URBAN: ಅರ್ಬನ್ ವೇವ್ ಥ್ರೀ, ಅರ್ಬನ್ ನೋವಾ ಸ್ಮಾರ್ಟ್‌ವಾಚ್ ಲಾಂಚ್; ಸಖತ್ ಫೀಚರ್ಸ್!
ಅರ್ಬನ್ ಕಂಪೆನಿ (Urban Company) ಭಾರತದಲ್ಲಿ ಈಗಾಗಲೇ ಸಾಕಷ್ಟು ಸ್ಮಾರ್ಟ್ ಧರಿಸಬಹುದಾದ ಹಾಗೂ ಇತರೆ ಸ್ಮಾರ್ಟ್ ಡಿವೈಸ್‌ಗಳನ್ನು ಅಗ್ಗದ ದರದಲ್ಲಿ ಲಾಂಚ್ ಮಾಡಿದೆ. ಈ ನಡುವೆ ಭಾರತದಲ್ಲಿ ಎರಡು ವಿಶೇಷ ಸ್ಮಾರ್ಟ್‌ವಾಚ್(Smartwatch) ಅನ್ನು ಲಾಂಚ್ ಮಾಡುವ ಮೂಲಕ ಭಾರತೀಯ ಗ್ರಾಹಕರನ್ನು ತಿರುಗಿ ನೋಡುವಂತೆ ಮಾಡಿದೆ.
ಹೌದು, ಅರ್ಬನ್ ಇದೀಗ ಹಬ್ಬದ ಸೀಸನ್‌ಗಾಗಿ ಅರ್ಬನ್ ವೇವ್ ಥ್ರೀ (URBAN Wave Three) ಮತ್ತು ಅರ್ಬನ್ ನೋವಾ (URBAN Nova) ವಾಚ್ ಅನ್ನು ಲಾಂಚ್ ಮಾಡಿದೆ. ಗಮನಿಸಬೇಕಾದ ವಿಷಯ ಏನೆಂದರೆ ಕಳೆದ ತಿಂಗಳಷ್ಟೇ ಅರ್ಬನ್ ಕ್ವೆಸ್ಟ್ (URBAN Quest) ಸ್ಮಾರ್ಟ್‌ವಾಚ್ ಅನ್ನು ಲಾಂಚ್ ಮಾಡಿ ಬಹಳ ಸದ್ದು ಮಾಡಿತ್ತು. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ಗಳ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇವುಗಳ ಬೆಲೆ ಎಷ್ಟು ಎಂದು ತಿಳಿದುಕೊಳ್ಳಿ.

ಅರ್ಬನ್ ವೇವ್ ಥ್ರೀ ಫೀಚರ್ಸ್: ಈ ಸ್ಮಾರ್ಟ್‌ವಾಚ್ 1.91 ಇಂಚಿನ ಐಪಿಎಸ್ ಡಿಸ್‌ಪ್ಲೇ (IPS display) ಹೊಂದಿದ್ದು, ಕಪ್ಪು ಮತ್ತು ಟೈಟಾನಿಯಂ ಬೂದು ಬಣ್ಣದಲ್ಲಿ ನಯವಾದ ವಿನ್ಯಾಸವನ್ನು ಹೊಂದಿದೆ. ಇದು ಮೂರು ಪಟ್ಟಿಗಳನ್ನು ಹೊಂದಿದ್ದು, ಅದರಲ್ಲಿ ಮೆಟಲ್, ಪಿಯು ಲೆದರ್ ಮತ್ತು ನಿಮ್ಮ ಶೈಲಿಗೆ ಹೊಂದಿಸಲು ಪ್ರೀಮಿಯಂ ಸಿಲಿಕೋನ್ ಆಯ್ಕೆ ನೀಡಲಾಗಿದೆ.
ಇದರೊಂದಿಗೆ ಈ ಸ್ಮಾರ್ಟ್‌ವಾಚ್ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಮೇಲ್ವಿಚಾರಣೆ ಮಾಡಲಿದ್ದು, ಇದಕ್ಕಾಗಿ ಸುಧಾರಿತ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಬ್ಲೂಟೂತ್ ಆವೃತ್ತಿ v5.1 ಯಲ್ಲಿ ಈ ವಾಚ್ ಕಾರ್ಯನಿರ್ವಹಿಸಲಿದ್ದು, 10 ಮೀಟರ್‌ಗಳವರೆಗಿನ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಬ್ಲೂಟೂತ್ ಕಾಲಿಂಕ್ ಫೀಚರ್ಸ್ ಪಡೆದಿದೆ.
ಜೊತೆಗೆ ಸ್ಪ್ಲಿಟ್-ಸ್ಕ್ರೀನ್ (split-screen) ಆಯ್ಕೆಯನ್ನೂ ಸಹ ಈ ವಾಚ್‌ನಲ್ಲಿ ನೀಡಲಾಗಿದ್ದು, ಈ ಮೂಲಕ ಬಹುಕಾರ್ಯಗಳನ್ನು ಮಾಡಬಹುದಾಗಿದೆ. ಇದಿಷ್ಟೇ ಅಲ್ಲದೆ ಟ್ರ್ಯಾಕಿಂಗ್ ವರ್ಕ್ಔಟ್‌ಗಳಿಗಾಗಿ ಬಹು ಸ್ಪೋರ್ಟ್ ಮೋಡ್‌ಗಳನ್ನು ಹೊಂದಿದ್ದು, ಈ ಮೂಲಕ ಬಳಕೆದಾರರು ಉತ್ತಮ ಆರೋಗ್ಯ ಹೊಂದಬಹುದಾಗಿದೆ.
ಅರ್ಬನ್ ನೋವಾ: ಈ ವಾಚ್ (Urban Nova) ಸೊಗಸಾದ ಲೋಹದ ಕವಚವನ್ನು ಹೊಂದಿದ್ದು, ವಿವಿಧ ಬಣ್ಣಗಳಲ್ಲಿ ಇದು ಕಾಣಿಸಿಕೊಂಡಿದೆ. ಜೊತೆಗೆ ವೈಯಕ್ತೀಕರಣಕ್ಕಾಗಿ 9 ಡಿಸೈನರ್ ಸ್ಟ್ರಾಪ್ ಆಯ್ಕೆಯನ್ನೂ ಸಹ ಹೊಂದಿದ್ದು, 1.86 ಇಂಚಿನ ಡಿಸ್‌ಪ್ಲೇ ಮೂಲಕ ಬಳಕೆದಾರರಿಗೆ ವಿಶೇಷ ಅನುಭವ ನೀಡಲಿದೆ.
ಇನ್ನು ಇದರ ಕಾರ್ಯಗಳ ಬಗ್ಗೆ ತಿಳಿಯುವುದಾದರೆ ಈ ವಾಚ್ ಹೃದಯ ಬಡಿತ, ರಕ್ತದೊತ್ತಡ ಮತ್ತು ದೈನಂದಿನ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುತ್ತದೆ. ಇದರೊಂದಿಗೆ ಬ್ಲೂಟೂತ್ ಕಾಲ್ ಫೀಚರ್ಸ್ ಸಹ ಇದ್ದು, ಫೋನ್ ಕರೆಗಳನ್ನು ಮಾಡಬಹುದು ಅಥವಾ ಸ್ವೀಕಾರ ಮಾಡಬಹುದಾಗಿದೆ. ಇದರೊಂದಿಗೆ ಮಲ್ಟಿ ವಾಚ್ ಫೇಸ್‌ಗಳು ಮತ್ತು ಕ್ರೌನ್ ಬಟನ್ ಆಯ್ಕೆ ಹೊಂದಿದ್ದು, ನಿಮಗೆ ಖಂಡಿತಾ ಇಷ್ಟವಾಗಲಿದೆ.
ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್ ಸುಲಭ ನ್ಯಾವಿಗೇಷನ್‌ಗಾಗಿ ಎಐ ವಾಯ್ಸ್ ಅಸಿಸ್ಟೆಂಟ್‌ನಂತರ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಗ್ರಾಹಕೀಯಗೊಳಿಸಬಹುದಾದ ಫೀಚರ್ಸ್ ಆಯ್ಕೆ ಇದರಲ್ಲಿದ್ದು, ವಾಚ್ ಅನ್ನು ನಿಮ್ಮಷ್ಟದ ಹಾಗೆ ಬಳಕೆ ಮಾಡಬಹುದಾಗಿದೆ. ಅದರಂತೆ ವಿವಿಧ ರೀತಿಯ ಫಿಟ್‌ನೆಸ್ ಆಯ್ಕೆ ಪಡೆದಿದ್ದು, ಈ ಮೂಲಕ ಆರೋಗ್ಯ ಮಾಹಿತಿ ಪಡೆದುಕೊಳ್ಳಬಹುದು.
ಅರ್ಬನ್ ವೇವ್ ಥ್ರೀ ಹಾಗೂ ಅರ್ಬನ್ ನೋವಾ ಬೆಲೆ- ಲಭ್ಯತೆ: ಅರ್ಬನ್ ವೇವ್ ಥ್ರೀ ಅನ್ನು ಪ್ರೀಮಿಯಂ ಗಿಫ್ಟ್ ಪ್ಯಾಕ್ ಜೊತೆಗೆ 2,499ರೂ.ಗಳ ಬೆಲೆಗೆ ಪರಿಚಯಿಸಲಾಗಿದೆ. ಈ ವಾಚ್ ಎರಡು ಬ್ಲ್ಯಾಕ್ ಮೆಟಲ್, ಗ್ರೇ ಸಿಲಿಕೋನ್ ಮತ್ತು ಬ್ರೌನ್ ಪಿಯು ಲೆದರ್ ಪಟ್ಟಿಗಳೊಂದಿಗೆ ಮ್ಯಾಟ್ ಬ್ಲ್ಯಾಕ್, ಟೈಟಾನಿಯಂ ಮೆಟಲ್, ಬ್ಲೂ ಸಿಲಿಕೋನ್ ಮತ್ತು ಬ್ಲ್ಯಾಕ್ ಪಿಯು ಲೆದರ್ ಪಟ್ಟಿಗಳೊಂದಿಗೆ ಲಭ್ಯ ಇದೆ.

ಅರ್ಬನ್ ನೋವಾ ಸ್ಮಾರ್ಟ್‌ವಾಚ್‌ಗೆ 1,799ರೂ.ಗಳನ್ನು ನಿಗದಿ ಮಾಡಲಾಗಿದೆ. ಈ ಸ್ಮಾರ್ಟ್‌ವಾಚ್ ಫಿಯರಿ ಆರೆಂಜ್, ಸ್ಟೀಲ್ ಗ್ರೇ, ಟ್ವಿಲೈಟ್ ಪರ್ಪಲ್, ಫಾರೆಸ್ಟ್ ಗ್ರೀನ್, ಇಂಡಿಗೋ ಬ್ಲೂ, ಕೋಬಾಲ್ಟ್ ಬ್ಲೂ, ಸನ್‌ಶೈನ್ ಯೆಲ್ಲೋ, ಸ್ಟಾರ್‌ಲೈಟ್ ಬೀಜ್ ಮತ್ತು ಜೆಟ್ ಬ್ಲ್ಯಾಕ್ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ನೀವು ಈ ಸ್ಮಾರ್ಟ್‌ವಾಚ್‌ಗಳನ್ನು ಕಂಪನಿಯ ಅಧಿಕೃತ ವೆಬ್‌ಸೈಟ್ ಹಾಗೂ ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ರಿಟೇಲರ್ ಸ್ಟೋರ್ ಮೂಲಕ ಖರೀದಿ ಮಾಡಬಹುದು.


Click it and Unblock the Notifications








