ಮಹಿಳೆಯರ ರಕ್ಷಣೆಗೆ ಹೊಸ ಆಂಟಿರೇಪ್ ಅಂಡರ್‌ವೇರ್
ಮಹಿಳೆಯರ ಮೇಲೆ ರೇಪ್ ಮಾಡಿದ ಕಾಮುಕರಿಗೆ ಕಠಿಣ ಶಿಕ್ಷೆಗಳಾದ್ರೂ ವಿಶ್ವದೆಲ್ಲೆಡೆ ಕಾಮುಕರ ಕಾಟ ಇನ್ನೂ ನಿಂತಿಲ್ಲ.ಹೀಗಾಗಿ ಮಹಿಳೆಯರೇ ಕಾಮುಕರಿಂದ ಸ್ವಯಂ ರಕ್ಷಣೆ ಪಡೆಯಲು ಅಮೆರಿಕದ ಒಂದು ಕಂಪೆನಿ ಹೊಸ ವಿನ್ಯಾಸದ,ಅಂಡರ್‌ವೇರ್‌ನ್ನು ಅಭಿವೃದ್ಧಿಪಡಿಸಿದೆ.
ಎಲಾಸ್ಟಿಕ್ ಬೆಲ್ಟ್ ಇರುವ ಅಂಡರ್‌ವೇರ್‌ನ್ನು ವಿಶೇಷವಾಗಿ ಕಂಪೆನಿ ವಿನ್ಯಾಸಮಾಡಿದೆ.ಎಲಾಸ್ಟಿಕ್ ಬೆಲ್ಟ್‌ನಲ್ಲಿ ಒಂದು ಲಾಕ್ ಇದ್ದು,ಮೂರು ಕಡೆ(ಸೊಂಟ,ತೊಡೆ) ಲಾಕ್ ಮಾಡಬಹುದಾಗಿದೆ.ಈ ಎಲಾಸ್ಟಿಕ್ ಬೆಲ್ಟ್‌ನ್ನು ಕತ್ತರಿ,ಚಾಕೂವಿನಿಂದಲೂ ತುಂಡರಿಸಲು ಸಾಧ್ಯವಿಲ್ಲ.ಅಷ್ಟೇ ಅಲ್ಲದೇ ಲಾಕ್‌ಮಾಡಿದ ಮೇಲೆ ಯಾರಿಂದಲೂ ಅಂಡರ್‌ವೇರ್‌ನ್ನು ಜಾರಿಸಲು ಸಾಧ್ಯವಿಲ್ಲ ಎಂದು ಇದನ್ನು ತಯಾರಿಸಿದ AR Wear ಹೇಳಿದೆ.
ಪ್ರಯಾಣ,ವಾಕಿಂಗ್,ಪಾರ್ಟಿಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಅಂಡರ್‌ವೇರ್‌ನ್ನು ವಿನ್ಯಾಸ ಪಡಿಸಿದ್ದೇವೆ ಎಂದು ಕಂಪೆನಿ ಹೇಳಿದೆ.ಕಂಪೆನಿ ಇನ್ನೂ ಹೊಸ ಅಂಡರ್‌ವೇರ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿಲ್ಲ.ಈಗ ತಯಾರಿಸಿದ ಉತ್ಪನ್ನವನ್ನು ಪ್ರಚಾರ ಮಾಡುತ್ತಿದ್ದು,ಕಂಪೆನಿ ಸ್ಥಾಪಿಸಲು indiegogo.com ಹಣಕಾಸಿನ ನೆರವು ನೀಡಿ ಎಂದು ಬಳಕೆದಾರರಲ್ಲಿ ವಿನಂತಿಸಿದೆ.
ಕಾಮುಕರಿಂದ ಮಹಿಳೆಯರೇ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಈ ರೀತಿ ಉಡುಪು ತಯಾರಾಗುವುದು ಇದು ಮೊದಲೇನಲ್ಲ.ಈ ಹಿಂದೆ ಚೆನ್ನೈನ ವಿದ್ಯಾರ್ಥಿಗಳು ರೇಪ್ ಮಾಡಿದ್ರೆ ಶಾಕ್ ಹೊಡೆಯುವ ಒಳ ಉಡುಪನ್ನು ಅಭಿವೃದ್ಧಿ ಪಡಿಸಿದ್ದರು. ಹೊಸ ಅಂಡರ್‌ವೇರ್ ಹೇಗಿದೆ? ಹೇಗೆ ಮಹಿಳೆಯರಿಗೆ ರಕ್ಷಣೆ ನೀಡುತ್ತದೆ ಎನ್ನುವುದಕ್ಕೆ ಇಲ್ಲಿ ಅಂಡರ್‌ವೇರ್‌ನ ಚಿತ್ರ ಮತ್ತು ವಿಡಿಯೋವಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಮಹಿಳೆಯರ ರಕ್ಷಣೆಗೆ ಹೊಸ ಆಂಟಿರೇಪ್ ಅಂಡರ್‌ವೇರ್
ಅಂಡರ್‌ವೇರ್‌ನ ಎಲಾಸ್ಟಿಕ್‌ನಲ್ಲಿರುವ ಲಾಕ್

ಮಹಿಳೆಯರ ರಕ್ಷಣೆಗೆ ಹೊಸ ಆಂಟಿರೇಪ್ ಅಂಡರ್‌ವೇರ್
ಕತ್ತರಿಯಿಂದ ಅಂಡರ್‌ವೇರ್‌ನ್ನು ಕತ್ತರಿಸಲು ಪ್ರಯತ್ನಿಸುತ್ತಿರುವುದು.

ಮಹಿಳೆಯರ ರಕ್ಷಣೆಗೆ ಹೊಸ ಆಂಟಿರೇಪ್ ಅಂಡರ್‌ವೇರ್
ಅಂಡರ್‌ವೇರ್‌ನ ಮೂರು ಭಾಗದಲ್ಲಿರುವ ಲಾಕ್‌ಗಳು

ಮಹಿಳೆಯರ ರಕ್ಷಣೆಗೆ ಹೊಸ ಆಂಟಿರೇಪ್ ಅಂಡರ್‌ವೇರ್
ಅಂಡರ್‌ವೇರ್‌ನಲ್ಲಿರುವ ಲಾಕ್

ಮಹಿಳೆಯರ ರಕ್ಷಣೆಗೆ ಹೊಸ ಆಂಟಿರೇಪ್ ಅಂಡರ್‌ವೇರ್
ಕಂಪೆನಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಉದ್ದೇಶಿಸಿರುವ ಅಂಡರ್‌ವೇರ್‌ಗಳು
ಮಹಿಳೆಯರ ರಕ್ಷಣೆಗೆ ಹೊಸ ಆಂಟಿರೇಪ್ ಅಂಡರ್‌ವೇರ್
ವಿಡಿಯೋ ವೀಕ್ಷಿಸಿ


Click it and Unblock the Notifications