Home
ಸುದ್ದಿಜಾಲ

KSRTC ಬಸ್‌ಗಳಲ್ಲಿ ಹೊಸ ತಂತ್ರಜ್ಞಾನ.. ದುಡ್ಡಿಲ್ಲದಿದ್ರೆ ಏನಂತೆ ಸ್ಮಾರ್ಟ್‌ಫೋನ್ ಇದ್ರೆ ಸಾಕು!

ನಿತ್ಯವೂ ಎಲ್ಲಿಗಾದರೂ ಸಂಚಾರ ಮಾಡುವುದು ಇತ್ತೀಚಿನ ದಿನಗಳಲ್ಲಿ ತ್ರಾಸದಾಯಕ ಕೆಲಸ. ಅದರಲ್ಲೂ ಬೆಂಗಳೂರಂತ ಮಹಾನಗರಗಳಲ್ಲಿ ಕೆಲಸಕ್ಕಿಂತ ಹೆಚ್ಚಿನ ಸಮಯವನ್ನು ಸಂಚಾರದಲ್ಲೇ ಕಳೆಯಲಾಗುತ್ತದೆ. ಈ ನಡುವೆ ಕರ್ನಾಟಕದಾದ್ಯಂತ ಕೆಲವರು ತಮ್ಮ ಖಾಸಗಿ ವಾಹನಗಳನ್ನು ಬಳಕೆ ಮಾಡಿಕೊಂಡು ಸಂಚಾರ ಮಾಡಿದರೆ ಇನ್ನೂ ಹಲವರು ಸರ್ಕಾರದ ಸಾರಿಗೆ ವ್ಯವಸ್ಥೆಯನ್ನೇ (Government transport system) ಅವಲಂಬಿಸಿಕೊಂಡಿದ್ದಾರೆ. ಈ ನಡುವೆ ಇವರೆಲ್ಲರಿಗೂ ಶುಭಸುದ್ದಿಯೊಂದನ್ನು ನೀಡಲಾಗಿದೆ.

ಹೌದು, ಶಕ್ತಿ ಯೋಜನೆ (shakti scheme) ಜಾರಿ ಮಾಡಿದಾಗಿನಿಂದ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣ ಮಾಡುವುದು ಕಷ್ಟದ ಕೆಲಸವಾಗಿದೆ. ಯಾಕೆಂದರೆ ಅಷ್ಟೊಂದು ಜನರ ಇಕ್ಕಟ್ಟು ಬಸ್‌ನಲ್ಲಿ ಇರುತ್ತದೆ. ಅಷ್ಟೇ ಅಲ್ಲದೆ ಈ ವೇಳೆ ಚಿಲ್ಲರೆ ಇಲ್ಲ ಎಂದು ದೊಡ್ಡ ಮೊತ್ತದ ಹಣ ನೀಡಲು ಮುಂದಾದರೆ ಕೆಲವು ಕಂಡಕ್ಟರ್‌ಗಳು ತಕ್ಷಣವೇ ಬಸ್‌ ನಿಲ್ಲಿಸಿ ನಿಮ್ಮನ್ನು ಆಚೆಗೆ ಹಾಕುತ್ತಾರೆ. ಅಷ್ಟೇ ಅಲ್ಲದೆ ಬಸ್‌ ಇಳಿಯುವಾಗ ಚಿಲ್ಲರೆ ಪಡೆಯಿರಿ ಎಂದು ಹೇಳುವುದು ಸಾಮಾನ್ಯ. ಆದರೆ, ಈ ರೀತಿಯ ಸಮಸ್ಯೆ ಇನ್ಮುಂದೆ ಇರುವುದಿಲ್ಲ.

KSRTC ಬಸ್‌ಗಳಲ್ಲಿ ಹೊಸ ತಂತ್ರಜ್ಞಾನ, ದುಡ್ಡಿಲ್ಲದಿದ್ರೆ  ಏನಂತೆ...

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಚಿಲ್ಲರೆ ಸಮಸ್ಯೆಗೆ ಮುಕ್ತಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್‌ಗಳಲ್ಲಿ ಹೊಸ ಸೌಲಭ್ಯ ಸಿಗಲಿದೆ. ಅದರೆ ಈ ಮೊದಲು ಕೇವಲ ಚಿಲ್ಲರೆಗಾಗಿ ದೊಡ್ಡ ದೊಡ್ಡ ಜಗಳಗಳೇ ನಡೆದುಹೋಗಿವೆ. ಇದನ್ನೆಲ್ಲಾ ಪರಿಗಣನೆಗೆ ತೆಗೆದುಕೊಂಡಿರುವ ನಿಗಮ, ಎಲ್ಲಾ ಬಸ್‌ಗಳಲ್ಲಿ ಯುಪಿಐ ಸ್ಕ್ಯಾನ್‌ ಕೋಡ್‌ (UPI scan code) ಮೂಲಕ ಟಿಕೆಟ್‌ ಖರೀದಿಗೆ ಅವಕಾಶ ಕಲ್ಪಿಸಿಕೊಡುತ್ತಿದೆ.

ಈ ಸೌಲಭ್ಯದಿಂದಾಗಿ ನೀವು ಟಿಕೆಟ್‌ಗಾಗಿ ನಗದು ಹಣ, ಚಿಲ್ಲರೆ ಇಟ್ಟುಕೊಂಡು ಹೋಗುವ ಅಗತ್ಯವೇ ಇಲ್ಲ. ಆನ್‌ಲೈನ್‌ ಪೇಮೆಂಟ್‌ ಆಪ್‌ಗಳ (Online Payment App) ಯುಪಿಐ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ಸದ್ಯಕ್ಕೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ (North West Karnataka Road Transport Corporation) ಇದನ್ನು ಆರಂಭಿಸಲಾಗಿದ್ದು. ಕೆಲವೇ ದಿನಗಳಲ್ಲಿ ಎಲ್ಲಾ ಕಡೆ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ.

ಈ ಯುಪಿಐ ಪೇಮೆಂಟ್ ಸೌಲಭ್ಯ ಯಾಕಾಗಿ?: ಸಾಮಾನ್ಯವಾಗಿ ಈಗಾಗಲೇ ಸಾಕಷ್ಟು ಜನರು ತಮ್ಮ ಎಲ್ಲಾ ರೀತಿಯ ಆರ್ಥಿಕ ವ್ಯವಹಾರಗಳನ್ನು ಆನ್‌ಲೈನ್‌ ಮೂಲಕವೇ ಮಾಡುತ್ತಾರೆ. ಈ ವೇಳೆ ಬೇಬಿನಲ್ಲಿ ಹಣ ಇಟ್ಟುಕೊಳ್ಳುವ ಹವ್ಯಾಸ ಹಲವರಿಗೆ ಮರೆತೇ ಹೋಗಿದೆ. ಆದ್ದರಿಂದ ಈ ವ್ಯವಸ್ಥೆ ನಗದು ರಹಿತ ಪಾವತಿಗೆ ತನ್ನದೇ ಆದ ಕೊಡುಗೆ ನೀಡಲಿದ್ದು, ಈ ಮೂಲಕ ಕೆಎಸ್‌ಆರ್‌ಟಿಸಿ ಹೆಚ್ಚಿನ ಡಿಜಿಟಲ್‌ ಆಗಲಿದೆ.

ಜೊತೆಗೆ ನಿತ್ಯವೂ ಕಂಡಕ್ಟರ್‌ಗಳೊಂದಿಗೆ ನಡೆಯುವ ಜಗಳಕ್ಕೆ ಮುಕ್ತಿ ಹಾಡಬಹುದಾಗಿದೆ.ಅಂದರೆ ಚಿಲ್ಲರೆ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ಮಾಯವಾಗಲಿದೆ. ಇದು ಮಾತ್ರವಲ್ಲದೆ ಸ್ಟೇಜ್ ಬಂತು ಇನ್ನೂ ಕಂಡಕ್ಟರ್ ಟಿಕೆಟ್ ನೀಡಿಲ್ಲ, ಚೆಕಿಂಗ್‌ ಇನ್‌ಸ್ಪೆಕ್ಟೆರ್‌ ಬಂದು ದಂಡ ಹಾಕಿದರೆ ಏನು ಗತಿ ಎಂಬ ಆತಂಕ ಸಹ ಇರುವುದಿಲ್ಲ. ಇದೆಲ್ಲಕ್ಕಿಂತ ಮಿಗಿಲಾಗಿ ಆದಾಯ ಸೋರಿಕೆ ತಡೆಯುವ ಯೋಜನೆ ಸಹ ಇದರಲ್ಲಿದೆ ಎನ್ನಲಾಗಿದೆ.

ಬಿಎಂಟಿಸಿಯಲ್ಲಿ ಈಗಾಗಲೇ ಈ ಸೌಲಭ್ಯ ಇದೆ: ಇನ್ನು ಬಿಎಂಟಿಸಿಯಲ್ಲಿ ದಿನವೂ ಲಕ್ಷಾಂತರ ಜನ ಸಾರಿಗೆ ಬಸ್‌ಗಳಲ್ಲಿ ಸಂಚಾರ ಮಾಡುತ್ತಾರೆ. ಈ ಕಾರಣಕ್ಕೆ ಪ್ರಯಾಣಿಕರಿಗೆ ಅನುಕೂಲ ಆಗುವ ಹಲವಾರು ಸೌಲಭ್ಯಗಳನ್ನು ನಿಗಮ ಕಲ್ಪಿಸಿಕೊಟ್ಟಿದೆ. ಅಂದರೆ ಯುಪಿಐ ಮೂಲಕವೂ ಟಿಕೆಟ್‌ ಖರೀದಿ ಮಾಡಬಹುದು ಅಥವಾ ಆಪ್‌ ಮೂಲಕ ಪಾಸ್ ಖರೀದಿ ಮಾಡಬಹುದು. ಇದೂ ಸಹ ಬೆಂಗಳೂರಿನಲ್ಲಿ ಸಂಚರಿಸುವ ಅದೆಷ್ಟೋ ಜನರ ಸಮಸ್ಯೆಗಳಿಗೆ ಮುಕ್ತಿ ನೀಡಿದೆ.

KSRTC ಬಸ್‌ಗಳಲ್ಲಿ ಹೊಸ ತಂತ್ರಜ್ಞಾನ, ದುಡ್ಡಿಲ್ಲದಿದ್ರೆ  ಏನಂತೆ...

ಶಕ್ತಿ ಯೋಜನೆಯಿಂದ ಖಾಸಗಿ ವಾಹನಗಳಿಗೆ ನಷ್ಟ: ಈ ನಡುವೆ ಶಕ್ತಿ ಯೋಜನೆ ಬಗ್ಗೆ ಸಾರಿಗೆ ಸಚಿವ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದು, ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆ ಉದ್ಯಮಕ್ಕೆ ತೊಂದರೆಯಾಗಿರುವುದು ನಿಜ. ಅವರಿಗೆ ಯಾವುದಾದೂ ಪರಿಹಾರ ನೀಡಬೇಕು. ಈ ಬಗ್ಗೆ ನಾನು ಸಿಎಂ ಹಾಗೂ ಸಾರಿಗೆ ಸಚಿವರ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ. ಖಾಸಗಿ ಸಾರಿಗೆ ಒಕ್ಕೂಟಗಳು ಬಂದ್‌ಗೆ ಕರೆ ನೀಡಿರುವ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.

Best Mobiles in India

English summary
Traveling in KSRTC buses is a difficult task. Because money problem is very common. Meanwhile, online payment option has been given in these government buses.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+