ಸದ್ಯ ಹೊಸ ಸ್ಮಾರ್ಟ್‌ಫೋನ್ ಖರೀದಿಸ್ತೀರಾ?..ಹಾಗಿದ್ರೆ, ನೀವು ಇಲ್ಲಿ ಗಮನಿಸಿ!
ದೇಶಿಯ ಮೊಬೈಲ್ ಮಾರುಕಟ್ಟೆಗೆ ಪ್ರಮುಖ ಬ್ರ್ಯಾಂಡ್‌ಗಳ ಹೊಸ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಡುತ್ತಲೇ ಸಾಗಿವೆ. ಜನಪ್ರಿಯ ಮೊಬೈಲ್ ಬ್ರ್ಯಾಂಡ್‌ಗಳು ಬಜೆಟ್ ದರದ ಮೊಬೈಲ್‌ಗಳ ಜೊತೆಗೆ ಕೆಲವು ಪ್ರೀಮಿಯಂ ಹಾಗೂ ಫ್ಲ್ಯಾಗ್‌ಶಿಪ್ ಫೋನ್‌ಗಳನ್ನು ಪರಿಚಯಿಸುತ್ತವೆ. ಅದೇ ರೀತಿ ಪ್ರಸಕ್ತ ತಿಂಗಳು (ಅಕ್ಟೋಬರ್ 2024) ಸಹ ಮಾರುಕಟ್ಟೆಗೆ ಕೆಲವು ಅಚ್ಚರಿ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಕೊಡಲಿದ್ದು, ಕುತೂಹಲ ಮೂಡಿಸಿವೆ.
ಹೌದು, ಪ್ರಸಕ್ತ ಅಕ್ಟೋಬರ್ 2024 ತಿಂಗಳಿನಲ್ಲಿ ನೂತನ ಫೋನ್ ಪರಿಚಯಿಸಲು ಲೀಡಿಂಗ್ ಮೊಬೈಲ್ ಬ್ರ್ಯಾಂಡ್‌ಗಳು ಸಜ್ಜಾಗಿವೆ. ಹೊಸದಾಗಿ ಬರಲಿರುವ ಫೋನ್‌ಗಳಲ್ಲಿ ಅಗ್ಗದ ಫೋನ್‌ಗಳ ಜೊತೆಗೆ ದುಬಾರಿ ಬೆಲೆಯ ಫೋನ್‌ಗಳು ಲಾಂಚ್ ಆಗಲಿವೆ. ಲಾಂಚ್‌ಗೂ ಮುನ್ನವೇ ಕೆಲವು ಮೊಬೈಲ್‌ಗಳ ಲೀಕ್ ಫೀಚರ್ಸ್‌ಗಳ ಮೂಲಕ ಗ್ರಾಹಕರಲ್ಲಿ ಆಸಕ್ತಯನ್ನು ಹೆಚ್ಚಿಸಿವೆ. ಹಾಗಾದರೇ ಈ ತಿಂಗಳಿನಲ್ಲಿ ಎಂಟ್ರಿ ಕೊಡಲಿರುವ ಫೋನ್‌ಗಳ ಬಗ್ಗೆ ತಿಳಿಯೋಣ.

ಲಾವಾ ಅಗ್ನಿ 3 ಮೊಬೈಲ್
ಲಾವಾ ಅಗ್ನಿ 3 ಫೋನ್ ಅಕ್ಟೋಬರ್ 4 ರಂದು ಲಾಂಚ್ ಆಗಲಿದೆ. ಇನ್ನು ಈ ಫೋನ್ ಎರಡು ಡಿಸ್‌ಪ್ಲೇ ರಚನೆ ಪಡೆದಿರಲಿದೆ. ಇದರ ಪ್ರಾಥಮಿಕ ಡಿಸ್‌ಪ್ಲೇಯು 1.5K ರೆಸಲ್ಯೂಶನ್ ಕರ್ವ್ಡ್ AMOLED ಡಿಸ್‌ಪ್ಲೇ ಆಗಿರಲಿದ್ದು, 120Hz ರಿಫ್ರೆಶ್ ರೇಟ್ ಅನ್ನು ಪಡೆದಿರಲಿದೆ. ಹಾಗೆಯೇ ಈ ಫೋನಿನ ಸೆಕೆಂಡರಿ ಡಿಸ್‌ಪ್ಲೇಯು 1.74 ಇಂಚಿನ AMOLED ಸ್ಕ್ರೀನ್ ಆಗಿರಲಿದೆ ಎಂದು ತಿಳಿದುಬಂದಿದೆ.
ಹಾಗೆಯೇ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300X ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಸಹ ಇರಲಿದೆ. ಹಾಗೆಯೇ ತ್ರಿವಳಿ ಕ್ಯಾಮೆರಾ ರಚನೆ ಪಡೆದಿರಲಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯದಲ್ಲಿ ಇರಲಿದೆ. 4700 mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿರಲಿದೆ.
ಒನ್‌ಪ್ಲಸ್ 13 ಮೊಬೈಲ್
ಸದ್ಯದಲ್ಲೇ ಬರಲಿರುವ ಒನ್‌ಪ್ಲಸ್ 13 (OnePlus 13) ಮೊಬೈಲ್ ಹೊಸ BOE X2 ಡಿಸ್‌ಪ್ಲೇ ಅನ್ನು ಹೊಂದಿರಲಿದ್ದು, ಇದರ ಜೊತೆಗೆ 120Hz ರಿಫ್ರೆಶ್ ರೇಟ್ ಪಡೆದಿರಲಿದೆ ಎನ್ನಲಾಗಿದೆ. ಇನ್ನು ಇದು 6.82 ಇಂಚಿನ 2K ಸ್ಕ್ರೀನ್ ಅನ್ನು ಪಡೆದಿರಲಿದೆ. ಹಾಗೆಯೇ ಇದು ಸ್ನಾಪ್‌ಡ್ರಾಗನ್ 8 Gen 4 ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯ ಒಳಗೊಂಡಿರಲಿದೆ. ಇದರೊಂದಿಗೆ ಹಿಂಭಾಗದಲ್ಲಿ ಟ್ರಿಪಲ್ 50 ಮೆಗಾ ಪಿಕ್ಸಲ್ ಕ್ಯಾಮೆರಾ ರಚನೆ ಪಡೆದಿರಲಿದ್ದು, 100W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಆಯ್ಕೆ ಪಡೆದಿರುವ ನಿರೀಕ್ಷೆಗಳು ಇವೆ.
ವಿವೋ X200 ಸರಣಿ
ಜನಪ್ರಿಯ ವಿವೋ ಸಂಸ್ಥೆಯು ಈ ತಿಂಗಳು ವಿವೋ X200 ಸರಣಿಯನ್ನು ಇದೇ ಅಕ್ಟೋಬರ್ 14 ರಂದು ಚೀನಾದಲ್ಲಿ ಲಾಂಚ್ ಮಾಡಲಿದೆ. ಈ ಸರಣಿಯು ಮೂರು ಫೋನ್‌ಗಳನ್ನು ಒಳಗೊಂಡಿರವ ಸಾಧ್ಯತೆಗಳು ಇದ್ದು, ಅವುಗಳು ಕ್ರಮವಾಗಿ ವಿವೋ X200 ( Vivo X200 ), ವಿವೋ X200 ಪ್ರೊ ( Vivo X200 Pro ) ಹಾಗೂ ವಿವೋ X200 ಪ್ರೊ ಮಿನಿ (Vivo X200 Pro Mini) ಮಾಡೆಲ್‌ಗಳನ್ನು ಒಳಗೊಂಡಿರಲಿದೆ. ಈ ಫೋನ್‌ಗಳು ಬ್ಲ್ಯಾಕ್, ಪಿಂಕ್, ಗ್ರೀನ್ ಹಾಗೂ ವೈಟ್ ಕಲರ್‌ನಲ್ಲಿ ಬರುವ ಸಾಧ್ಯತೆಗಳು ಇವೆ. ಹಾಗೆಯೇ ಬರಲಿರುವ ವಿವೋ X200 ಸರಣಿ ಫೋನ್‌ಗಳು ಕರ್ವ್ಡ್ ಡಿಸ್‌ಪ್ಲೇ ರಚನೆ ಅನ್ನು ಪಡೆದಿರುವುದು ಬಹುತೇಕ ಪಕ್ಕಾ ಎನ್ನಲಾಗಿದೆ.


Click it and Unblock the Notifications








