3,700 ಕೋಟಿ ಬೇಟೆ!..ಭಾರತದ ಬಹುದೊಡ್ಡ ಆನ್ಲೈನ್ ವಂಚನೆ ಜಾಲ ಬಲೆಗೆ!!
7 ಲಕ್ಷ ಜನರಿಗೆ ಸುಮಾರು 3, 700 ಕೋಟಿ ರೂಪಾಯಿ ವಂಚನೆ ಎಸಗಿದ್ದ ಜಾಲವೊಂದು ಉತ್ತರ ಪ್ರದೇಶದ ನೋಯ್ಡಾದಲ್ಲಿ ಪೋಲೀಸರ ಬಲೆಗೆ ಬಿದ್ದಿದೆ.!!
ಆನ್ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಪ್ರತಿ ಕ್ಲಿಕ್‌ಗೆ 5 ರೂಪಾಯಿ ನೀಡಲಾಗುವುದು ಎಂದು ಜನರಿಗೆ ಆಮಿಷವೊಡ್ಡಿ 7 ಲಕ್ಷ ಜನರಿಗೆ ಸುಮಾರು 3, 700 ಕೋಟಿ ರೂಪಾಯಿ ವಂಚನೆ ಎಸಗಿದ್ದ ಜಾಲವೊಂದುಉತ್ತರ ಪ್ರದೇಶದ ನೋಯ್ಡಾದಲ್ಲಿ ಪೋಲೀಸರ ಬಲೆಗೆ ಬಿದ್ದಿದೆ.!!
ಗುಜರಾತ್ ಮೂಲಕ ಅನುಭವ್ ಮಿತ್ತಲ್ ಮತ್ತು ಆಯುಷಿ ಅಗರ್ವಾಲ್ ಎಂಬುವವರು ಈ ವಂಚನೆ ಜಾಲದ ರೂವಾರಿಗಳಾಗಿದ್ದು, ಸೋಷಿಯಲ್ ಟ್ರೇಡ್ ಡಾಟ್ ಬಿಝ್ ಎಂಬ ಕಂಪನಿ ತೆರೆದು ಒಮ್ಮೆ ಸದಸ್ಯರಾದರೆ ನೋಂದಣಿಗೆ ನೀಡಿದ ಹಣದ ದುಪ್ಪಟ್ಟು ಸಂಪಾದನೆ ಮಾಡಬಹುದು ಎಂದು ಆಮಿಷವೊಡ್ಡಿ ಜನರಿಗೆ ವಂಚಿಸಿದ್ದರು.

ಏರ್‌ಟೆಲ್ ಹಣ ಕಿತ್ತು ಫೇಸ್‌ಬುಕ್‌ಗೆ ನೀಡಿದ ಜಿಯೋ! ಇದು ಪಕ್ಕಾ ಬ್ಯುಸಿನೆಸ್!!
ಇದೀಗ ಇವರ ವಂಚನೆಯ ಜಾಲ ಬಯಲಾಗಿದ್ದು, ಕಂಪನಿ ನಿರ್ದೇಶಕ ಅನುಭವ್ ಮಿತ್ತಲ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆನ್‌ಲೈನ್ ಮೂಲಕ ಮಾರಾಟ ಮಾಡುವ ಅವಕಾಶಇರುವುದರಿಂದ ಕಂಪನಿಯ ಜಾಲತಾಣಗಳು ಹಾಗೂ ಉತ್ಪನ್ನಗಳನ್ನು ಹೆಚ್ಚೆ ಹೆಚ್ಚು ಜನರಿಗೆ ತಲುಪಿಸಲು ಆನ್‌ಲೈನ್ ವೆಬ್‌ಸೈಟ್ ಸೃಷ್ಟಿಸಿ ಉತ್ಪನ್ನಗಳನ್ನು ಜನರಿಗೆ ತಲುಪಿಸಲು ಅವಕಾಶ ಕಲ್ಪಿಸಿದ್ದ.

ಇಲ್ಲಿಗೆ ಸುಮ್ಮನಾಗದೇ ವಂಚನೆಗೆ ಹೊಸ ದಾರಿ ಹುಡುಕಿ ಇನ್ನೊಬ್ಬರ ಉತ್ಪನ್ನಗಳ ಮೇಲೆ ಕ್ಲಿಕ್ (ಹಿಟ್ಸ್) ಮಾಡಿದರೆ ಐದು ರೂಪಾಯಿ ನೀಡುವುದಾಗಿ ಹೇಳಿ ಆರಂಭದಲ್ಲಿ ಕೆಲವರಿಗೆ ಹಣವನ್ನೂ ನೀಡಿದ್ದ ಅನುಭವ್ ಮಿತ್ತಲ್. ನಂತರ ಜನರಿಗೆ ಹಣ ನೀಡದೇ ವಂಚಿಸಿದ್ದ, ಇನ್ನು ಈ ಬಗ್ಗೆ ಪೊಲೀಸರು ಹೆಚ್ಚಿ ತನಿಖೆ ಕೈಗೊಂಡಿದ್ದಾರೆ.


Click it and Unblock the Notifications