ಉಪ್ಪಿ 2 ವನ್ನು ಉಚಿತವಾಗಿ ಡೌನ್‌ಲೋಡ್ ಮಾಡಿ: ಗೇಮ್
ಕನ್ನಡ ಚಿತ್ರೋದ್ಯಮ ಇತ್ತೀಚಿನ ದಿನಗಳಲ್ಲಿ ಟೆಕ್ ಕ್ಷೇತ್ರಕ್ಕೂ ಕಾಲಿಟ್ಟಿದೆ ಎಂಬುದರಲ್ಲಿ ಸಂದೇಹವೇ ಬೇಡ. ತೆರೆಯ ಮೇಲೆ ಸಿನಿಪ್ರಿಯರನ್ನು ರಂಜಿಸುವ ಕನ್ನಡ ಚಿತ್ರಗಳು ಇದೀಗ ಮೊಬೈಲ್‌ಗಳಲ್ಲೂ ತಮ್ಮ ಕಾರುಬಾರನ್ನು ಪ್ರದರ್ಶಿಸಹೊರಟಿವೆ. ಗೂಗಲ್ ಪ್ಲೇ ಸ್ಟೋರ್ ಮೂಲಕ ಚಿತ್ರಕ್ಕೆ ಸಂಬಂಧಿಸಿದ ಗೇಮ್ಸ್‌ಗಳನ್ನು ಪ್ರಸ್ತುತಪಡಿಸುವ ಮೂಲಕ ನಿಮ್ಮ ಬ್ಯುಸಿ ಸಮಯವನ್ನು ಇನ್ನಷ್ಟು ಆನಂದಮಯವಾಗಿಸಲಿದೆ.
ಓದಿರಿ:ಗೂಗಲ್ ಹೊಸ ಓಎಸ್ ಮಾರ್ಷ್ ಮಲ್ಲೊ ವಿಶೇಷತೆಗಳೇನು?
ಶಿವರಾಜ್‌ಕುಮಾರ್ ಅಭಿನಯದ ಓಂ ಮತ್ತು ಅಂದರ್ ಬಾಹರ್ ಚಿತ್ರಗಳು ಈಗಾಗಲೇ ಪ್ಲೇ ಸ್ಟೋರ್‌ನಲ್ಲಿ ಆಟದ ಮಾದರಿಯಲ್ಲಿ ಬಂದಿದ್ದು ಉಪೇಂದ್ರ ಅಭಿನಯದ ಲೇಟೆಸ್ಟ್ ಉಪ್ಪಿ 2 ಗೂಗಲ್ ಪ್ಲೇನಲ್ಲಿ ಅಭಿಮಾನಿ ಬಳಗದ ಪುಳಕವನ್ನು ಹೆಚ್ಚಿಸಲು ಬರುತ್ತಿದೆ. ಆಟವನ್ನು ಹೇಗೆ ಆಡುವುದು, ಅದರ ವಿಶೇಷತೆ ಕುರಿತ ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ಹಂಚಿಕೊಂಡಿರುವೆವು.

ಅಜ್ಞಾತ ಗ್ರಹ ವಲಯ
ಅಜ್ಞಾತ ಗ್ರಹ ವಲಯದಲ್ಲಿ ಉಪೇಂದ್ರ ಅವರು ಬೈಕ್ ಸವಾರರಾಗಿ ಆಗಮಿಸುತ್ತಿದ್ದು ಆಟದ ಹೈಲೈಟ್ ಆಗಿದೆ.

100 ರ ರೀಚಾರ್ಜ್
ಆಟದೊಂದಿಗೆ ಬಳಕೆದಾರರು ರೂ 100 ರ ರೀಚಾರ್ಜ್ ಅನ್ನು ಗಳಿಸಬಹುದಾಗಿದೆ.

ಅಧಿಕೃತ ಗೇಮ್
ಉಪ್ಪಿ 2 ಚಿತ್ರದ ಅಧಿಕೃತ ಗೇಮ್ ಇದಾಗಿದೆ

ಗ್ರಾಫಿಕ್ಸ್
ಇನ್ನು ಆಟದಲ್ಲಿ ಅತಿ ವೈಭವೋಪೇತ ಮತ್ತು ಶ್ರೀಮಂತ ಗ್ರಾಫಿಕ್ಸ್‌ಗಳನ್ನು ಬಳಸಲಾಗಿದೆ

ಅಜ್ಞಾತ ಗ್ರಹ
ನಿಮ್ಮನ್ನು ಅಜ್ಞಾತ ಗ್ರಹಕ್ಕೆ ಈ ಆಟ ಸೆಳೆದೊಯ್ಯುತ್ತದೆ

ಬೈಕ್ ಸ್ಟಂಟ್
ಬೈಕ್ ಸ್ಟಂಟ್ ಮತ್ತು ಅಜ್ಞಾತ ಗ್ರಹದಲ್ಲಿನ ಪ್ರವಾಸ ಆಟದಲ್ಲಿ ನಿಮಗೆ ರೋಮಾಂಚನವನ್ನುಂಟು ಮಾಡಲಿದೆ.

ಕನ್ನಡ, ತೆಲುಗು, ತಮಿಳು ಭಾಷೆ
ಮುಂದಿನ ಆವೃತ್ತಿಯಲ್ಲಿ ಕನ್ನಡ, ತೆಲುಗು, ತಮಿಳು ಭಾಷೆಗಳನ್ನು ಸೇರಿಸಲಾಗುತ್ತದೆ.

ಭಾರತೀಯ ಬಳಕೆದಾರರಿಗೆ
ಎಲ್ಲಾ ಭಾರತೀಯ ಬಳಕೆದಾರರಿಗೆ ವಿಶೇಷವಾಗಿ ಕನ್ನಡ, ತಮಿಳು ಮತ್ತು ತೆಲುಗು ಪ್ರೇಕ್ಷಕರಿಗಾಗಿ ಈ ಆಟವನ್ನು ಪ್ರಸ್ತುತಪಡಿಸಲಾಗಿದೆ.

ಪ್ರಸ್ತುತಿ ಹಾಡನ್ನು
ಉಪ್ಪಿ ಅಭಿಮಾನಿಗಳಿಗಾಗಿ ಉಪೇಂದ್ರಾ ಅವರ ವಿಶೇಷ ಪ್ರಸ್ತುತಿ ಹಾಡನ್ನು ಅಳವಡಿಸಲಾಗಿದೆ

ವಿಶೇಷ ಶಕ್ತಿಯುಳ್ಳ ಬೈಕ್
ಉಪೇಂದ್ರ ಅವರು ವಿಶೇಷ ಶಕ್ತಿಯುಳ್ಳ ಬೈಕ್‌ನಲ್ಲಿ ಸವಾರಿ ಮಾಡುತ್ತಾ ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ ಹಾರುತ್ತಾ ಸ್ಟಂಟ್‌ಗಳನ್ನು ಮಾಡುತ್ತಾ ನಿಮಗೆ ಆಟದಲ್ಲಿ ಮನರಂಜನೆಯನ್ನು ಒದಗಿಸಲಿದ್ದಾರೆ.


Click it and Unblock the Notifications








