೈಫೈ, ಮತ್ತು LIFX ಆಪ್‌ನಿಂದ ಈ ಬಲ್ಬ್‌ ಕಾರ್ಯನಿರ್ವ‌ಹಿಸುತ್ತದೆ.ಒಂದು ಬಲ್ಬ್‌ 25 ವರ್ಷ ಕಾಲ ಬಾಳಿಕೆ ಮಾಡಬಹುದು ಎಂದು ಕಂಪೆನಿ ಹೇಳಿದೆ.

ಅಂದಾಜು ಬೆಲೆ:4,700

ಪಾಕೆಟ್‌ ಟಿವಿ

ಪಾಕೆಟ್‌ ಟಿವಿ


ನೋಡಲು ಪೆನ್‌ಡ್ರೈವ್‌ನಂತಿರುವ ಈ ಸಾಧನವನ್ನು ಟಿವಿಯ ಎಚ್‌ಡಿಎಂಐ ಪೋರ್ಟ್‌‌ಗೆ ಕನೆಕ್ಟ್‌ ಮಾಡಿದ್ರೆ ಆಯಿತು ನಿಮ್ಮ ಟಿವಿಯನ್ನು ಸ್ಮಾರ್ಟ್‌‌‌ಟಿವಿಯನ್ನಾಗಿ ಮಾಡಬಹುದು. ಆಂಡ್ರಾಯ್ಡ್‌ ಆಪ್‌ ಡೌನ್‌ಲೋಡ್‌ ಮಾಡಿಕೊಂಡು ಸ್ಮಾರ್ಟ್‌ಫೋನ್‌ನ್ನು ರಿಮೋಟ್‌ ಕಂಟ್ರೋಲ್‌ ಆಗಿ ಬಳಸಬಹುದು.ವೈಫೈ ಮೂಲಕ ಇಂಟರ್‌ನೆಟ್‌ ಕೆಲಸವನ್ನು ಮಾಡಬಹುದು.1GHz ಪ್ರೊಸೆಸರ್‍,4GB ಆಂತರಿಕ ಮೆಮೋರಿ ಸಹ ಈ ಪಾಕೆಟ್‌ ಟಿವಿಯಲ್ಲಿದೆ.
ಅಂದಾಜು ಬೆಲೆ:8,200

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Click Here For List of New Smartphones And Tablets Price & Specs

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot