ಐಫೋನ್ ಸೇರಲಿವೆ ನೀವು ನಿರೀಕ್ಷಿಸದ ಹೊಸ ಫೀಚರ್ಸ್‌ಗಳು!

|

ಜನಪ್ರಿಯ ಫೋನ್‌ಗಳ ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುವುದು ಆಪಲ್‌ನ ಐಫೋನ್‌ ಆಗಿದ್ದು, ದುಬಾರಿ ಎನಿಸಿದರೂ ಈ ಐಫೋನ್‌ಗಳು ಅಡ್ವಾನ್ಸಡ್ ಫೀಚರ್ಸ್‌ಗಳನ್ನು ಬಳಕೆದಾರರನ್ನು ಆಕರ್ಷಿಸುತ್ತವೆ. ಐಫೋನ್‌ಗಳ ಆಪರೇಟಿಂಗ್ ಸಿಸ್ಟಮ್‌ ಆಂಡ್ರಾಯ್ಡ್‌ಗಿಂತ ಸಂಪೂರ್ಣ ಭಿನ್ನವಾಗಿದ್ದು, ವಿಶೇಷ ಫೀಚರ್ಸ್‌ಗಳನ್ನು ಹೊಂದಿವೆ. ಇತ್ತೀಚಿಗೆ ಕಂಪನಿಯು ತನ್ನ ಐಓಎಸ್‌ 13 ಓಎಸ್‌ ಪರಿಚಯಿಸಿದ್ದು, ಈಗ ಮತ್ತಷ್ಟು ಹೊಸತನಗಳು ತುಂಬಲಿವೆ.

ಐಫೋನ್ ಸೇರಲಿವೆ ನೀವು ನಿರೀಕ್ಷಿಸದ ಹೊಸ ಫೀಚರ್ಸ್‌ಗಳು!

ಹೌದು, ಆಪಲ್‌ ಕಂಪನಿಯು ಇತ್ತೀಚಿಗೆ IOS 13 ಓಎಸ್‌ ಅನ್ನು ಬಿಡುಗಡೆ ಮಾಡಿದ್ದು, ಹೊಸ ಮಾದರಿಯ ಐಫೋನ್‌ಗಳು ಹಲವು ಮಹತ್ತರ ಫೀಚರ್ಸ್‌ಗಳನ್ನು ಲಭ್ಯವಾಗಲಿವೆ. ಇತ್ತೀಚಿಗೆ ಆಂಡ್ರಾಯ್ಡ್‌ ಓಎಸ್‌ ಕೂಡಾ ಅಪ್‌ಡೇಟ್ ಆಗಿದ್ದು ಆದರೆ ಐಫೋನ್‌ನ ಐಓಎಸ್‌ 13 ವರ್ಷನ್‌ನಲ್ಲಿರುವ ಫೀಚರ್ಸ್‌ಗಳು ಆಂಡ್ರಾಯ್ಡ್‌ ಮಾದರಿಯಲ್ಲಿ ಅಲಭ್ಯ. ಹೀಗಾಗಿ ಆಂಡ್ರಾಯ್ಡ್‌ ಬಳಕೆದಾರರು ಐಫೋನ್‌ ಫೀಚರ್ಸ್‌ಗಳತ್ತ ಕುತೂಹಲದಿಂದ ನೋಡುವಂತಾಗಿದೆ.

ಐಫೋನ್ ಸೇರಲಿವೆ ನೀವು ನಿರೀಕ್ಷಿಸದ ಹೊಸ ಫೀಚರ್ಸ್‌ಗಳು!

ಆಪಲ್‌ನ ಹೊಸ 'ಐಓಎಸ್‌ 13' ಓಎಸ್‌ ರಲ್ಲಿ ಪ್ರೈವೆಸಿ, ಕ್ಯಾಮೆರಾ, ಎಡಿಟಿಂಗ್, ಮೆಸೆಜ್‌ ಸೇರಿದಂತೆ ಹತ್ತು ಹಲವು ನೂತನ ಆಯ್ಕೆಗಳು ಸೇರಿಕೊಳ್ಳಲಿದ್ದು, ಐಫೋನ್‌ ಬಳಕೆದಾರರಿಂಗತೂ ಈಗ ಖುಷಿಯ ಸಡಗರ ಹೆಚ್ಚಾಗಿದೆ ಎನ್ನಬಹುದು. ಹಾಗಾದರೇ ಐಫೋನ್ 'ಐಓಎಸ್‌ 13' ಓಎಸ್‌ ಹೊಸದಾಗಿ ಸೇರಿಕೊಳ್ಳಲಿರುವ ವಿಶೇಷ ಫೀಚರ್ಸ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಸದ್ಯ ಸಿಕ್ಕಾಪಟ್ಟೆ ಟ್ರೆಂಡ್‌ ಹುಟ್ಟುಹಾಕಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!ಓದಿರಿ : ಸದ್ಯ ಸಿಕ್ಕಾಪಟ್ಟೆ ಟ್ರೆಂಡ್‌ ಹುಟ್ಟುಹಾಕಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

ಇನ್‌ಬಿಲ್ಟ್‌ ಎಡಿಟಿಂಗ್ ಆಪ್‌

ಇನ್‌ಬಿಲ್ಟ್‌ ಎಡಿಟಿಂಗ್ ಆಪ್‌

ಆಪಲ್‌ನ ಐಓಎಸ್‌ 13 ಓಎಸ್‌ನಲ್ಲಿ ಇನ್‌ಬಿಲ್ಟ್‌ ಎಡಿಟಿಂಗ್ ಆಪ್‌ ಇರಲಿದ್ದು, ಇದರಿಂದ ಬಳಕೆದಾರರು ಪ್ರತ್ಯೇಕ ಆಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ. ಇನ್‌ಬಿಲ್ಟ್ ವಿಡಿಯೊ ಎಡಿಟಿಂಗ್ ಆಪ್‌ ಅತ್ಯುತ್ತಮ ಆಯ್ಕೆಗಳನ್ನು ಹೊಂದಿದ್ದು, ಸರಳವಾಗಿ ಎಡಿಟಿಂಗ್ ಮಾಡಬಹುದು. ಸಾಕಷ್ಟು ಫಿಲ್ಟರ್‌ ಆಯ್ಕೆಗಳು ಈ ಆಪ್‌ನಲ್ಲಿ ದೊರೆಯಲಿವೆ.

ಲೋ ಲೈಟ್‌ ಫೋಟೋ

ಲೋ ಲೈಟ್‌ ಫೋಟೋ

ಹೊಸ ಐಓಎಸ್‌ 13ರಲ್ಲಿ ಹಲವು ಹೊಸ ಆಯ್ಕೆಗಳು ಕ್ಯಾಮೆರಾ ಫೀಚರ್ಸ್‌ನಲ್ಲಿ ಸೇರಿಕೊಳ್ಳಲಿದ್ದು, ಅವುಗಳಲ್ಲಿ ಮಂದ ಬೆಳಕಿನಲ್ಲೂ ಅತ್ಯುತ್ತಮವಾಗಿ ಫೋಟೊ ಸೆರೆಹಿಡಿಯಲು ಸಂಪೂರ್ಣ ಬೆಂಬಲ ನೀಡುವ ಆಯ್ಕೆಗಳಿರಲಿವೆ. ಮತ್ತು ಫೋಟೊ ಸೆರೆಹಿಡಿದ ನಂತರ ಎಡಿಟ್‌ ಮಾಡುವಾಗ 'ನಾಯಿಸ್ ರೆಡ್ಯುಕ್ಷನ್'‌ ಆಯ್ಕೆ ಅನುಕೂಲಕರ ಎನಿಸಲಿದೆ.

ಓದಿರಿ : ಜಿಯೋ ಗಿಗಾಫೈಬರ್‌ಗೆ ಅಡ್ಡಗಾಲು!..ಟಾಟಾ ಸ್ಕೈನಿಂದ ಉಚಿತ ಬ್ರಾಡ್‌ಬ್ಯಾಂಡ್‌ ಸೇವೆ! ಓದಿರಿ : ಜಿಯೋ ಗಿಗಾಫೈಬರ್‌ಗೆ ಅಡ್ಡಗಾಲು!..ಟಾಟಾ ಸ್ಕೈನಿಂದ ಉಚಿತ ಬ್ರಾಡ್‌ಬ್ಯಾಂಡ್‌ ಸೇವೆ!

ಪ್ರೈವೆಸಿ ಈಗ ಮತ್ತಷ್ಟು ಬಿಗಿ

ಪ್ರೈವೆಸಿ ಈಗ ಮತ್ತಷ್ಟು ಬಿಗಿ

ಫೋನ್‌ಗಳಲ್ಲಿ ಬಳಕೆದಾರರಿಗೆ ಅತೀ ಮುಖ್ಯವೆನಿಸುದು ಅವರ ಡೇಟಾಗಳ ಖಾಸಗಿತನ. ಹೊಸ್‌ ಐಓಎಸ್‌ 13 ಪ್ರೈವೆಸಿ ಆಯ್ಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಆಪಲ್‌ ಐಡಿ ಕ್ರಿಯೆಟ್‌ ಮಾಡಿಕೊಂಡು ಲಾಗ್‌ ಇನ್‌ ಆಗುವುದು ಮತ್ತು ಬಳಕೆದಾರರ ಐಡಿಗೆ ಸುರಕ್ಷತೆ ನೀಡಲಿದ್ದು, ಬೇಕಿದ್ದರೇ ಹೈಡ್‌ ಮಾಡುವ ಆಯ್ಕೆಗಳು ಸಹ ದೊರೆಯಲಿದೆ.

'ಫೈಂಡ್‌ ಮೈ' ಆಯ್ಕೆ

'ಫೈಂಡ್‌ ಮೈ' ಆಯ್ಕೆ

ಆಪಲ್‌ನ ಐಓಎಸ್‌ 13 ಓಎಸ್‌ನಲ್ಲಿನ 'ಫೈಂಡ್‌ ಮೈ' ಈ ಆಯ್ಕೆ ಮೂಲಕ ಬಳಕೆದಾರರು ಅವರ ಇತರೆ ಆಪಲ್‌ ಡಿವೈಸ್‌ಗಳಾದ ಐಫೋಡ್‌, ಮ್ಯಾಕ್‌ಬುಕ್, ಡಿವೈಸ್‌ಗಳನ್ನು ಕನೆಕ್ಟ್ ಮಾಡಬಹದು ಮತ್ತು ಮಿಸ್‌ ಆದ್ರೆ ಹುಡುಕಲು ಬೆಂಬಲಿಸಲಿದೆ. ಅದು ಇಂಟರ್ನೆಟ್‌ ಸಂಪರ್ಕ ಇಲ್ಲದಿದ್ದರು ಈ ಆಯ್ಕೆ ಕೆಲಸ ಮಾಡಲಿದೆ ಎನ್ನುವುದೇ ವಿಶೇಷ.

ಮೆಸೆಜ್‌ನಲ್ಲಿಯೇ ಸರ್ಚ್‌ ಆಯ್ಕೆ

ಮೆಸೆಜ್‌ನಲ್ಲಿಯೇ ಸರ್ಚ್‌ ಆಯ್ಕೆ

ಆಪಲ್‌ ಹೊಸ ಐಓಎಸ್‌ 13 ರಲ್ಲಿ ಟೆಕ್ಸ್ಟ್‌ ಮೆಸೆಜ್‌ನ ಕೀಪಾಡ್‌ನಲ್ಲಿ 'ಗೂಗಲ್ ಸರ್ಚ್' ಆಯ್ಕೆಯು ಹೊಸದಾಗಿ ಸೇರಿಕೊಳ್ಳಲಿದೆ. ಟೆಕ್ಸ್ಟ್‌ ಮೆಸೆಜ್‌ನಿಂದ ತಕ್ಷಣಕ್ಕೆ ಗೂಗಲ್ ಸರ್ಚ್ ಮಾಡಬಹುದಾಗಿದ್ದು, ಅದಕ್ಕಾಗಿ ಮೆಸೆಜ್‌ನಲ್ಲಿ ನೀಡಿರುವ ಸರ್ಚ್‌ ಆಯ್ಕೆ ಮೂಲಕ ಮಾಹಿತಿ ಹುಡುಕಬಹುದು.

ಓದಿರಿ : ಅಮೆಜಾನ್ 'ಫ್ಯಾಬ್‌ ಫೋನ್ಸ್ ಫೆಸ್ಟ್'ನಲ್ಲಿ ಈ ಫೋನ್‌ಗಳಿಗೆ ಬೆಸ್ಟ್‌ ಆಫರ್ ಲಭ್ಯ! ಓದಿರಿ : ಅಮೆಜಾನ್ 'ಫ್ಯಾಬ್‌ ಫೋನ್ಸ್ ಫೆಸ್ಟ್'ನಲ್ಲಿ ಈ ಫೋನ್‌ಗಳಿಗೆ ಬೆಸ್ಟ್‌ ಆಫರ್ ಲಭ್ಯ!

Best Mobiles in India

English summary
Apple has now introduced iPad OS which will offer features of iOS 13 along with extra features only for iPads. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X