ಭಾರತದ ಮೊದಲ UPI-ATM ಲಾಂಚ್: ಕಾರ್ಡ್ ಇಲ್ಲದೆ ಹಣ ಡ್ರಾ ಮಾಡಬಹುದು! ವಿಡಿಯೋ ನೋಡಿ
ಭಾರತದಲ್ಲಿ ಬಹು ನಿರೀಕ್ಷಿತ ಸೌಲಭ್ಯವೊಂದು ಈಗ ಜನರಿಗೆ ಲಭ್ಯವಾಗುತ್ತಿದೆ. ಈ ಮೂಲಕ ಯಾವುದೇ ಕಾರ್ಡ್ ಬಳಕೆ ಇಲ್ಲದೆ ಹಣ ವನ್ನು ಡ್ರಾ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಇದಕ್ಕಾಗಿ ಬಳಕೆದಾರರು ಕೇವಲ ಯುಪಿಐ ಐಡಿ (UPI ID) ಯನ್ನು ಎಂಟ್ರಿ ಮಾಡಿದರೆ ಸಾಕು.
ಹೌದು, ಭಾರತದಲ್ಲಿ ಹಿಟಾಚಿ ಯುಪಿಐ ಎಟಿಎಂಗಳನ್ನು (Hitachi UPI ATM) ಮುಂಬೈನಲ್ಲಿ ಪ್ರಾರಂಭಿಸುವುದರೊಂದಿಗೆ ಕಾರ್ಡ್‌ಲೆಸ್ ಕ್ಯಾಶ್ ವ್ಯವಸ್ಥೆಗೆ ಹಸಿರು ನಿಶಾನೆ ತೋರಿಸಲಾಗಿದೆ. ಬಳಕೆದಾರರು ಡೆಬಿಟ್ ಕಾರ್ಡ್‌ನ ಬದಲಿಗೆ ತಮ್ಮ ಯುಪಿಐ ಐಡಿಯನ್ನು ಬಳಸಿಕೊಂಡು ಹಣವನ್ನು ಹಿಂಪಡೆಯಲು ಅನುವು ಈ ಎಟಿಎಂ ಅನುವು ಮಾಡಿಕೊಡುತ್ತದೆ. ಹಾಗಿದ್ರೆ, ಇದು ಹೇಗೆ ಕೆಲಸ ಮಾಡುತ್ತದೆ, ಇದರಿಂದ ಆಗುವ ಅನುಕೂಲ ಏನು? ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಇನ್ಮೇಲೆ ಡೆಬಿಟ್ ಕಾರ್ಡ್ ಅವಶ್ಯಕತೆ ಇಲ್ಲ: ಡೆಬಿಟ್ ಕಾರ್ಡ್‌ನ ಅಗತ್ಯವಿಲ್ಲದೆ ಜನರು ಹಣವನ್ನು ಹಿಂಪಡೆಯಲು ಅನುವು ಮಾಡಿಕೊಡುವ ಪರಿಹಾರವಾಗಿಯೇ ಈಗ ಹಿಟಾಚಿ ಯುಪಿ ಎಟಿಎಮ್ ಅನ್ನು ಭಾರತದಲ್ಲಿ ಪರಿಚಯಿಸಲಾಗಿದೆ. ಅಂದರೆ ಇಲ್ಲಿ ವಹಿವಾಟನ್ನು ಅಧಿಕೃತಗೊಳಿಸಲು ಬಳಕೆದಾರರು ಯುಪಿಐ ಆಪ್‌ನಲ್ಲಿ ವಿಶೇಷ ಪಿನ್ ಅನ್ನು ಎಂಟ್ರಿ ಮಾಡಬೇಕು. ಅದರ ನಂತರ ಎಟಿಎಂ ಹಣವನ್ನು ನೀಡುತ್ತದೆ.
ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಯುಪಿಐ ಎಟಿಎಂ ನಾವೀನ್ಯತೆಯು ಸಾಮಾನ್ಯ ಎಟಿಎಂಗಳ ಪ್ರವೇಶದೊಂದಿಗೆ ಸಂಯೋಜಿಸಲ್ಪಟ್ಟಿದೆ. ಈ ಮೂಲಕ ಇದಕ್ಕಾಗಿ ಬೇರೆ ಏನೂ ದೊಡ್ಡ ಕಸರತ್ತನ್ನು ಮಾಡದೆ ಸುಲಭವಾಗಿ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ಮನೆಯಲ್ಲಿ ಎಟಿಎಂ ಕಾರ್ಡ್ ಮರೆತು ಬರುವವರಿಗೆ ಅಥವಾ ವ್ಯಾಲೆಟ್ ಅನ್ನು ಬಿಟ್ಟುವರುವವರಿಗೆ ಇದು ಅತ್ಯಾನುಕೂಲ ಆಗಲಿದೆ.
ಈ ಮೆಷಿನ್ ನೋಡಲು ಥೇಟ್ ಎಟಿಎಂ ಯಂತ್ರದಂತಿದೆ ಆದರೆ ಸ್ವಲ್ಪ ವಿಭಿನ್ನ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ. ಇನ್ನು ಈ ಮೆಷಿನ್ ಅನ್ನು ಈ ಮೊದಲು ಮುಂಬೈನಲ್ಲಿ ನಡೆದ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಪರಿಚಯಿಸಲಾಗಿತ್ತು. ಹಾಗಿದ್ರೆ, ತಡ ಯಾಕೆ ಬನ್ನಿ ಈ ಎಟಿಎಮ್‌ನಲ್ಲಿಹಣವನ್ನು ಹೇಗೆ ಪಡೆದುಕೊಳ್ಳುವುದು ಎಂಬುದನ್ನು ತಿಳಿಯೋಣ.
-ನೀವು ಈ ಎಟಿಎಮ್ ಬಳಿ ಬಂದು ಮೊದಲು ಮೊತ್ತವನ್ನು ಎಂಟ್ರಿ ಮಾಡಬೇಕಿದೆ. ಇದಾದ ನಂತರದಲ್ಲಿ ನಿಮಗೆ ಎಟಿಎಮ್ ತನ್ನ ಡಿಸ್ಪ್ಲೇ ಮೇಲೆ ವಿಶೇಷ ಕೋಡ್ ಅನ್ನು ತೋರಿಸುತ್ತದೆ. ಈ ಕೋಡ್ ಅನ್ನು ಕ್ಯೂಆರ್ ಕೋಡ್ ಎಂದು ಕಡೆಯಲಾಗುತ್ತಿದ್ದು, ನೀವು ಆಯ್ಕೆ ಮಾಡಿದ ಮೊತ್ತವನ್ನು ಪ್ರತಿನಿಧಿಸುತ್ತದೆ.
- ನಂತರ ಎಟಿಎಂ ನಿಮಗೆ ಹಣವನ್ನು ನೀಡುವಂತೆ ಮಾಡಬೇಕು ಎಂದರೆ ನಿಮ್ಮ ಜೇಬಿನಿಂದ ಸ್ಮಾರ್ಟ್‌ಫೋನ್ ಅನ್ನು ತೆಗೆಯಬೇಕು. ಯುಪಿಐ ಅನ್ನು ಬೆಂಬಲಿಸುವ ಆಪ್ ಅನ್ನು ಓಪನ್ ಮಾಡಿ
ಎಟಿಎಮ್ ನ ಡಿಸ್‌ಪ್ಲೇ ಮೇಲೆ ಪ್ರದರ್ಶಿಸಲಾದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು.
- ಬಳಿಕ ಈ ವಹಿವಾಟು ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು, ನಿಮ್ಮ ಯುಪಿಐ ಆಪ್‌ನಲ್ಲಿ ವಿಶೇಷ ಪಿನ್ ಅನ್ನು ಅನ್ನು ಎಂಟ್ರಿ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ಈ ಪಿನ್ ರಹಸ್ಯ ಕೋಡ್‌ನಂತಿದ್ದು ಅದು ನಿಮಗೆ ಮಾತ್ರ ತಿಳಿದಿರಬೇಕು. ಅದನ್ನು ನಮೂದಿಸುವುದರಿಂದ ನಿಮಗೆ ಹಣವನ್ನು ನೀಡಲು ಎಟಿಎಮ್ಗೆ ಅಧಿಕಾರ ನೀಡಲಾಗುತ್ತದೆ
ಈ ವಿಷಯ ಕೇಳಿ ನಿಮ್ಮಲ್ಲಿ ಪ್ರಶ್ನೆ ಮೂಡಿರಬಹುದು. ಅದೇನೆಂದರೆ ಅನೇಕ ಬ್ಯಾಂಕುಗಳು ಭೌತಿಕ ಕಾರ್ಡ್ ಅನ್ನು ಬಳಕೆ ಮಾಡದೆಯೇ ಹಣವನ್ನು ತೆಗೆದುಕೊಳ್ಳಲು ಈಗಾಗಲೇ ಅವಕಾಶ ನೀಡಲಾಗಿದೆಯಲ್ಲಾ ಎಂದು. ಹೌದು, ಅದೇ ಕೆಲಸವನ್ನು ಈ ಯುಪಿಐ ಎಟಿಎಮ್ ಮಾಡಲಿದೆ. ಆದರೆ ಇದರಲ್ಲಿ ಗಮನಿಸಬೇಕಾದ ವ್ಯಾತ್ಯಾಸ ಏನೆಂದರೆ ಇದರಲ್ಲಿ ಕ್ಯೂಆರ್ ಕೋಡ್ ಬಳಕೆಯನ್ನು ಮಾಡಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಈ ವ್ಯವಸ್ಥೆ ಖಂಡಿತಾ ಅವಶ್ಯವಿದೆ. ಈ ಕಾರಣಕ್ಕೆ ಯುಪಿಐ ಎಟಿಎಮ್ ಬ್ಯಾಂಕಿಂಗ್‌ನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದ್ದು, ದೂರದ ಊರುಗಳಿಗೆ ಸಂಚಾರ ಮಾಡುವ ಹಾಗೂ ಮೊದಲೇ ತಿಳಿಸಿದಂತೆ ಹಣ ಹಾಕೂ ವ್ಯಾಲೆಟ್ ಮರೆತು ಬರುವ ಅದೆಷ್ಟೋ ಜನರಿಗೆ ಅನುಕೂಲ ಆಗಲಿದೆ. ಇದರೊಂದಿಗೆ ಆರ್‌ಬಿಐ ಸಹ ಈಗ ಯುಪಿಐ ಆಧಾರಿತ ಲೋನ್ ನೀಡಲು ಅನುಮತಿ ನೀಡಿದೆ. ಇದರಿಂದಾಗಿ ನಿಮ್ಮ ಬ್ಯಾಂಕ್‌ನಲ್ಲಿ ಹಣ ಖಾಲಿಯಾದಾಗ ಸುಲಭವಾಗಿ ಲೋನ್ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








