Home
ಸುದ್ದಿಜಾಲ

ಹೊಸ ಮೊಬೈಲ್‌ ಖರೀದಿ ಮಾಡ್ತಾ ಇದ್ದೀರಾ?..ಹಾಗಿದ್ರೆ, ಈ ಫೋನ್‌ಗಳ ಬಗ್ಗೆ ತಿಳಿಯಿರಿ!

ಮೊಬೈಲ್ ಮಾರುಕಟ್ಟೆಗೆ ನೂತನ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಡುತ್ತಲೇ ಸಾಗಿವೆ. ಪ್ರಮುಖ ಮೊಬೈಲ್‌ ಬ್ರ್ಯಾಂಡ್‌ಗಳು ಬಜೆಟ್‌ ಫೋನ್‌ಗಳ ಜೊತೆಗೆ ಫ್ಲ್ಯಾಗ್‌ಶಿಪ್‌ ಫೋನ್‌ಗಳನ್ನು ಪರಿಚಯಿಸುತ್ತವೆ. ಅದೇ ರೀತಿ ಪ್ರಸಕ್ತ ತಿಂಗಳು (ಮಾರ್ಚ್ 2023) ಸಹ ಮಾರುಕಟ್ಟೆಗೆ ಕೆಲವು ಅಚ್ಚರಿ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಕೊಡಲಿವೆ.

ಹೌದು, ಈ ಮಾರ್ಚ್ ತಿಂಗಳಿನಲ್ಲಿ ಹೊಸ ಫೋನ್‌ ಪರಿಚಯಿಸಲು ಮೊಬೈಲ್‌ ಸಂಸ್ಥೆಗಳು ಸಜ್ಜಾಗಿವೆ. ಬರಲಿರುವ ಫೋನ್‌ಗಳಲ್ಲಿ ಅಗ್ಗದ ಫೋನ್‌ಗಳ ಜೊತೆಗೆ ದುಬಾರಿ ಬೆಲೆಯ ಫೋನ್‌ಗಳು ಲಾಂಚ್ ಆಗಲಿವೆ. ಬಿಡುಗಡೆಗೂ ಮುನ್ನವೇ ಕೆಲವು ಫೋನ್‌ಗಳು ಲೀಕ್ ಫೀಚರ್ಸ್‌ಗಳ ಮೂಲಕ ಗ್ರಾಹಕರಲ್ಲಿ ಕುತೂಹಲ ಹೆಚ್ಚಿಸಿವೆ. ಎಂಟ್ರಿ ಕೊಡಲಿರುವ ಫೋನ್‌ಗಳ ಬಗ್ಗೆ ತಿಳಿಯೋಣ.

ಹೊಸ ಮೊಬೈಲ್‌ ಖರೀದಿ ಮಾಡ್ತಾ ಇದ್ದೀರಾ?..ಹಾಗಿದ್ರೆ, ಈ ಫೋನ್‌ಗಳ ಬಗ್ಗೆ ತಿಳಿಯಿರಿ!

ಒಪ್ಪೋ ಫೈಂಡ್‌ N2 ಫ್ಲಿಪ್ ಸ್ಮಾರ್ಟ್‌ಫೋನ್‌

ಒಪ್ಪೋ ಫೈಂಡ್‌ N2 ಫ್ಲಿಪ್ ಸ್ಮಾರ್ಟ್‌ಫೋನ್‌ 6.8 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಪ್ರೈಮೆರಿ ಡಿಸ್‌ಪ್ಲೇ ಹೊಂದಿದೆ. ಇದು 1,080 x 2,520 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಈ ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 9000+ SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 13 ಆಧಾರಿತ ಕಲರ್‌ ಒಎಸ್‌ 13.0 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿದೆ. ಇಲ್ಲದೇ 4,300mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಹೊಸ ಮೊಬೈಲ್‌ ಖರೀದಿ ಮಾಡ್ತಾ ಇದ್ದೀರಾ?..ಹಾಗಿದ್ರೆ, ಈ ಫೋನ್‌ಗಳ ಬಗ್ಗೆ ತಿಳಿಯಿರಿ!

ಪೊಕೊ X5 ಸ್ಮಾರ್ಟ್‌ಫೋನ್‌

ಪೊಕೊ X5 ಸ್ಮಾರ್ಟ್‌ಫೋನ್‌ ಇದೇ ಮಾರ್ಚ್ 14 ರಂದು ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಗಳಿವೆ. ಈ ಫೋನ್‌ ಬಹುತೇಕ ರೆಡ್ಮಿ ನೋಟ್‌ 12 ನಂತೆಯೇ ಇದ್ದು, ಆದರೆ ಸ್ನ್ಯಾಪ್‌ಡ್ರಾಗನ್‌ 4 ಜೆನ್‌ 1 ಚಿಪ್ ಬದಲಿಗೆ ಸ್ನ್ಯಾಪ್‌ಡ್ರಾಗನ್‌ 695 SoC ಅನ್ನು ಹೊಂದಿದೆ. ಈ ಫೋನ್ 6.67 ಇಂಚಿನ 120Hz ಅಮೊಲೆಡ್‌ ಡಿಸ್‌ಪ್ಲೇ, 48 ಮೆಗಾ ಪಿಕ್ಸಲ್‌ ಮುಖ್ಯ ಕ್ಯಾಮೆರಾ, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, 5,000 mAh ಬ್ಯಾಟರಿ ಮತ್ತು 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಎಂಟ್ರಿ ನೀಡಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A54 ಮತ್ತು ಗ್ಯಾಲಕ್ಸಿ A34 ಫೋನ್‌ಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ A54 ಮತ್ತು ಗ್ಯಾಲಕ್ಸಿ A34 ಇದೇ ಮಾರ್ಚ್ 15 ರಂದು ಅನಾವರಣ ಆಗುವ ನಿರೀಕ್ಷೆಗಳಿವೆ. ಗ್ಯಾಲಕ್ಸಿ A34 6.6 ಇಂಚಿನ ಡ್ಯೂಡ್ರಾಪ್-ನೋಚ್ಡ್ ಡಿಸ್‌ಪ್ಲೇ ಹೊಂದಿರಲಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 1080 ಚಿಪ್ ಪ್ರೊಸೆಸರ್‌ ಪಡೆದಿರಲಿದೆ. ಅಲ್ಲದೇ 48 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ಪಡೆದಿರಲಿದೆ. ಆದರೆ, ಗ್ಯಾಲಕ್ಸಿ A54 ಫೋನ್‌ 6.4 ಇಂಚಿನ ಸೆಂಟರ್ ಪಂಚ್-ಹೋಲ್ ಡಿಸ್‌ಪ್ಲೇ ಪಡೆದಿರಲಿದ್ದು, Exynos 1380 SoC ಪ್ರೊಸೆಸರ್‌ ಹೊಂದಿರಲಿದೆ. ಇದರೊಂದಿಗೆ 50 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ಪಡೆದಿರಲಿದೆ.

ಹೊಸ ಮೊಬೈಲ್‌ ಖರೀದಿ ಮಾಡ್ತಾ ಇದ್ದೀರಾ?..ಹಾಗಿದ್ರೆ, ಈ ಫೋನ್‌ಗಳ ಬಗ್ಗೆ ತಿಳಿಯಿರಿ!

ಐಕ್ಯೂ Z7 ಸ್ಮಾರ್ಟ್‌ಫೋನ್ ಸರಣಿ

ಐಕ್ಯೂ Z7 ಫೋನ್‌ ಇದೇ ಮಾರ್ಚ್ 21 ರಂದು ಭಾರತದಲ್ಲಿ ಬಿಡುಗಡೆ ಆಗಲಿದೆ. ಈ ಫೋನ್‌ ಡೈಮೆನ್ಸಿಟಿ 920 ಚಿಪ್‌ಸೆಟ್ ಪ್ರೊಸೆಸರ್‌ ಹೊಂದಿರಲಿದ್ದು, ಅಮೊಲೆಡ್‌ ಡಿಸ್‌ಪ್ಲೇ ಪಡೆದಿದೆ. ಜೊತೆಗೆ 64 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ಪಡೆದಿರಲಿದ್ದು, ಸ್ನಾಪ್‌ಡ್ರಾಗನ್ 782G ಜೊತೆಗೆ ಆಂಡ್ರಾಯ್ಡ್‌ 13 ಸಪೋರ್ಟ್‌ ಇರಲಿದೆ. ಅಲ್ಲದೇ 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಲಗ್ಗೆ ಇಡಲಿದೆ. ಇದು 6GB RAM + 128GB RAM ಮತ್ತು 8GB + 128GB ವೇರಿಯಂಟ್‌ ಆಯ್ಕೆ ಪಡೆದಿರಲಿದೆ.

Best Mobiles in India

English summary
Upcoming Phones in March 2023 with expected Specifications, launch date. Know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+