Home
ಸುದ್ದಿಜಾಲ

ನಥಿಂಗ್ ಫೋನ್ 2a ಫೋನ್‌ ಮಾರಾಟಕ್ಕೆ ಫ್ಲಿಪ್‌ಕಾರ್ಟ್‌ ಸಜ್ಜು!..ಏನಾದ್ರೂ ಆಫರ್‌ ಇರುತ್ತಾ?

ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ನಥಿಂಗ್ ಫೋನ್ 2a ಲಾಂಚ್‌ಗೆ ರೆಡಿಯಾಗುತ್ತಿದ್ದು, ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇತ್ತ ಅದಕ್ಕೂ ಮುಂಚಿತವಾಗಿ, ಮುಂಬರುವ ನಥಿಂಗ್ ಫೋನ್ 2a ಮೊಬೈಲ್‌ ಅನ್ನು ಭಾರತದಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಮಾಡಲಾಗುವುದು ಎಂದು ಯುಕೆ ಮೂಲದ ಕಂಪನಿಯು ದೃಢಪಡಿಸಿದೆ.

ಹೌದು, ನಥಿಂಗ್ ಫೋನ್ 2a ಮೊಬೈಲ್‌ ಸದ್ಯದಲ್ಲೇ ಎಂಟ್ರಿ ಕೊಡಲಿದ್ದು, ಲಾಂಚ್ ಬಳಿಕ ಫ್ಲಿಪ್‌ಕಾರ್ಟ್‌ ತಾಣದ ಮೂಲಕ ಖರೀದಿಗೆ ಲಭ್ಯವಾಗಲಿದೆ. ಇನ್ನು ಸಂಸ್ಥೆಯು ಬಿಡುಗಡೆ ದಿನಾಂಕ ಅನ್ನು ಬಹಿರಂಗಪಡಿಸದೇ ಗ್ರಾಹಕರಲ್ಲಿ ಕುತೂಹಲ ಅಧಿಕ ಆಗಿದೆ. ಇನ್ನು ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7200 SoC ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ ಎನ್ನಲಾಗಿದೆ.

ನಥಿಂಗ್ ಫೋನ್ 2a ಫೋನ್‌ ಮಾರಾಟಕ್ಕೆ ಫ್ಲಿಪ್‌ಕಾರ್ಟ್‌ ಸಜ್ಜು!..ಆಫರ್‌ ಇರುತ್ತಾ?

ಲೀಕ್ ಮಾಹಿತಿ ಪ್ರಕಾರ, ನಥಿಂಗ್ ಫೋನ್ 2a ಮೊಬೈಲ್‌ ಆಂಡ್ರಾಯ್ಡ್‌ 13 ನಲ್ಲಿ ಸಪೋರ್ಟ್‌ ಜೊತೆಗೆ ಕೆಲಸ ಮಾಡಲಿದೆ. ಅಲ್ಲದೇ ಈ ಫೋನ್‌ 120Hz ರಿಫ್ರೆಶ್ ರೇಟ್‌ ಜೊತೆಗೆ 6.7 ಇಂಚಿನ ಪೂರ್ಣ HD+ AMOLED ಮಾದರಿಯ ಡಿಸ್‌ಪ್ಲೇ ಒಳಗೊಂಡಿರಲಿದೆ. ಇನ್ನು ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7200 SoC ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ನಿರ್ವಹಿಲಸಿದೆ ಎಂದು ಹೇಳಲಾಗುತ್ತದೆ.

ಹಾಗೆಯೇ ನಥಿಂಗ್ ಫೋನ್ 2a ಮೊಬೈಲ್‌ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿರಲಿದೆ. ಇದು 50 ಮೆಗಾ ಪಿಕ್ಸೆಲ್ ಸ್ಯಾಮ್‌ಸಂಗ್ GN9 ಸೆನ್ಸಾರ್‌ನ ಮುಖ್ಯ ಕ್ಯಾಮೆರಾ ಪಡೆದಿರಲಿದೆ. ಅಲ್ಲದೇ 50 ಮೆಗಾ ಪಿಕ್ಸೆಲ್ಸೆನ್ಸಾರ್‌ನ ಇನ್ನೊಂದು JN1 ಕ್ಯಾಮೆರಾವನ್ನು ಒಳಗೊಂಡಿರಲಿದೆ. ಮುಂಭಾಗದಲ್ಲಿ ಇದು 32 ಮೆಗಾ ಪಿಕ್ಸೆಲ್ ಸೋನಿ IMX615 ಕ್ಯಾಮೆರಾವನ್ನು ಪಡೆಯಬಹುದು. ಇದು ಕಪ್ಪು ಮತ್ತು ಬಿಳಿ ಕಲರ್‌ ಆಯ್ಕೆಯಲ್ಲಿ ಲಭ್ಯವಿದೆ ಎಂದು ಹೇಳಲಾಗುತ್ತದೆ.

ಇದು ಮೂಲ ನಥಿಂಗ್ ಫೋನ್ (2) ಸ್ಮಾರ್ಟ್‌ಫೋನ್‌ನ (Nothing Phone (2) ಕೆಲವು ಜನಪ್ರಿಯ ಫೀಚರ್ಸ್‌ ಅನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ. ಹೊಸ ಫೋನ್ (2a) ಟೋನ್-ಡೌನ್ ಆವೃತ್ತಿಯಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಹಿಂದಿನ ನಥಿಂಗ್ ಫೋನ್ (2) ಫೋನಿನ ಬೆಲೆಗಿಂತ ಇದು ಕಡಿಮೆ ಪ್ರೈಸ್‌ ಟ್ಯಾಗ್‌ ಅನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಇನ್ನು ಈ ಹಿಂದಿನ ನಥಿಂಗ್ ಫೋನ್ 2 ಫೀಚರ್ಸ್‌ ಕೂಡಾ ಗ್ರಾಹಕರಿಗೆ ಆಕರ್ಷಕ ಎನಿಸಿವೆ. ನಥಿಂಗ್ ಫೋನ್ 2 ಮೊಬೈಲ್ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ LTPO OLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1,080x2,412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಅಲ್ಲದೇ ಇದು ಕ್ವಾಲ್ಕಾಮ್ 4nm ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ ಪವರ್ ಹೊಂದಿದ್ದು, ಇದು ಆಂಡ್ರಾಯ್ಡ್‌ 13 ಆಧಾರಿತ ನಥಿಂಗ್ ಓಎಸ್ 2.0 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ 12GB RAM ಜೊತೆಗೆ 512GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಇದರ ಜೊತೆಗೆ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. 4,700mAh ಬ್ಯಾಟರಿಯನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಕ್ಯಾಮೆರಾ 60fps ನಲ್ಲಿ 4K, 30 ಅಥವಾ 60fps ನಲ್ಲಿ 1080p ಮತ್ತು 4K ಮತ್ತು 30fps ನಲ್ಲಿ ಲೈವ್ HDR ಅನ್ನು ಒಳಗೊಂಡಿದೆ. ಇದು 45W PPS ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Best Mobiles in India

English summary
Upcoming Nothing Phone 2a will be sold via Flipkart in India. confirmed by Company.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+