ಅರ್ಬನ್ ಫಿಟ್ Z ಸ್ಮಾರ್ಟ್‌ವಾಚ್ ಲಾಂಚ್; ಬೊಂಬಾಟ್ ಫೀಚರ್ಸ್!
ಸ್ಮಾರ್ಟ್‌ವಾಚ್‌ಗಳಲ್ಲಿ ಈಗಾಗಲೇ ವಿವಿಧ ರೀತಿಯ ಹಲವಾರು ಬ್ರ್ಯಾಂಡ್‌ನ ವಾಚ್‌ಗಳು ಮಾರುಕಟ್ಟೆಯಲ್ಲಿ ತಮ್ಮದೇ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಹಾಗೆಯೇ ವಿವಿಧ ಬೆಲೆಯಲ್ಲಿ ಲಭ್ಯವಾಗುವ ವಾಚ್‌ಗಳು ಬೆಲೆಗೆ ತಕ್ಕ ಫೀಚರ್ಸ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಇದರ ನಡುವೆ ಈಗ ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ಸ್ ತಯಾರಿಕಾ ಕಂಪೆನಿಯಾದ ಅರ್ಬನ್ ಹೊಸ ಸ್ಮಾರ್ಟ್‌ವಾಚ್ ಅನ್ನು ಅನಾವರಣ ಮಾಡಿದೆ.

ಹೌದು, ಅರ್ಬನ್ ಸಂಸ್ಥೆಯ ಅರ್ಬನ್ ಫಿಟ್ Z ಸ್ಮಾರ್ಟ್‌ವಾಚ್ (Urban Fit Z Smartwatch) ಅನ್ನು ಭಾರತದಲ್ಲಿ ಅನಾವರಣ ಮಾಡಲಾಗಿದ್ದು, ಈ ವಾಚ್ ಬಜೆಟ್ ಬೆಲೆಯಲ್ಲಿ ಲಭ್ಯವಾಗುತ್ತಿದ್ದು, ಇನ್ನು ಈ ವಾಚ್ ಫೈರ್ ಬೋಲ್ಟ್ ಕ್ವಾಂಟಮ್, ಅಮಾಜ್‌ಫಿಟ್ ಜಿಟಿಎಸ್ 4, ಪೆಬಲ್ ಕಾಸ್ಮೊಸ್ ಎಂಗೇಜ್ ಸೇರಿದಂತೆ ಈ ವರ್ಗದ ವಾಚ್‌ಗಳ ಜೊತೆ ಸ್ಪರ್ಧಿಸಲಿದೆ ಎನ್ನಲಾಗಿದೆ. ಅದರಂತೆ ಈ ವಾಚ್‌ನಲ್ಲಿನ 60 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್ ಆಯ್ಕೆ, ಬ್ಲೂಟೂತ್ ಕಾಲ್ ಫೀಚರ್ಸ್ ಬಳಕೆದಾರರಿಗೆ ಖಂಡಿತಾ ಇಷ್ಟವಾಗಲಿವೆ. ಹಾಗಿದ್ರೆ, ಈ ವಾಚ್‌ನ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಷ್ಟೆಂದು ತಿಳಿಯಿರಿ.
ಅರ್ಬನ್ ಫಿಟ್ Z ಸ್ಮಾರ್ಟ್‌ವಾಚ್ ಡಿಸ್‌ಪ್ಲೇ ವಿವರ
ಅರ್ಬನ್ ಫಿಟ್ Z ಸ್ಮಾರ್ಟ್‌ವಾಚ್ 1.4 ಇಂಚಿನ ಸೂಪರ್ ಅಮೋಲೆಡ್ ಫ್ಲೂಯಿಡ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಆಲ್‌ವೇಸ್ ಆನ್ ಡಿಸ್‌ಪ್ಲೇ (AOD) ಫೀಚರ್ಸ್ ಪಡೆದುಕೊಂಡಿದೆ. ಜೊತೆಗೆ ಈ ಡಿಸ್‌ಪ್ಲೇ ಆಂಟಿ-ಗ್ಲೇರ್ ಆಗಿದೆ.
ಅರ್ಬನ್ ಫಿಟ್ Z ಸ್ಮಾರ್ಟ್‌ವಾಚ್ ಪ್ರಮುಖ ಫೀಚರ್ಸ್
ಇನ್ನುಳಿದಂತೆ ಅತ್ಯಾಕರ್ಷಕ ನೋಟದೊಂದಿಗೆ ಅಗತ್ಯ ಫೀಚರ್ಸ್‌ಗಳನ್ನು ಹೊಂದಿರುವ ಈ ವಾಚ್ 100 ಕ್ಕೂ ಹೆಚ್ಚು ವಾಚ್ ಫೇಸ್ ಆಯ್ಕೆ ಹೊಂದಿದ್ದು, 24×7 ಹೃದಯ ಬಡಿತ ಟ್ರ್ಯಾಕಿಂಗ್, SpO2 ಮಾನಿಟರಿಂಗ್, ರಕ್ತದೊತ್ತಡ ಟ್ರ್ಯಾಕಿಂಗ್‌ಗಾಗಿ ಡ್ಯುಯಲ್ ಸೆನ್ಸರ್ ಜೊತೆಗೆ ರಿಯಲ್‌ಟೆಕ್ ಚಿಪ್‌ಸೆಟ್ ಅನ್ನು ಸಹ ಇದು ಪಡೆದುಕೊಂಡಿದೆ.

ಇದಿಷ್ಟೇ ಅಲ್ಲದೆ, ಅರ್ಬನ್ ಫಿಟ್ Z ದೈಹಿಕ ಚಟುವಟಿಕೆಗಳ ಮೇಲೆ ನಿಗಾ ಇರಿಸಲಿದ್ದು, 60 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್ ಗಳ ಮೂಲಕ ಬಳಕೆದಾರರಿಗೆ ಅಗತ್ಯ ಮಾಹಿತಿಗಳನ್ನು ನೀಡುತ್ತದೆ. ಜೊತೆಗೆ ಈ ವಾಚ್ ಬ್ಲೂಟೂತ್ ಕರೆ ಫೀಚರ್ಸ್ ಪಡೆದುಕೊಂಡಿದ್ದು, ಇದಕ್ಕಾಗಿ ಇನ್‌ಬಿಲ್ಟ್ ಮೈಕ್ರೊಫೋನ್ ಮತ್ತು ಸ್ಪೀಕರ್ ಆಯ್ಕೆಯನ್ನು ಒದಗಿಸಲಾಗಿದೆ. ಈ ವಾಚ್‌ವಿಷಯದಲ್ಲಿ ಪ್ರಮುಖ ಆಸಕ್ತಿದಾಯಕ ಫೀಚರ್ಸ್ ಎಂದರೆ ಇಯರ್‌ಬಡ್ಸ್ ಅನ್ನು ವಾಚ್‌ನೊಂದಿಗೆ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿನ ಇನ್‌ಬಿಲ್ಟ್ ಸ್ಟೋರೇಜ್ ನಲ್ಲಿ ಮ್ಯೂಸಿಕ್ ಸ್ಟೋರ್ ಮಾಡಲು ಅನುವು ಮಾಡಿಕೊಡುತ್ತದೆ.

ಅರ್ಬನ್ ಫಿಟ್ Z ಸ್ಮಾರ್ಟ್‌ವಾಚ್ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ
ಅರ್ಬನ್ ಫಿಟ್ Z ಸ್ಮಾರ್ಟ್‌ವಾಚ್ 10 ದಿನಗಳ ಬ್ಯಾಟರಿ ಬ್ಯಾಕಪ್ ಹೊಂದಿದ್ದು, ಇದಕ್ಕಾಗಿ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನುಳಿದಂತೆ ಈ ವಾಚ್ ಅಲಾರಾಂ ಗಡಿಯಾರ, ನೀರು ಕುಡಿಯುವ ಜ್ಞಾಪನೆ, ಹವಾಮಾನ ನವೀಕರಣಗಳು, ಟೈಮರ್ ಮತ್ತು ಇನ್ನೂ ಹೆಚ್ಚಿನ ಸೌಲಭ್ಯವನ್ನು ಬಳಕೆದಾರರಿಗೆ ನೀಡುತ್ತದೆ. ಅದರಲ್ಲೂ ನೀರು ಮತ್ತು ಬೆವರು ಪ್ರತಿರೋಧಕ್ಕಾಗಿ IP67 ರೇಟಿಂಗ್‌ನೊಂದಿಗೆ ಪ್ಯಾಕ್ ಆಗಿದೆ.
ಅರ್ಬನ್ ಫಿಟ್ Z ಸ್ಮಾರ್ಟ್‌ವಾಚ್ ಬೆಲೆ ಹಾಗೂ ಲಭ್ಯತೆ
ಅರ್ಬನ್ ಫಿಟ್ Z ಸ್ಮಾರ್ಟ್‌ವಾಚ್‌ಗೆ ಭಾರತದಲ್ಲಿ 5,999ರೂ. ಗಳ ಬೆಲೆ ನಿಗದಿ ಮಾಡಲಾಗಿದ್ದು, ಅಮೆಜಾನ್, ಫ್ಲಿಪ್‌ಕಾರ್ಟ್ ಹಾಗೂ ಅರ್ಬನ್ ಕಂಪೆನಿಯ ಸೈಟ್ ಮೂಲಕ ನೇರವಾಗಿ ಖರೀದಿ ಮಾಡಬಹುದು. ಜೊತೆಗೆ ಕೆಲವು ಆಫ್‌ಲೈನ್ ಸ್ಟೋರ್ ಮೂಲಕವೂ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ಈ ವಾಚ್ ಎರಡು ವೇರಿಯಂಟ್‌ನಲ್ಲಿ ಲಭ್ಯವಾಗಲಿದ್ದು, ಕಪ್ಪು ಸಿಲಿಕೋನ್ ಸ್ಟ್ರಾಪ್ + ಬ್ರೌನ್ ಚರ್ಮದ ಪಟ್ಟಿ (ಕಪ್ಪು ಡಯಲ್) ಹಾಗೂ ಗ್ರೇ ಸಿಲಿಕೋನ್ ಸ್ಟ್ರಾಪ್ + ಬ್ಲ್ಯಾಕ್ ಚರ್ಮದ ಪಟ್ಟಿ (ಗನ್ಮೆಟಲ್ ಗ್ರೇ ಡಯಲ್) ಆಕರ್ಷಕ ಎನಿಸಿವೆ.


Click it and Unblock the Notifications








