Home
ಸುದ್ದಿಜಾಲ

ಶೀಘ್ರದಲ್ಲೇ 6G ಸೇವೆ ಆರಂಭ: 4G, 5G ಗಿಂತಲೂ ಮಿಗಿಲಾದ ಸೌಲಭ್ಯ!?

ಭಾರತವು ತಂತ್ರಜ್ಞಾನ ವಿಭಾಗದಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಕೆಲವೇ ತಿಂಗಳ ಹಿಂದೆ 5G ಅನ್ನು ಘೋಷಣೆ ಮಾಡಲಾಗಿದ್ದು, ಇದಾದ ಕಡಿಮೆ ಅಂತರದಲ್ಲಿಯೇ ಈಗ 6G ಬಗ್ಗೆ ಘೋಷಣೆ ಮಾಡಲಾಗಿದೆ. ಈ ಮೂಲಕ ಶೀಘ್ರದಲ್ಲೇ ಜನರು 6G ಸೇವೆ ಪಡೆದುಕೊಳ್ಳುವ ಎಲ್ಲಾ ಲಕ್ಷಣ ಕಂಡುಬರುತ್ತಿದೆ.

ಹೌದು, ಇಂದಿನ ಭಾರತದ ತಂತ್ರಜ್ಞಾನ ಸಾಮಾನ್ಯ ಜನರ ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ಅದರಂತೆ ಪ್ರಮುಖ ಟೆಲಿಕಾಂ ಸಂಸ್ಥೆಗಳು ಇದೀಗ ಎಲ್ಲಾ ಕಡೆ 5G ವಿಸ್ತರಣೆ ಮಾಡಲು ಮುಂದಾಗುತ್ತಿದ್ದು, ಈ ನಡುವೆ 6G ಸಹ ಸದ್ದು ಮಾಡುತ್ತಿದೆ. ಹಾಗಿದ್ರೆ, ಈ 6Gಯ ಬಲ ಏನು?, ಈ ಬಗ್ಗೆ ಪ್ರಧಾನಿ ಮೋದಿ ಅವರು ಹೇಳಿದ್ದೇನು?, ಎಂದಿನಿಂದ ಈ 6G ಸೇವೆ ಆರಂಭ ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಶೀಘ್ರದಲ್ಲೇ 6G ಸೇವೆ ಆರಂಭ: 4G, 5G ಗಿಂತಲೂ ಮಿಗಿಲಾದ ಸೌಲಭ್ಯ!?

ಭಾರತದಲ್ಲಿ 6G: ಭಾರತದಲ್ಲಿ ಬಹುಪಾಲು ಮಂದಿಗೆ 5G ಯನ್ನೇ ಅರಗಿಸಿಕೊಳ್ಳಲಾಗುತ್ತಿಲ್ಲ. ಅಂತಹುದರಲ್ಲಿ 6G ಸೇವೆ ಲಭ್ಯವಾಗುತ್ತದೆ ಎಂದರೆ ಅದರ ಬಗ್ಗೆ ಖಂಡಿತಾ ಜನರಲ್ಲಿ ಹಲವಾರು ಪ್ರಶ್ನೆಗಳು ಮೂಡಿರುತ್ತವೆ. ಇದರ ಭಾಗವಾಗಿಯೇ ಭಾರತವು ವಿಶ್ವದಲ್ಲಿ ಟೆಲಿಕಾಂ ತಂತ್ರಜ್ಞಾನದ ಪ್ರಮುಖ ರಫ್ತುದಾರನಾಗುವತ್ತ ಮಹತ್ವದ ಹೆಜ್ಜೆ ಇಡುತ್ತಿದ್ದು, ಈ ಮೂಲಕ ಭಾರತದ ಕೀರ್ತಿಪತಾಕೆ ಇತರೆ ದೇಶಗಳಿಗೂ ಹರಡುತ್ತಿದೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಹೊಸ ಪ್ರಾದೇಶಿಕ ಕಚೇರಿ ಮತ್ತು ನಾವೀನ್ಯತೆ ಕೇಂದ್ರವನ್ನು ಮೋದಿ ಅವರು ಉದ್ಘಾಟಿಸಿದ್ದು, ಸಮಾರಂಭದಲ್ಲಿ 6G ಪರೀಕ್ಷೆಗೂ ಚಾಲನೆ ನೀಡಿದ್ದಾರೆ. ಈ ಮೂಲಕ ದೇಶದಲ್ಲಿ ಶೀಘ್ರದಲ್ಲೇ 6G ಸೇವೆಯೂ ಆರಂಭವಾಗಲಿದೆ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಜೊತೆಗೆ ದೆಹಲಿಯಲ್ಲಿ ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ITU) ಪ್ರಾದೇಶಿಕ ಕಚೇರಿಯನ್ನು ಸಹ ಉದ್ಘಾಟಿಸಿದ್ದಾರೆ.

ಶೀಘ್ರದಲ್ಲೇ 6G ಸೇವೆ ಆರಂಭ: 4G, 5G ಗಿಂತಲೂ ಮಿಗಿಲಾದ ಸೌಲಭ್ಯ!?

6G ತಂತ್ರಜ್ಞಾನ ಎಷ್ಟು ಸಾಮರ್ಥ್ಯ ಹೊಂದಿರಲಿದೆ? : ಪರೀಕ್ಷಾ ಹಂತದಲ್ಲಿರುವ ಈ 6G ಪ್ರತಿ ಸೆಕೆಂಡಿಗೆ 1 ಟೆರಾಬಿಟ್ ವೇಗದೊಂದಿಗೆ ಅತಿ ಕಡಿಮೆ ಲೇಟೆನ್ಸಿಯನ್ನು ನೀಡಲಿದ್ದು, ಈ ಮೂಲಕ ಸದ್ಯಕ್ಕೆ ಚಾಲ್ತಿಯಲ್ಲಿರುವ 5G ಯ ​​ಉನ್ನತ ವೇಗಕ್ಕಿಂತ 1,000 ಪಟ್ಟು ಹೆಚ್ಚು ಎಂದು ಹೇಳಲಾಗುತ್ತಿದೆ.

6G ತಂತ್ರಜ್ಞಾನದ ಉದ್ದೇಶ ಏನು?: ಭಾರತ್‌ 6G ವಿಷನ್ ಡಾಕ್ಯುಮೆಂಟ್ ಅನ್ನು ಟೆಕ್ನಾಲಜಿ ಇನ್ನೋವೇಶನ್ ಗ್ರೂಪ್ ಸಿದ್ಧಪಡಿಸಿದ್ದು, ಇದನ್ನು ನವೆಂಬರ್ 2021 ರಲ್ಲಿ ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಶೈಕ್ಷಣಿಕ, ಪ್ರಮಾಣೀಕರಣ ಸಂಸ್ಥೆಗಳು, ಟೆಲಿಕಾಂ ಸೇವೆಗಳ ಸದಸ್ಯರೊಂದಿಗೆ ರಚಿಸಲಾಗಿದೆ. ಭಾರತದಲ್ಲಿ 6G ಗಾಗಿ ಮಾರ್ಗಸೂಚಿ ಮತ್ತು ಕ್ರಿಯಾ ಯೋಜನೆಗಳನ್ನು ಈ ಮೂಲಕ ರಚಿಸಲಾಗುತ್ತದೆ.

ಆರಂಭದಲ್ಲಿ ಪರೀಕ್ಷಾರ್ಥವಾಗಿ ಈ 6G ಯನ್ನು ಶೈಕ್ಷಣಿಕ ಸಂಸ್ಥೆಗಳು, ಉದ್ಯಮಗಳು, ಸ್ಟಾರ್ಟ್‌ಆಪ್‌ಗಳು ಹಾಗೂ ಎಮ್‌ಎಸ್‌ಎಮ್‌ಇಗಳಿಗೆ ನೀಡಲಾಗುತ್ತಿದ್ದು, ಇವು ತಮ್ಮದೇ ಆದ ರೀತಿಯಲ್ಲಿ ಈ 6G ಯನ್ನು ಪರೀಕ್ಷೆಗೆ ಒಳಪಡಿಸಲಿವೆ. ಈ ಪರೀಕ್ಷೆಯಲ್ಲಿ ಯಶಸ್ಸುಕಂಡ ನಂತರ ಭಾರತೀಯರೆಲ್ಲರಿಗೂ ಮುಕ್ತವಾಗಿಸಲಾಗುತ್ತದೆ.

ಹಾಗೆಯೇ ಈ 6G ದೇಶದಲ್ಲಿ ನಾವೀನ್ಯತೆ, ಸಾಮರ್ಥ್ಯ ವರ್ಧನೆ ಮತ್ತು ವೇಗದ ತಂತ್ರಜ್ಞಾನ ಅಳವಡಿಕೆಗೆ ಅನುವು ಮಾಡಿಕೊಡುವ ವಾತಾವರಣವನ್ನು ಒದಗಿಸುತ್ತದೆ ಎಂದು ಸರ್ಕಾರ ಒತ್ತಿ ಹೇಳಿದ್ದು, ಈ ಮೂಲಕ ಇತರೆ ದೇಶಗಳಿಗಿಂತ ಒಂದು ಹೆಜ್ಜೆ ಮುಂದೆ ಸಾಗಿದೆ. ಹಾಗೆಯೇ 5G ಶಕ್ತಿಯೊಂದಿಗೆ ಇಡೀ ಪ್ರಪಂಚದ ಕೆಲಸ ಮಾಡುವ ಸಂಸ್ಕೃತಿಯನ್ನು ಬದಲಾಯಿಸಲು ಭಾರತವು ಅನೇಕ ದೇಶಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಶೀಘ್ರದಲ್ಲೇ 6G ಸೇವೆ ಆರಂಭ: 4G, 5G ಗಿಂತಲೂ ಮಿಗಿಲಾದ ಸೌಲಭ್ಯ!?

ಇನ್ನು ಅಕ್ಟೋಬರ್ 1, 2022 ರಂದು ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 6 ನೇ ಆವೃತ್ತಿಯಲ್ಲಿ 5G ಸೇವೆಗೆ ಔಪಚಾರಿಕವಾಗಿ ಪಿಎಂ ಮೋದಿ ಚಾಲನೆ ನೀಡಿದ್ದರು. 2024 ರ ಅಂತ್ಯದ ವೇಳೆಗೆ ಭಾರತವು 5G ಸೇವೆಗಳಿಗೆ 100 ಪ್ರತಿಶತ ವ್ಯಾಪ್ತಿಯನ್ನು ಪಡೆದುಕೊಳ್ಳಲಿದ್ದು, ಪ್ರಸ್ತುತ, ಜಿಯೋ 5G ಸೇವೆಗಳನ್ನು 400 ಕ್ಕೂ ಹೆಚ್ಚು ನಗರಗಳಲ್ಲಿ ಪ್ರಾರಂಭಿಸಲಾಗಿದೆ. ಹಾಗೆಯೇ ಇದಕ್ಕೆ ಏರ್‌ಟೆಲ್‌ ಸಹ ಪ್ರತಿಸ್ಪರ್ಧಿಯಾಗಿದೆ.

Best Mobiles in India

English summary
Modi inaugurated the International Telecommunication Union's new regional office and innovation center at Vigyan Bhavan in New Delhi and also unveils of bharat 6g vision document.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+