Infinix: ಇನ್ಫಿನಿಕ್ಸ್ ನೋಟ್ 40 ಸರಣಿಯಲ್ಲಿ 'ಆಕ್ಟಿವ್ ಹ್ಯಾಲೊ' ಫೀಚರ್ಸ್! ಏನಿದು?
ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್‌ಗಳು (Infinix Smartphones) ವಿವಿಧ ರೀತಿಯ ಫೀಚರ್ಸ್ ಆಯ್ಕೆ ಪಡೆದಿದ್ದು, ಈ ಮೂಲಕ ಬಳಕೆದಾರರು ಹೊಸ ಹೊಸ ಅನುಭವ ಪಡೆಯುತ್ತಿದ್ದಾರೆ. ಈ ನಡುವೆ ಇನ್ಫಿನಿಕ್ಸ್ ನೋಟ್ 40 ಸರಣಿಯಲ್ಲಿ(Infinix Note 40 series) ಹೊಸ ಫೀಚರ್ಸ್ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, ಇದು ಈವರೆಗೂ ಯಾವ ಫೋನ್‌ಗಳಲ್ಲೂ ಲಭ್ಯ ಇಲ್ಲದ ಫೀಚರ್ಸ್ ಆಗಿರಲಿದೆ.
ಹೌದು, ಸ್ಮಾರ್ಟ್‌ಫೋನ್ ಮಾರುಕಟ್ಟೆ ತೀವ್ರ ಪೈಪೋಟಿ ಎದುರಿಸುತ್ತಿದೆ. ಈ ನಡುವೆ ಕಂಪೆನಿಗಳು ಭಿನ್ನ ಫೀಚರ್ಸ್ ಆಯ್ಕೆಯ ಹಾಗೂ ಬೆಲೆ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿದ್ದು, ಅದರಂತೆ ಇನ್ಫಿನಿಕ್ಸ್ ಬಹಳ ಯೂನಿಕ್ ಫೀಚರ್ಸ್ ಅನ್ನು ಪರಿಚಯಿಸುತ್ತಿದೆ. ಹಾಗಿದ್ರೆ, ಏನಿದು ಹೊಸ ಫೀಚರ್ಸ್?, ಇದರಿಂದ ಬಳಕೆದಾರರಿಗೆ ಏನೆಲ್ಲಾ ಲಾಭ ಅನ್ನೋ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಇನ್ಫಿನಿಕ್ಸ್ ನೋಟ್ 40 ಸರಣಿ: ಇನ್ಫಿನಿಕ್ಸ್ ಜಾಗತಿಕ ಮಾರುಕಟ್ಟೆಯಲ್ಲಿ ನೋಟ್ 40 ಸರಣಿಯ ಫೋನ್‌ಗಳನ್ನು ಮಾರ್ಚ್ 18 ರಂದು ಅನಾವರಣ ಮಾಡಲಿದೆ. ಈ ಫೋನ್ ಲಾಂಚ್ ಕಾರ್ಯಕ್ರಮವು ಮಲೇಷ್ಯಾದ ಕೌಲಾಲಂಪುರದಲ್ಲಿ ಜರುಗಲಿದ್ದು, ಈ ಸರಣಿಯಲ್ಲಿ ನೋಟ್ 40, ನೋಟ್ 40 ಪ್ರೊ, ನೋಟ್ 40 ಪ್ರೊ 5G, ಮತ್ತು ನೋಟ್ 40 ಪ್ರೊ ಪ್ಲಸ್ 5G ಸೇರಿದಂತೆ ಹಲವು ಡಿವೈಸ್‌ಗಳು ಅನಾವರಣ ಆಗಲಿವೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಇನ್ಫಿನಿಕ್ಸ್ ನೋಟ್ 40 ಪ್ರೊ 5G ಸರಣಿಯಲ್ಲಿ ಎಐ ಬೆಂಬಲಿಯ ಹ್ಯಾಲೊ ಲೈಟಿಂಗ್: ಸಾಕಷ್ಟು ಬ್ರ್ಯಾಂಡ್‌ಗಳು ತಮ್ಮ ಫೋನ್‌ಗಳನ್ನು ಲಾಂಚ್ ಮಾಡುವ ಮುನ್ನ ಏನಾದರೂ ಒಂದು ವಿಭಿನ್ನ ಫೀಚರ್ಸ್ ಅನ್ನು ಬಹಿರಂಗಗೊಳಿಸಿ ಮಾರುಕಟ್ಟೆಯಲ್ಲಿ ಸಂಚಲನ ಉಂಟು ಮಾಡುತ್ತಿರುತ್ತವೆ. ಅದೇ ರೀತಿ ಈಗ ಹ್ಯಾಲೊ ಲೈಟಿಂಗ್ ಫೀಚರ್ಸ್ (Active Halo AI light feature ) ಬಗ್ಗೆ ಇನ್ಫಿನಿಕ್ಸ್ ಬೆಂಕಿ ಹಚ್ಚಿದೆ. ಈ ವಿಶೇಷ ಫೀಚರ್ಸ್ ಎಐ ಚಾಲಿತ ಬೆಳಕಿನ ಎಫೆಕ್ಟ್‌ನೊಂದಿಗೆ ವಾಯ್ಸ್ ಕಮಾಂಡ್ ಅನ್ನು ಸಂಯೋಜಿಸುತ್ತದೆ. ಈ ಮೂಲಕ ಯಾವುದೇ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳೊಂದಿಗೆ ಮನರಂಜನಾತ್ಮಕ ಸಂವಹನ ನಡೆಸಬಹುದಾಗಿದೆ.
ಯಾವ ಸಮಯದಲ್ಲಿ ಇದು ಕೆಲಸ ಮಾಡಲಿದೆ?: ಸ್ಮಾರ್ಟ್‌ಫೋನ್ ಬಳಕೆದಾರರು ಬಳಕೆಯ ಅನುಭವವನ್ನು ಸುಧಾರಿಸಲು ಈ ಫೀಚರ್ಸ್ ಆಯ್ಕೆ ನೀಡಲಾಗಿದ್ದು, ಒಳಬರುವ ಕರೆಗಳು, ನೋಟಿಫಿಕೇಶನ್‌ಗಳು, ಮ್ಯೂಸಿಕ್‌ಪ್ಲೇಬ್ಯಾಕ್, ಚಾರ್ಜಿಂಗ್, ಗೇಮಿಂಗ್ ಮತ್ತು ಹಾಯ್ ಫೋಲಾಕ್ಸ್ ವಾಯ್ಸ್ ಅಸಿಸ್ಟೆಂಟ್ ಅನ್ನು ಬಳಕೆ ಮಾಡುವಾಗ ವಿಶೇಷವಾದ ಬೆಳಕಿನ ಅನುಭವವನ್ನು ಪಡೆಯಬಹುದಾಗಿದೆ.
ಇದರಿಂದಾಗಿ ಸ್ಮಾರ್ಟ್‌ಫೋನ್‌ನಲ್ಲಿ ಸಂವಹನ ನಡೆಸುವಾಗ ಹೆಚ್ಚು ಮೋಜನ್ನು ಪಡೆಯಬಹುದಾಗಿದೆ. ಈ ಫೀಚರ್ಸ್ ಮೂರು ಗ್ರಾಹಕೀಯಗೊಳಿಸಬಹುದಾದ ಲೈಟ್ಸ್ ಎಫೆಕ್ಟ್‌ಗಳನ್ನು ಒಳಗೊಂಡಿದ್ದು, ಅದಕ್ಕೆ ಲೈವ್ಲಿ, ರಿದಮಿಕ್, ಮತ್ತು ಎಐ (Lively, Rhythmic, AI) ಎಂದು ಹೆಸರಿಡಲಾಗಿದೆ. ಈ ಮೂಲಕ ಬಳಕೆದಾರರು ತನ್ನ ಅಗತ್ಯಕ್ಕೆ ತಕ್ಕಂತೆ ಸೆಟ್ಟಿಂಗ್‌ನಲ್ಲಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.
ಇಷ್ಟೇ ಅಲ್ಲದೆ ಈ ನೋಟ್ 40 ಸರಣಿಯು ಚೀತಾ X1 ಚಿಪ್ ಆನ್‌ಬೋರ್ಡ್ ಅನ್ನು ಹೊಂದಿದೆ ಎಂದು ತಿಳಿದುಬಂದಿದೆ. ಈ ಚಿಪ್ ಫಾಸ್ಟ್‌ಚಾರ್ಜ್ 2.0 ತಂತ್ರಜ್ಞಾನದ ವಿಷಯದಲ್ಲಿ ಉತ್ತಮವಾಗಿ ಕೆಲಸ ಮಾಡಲಿದೆ. ಈ ತಂತ್ರಜ್ಞಾನದೊಂದಿಗೆ ಮುಂಬರುವ ಇನ್ಫಿನಿಕ್ಸ್ ನೋಟ್ 40 ಸ್ಮಾರ್ಟ್‌ಫೋನ್‌ಗಳು ಕ್ಷಣ ಮಾತ್ರದಲ್ಲಿ ಚಾರ್ಜ್ ಆಗಲಿವೆ ಹಾಗೂ ದೀರ್ಘ ಬ್ಯಾಕಪ್ ನೀಡಲಿವೆ ಎಂದು ಹೇಳಲಾಗಿದೆ.

ಗಮನಿಸಬೇಕಾದ ವಿಷಯ ಏನೆಂದರೆ ನೋಟ್ 40 ಸರಣಿಯು ಸಾಕಷ್ಟು ಫೀಚರ್ಸ್ ಇನ್ನೂ ಬಹಿರಂಗ ಆಗಿಲ್ಲ. ಆದರೂ ಸಹ ಕೆಲವು ವದಂತಿಗಳ ಪ್ರಕಾರ ಮೂಲ ನೋಟ್ 40 ವೇರಿಯಂಟ್ ಮೀಡಿಯಾಟೆಕ್ ಹಿಲಿಯೋ G91 ನಿಂದ ಪ್ರೊಸೆಸರ್ ಬಲ ಪಡೆದಿರಲಿದೆ ಎನ್ನಲಾಗಿದ್ದು, 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆಯಲಿದೆ ಎನ್ನಲಾಗಿದೆ. ಇದರ ಜೊತೆಗೆ ನೋಟ್ 40 ಪ್ರೊ ಸ್ಮಾರ್ಟ್‌ಫೋನ್ ಡೈಮೆನ್ಸಿಟಿ 7020 ಪ್ರೊಸೆಸರ್ ಅನ್ನು ಹೊಂದಿರಲಿದೆ ಎನ್ನಲಾಗಿದ್ದು, 8 GB RAM ಮತ್ತು ಆಂಡ್ರಾಯ್ಡ್ 14 ನೊಂದಿಗೆ ರನ್ ಆಗಲಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications








