Home
ಸುದ್ದಿಜಾಲ

ಬೆಸ್ಟ್‌ ಕ್ಯಾಮೆರಾ ಫೋನ್‌ ಖರೀದಿಸಬೇಕೆ?..ಹಾಗಿದ್ರೆ, ಸ್ವಲ್ಪ ಕಾಯುವುದು ಉತ್ತಮ!

ಸದ್ಯ ದೇಶಿಯ ಮಾರುಕಟ್ಟೆಗೆ ಪ್ರಮುಖ ಬ್ರಾಂಡ್‌ಗಳ ಹೊಸ ಫೋನ್‌ಗಳು ಲಗ್ಗೆ ಇಡುತ್ತಲೇ ಇದ್ದು, ಅವುಗಳಲ್ಲಿ ಉನ್ನತ ಕ್ಯಾಮೆರಾ ರಚನೆಯ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಟ್ರೆಂಡಿಂಗ್‌ನಲ್ಲಿ ಗುರುತಿಸಿಕೊಳ್ಳುತ್ತವೆ. ಇತ್ತೀಚಿನ ಬಹುತೇಕ ನೂತನ ಸ್ಮಾರ್ಟ್‌ಫೋನ್‌ಗಳು ಟ್ರಿಪಲ್‌ ಕ್ಯಾಮೆರಾ ಸೆನ್ಸಾರ್ ಸಪೋರ್ಟ್ ಒಳಗೊಂಡಿದ್ದು, ಜೊತೆಗೆ ಅಧಿಕ ಬ್ಯಾಟರಿ, ವೇಗದ ಪ್ರೊಸೆಸರ್‌ ಫೀಚರ್‌ಗಳನ್ನು ಪಡೆದಿರುತ್ತವೆ. ನೀವೇನಾದರೂ ಅತ್ಯುತ್ತಮ ಕ್ಯಾಮೆರಾ ಫೋನ್‌ ಖರೀದಿಸುವ ಪ್ಲ್ಯಾನ್ ಇದ್ರೆ, ಇಲ್ಲಿ ಗಮನಿಸಿ.

ಬೆಸ್ಟ್‌ ಕ್ಯಾಮೆರಾ ಫೋನ್‌ ಖರೀದಿಸಬೇಕೆ?..ಹಾಗಿದ್ರೆ, ಸ್ವಲ್ಪ ಕಾಯುವುದು ಉತ್ತಮ!

ಪ್ರಸಕ್ತ ತಿಂಗಳಿನಲ್ಲಿ ಕೆಲವು ಅತ್ಯುತ್ತಮ ಕ್ಯಾಮೆರಾ ಫೋನ್‌ಗಳು ಮಾರುಕಟ್ಟೆಗೆ ಲಾಂಚ್ ಆಗಿವೆ. ಅದೇ ರೀತಿ ಮುಂಬರುವ ತಿಂಗಳಿನಲ್ಲಿ ಮಾರುಕಟ್ಟೆಗೆ ಕೆಲವು ಹೈ ಎಂಡ್‌ ಕ್ಯಾಮೆರಾ ಸೆನ್ಸಾರ್‌ನ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಡಲಿವೆ. ಶಿಯೋಮಿ, ಮೊಟೊ, ಸ್ಯಾಮ್‌ಸಂಗ್‌, ಒನ್‌ಪ್ಲಸ್‌ ಸೇರಿದಂತೆ ಇತರೆ ಕಂಪನಿಗಳ ನೂತನ ಕ್ಯಾಮೆರಾ ಫೋನ್‌ಗಳು ಕೆಲವೊಂದು ಆಕರ್ಷಕ ಫೀಚರ್ಸ್‌ಗಳೊಂದಿಗೆ ಬಿಡುಗಡೆ ಆಗುವ ನಿರೀಕ್ಷೆಗಳಿವೆ.

ಈ ನಿಟ್ಟಿನಲ್ಲಿ ಒಂದೊಳ್ಳೆ ಕ್ಯಾಮೆರಾ ಸ್ಮಾರ್ಟ್‌ಫೋನ್‌ ಖರೀದಿ ಮಾಡಬೇಕು ಎಂದು ಕೊಂಡಿದ್ದರೆ, ನೀವು ಸ್ಪಲ್ವ ಕಾಯ್ದು, ಖರೀದಿಸುವುದು ಉತ್ತಮ. ಹಾಗಾದರೇ ಮುಂಬರಲಿರುವ ಕೆಲವು ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸರಣಿ
ಲೀಕ್ ಮಾಹಿತಿಗಳಿಂದ ಈಗಾಗಲೇ ಭಾರೀ ಗಮನ ಸೆಳೆದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಫೋನ್ ಸರಣಿ ಇದೇ ಫೆಬ್ರುವರಿ 1, 2023 ರಂದು ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈ ಫೋನ್ ಸರಣಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ S23, ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಪ್ಲಸ್‌ ಹಾಗೂ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ ಮಾಡೆಲ್‌ಗಳನ್ನು ಒಳಗೊಂಡಿರಲಿದೆ.

ಬೆಸ್ಟ್‌ ಕ್ಯಾಮೆರಾ ಫೋನ್‌ ಖರೀದಿಸಬೇಕೆ?..ಹಾಗಿದ್ರೆ, ಸ್ವಲ್ಪ ಕಾಯುವುದು ಉತ್ತಮ!

ಒನ್‌ಪ್ಲಸ್‌ 11 5G ಸ್ಮಾರ್ಟ್‌ಫೋನ್
ಮೊಬೈಲ್‌ ಮಾರುಕಟ್ಟೆಯಲ್ಲಿ ಒನ್‌ಪ್ಲಸ್‌ ಫೋನ್‌ಗಳು ವಿಶೇಷ ಛಾಪು ಮೂಡಿಸಿದ್ದು, ಹೆಚ್ಚಿನ ಗ್ರಾಹಕರನ್ನು ಸೆಳೆದಿದೆ. ಒನ್‌ಪ್ಲಸ್‌ ಸಂಸ್ಥೆಯ ಬಹುನಿರೀಕ್ಷಿತ ಒನ್‌ಪ್ಲಸ್‌ 11 5G ಸ್ಮಾರ್ಟ್‌ಫೋನ್‌ ಇದೇ ಫೆಬ್ರುವರಿ 7 ರಂದು ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ. ಈ ಫೋನ್‌ ಸಹ ಆಕರ್ಷಕ ಕ್ಯಾಮೆರಾ ರಚನೆಯನ್ನು ಪಡೆದಿರಲಿದ್ದು, ಒಂದೊಳ್ಳೆ ಪ್ರೀಮಿಯಂ ಮಾದರಿಯ ಫೋನ್‌ ಆಗಿರಲಿದೆ.

ಶಿಯೋಮಿ 13 ಸರಣಿ
ಜನಪ್ರಿಯ ಮೊಬೈಲ್‌ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಶಿಯೋಮಿ ಮಿ ಸರಣಿಯಲ್ಲಿ ಈಗಾಗಲೇ ಹಲವು ಜನಪ್ರಿಯ ಮಾಡೆಲ್‌ಗಳನ್ನು ಪರಿಚಯಿಸಿದೆ. ಸಂಸ್ಥೆಯು ಇದೀಗ ನೂತನವಾಗಿ ಶಿಯೋಮಿ 13 ಸರಣಿಯನ್ನು ಬಿಡುಗಡೆ ಮಾಡಲಿದ್ದು, ಇದು ಸಹ ಬೆಸ್ಟ್ ಕ್ಯಾಮೆರಾ ರಚನೆಯನ್ನು ಪಡೆದಿರಲಿದೆ. ಬಿಡುಗಡೆಯ ಅಧಿಕೃತ ದಿನಾಂಕವನ್ನು ಕಂಪನಿಯು ಇನ್ನು ಬಹಿರಂಗ ಪಡಿಸಿಲ್ಲ. ಈ ಹಿಂದಿನ ಶಿಯೋಮಿ 11, ಶಿಯೋಮಿ 12 ಸರಣಿಯ ಫೋನ್‌ಗಳ ಕ್ಯಾಮೆರಾ ಆಯ್ಕೆ ಅಟ್ರ್ಯಾಕ್ಟ್‌ ಮಾಡಿದೆ.

ಮೊಟೊರೊಲಾ ಎಡ್ಜ್‌ 40 ಪ್ರೊ
ನೂತನ ಮೊಟೊರೊಲಾ ಎಡ್ಜ್‌ 40 ಪ್ರೊ ಫೋನ್ ಸದ್ಯದಲ್ಲೇ ಮೊಟೊರೊಲಾ ಸಂಸ್ಥೆಯ ಎಡ್ಜ್ ಫೋನ್ ಸರಣಿ ಸೇರಲಿದ್ದು, ಗ್ರಾಹಕರಲ್ಲಿ ಕುತೂಹಲ ಮೂಡಿಸಿದೆ. ಈ ಫೋನ್ ಮೊಟೊ X40 ಫೋನಿನ ರೀಬ್ರ್ಯಾಂಡ್‌ ಆವೃತ್ತಿ ಎನ್ನಲಾಗಿದ್ದು, ಮಾರ್ಚ್ 2023 ರಲ್ಲಿ ಅಧಿಕೃತವಾಗಿ ಲಾಂಚ್ ಆಗುವ ನಿರೀಕ್ಷೆಗಳಿವೆ. ಈ ಫೋನ್‌ ಸಹ ಕ್ಯಾಮೆರಾ ಆಯ್ಕೆ ಅಪ್‌ಗ್ರೇಡ್‌ ಆವೃತ್ತಿಯಲ್ಲಿ ಇರಲಿದೆ ಎನ್ನಲಾಗಿದೆ.

IQOO ನಿಯೋ 7 (iQOO Neo 7) ಸರಣಿ
iQOO ಮೊಬೈಲ್‌ ಸಂಸ್ಥೆಯು ಹೊಸದಾಗಿ IQOO ನಿಯೋ 7 ಫೋನ್‌ ಅನ್ನು ಬಿಡುಗಡೆ ಮಾಡಲಿದೆ. ಈ ಫೋನ್ ಸರಣಿಯು ಇದೇ ಫೆಬ್ರುವರಿ 16 ರಂದು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಎಂದು ಹೇಳಲಾಗ್ತಿದೆ. ಈ ಸರಣಿಯು IQOO ನಿಯೋ 7, IQOO ನಿಯೋ 7 SE, IQOO ನಿಯೋ 7 ರೇಸಿಂಗ್ ಎಡಿಷನ್‌ ಮಾಡೆಲ್‌ಗಳನ್ನು ಒಳಗೊಂಡಿರಲಿದೆ. ಈ ಸರಣಿಯು ಅತ್ಯುತ್ತಮ ಕ್ಯಾಮೆರಾ ರಚನೆಯ ಹೊಂದಿರಲಿದೆ.

ಬೆಸ್ಟ್‌ ಕ್ಯಾಮೆರಾ ಫೋನ್‌ ಖರೀದಿಸಬೇಕೆ?..ಹಾಗಿದ್ರೆ, ಸ್ವಲ್ಪ ಕಾಯುವುದು ಉತ್ತಮ!

ವಿವೋ X90 ಸ್ಮಾರ್ಟ್‌ಫೋನ್ ಸರಣಿ
ಮೊಬೈಲ್‌ ಮಾರುಕಟ್ಟೆಯಲ್ಲಿ ವಿವೋ ಬ್ರ್ಯಾಂಡ್‌ ಫೋನ್‌ಗಳಿಗೆ ಡಿಮ್ಯಾಂಡ್‌ ಇದೆ. ಇದೀಗ ಸಂಸ್ಥೆಯು ತನ್ನ ನೂತನ ವಿವೋ X90 ಸ್ಮಾರ್ಟ್‌ಫೋನ್ ಸರಣಿ ಬಿಡುಗಡೆ ಮಾಡಲಿದೆ. ಈ ಹಿಂದಿನ ವಿವೋ X80 ಫೋನ್ ಸರಣಿಯು ಗ್ರಾಹಕರ ಗಮನ ಸೆಳೆದಿತ್ತು. ವಿವೋ X90 ಅದರ ಅಪ್‌ಗ್ರೇಡ್‌ ಆವೃತ್ತಿ ಆಗಿದೆ. ಈ ಸರಣಿಯು ವಿವೋ X90, ವಿವೋ X90 ಪ್ರೊ ಹಾಗೂ ವಿವೋ X90 ಪ್ರೊ ಪ್ಲಸ್‌ ಮಾದರಿಗಳ ಆಯ್ಕೆ ಒಳಗೊಂಡಿರಲಿದೆ.

Best Mobiles in India

English summary
Planning to buy new camera phone? wait some time. because these Upcoming Camera Smartphones are better to buy. know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+