Home
ಸುದ್ದಿಜಾಲ

60 ದಶಲಕ್ಷ ಜನರ ವೈಯಕ್ತಿಕ ಮಾಹಿತಿ ಹ್ಯಾಕಿಂಗ್ : ಎಚ್ಚರ!!..

By Suneel

ಗಿಜ್‌ಬಾಟ್‌ ಇಂದು ಕಂಪ್ಯೂಟರ್‌ ಹಾಗೂ ಮೊಬೈಲ್‌ ಬಳಸುವ ಎಲ್ಲಾ ಟೆಕ್‌ ಪ್ರಿಯರಿಗೂ ಸಹ ಹ್ಯಾಕಿಂಗ್‌ಗೆ ಸಂಬಂಧಿಸಿದ ಒಂದು ಆಶ್ಚರ್ಯಕರ ಮಾಹಿತಿ ನೀಡುತ್ತಿದೆ. ಅಮೇರಿಕ ದೇಶವು ಮೂವರು ಹ್ಯಾಕರ್‌ಗಳನ್ನು ಬಂಧಿಸಿದೆ. ಈ ಮೂವರು ಪುರುಷರು ಸಹ 60 ದಶಲಕ್ಷ ಜನರ ವಯಕ್ತಿಕ ಮಾಹಿತಿಯನ್ನು ಹ್ಯಾಕ್‌ ಮಾಡುವ ಬೃಹತ್‌ ಯೋಜನೆಯನ್ನು ಕೈಗೊಂಡಿದ್ದರು. ಹಾಗೂ ಈಗಾಗಲೇ $2 ದಶಲಕ್ಷ ಹಣವನ್ನು ಅಕ್ರಮವಾಗಿ ಸಂಪಾದನೆ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗಾಗಿ ನೀಡಲಾಗಿದೆ.

ಓದಿರಿ:ಭಯೋತ್ಪಾದಕರಿಂದ ಬ್ಯಾಂಕ್‌ ಖಾತೆ ಹ್ಯಾಕ್‌: ಎಚ್ಚರ

ಕಂಪ್ಯೂಟರ್‌ ಹಾಗೂ ಮೊಬೈಲ್‌ನಲ್ಲಿ ಬ್ಯಾಕಿಂಗ್‌ ಸೇವೆ ಬಳಸುವ ಎಲ್ಲಾ ಟೆಕ್‌ ಪ್ರಿಯರು ಸಹ ಹ್ಯಾಕರ್‌ಗಳಿಂದ ಆಗುವ ಸಮಸ್ಯೆಯಿಂದ ಪಾರಾಗಲು ಗಿಜ್‌ಬಾಟ್‌ನಲ್ಲಿ ಹ್ಯಾಕಿಂಗ್‌ಗೆ ಸಂಬಂಧಿಸಿದ ಎಲ್ಲಾ ಲೇಖನಗಳನ್ನು ಸರ್ಚ್‌ ಮಾಡಿ ಮಾಹಿತಿ ತಿಳಿಯಿರಿ.

ಹ್ಯಾಕಿಂಗ್‌ ಯೋಜನೆಯಲ್ಲಿ ತೊಡಗಿದ್ದವರ ಬಂಧನ

ಹ್ಯಾಕಿಂಗ್‌ ಯೋಜನೆಯಲ್ಲಿ ತೊಡಗಿದ್ದವರ ಬಂಧನ

60 ದಶಲಕ್ಷ ಜನರನ್ನು ಹ್ಯಾಕ್‌ ಮಾಡುವ ಉದ್ದೇಶ ಹೊಂದಿದ್ದ, ಹ್ಯಾಕಿಂಗ್‌ ಯೋಜನೆಯಲ್ಲಿ ತೊಡಗಿದ್ದ ಮೂವರು ಪುರಷರನ್ನು ಅಮೇರಿಕ ಬಂಧಿಸಿದೆ.

ವಯಕ್ತಿಕ ಮಾಹಿತಿ ಹ್ಯಾಕಿಂಗ್‌

ವಯಕ್ತಿಕ ಮಾಹಿತಿ ಹ್ಯಾಕಿಂಗ್‌

ಬಂಧನಕ್ಕೆ ಒಳಗಾದ ಮೂವರು ಪುರುಷರು ಸಹ 60 ದಶಲಕ್ಷ ಜನರ ವಯಕ್ತಿಕ ಮಾಹಿತಿ ಹ್ಯಾಕ್‌ ಮಾಡುವ ಯೋಜನೆಯಲ್ಲಿ ತೊಡಗಿದ್ದು, ಹ್ಯಾಕಿಂಗ್‌ಗೆ ಕಾಮ್‌ಕಾಸ್ಟ್‌ ಗ್ರಾಹಕರು ಸಹ ಒಳಗಗಾಗಿದ್ದಾರೆ ಎಂದು ಅಮೇರಿಕ ಪ್ರಾಸಿಕ್ಯೂಟರು ಘೋಷಿಸಿದ್ದಾರೆ.

ಬಂಧನಕ್ಕೆ ಒಳಗಾದವರು

ಬಂಧನಕ್ಕೆ ಒಳಗಾದವರು

ಹ್ಯಾಕಿಂಗ್ ದೋಷಾರೋಪಣೆಯಡಿಯಲ್ಲಿ ತಿಮೋತಿ ಲಿವಿಂಗ್ಸ್ಟನ್, 30, ಟೊಮಾಸ್ಜ್ ಖೀಲಾರ್ಜ್‌, 32, ಮತ್ತು ಡೆವಿನ್ ಮ್ಯಾಕ್ಆರ್ಥರ್, 27 ಇವರುಗಳನ್ನು ಇತರ ಅಪರಾಧಗಳ ಅಡಿಯಲ್ಲಿಯೂ ಸಹ ಬಂಧಿಸಿದ್ದು, ನ್ಯೂಜರ್ಸಿ ಫೆಡರಲ್‌ ನ್ಯಾಯಾಲಯದ ವ್ಯಾಪ್ತಿಯಲ್ಲಿ ದೋಷಾರೋಪಣೆಯನ್ನು ಸಲ್ಲಿಸಲಾಗಿದೆ.

 ತಿಮೋತಿ ಲಿವಿಂಗ್ಸ್ಟನ್ -ಕಂಪ್ಯೂಟರ್‌ ಹ್ಯಾಕಿಂಗ್  ಗುಂಪಿನ ನಾಯಕ

ತಿಮೋತಿ ಲಿವಿಂಗ್ಸ್ಟನ್ -ಕಂಪ್ಯೂಟರ್‌ ಹ್ಯಾಕಿಂಗ್ ಗುಂಪಿನ ನಾಯಕ

ಲಿವಿಂಗ್ಸ್ಟನ್‌ ಫ್ಲೊರಿಡಾ ನಿವಾಸಿಯಾಗಿದ್ದು, ಈತನು ಹ್ಯಾಕಿಂಗ್ ಗುಂಪಿನ ನಾಯಕ. ಹಲವು ಕಂಪನಿಗಳ ಯೋಜನೆಗಳನ್ನು ಹ್ಯಾಕ್‌ ಮಾಡಿ ಅಕ್ರಮವಾಗಿ $ 2 ದಶಲಕ್ಷ ಹಣವನ್ನು ಸಂಪಾದಿಸಿದ್ದಾನೆ ಎಂದು ಪ್ರಾಸಿಕ್ಯೂಟರ್‌ ಹೇಳಿದ್ದಾರೆ.

ಪೆನ್ಸಿಲ್ವೇನಿಯಾ -ಹ್ಯಾಕಿಂಗ್‌ ಗುರಿಯಾದ ಕಂಪನಿ

ಪೆನ್ಸಿಲ್ವೇನಿಯಾ -ಹ್ಯಾಕಿಂಗ್‌ ಗುರಿಯಾದ ಕಂಪನಿ

ಟೆಲಿಕಂಮ್ಯೂನಿಕೇಷನ್‌ ಆಧಾರಿತ ಪೆನ್ಸಿಲ್ವೇನಿಯಾ ಕಂಪನಿಯು ಹ್ಯಾಕಿಂಗ್‌ಗೆ ಗುರಿಯಾಗಿದ್ದು, ಇದರಲ್ಲಿ ಮಾಕ್‌ಅರ್ಥರ್‌ ಉದ್ಯೋಗಿಯಾಗಿದ್ದ, ಇವನು ಕಂಪನಿ ನೆಟ್‌ವರ್ಕ್‌ಗೆ ಹ್ಯಾಕಿಂಗ್‌ ಟೂಲ್ಸ್‌ ಇನ್ಸ್ಟಾಲ್‌ ಮಾಡಿದ್ದನು. ಹಾಗೂ 50ದಶಲಕ್ಷ ಜನರಿಂದ ವಯಕ್ತಿಕ ಮಾಹಿತಿ ಪಡೆಯಲು ಉದ್ದೇಶಿಸಿದ್ದ ಎಂದು ಪ್ರಾಸಿಕ್ಯೂಟರ್‌ ಹೇಳಿದ್ದಾರೆ.

ಇಮೇಲ್‌ ಖಾತೆ

ಇಮೇಲ್‌ ಖಾತೆ

ನ್ಯೂಯಾರ್ಕ್‌ ಟೆಲಿಕಂಮ್ಯೂನಿಕೇಷನ್‌ ಕಂಪನಿಯ ಹಲವು ಗ್ರಾಹಕರು ಸಹ ಈ ಹ್ಯಾಕಿಂಗ್‌ಗೆ ಇಮೇಲ್‌ ಮೂಲಕ ಒಳಗಾಗಿರುವ ಬಗ್ಗೆ ಆರೋಪಿಗಳು ಹೇಳಿದ್ದಾರೆ.

ನ್ಯೂಯಾರ್ಕ್‌ ಟೆಕ್ನಾಲಜಿ ಕಂಪನಿಗಳು

ನ್ಯೂಯಾರ್ಕ್‌ ಟೆಕ್ನಾಲಜಿ ಕಂಪನಿಗಳು

ನ್ಯೂಯಾರ್ಕ್‌ ಟೆಕ್ನಾಲಜಿ ಕಂಪನಿಗಳು ಹಾಗೂ ಕನ್ಸಲ್ಟಿಂಗ್‌ ಕಂಪನಿಗಳು ಸಹ ಈ ಹ್ಯಾಕಿಂಗ್‌ ಯೋಜನೆಗೆ ಗುರಿಯಾಗಿದ್ದವು ಎಂದು ದೋಷಾರೋಪಣ ಪಟ್ಟಿಯಲ್ಲಿ ಹೇಳಲಾಗಿದೆ.

 ದೋಷಾರೋಪಪಟ್ಟಿಯಲ್ಲಿನ ಅಂಶಗಳು

ದೋಷಾರೋಪಪಟ್ಟಿಯಲ್ಲಿನ ಅಂಶಗಳು

ಹೆಸರಿಲ್ಲದ ಒಂದು ಸಂಸ್ಥೆ ಹೇಳಿದ್ದ ದೋಷಾರೋಪ ಪಟ್ಟಿಯಲ್ಲಿ ಲಿವಿಂಗ್‍ಸ್ಟನ್, ಖೀಲಾರ್ಜ್‌ ಗೆ 10 ದಶಲಕ್ಷ ಜನರ ಡಾಟಾ ಇರುವ ರೆಕಾರ್ಡ್‌ಗಳನ್ನು ಕಳ್ಳತನ ಮಾಡಲು ಕಾರ್ಯ ವ್ಯವಸ್ಥೆಯನ್ನು ಬರೆಯಲು ಹಣ ನೀಡಲಾಗಿದೆ ಎನ್ನಲಾಗಿದೆ.

ಜುಲೈನಲ್ಲಿ ಲಿವಿಂಗ್‍ಸ್ಟನ್ ಕಂಪ್ಯೂಟರ್‌ ಸ್ವಾಧೀನ

ಜುಲೈನಲ್ಲಿ ಲಿವಿಂಗ್‍ಸ್ಟನ್ ಕಂಪ್ಯೂಟರ್‌ ಸ್ವಾಧೀನ

ಜುಲೈ ತಿಂಗಳಲ್ಲಿ ಈತನ ಕಂಪ್ಯೂಟರ್‌ ಸ್ವಾಧೀನಪಡಿಸಿಕೊಂಡಾಗ, ಅಧಿಕಾರಿಗಲು 7 ದಶಲಕ್ಷ ಜನರ ಕಂಪನಿ ಡಾಟಾ ಮಾಹಿತಿಯನ್ನು ಹ್ಯಾಕ್‌ ಮಾಡಿರುವ ಬಗ್ಗೆ ಆತನ ಕಂಪ್ಯೂಟರ್‌ನಲ್ಲಿ ಪತ್ತೆಹಚ್ಚಿದ್ದಾರೆ.

ಎಲ್ಲಾ ದೇಶಗಳು ಹ್ಯಾಕರ್‌ಗಳಿಂದ ಎಚ್ಚೆತ್ತುಕೊಳ್ಳಬೇಕಿದೆ

ಎಲ್ಲಾ ದೇಶಗಳು ಹ್ಯಾಕರ್‌ಗಳಿಂದ ಎಚ್ಚೆತ್ತುಕೊಳ್ಳಬೇಕಿದೆ

ಇಂತಹ ಬೃಹತ್‌ ಪ್ರಮಾಣದ ಯೋಜನೆಯನ್ನು ರೂಪಸಿ ಹ್ಯಾಕಿಂಗ್‌ಗೆ ತೊಡಗಿರುವ ವಿಷಯ ತಿಳಿದ ಎಲ್ಲಾ ದೇಶಗಳು ಸಹ ಹ್ಯಾಕರ್‌ಗಳು ಮತ್ತು ಹ್ಯಾಕಿಂಗ್‌ಗೆ ಸಂಬಂಧ ಪಟ್ಟ ಮಾಹಿತಿ ಪಡೆದು ಎಚ್ಚೆತ್ತುಕೊಳ್ಳಬೇಕಿದೆ.

Best Mobiles in India

English summary
US arrests three men over hacking scheme targeting 60 million people. Read more about hacking security of your online banking in kannada gizbot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+