Home
ಸುದ್ದಿಜಾಲ

ಸದ್ಯ ಹೊಸ ಫೋನ್‌ ಖರೀದಿ ಮಾಡ್ತಾ ಇದ್ದೀರಾ?..ಹಾಗಿದ್ರೆ, ಅವಸರ ಮಾಡಬೇಡಿ!

ಪ್ರತಿ ತಿಂಗಳು ಮೊಬೈಲ್‌ ಮಾರುಕಟ್ಟೆಗೆ ಒಂದಿಲ್ಲೊಂದು ಕಂಪನಿ ಹೊಸದಾಗಿ ಮೊಬೈಲ್‌ ಲಾಂಚ್ ಮಾಡುತ್ತವೆ. ಅವುಗಳಲ್ಲಿ ಕಡಿಮೆ ದರದಿಂದ ಹೈ ಎಂಡ್ ಬೆಲೆಯ ಫೋನ್‌ಗಳು ಸಹ ಲಗ್ಗೆ ಇಡುತ್ತವೆ. ಆದರೆ ಗ್ರಾಹಕರು ಅವರ ಅಗತ್ಯಕ್ಕೆ ಅನುಗುಣವಾಗಿ ಫೋನ್‌ಗಳನ್ನು ಆಯ್ಕೆ ಮಾಡುತ್ತಾರೆ. ಸದ್ಯ ನೀವೇನಾದರೂ ಹೊಸ ಫೋನ್‌ ಖರೀದಿಸುವ ಪ್ಲ್ಯಾನ್‌ ಮಾಡಿದ್ರೆ, ಸ್ವಲ್ಪ ಕಾಯಿರಿ!

ಹೌದು, ಸದ್ಯ ನೀವು ಹೊಸ ಫೋನ್‌ ಖರೀದಿಸುತ್ತಿದ್ದರೇ ಸ್ವಲ್ಪ ಕಾಯುವುದು ಉತ್ತಮ. ಏಕೆಂದರೆ, ಮಾರುಕಟ್ಟೆಗೆ ಈ ತಿಂಗಳು ಕೆಲವು ಅತ್ಯುತ್ತಮ ಫೋನ್‌ಗಳು ಎಂಟ್ರಿ ಪಡೆದಿದ್ದು, ಇನ್ನು ಕೆಲವು ಲಾಂಚ್ ಆಗಲಿವೆ. ಅದರಲ್ಲಿಯೂ ಹೊಸ ಫ್ಲ್ಯಾಗ್‌ಶಿಪ್‌ ಫೋನ್‌ಗಳಂತೂ ಜಬರ್ದಸ್ತ್‌ ಫೀಚರ್ಸ್‌ಗಳನ್ನು ಒಳಗೊಂಡಿವೆ.

ಸದ್ಯ ಹೊಸ ಫೋನ್‌ ಖರೀದಿ ಮಾಡ್ತಾ ಇದ್ದೀರಾ?..ಹಾಗಿದ್ರೆ, ಅವಸರ ಮಾಡಬೇಡಿ!

ಹೈ ಎಂಡ್‌ ಫೋನ್‌ಗಳ ಜೊತೆಗೆ ಅತ್ಯುತ್ತಮ ಫೀಚರ್ಸ್‌ ಹೊಂದಿರುವ ಕೆಲವು ಬಜೆಟ್‌ ದರದ ಫೋನ್‌ಗಳು ಸಹ ಪರಿಚಯ ಆಗಿವೆ. ಹೀಗಾಗಿ ಹೊಸ ಫೋನ್‌ ಖರೀದಿಸುವ ಗ್ರಾಹಕರು ಸ್ವಲ್ಪ ಕಾಯ್ದು ಅತ್ಯುತ್ತಮ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸುವುದು ಉತ್ತಮ ಅಲ್ಲವೇ?..ಹಾಗಾದರೇ ಈ ತಿಂಗಳು ಮಾರುಕಟ್ಟೆಗೆ ಎಂಟ್ರಿ ಪಡೆದಿರುವ ಬೊಂಬಾಟ್‌ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒನ್‌ಪ್ಲಸ್‌ ಓಪೆನ್‌ ಫೋನ್‌ : ಒನ್‌ಪ್ಲಸ್‌ ಸಂಸ್ಥೆಯು ಮೊದಲ ಬಾರಿಗೆ ಫೋಲ್ಡೆಬಲ್ ಮಾದರಿಯ ಫೋನ್‌ ಲಾಂಚ್ ಮಾಡಲು ಸಜ್ಜಾಗಿದ್ದು, ಅದುವೇ ಒನ್‌ಪ್ಲಸ್‌ ಓಪೆನ್‌ ಎಂದು ಹೇಳಲಾಗಿದೆ. ಇನ್ನು ಈ ಫೋನ್‌ ಇದೇ ಆಗಷ್ಟ್ 29 ರಂದು ಲಾಂಚ್ ಆಗಲಿದೆ ಎನ್ನಲಾಗಿದೆ. ಕೆಲವು ಲೀಕ್ ಮಾಹಿತಿ ಪ್ರಕಾರ, ಈ ಫೋನ್‌ 7.8 ಇಂಚಿನ ಮೇನ್ ಡಿಸ್‌ಪ್ಲೇ ಮತ್ತು 6.3 ಇಂಚಿನ ಕವರ್ ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಈ ಎರಡೂ ಡಿಸ್‌ಪ್ಲೇಗಳು 120Hz ರಿಫ್ರೆಶ್ ರೇಟ್ ಪಡೆದಿರಲಿವೆ. ಜೊತೆಗೆ ಸ್ನ್ಯಾಪ್‌ಡ್ರಾಗನ್ 8 ಜೆನ್‌ 2 ಪ್ರೊಸೆಸರ್‌ ಇರಲಿದ್ದು, 4800mAh ಬ್ಯಾಟರಿ ಬ್ಯಾಕ್‌ಅಪ್‌ ಸಾಧ್ಯತೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 5 : ಸ್ಯಾಮ್‌ಸಂಗ್‌ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ ಈ ಫೋನ್‌ ಫೋಲ್ಡೆಬಲ್ ಮಾದರಿಯ ಫೋನ್ ಆಗಿದೆ. ಈ ಫೋನ್‌ 7.6 ಇಂಚಿನ ಇನರ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 2,176 x 1,812 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಕವರ್‌ ಡಿಸ್‌ಪ್ಲೇಯು 6.2 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಮಾದರಿಯಲ್ಲಿ ಇದೆ. ಇನ್ನು ಈ ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2SoC ಪ್ರೊಸೆಸರ್‌, ತ್ರಿವಳಿ ಕ್ಯಾಮೆರಾ ರಚನೆ ಹಾಗೂ 4,400mAh ಬ್ಯಾಟರಿ ಆಯ್ಕೆಗಳನ್ನು ಪಡೆದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್‌ 5 : ಹಾಗೆಯೇ ಸ್ಯಾಮ್‌ಸಂಗ್‌ನ ಈ ನೂತನ ಫ್ಲಿಪ್‌ ಫೋನ್‌ 2640 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ನೊಂದಿಗೆ 6.7 ಇಂಚಿನ ಡೈನಾಮಿಕ್ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಇದರೊಂದಿಗೆ ಈ ಫೋನ್ ಸ್ನಾಪ್‌ಡ್ರಾಗನ್‌ 8 ಜನ್‌ 2 ಪ್ರೊಸೆಸರ್‌ ಕಾರ್ಯವೈಖರಿ ಅನ್ನು ಪಡೆದಿದೆ. ಹಾಗೆಯೇ ತ್ರಿವಳಿ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಜೊತೆಗೆ 3,700mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ.

ಇನ್ಫಿನಿಕ್ಸ್‌ GT 10 ಪ್ರೊ ಸ್ಮಾರ್ಟ್‌ಫೋನ್‌ : ಇನ್ಫಿನಿಕ್ಸ್‌ ಸಂಸ್ಥೆಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಹೊಸ ಇನ್ಫಿನಿಕ್ಸ್‌ GT 10 ಪ್ರೊ ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಜೊತೆಗೆ ಈ ಫೋನ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 8050 SoC ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಹಾಗೆಯೇ 8GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಸೌಲಭ್ಯ ಸಹ ಪಡೆದಿದೆ.

ಹಾಗೆಯೇ ಈ ಫೋನ್‌ ತ್ರಿವಳಿ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಅದರಲ್ಲಿ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸಲ್‌ ಸೆನ್ಸಾರ್‌ ರಚನೆ ಅನ್ನು ಒಳಗೊಂಡಿದೆ. ಇದರ ಜೊತೆಗೆ ಈ ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ. ಇದರ ಹಿಂಭಾಗದ ರಚನೆ ಬಹುತೇಕ ನಥಿಂಗ್ ಫೋನ್‌ ಹೋಳಿಕೆಯಂತೆ ಕಾಣಿಸುತ್ತದೆ.

Best Mobiles in India

English summary
Upcoming Top Mobiles Launching in August 2023. phone list and specifications details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+