ಭಯೋತ್ಪಾದಕರಿಂದ ಬ್ಯಾಂಕ್‌ ಖಾತೆ ಹ್ಯಾಕ್‌: ಎಚ್ಚರ

By Suneel
|

ಟೆಕ್ನಾಲಜಿ ಅಭಿವೃದ್ದಿಯಿಂದ ಇಂದು ಬಹುಸಂಖ್ಯಾತರು ತಮ್ಮ ಬ್ಯಾಂಕ್‌ ವ್ಯವಹಾರವನ್ನು ಇಂಟರ್ನೆಟ್‌, ಮೊಬೈಲ್‌ ಬ್ಯಾಕಿಂಗ್‌ ಮೂಲಕ ನಿರ್ವಹಿಸುತ್ತಿದ್ದಾರೆ. ಆದರೆ ಇಂದು ಹ್ಯಾಕರ್‌ಗಳ ಸಂಖ್ಯೆಹೆಚ್ಚಿದ್ದು, ಯಾವುದು ಸರಿ ಯಾವುದು ತಪ್ಪು ಎಂದು ತಿಳಿಯುವಲ್ಲಿ ಬ್ಯಾಂಕ್‌ ಖಾತೆದಾರರು ಸಮಸ್ಯೆಯಲ್ಲಿ ಸಿಲುಕಿದ್ದಾರೆ.

ಓದಿರಿ: ಭಾರತದ ಹ್ಯಾಕರ್‌ಗಳಿಂದ ಪಾಕಿಸ್ತಾನದ ಮೇಲೆ ದಾಳಿ

ಇಂಗ್ಲೀಷ್ ಚೆನ್ನಾಗಿ ಓದಬಲ್ಲ, ಡೆಂಟಿಸ್ಟ್‌ ಒಬ್ಬರು ಇಂದು ಬ್ಯಾಂಕ್‌ ಹ್ಯಾಕಿಂಗ್‌ಗೆ ತುತ್ತಾಗಿ 10 ಲಕ್ಷ ಹಣ ಕಳೆದುಕೊಂಡಿದ್ದಾರೆ. ಹೆಚ್ಚು ಓದಿರುವ ಇವರೇ ಇಂತಹ ಸಮಸ್ಯೆಗೆ ಸಿಲುಕಿರುವಾಗ ಸಾಮಾನ್ಯ ಜನರು ತಮ್ಮ ಬ್ಯಾಂಕ್‌ ಖಾತೆ ವಿವರಗಳನ್ನು ಮೊಬೈಲ್‌ ಮೂಲಕವೋ, ಇಮೇಲ್‌ ಮೂಲಕವೋ ಬಿಟ್ಟುಕೊಡುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಬ್ಯಾಂಕ್‌ ಖಾತೆ ಹ್ಯಾಕಿಂಗ್‌ಗೆ ತುತ್ತಾಗಿ ಹಣ ಕಳೆದುಕೊಂಡವರ ಬಗ್ಗೆ ಹಾಗೂ ಹೇಗೆ ಹ್ಯಾಕಿಂಗ್ ಗೆ ಒಳಗಾದರು ಎಂಬ ಮಾಹಿತಿ ನೀಡಿ ನಿಮ್ಮನ್ನು ಎಚ್ಚರಿಸಲು ಹಲವು ಮಾಹಿತಿಗಳನ್ನು ನೀಡಿದೆ.

 ಬ್ಯಾಕ್‌ ಖಾತೆಗಳು ಹ್ಯಾಕಿಂಕ್‌

ಬ್ಯಾಕ್‌ ಖಾತೆಗಳು ಹ್ಯಾಕಿಂಕ್‌

ನಿಮ್ಮ ಬ್ಯಾಕ್‌ ಖಾತೆಯಲ್ಲಿ ಹಣಕ್ಕೆ ಸಂಬಂಧಿಸಿದ ಮೋಸದ ವ್ಯವಹಾರ ಆದಲ್ಲಿ, ಅದರ ಹಿಂದೆ ಭಯೋತ್ಪಾದಕರ ಹ್ಯಾಕಿಂಗ್‌ ಕೈವಾಡವಿರುತ್ತದೆ.

ಡೆಂಟಿಸ್ಟ್‌ ಒಬ್ಬರ 10 ಲಕ್ಷ ಹಣ ಹ್ಯಾಕ್

ಡೆಂಟಿಸ್ಟ್‌ ಒಬ್ಬರ 10 ಲಕ್ಷ ಹಣ ಹ್ಯಾಕ್

ಡೆಂಟಿಸ್ಟ್‌ ಒಬ್ಬರ ಬ್ಯಾಕ್‌ ಖಾತೆಯನ್ನು ಅಪರಾಧಿಗಳು ಇಬ್ಬರು ಹ್ಯಾಕ್‌ಮಾಡಿ, 2 ಭಾರಿ ಟ್ರ್ಯಾನ್ಸಾಕ್ಷನ್‌ ಮಾಡಿ 10 ಲಕ್ಷ ಹಣ ಲಪಟಾಯಿಸಿದ್ದಾರೆ.

ದೆಹಲಿಯ ಡೆಂಟಿಸ್ಟ್‌ ಪ್ರಕರಣ ದಾಖಲಿಸಿದ್ದಾರೆ.

ದೆಹಲಿಯ ಡೆಂಟಿಸ್ಟ್‌ ಪ್ರಕರಣ ದಾಖಲಿಸಿದ್ದಾರೆ.

ಈ ಸಂಬಂಧಪಟ್ಟಂತೆ ಡೆಂಟಿಸ್ಟ್‌ ಪ್ರಕರಣ ದಾಖಲಿಸಿದ್ದು, ಅವರ ಖಾತೆಯಲ್ಲಿ ಉಳಿದ ಎಲ್ಲಾ ಹಣವನ್ನು ಬ್ಯಾಕ್‌ನಿಂದ ಡ್ರಾ ಮಾಡಿಕೊಂಡಿದ್ದಾರೆ.

ಇತರೆ ಎರಡು ಖಾತೆಗಳು ಹ್ಯಾಕ್‌

ಇತರೆ ಎರಡು ಖಾತೆಗಳು ಹ್ಯಾಕ್‌

ಅಸಾದುಲ್ಲಾ ಮತ್ತು ಫೇಟ್‌ನುಶ್‌ ಎಂಬ ಖಾತೆಗಳು ಹ್ಯಾಕಿಂಗ್‌ ಆಗಿದ್ದು, ಅವರ ಹಿಂದಿನ ಟ್ರ್ಯಾನ್ಸಾಕ್ಷನ್‌ ಬಗ್ಗೆ ಸಮೀಕ್ಷೆ ನೆಡೆಸಲಾಗುತ್ತಿದೆ.

ಡೆಂಟಿಸ್ಟ್‌  ಹ್ಯಾಕಿಂಗ್‌ಗೆ ತುತ್ತಾದದ್ದು ಹೇಗೆ ?

ಡೆಂಟಿಸ್ಟ್‌ ಹ್ಯಾಕಿಂಗ್‌ಗೆ ತುತ್ತಾದದ್ದು ಹೇಗೆ ?

ಮೊದಲ ವಿಧಾನ:

ಡೆಂಟಿಸ್ಟ್‌ ಪೋಲೀಸ್‌ಗೆ ಹೇಳಿದ ಮಾಹಿತಿ: ಡೆಂಟಿಸ್ಟ್‌ ಒಂದು ಟೆಕ್ಸ್ಟ್‌ ಮೇಸೇಜ್‌ ಸ್ವೀಕರಿಸಿದ್ದಾರೆ. ಅದರಲ್ಲಿ ನಿಮ್ಮ ಪಾಸ್‌ಬುಕ್‌ಗೆ ಸಂಬಂಧಿಸಿದಂತೆ OTP ಜೆನೆರೇಟೆಡ್‌ ಆಗಿಲ್ಲ, ಆದ್ದರಿಂದ ನೀವು ಸಿಸ್ಟಮ್‌ ಅಪ್‌ಗ್ರೇಡ್‌ ಮಾಡಲು ಕೆಲಸದ ವೇಳಾದಿನದಲ್ಲಿ 7 ಗಂಟೆಯ ನಂತರ ಪ್ರಯತ್ನಿಸಿ'' ಎಂದಿತ್ತು.

ಡೆಂಟಿಸ್ಟ್‌  ಹ್ಯಾಕಿಂಗ್‌ಗೆ ತುತ್ತಾದದ್ದು ಹೇಗೆ ?

ಡೆಂಟಿಸ್ಟ್‌ ಹ್ಯಾಕಿಂಗ್‌ಗೆ ತುತ್ತಾದದ್ದು ಹೇಗೆ ?

ಎರಡನೇ ವಿಧಾನ:

ಡೆಂಟಿಸ್ಟ್ ಮೇಸೇಜ್ ಸ್ವೀಕರಿಸಿದ ಕೆಲವೇ ನಿಮಿಷಗಳ ನಂತರ ಸರೊಜ್‌ ಎಂಬ ವ್ಯಕ್ತಿ ಡೆಂಟಿಸ್ಟ್ ಮೊಬೈಲ್‌ಗೆ ಕರೆ ಮಾಡಿ ನಾನು ಮುಂಬೈ ಬ್ಯಾಂಕ್‌ ಹೆಡ್‌ ಆಫೀಸ್‌ನಿಂದ ಕರೆ ಮಾಡಿರೋದು. 11,000 ಬ್ಯಾಂಕ್‌ ಖಾತೆದಾರರ ಬ್ಯಾಂಕ್‌ ಅಕೌಂಟ್ , ನನ್ನದು ಸೇರಿದಂತೆ ಸಮಸ್ಯೆಗೆ ಸಿಲುಕಿದೆ. ಈ ಸಮಸ್ಯೆ ಪರಿಹರಿಸಿಕೊಳ್ಳಲು ಬ್ಯಾಂಕ್‌ ಖಾತೆಯ ವೈಯಕ್ತಿಕ ಮಾಹಿತಿಗಳನ್ನು ನೀಡಬೇಕಿದೆ ಎಂದಿದ್ದಾರೆ. ಡೆಂಟಿಸ್ಟ್‌ ಸರೊಜ್‌ಗೆ ಬ್ಯಾಂಕ್‌ ಖಾತೆ ನಂಬರ್‌ ಮತ್ತು ಡೆಬಿಟ್‌ ಕಾರ್ಡ್‌ ನಂಬರ್ ಮಾಹಿತಿಗಳನ್ನು ನೀಡಿದ್ದಾರೆ.

ಶ್ರಿವತ್ಸವ

ಶ್ರಿವತ್ಸವ

ಇವರು ಸಹ 5 ಲಕ್ಷ ಹಣ 2 ಭಾರಿ ಡ್ರಾ ಆರಿರುವ ಎರಡು ಮೇಸೇಜ್‌ಗಳನ್ನು ಸ್ವೀಕರಿಸಿದ್ದಾರೆ. ನಂತರದಲ್ಲಿ ಬ್ಯಾಂಕ್‌ನ ರಕ್ಷಣೆ ಕೇಂದ್ರಕ್ಕೆ ಮಾಹಿತಿ ತಿಳಿಸಿ, ಪೋಲೀಸರಿಗೂ ದೂರು ನೀಡಿದ್ದಾರೆ.

ಭಯೋತ್ಪಾದಕರ ಕೈವಾಡ

ಭಯೋತ್ಪಾದಕರ ಕೈವಾಡ

ಈ ರೀತಿಯ ಬ್ಯಾಂಕ್‌ ವಂಚನೆ ಭಯೋತ್ಪಾದಕರು ಫಂಡ್‌ ಕಲೆಕ್ಟ್‌ ಮಾಡಲು ಹ್ಯಾಕ್‌ ಮಾಡುತ್ತಿದ್ದಾರೆ ಎನ್ನಲಾಗಿದೆ.

 ಬೆಂಗಳೂರಿನ ಹುಡುಗಿಗೂ ಬ್ಯಾಂಕ್ ವಿವರಕ್ಕಾಗಿ ಕರೆ.

ಬೆಂಗಳೂರಿನ ಹುಡುಗಿಗೂ ಬ್ಯಾಂಕ್ ವಿವರಕ್ಕಾಗಿ ಕರೆ.

ದಿನಾಂಕ 22/11/2015 ರಂದು ಸಹ ಬೆಂಗಳೂರಿನ ಹುಡುಗಿಯೊಬ್ಬಳಿಗೆ ಅಪರಿಚಿತ ಕರೆಯೊಂದು ಬಂದಿದ್ದು, ಹುಡುಗನೊಬ್ಬ ಆಕೆಯ ಬ್ಯಾಂಕ್‌ ಡೆಬಿಟ್‌ ಕಾರ್ಡ್‌ ಸರ್ವಿಸ್‌ ಮಾಡಬೇಕು ಕೊಡಿ ಎಂದು ಕೇಳಿದ್ದಾನೆ. ಆಕೆ ನಿರಾಕರಿಸಿ, ಮೊಬೈಲ್‌ ನಂಬರ್‌ ಅನ್ನು ಟ್ರೂ ಕಾಲರ್‌ ಆಪ್ಲಿಕೇಶನ್‌ಗೆ ಹಾಕಿ ನೋಡಿದಾಗ ಆತ ಬಿಹಾರ ಮೂಲದವನು ಎಂದು ತಿಳಿಯಲಾಗಿದೆ. ಅಲ್ಲದೇ ಆತನು ನಾವು ಎಲ್ಲಾ ಬ್ಯಾಂಕ್‌ಗಳೊಂದಿಗೆ ಟೈಯಪ್‌ ಮಾಡಿಕೊಂಡಿರುವುದಾಗಿ ತಿಳಿಸಿ ಕಾರ್ಡ್‌ ಸರ್ವೀಸ್‌ ಮಾಡಬೇಕು ಎಂದು ಒತ್ತಾಯ ಮಾಡಿದರು ಹುಡುಗಿ ನಿರಾಕರಿಸಿದ್ದಾಳೆ.

ಬ್ಯಾಂಕ್‌ ಖಾತೆದಾರರೇ ಎಚ್ಚರ!!

ಬ್ಯಾಂಕ್‌ ಖಾತೆದಾರರೇ ಎಚ್ಚರ!!

ಬ್ಯಾಂಕ್‌ಗಳು ಸರ್ಕಾರಿ ರಜೆ ಮತ್ತು ಭಾನುವಾರ ರಜೆ ಇರುತ್ತವೆ. ಬ್ಯಾಂಕ್ ಖಾತೆ ಹೊಂದಿರುವವರಿಗೆ ಯಾವುದೇ ಕರೆಗಳು ನಾವು ಈ ಲೇಖನದಲ್ಲಿ ತಿಳಿಸಿದಂತೆ ಬರುವುದಿಲ್ಲ. ಹಾಗೆ ನೀವು ಮೊಬೈಲ್‌ ಕರೆ ಮುಖಾಂತರ ಯಾವುದೇ ಮಾಹಿತಿ ನೀಡದಿರಿ.

ಮೊಬೈಲ್‌ ಬ್ಯಾಕಿಂಗ್‌

ಮೊಬೈಲ್‌ ಬ್ಯಾಕಿಂಗ್‌

ಮೊಬೈಲ್‌ ಬ್ಯಾಕಿಂಗ್‌ ಬಳಕೆದಾರರು ಸೂಕ್ಷ್ಮವಾಗಿ ಯಾವುದೇ ಮೇಸೇಜ್‌ಗಳನ್ನು ಓದಿ ನಂತರದಲ್ಲಿ ಕೆಲವು ವೆಬ್‌ ಲಿಂಕ್‌ಗಳನ್ನು ತೆರೆಯಬೇಕಾಗಿದೆ. ಕೆಲವೊಮ್ಮೆ ಯಾವುದಾದರೂ ಉತ್ತಮ ಆಫರ್ ಎನ್ನುವ ಮೇಸೇಜ್‌ ಮತ್ತು ಜಾಹಿರಾತುಗಳ ಮೇಲೆ ಕ್ಲಿಕ್‌ ಮಾಡುವವಾಗ ಎಚ್ಚರ ವಹಿಸಬೇಕಾಗಿದೆ. ಈ ಮಾಹಿತಿಯನ್ನು ನೀವು ಫಾಲೋ ಮಾಡಿ, ಇತರರಿಗೂ ತಿಳಿಸಿ.

Most Read Articles
Best Mobiles in India

English summary
Fraudulent transactions done on your bank account may have terror imprints. A dentist lost Rs 10 lakh after criminals hacked into her account impersonating bank officials and siphoned off the money in two transactions.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more