ಗೂಗಲ್ ಹೊಸ ಓಎಸ್ ಮಾರ್ಷ್ ಮಲ್ಲೊ ವಿಶೇಷತೆಗಳೇನು?

Written By:

ಹಲವಾರು ತಿಂಗಳುಗಳ ನಿರೀಕ್ಷೆಯ ನಂತರ, ಗೂಗಲ್ ಕೊನೆಗೂ ತನ್ನ ಮೊಬೈಲ್ ಓಎಸ್‌ನ ನಂತರದ ಆವೃತ್ತಿಗೆ ಮಾರ್ಷ್ ಮಲ್ಲೊ ಎಂಬ ಹೆಸರನ್ನಿಟ್ಟಿದೆ. ಓಎಸ್‌ನ ಮುಂದಿನ ಆವೃತ್ತಿಯು ಆಂಡ್ರಾಯ್ಡ್ 5.2 ಆಗಿರದೆ ಆಂಡ್ರಾಯ್ಡ್ 6.0 ಎಂಬುದಾಗಿದೆ.

ಓದಿರಿ: ಈ ಫೋನ್‌ಗಳಿದ್ದಲ್ಲಿ ಬ್ಯಾಟರಿ ಬೇಗ ಮುಗಿಯುತ್ತದೆ ಎಂಬ ಚಿಂತೆ ಬೇಡ!!!

ಗೂಗಲ್ ಐ/ಓ 2015 ರಲ್ಲಿ ಘೋಷಣೆಯಾದ, ಆಂಡ್ರಾಯ್ಡ್ ಮಾರ್ಷ್ ಮಲ್ಲೊ ನಿಮ್ಮ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗೆ ಅಸಂಖ್ಯಾತ ಹೊಸ ಹೊಸ ಫೀಚರ್‌ಗಳನ್ನು ಪ್ರಸ್ತುತಪಡಿಸಿದೆ. ಆಂಡ್ರಾಯ್ಡ್‌ನ ಮುಂದಿನ ಆವೃತ್ತಿಯಲ್ಲಿ ಏನೆಲ್ಲಾ ಪ್ರಾಮುಖ್ಯತೆಗಳಿವೆ ಎಂಬುದನ್ನು ನೋಡಲು ಸ್ಲೈಡರ್ ಕ್ಲಿಕ್ಕಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾರ್ಷ್ ಮಲ್ಲೊ

ಮಾರ್ಷ್ ಮಲ್ಲೊ

ಗೂಗಲ್ ನೌ

ಮಾರ್ಷ್ ಮಲ್ಲೊ ಫೀಚರ್‌ನಲ್ಲಿ ಗೂಗಲ್ ನೌ ಬರಿಯ ಸ್ಪರ್ಶದಲ್ಲೇ ನಿಮ್ಮ ಬಳಿಗೆ ಬರಲಿದೆ. ಗೂಗಲ್ ನೌ ಪ್ರಸ್ತುತ ಹೆಚ್ಚಿನ ಫೋನ್‌ಗಳಲ್ಲಿ ಲಭ್ಯವಿದ್ದು, ಹುಡುಕಾಟ ಅಪ್ಲಿಕೇಶನ್ ಮೂಲಕ ಆಂಡ್ರಾಯ್ಡ್ 6.0 ಇದನ್ನು ಇನ್ನಷ್ಟು ಪ್ರಯೋಜನಕಾರಿ ಎಂದೆನಿಸಲಿದೆ.

ಆಂಡ್ರಾಯ್ಡ್ 6.0

ಆಂಡ್ರಾಯ್ಡ್ 6.0

ಕ್ರೋಮ್ ಕಸ್ಟಮ್ ಟ್ಯಾಬ್‌ಗಳು

ಆಂಡ್ರಾಯ್ಡ್ 6.0 ನೊಂದಿಗೆ ಅಪ್ಲಿಕೇಶನ್‌ನೊಳಗೆಯೇ ಕ್ರೋಮ್ ಟ್ಯಾಬ್‌ಗಳನ್ನು ಇಂಟಿಗ್ರೇಟ್ ಮಾಡಲು ನಿಮಗೆ ಸಹಾಯವನ್ನು ಮಾಡಲಿದೆ.

ಆಂಡ್ರಾಯ್ಡ್ 6.0 ಡಾಜ್

ಆಂಡ್ರಾಯ್ಡ್ 6.0 ಡಾಜ್

ಬ್ಯಾಟರಿ ದೀರ್ಘತೆ

ಆಂಡ್ರಾಯ್ಡ್ 5.0 ಗಿಂತಲೂ ಆಂಡ್ರಾಯ್ಡ್ 6.0 ಡಾಜ್ ಎರಡು ಪಟ್ಟು ಅಧಿಕ ಬ್ಯಾಟರಿ ದೀರ್ಘತೆಯನ್ನು ನಿಮ್ಮ ಫೋನ್‌ಗೆ ಒದಗಿಸಲಿದೆ.

ಫಿಂಗರ್ ಪ್ರಿಂಟ್ ಸೆನ್ಸಾರ್

ಫಿಂಗರ್ ಪ್ರಿಂಟ್ ಸೆನ್ಸಾರ್

ಫಿಂಗರ್ ಪ್ರಿಂಟ್ ಬೆಂಬಲ

ಆಂಡ್ರಾಯ್ಡ್ 6.0 ಬೆಂಬಲದೊಂದಿಗೆ ಗೂಗಲ್ ಫಿಂಗರ್ ಪ್ರಿಂಟ್ ಸೆನ್ಸಾರ್ ಬೆಂಬಲವನ್ನು ಇನ್ನಷ್ಟು ಸ್ಥಳೀಯವನ್ನಾಗಿಸಲಿದೆ. ಇನ್ನಷ್ಟು ಬಿಗಿಯಾದ ಭದ್ರತಾ ವ್ಯವಸ್ಥೆಯನ್ನು ಸ್ಮಾರ್ಟ್‌ಫೋನ್‌ಗಳಿಗೆ ಗೂಗಲ್ 6.0 ನೊಂದಿಗೆ ತಂದಿದೆ.

ಚಾರ್ಜಿಂಗ್ ಪ್ರಗತಿ

ಚಾರ್ಜಿಂಗ್ ಪ್ರಗತಿ

ಯುಎಸ್‌ಬಿ ವಿಧ ಸಿ ಮತ್ತು ವೇಗದ ಚಾರ್ಜಿಂಗ್

ಹೊಸ ಯುಎಸ್‌ಬಿ ವಿಧವು ಬಳಕೆದಾರರಿಗೆ ಎಲ್ಲಾ ವಿಧವಾದ ಅನುಕೂಲವನ್ನು ಒದಗಿಸಲಿದೆ. ಇನ್ನಷ್ಟು ವೇಗವಾಗಿ ಫೋನ್‌ಗೆ ಚಾರ್ಜಿಂಗ್ ಪ್ರಗತಿಯನ್ನು ಈ ಯುಎಸ್‌ಬಿ ಒದಗಿಸಲಿದೆ.

ಮಾರ್ಷ್ ಮಲ್ಲೊ

ಮಾರ್ಷ್ ಮಲ್ಲೊ

ಅಪ್ಲಿಕೇಶನ್ ಅನುಮತಿಗಳು

ಆಂಡ್ರಾಯ್ಡ್ 6.0 ನೊಂದಿಗೆ ಅಪ್ಲಿಕೇಶನ್ ಅನುಮತಿಗಳನ್ನು ಗೂಗಲ್ ರೀಬೂಟ್ ಮಾಡಿದೆ. ಅಪ್ಲಿಕೇಶನ್ ಅಪ್‌ಡೇಟ್ ಆದ ಸಂದರ್ಭದಲ್ಲಿ ಅನುಮತಿಗಳನ್ನು ಸ್ವೀಕರಿಸುವುದು ಮತ್ತು ನಿರಾಕರಿಸುವುದನ್ನು ಮಾರ್ಷ್ ಮಲ್ಲೊ ಬಳಕೆದಾರರಿಗೆ ಒದಗಿಸಲಿದೆ.

ಎನ್‌ಎಫ್‌ಸಿ ಆಧಾರಿತ ಪಾವತಿ ವ್ಯವಸ್ಥೆ

ಎನ್‌ಎಫ್‌ಸಿ ಆಧಾರಿತ ಪಾವತಿ ವ್ಯವಸ್ಥೆ

ಆಂಡ್ರಾಯ್ಡ್ ಪೇ

ಎನ್‌ಎಫ್‌ಸಿ ಆಧಾರಿತ ಪಾವತಿ ವ್ಯವಸ್ಥೆಯನ್ನು ಮಾರ್ಷ್ ಮಲ್ಲೊ ಬಳಕೆದಾರರಿಗೆ ತಂದಿದ್ದು ಆಪಲ್ ಪೇ ಮತ್ತು ಸ್ಯಾಮ್‌ಸಂಗ್ ಪೇಗೆ ಇದು ಸ್ಪರ್ಧೆಯನ್ನು ಒಡ್ಡಲಿದೆ.

ಡೈರೆಕ್ಟ್ ಶೇರ್

ಡೈರೆಕ್ಟ್ ಶೇರ್

ನೇರ ಹಂಚಿಕೆ

ಡೈರೆಕ್ಟ್ ಶೇರ್ ಎಂಬ ಫೀಚರ್‌ನೊಂದಿಗೆ ಆಂಡ್ರಾಯ್ಡ್ 6.0 ಬಳಕೆದಾರರಿಗೆ ಇನ್ನಷ್ಟು ನೆಚ್ಚಿನದ್ದಾಗಲಿದೆ. ಕೇವಲ ಒಂದೇ ಕ್ಲಿಕ್‌ನೊಂದಿಗೆ ನಿರ್ದಿಷ್ಟ ಅನುಮತಿಗಳನ್ನು ವಿಷಯವನ್ನು ಹಂಚಲು ಅನುಮತಿಸುತ್ತದೆ.

ಗೂಗಲ್ ಬೂಟ್ ಅನಿಮೇಶನ್‌

ಗೂಗಲ್ ಬೂಟ್ ಅನಿಮೇಶನ್‌

ಹೊಸ ಬೂಟ್ ಅನಿಮೇಶನ್

ಆಂಡ್ರಾಯ್ಡ್ 6.0 ಮಾರ್ಷ್ ಮಲ್ಲೊನೊಂದಿಗೆ ಗೂಗಲ್ ಬೂಟ್ ಅನಿಮೇಶನ್‌ನಲ್ಲಿ ಹೊಸ ಮಾರ್ಪಾಡುಗಳನ್ನು ತರುತ್ತಿದೆ.

ಟಾಗಲ್ಸ್

ಟಾಗಲ್ಸ್

ಕಸ್ಟಮೈಸ್ ಮಾಡಬಹುದಾದ ಟಾಗಲ್ಸ್

6.0 ಬಳಕೆದಾರರು ಟಾಗಲ್‌ಗಳನ್ನು ಅತಿ ಸರಳವಾಗಿ ಕಸ್ಟಮೈಸ್ ಮಾಡಬಹುದಾಗಿದ್ದು ಆಂಡ್ರಾಯ್ಡ್ 6.0 ರನ್ ಆಗುವ ನೆಕ್ಸಸ್ ಡಿವೈಸ್‌ಗಳು ಮತ್ತು ಇತರೆ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಸಾಧ್ಯವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Announced at Google I/O 2015, Android Marshmallow brings with it a number of new features to spruce up your smartphones and tablets (provided they get the update). Here we take a look at 10 of the features you can look forward to with the next build of Android.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot