ರೇಪ್ ಮಾಡಿದ್ರೆ ಶಾಕ್‌ ಹೊಡೆಯುತ್ತೆ ಈ ಒಳ ಉಡುಪು

Posted By:

ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭಲ್ಲಿ ಮಹಿಳೆಯರನ್ನು ಪಾರುಮಾಡುವ ಮೊಬೈಲ್‌ ಅಪ್ಲಿಕೇಶನ್‌, ಸೇರಿದಂತೆ ವಿಶ್ವದ ನಾನಾ ಭಾಗದಲ್ಲಿ ಹೊ ಹೊಸ ಸಾಧನಗಳು ಬರುತ್ತಲೇ ಇವೆ. ಈಗ ಈ ಪಟ್ಟಿಗೆ ಹೊಸದಾಗಿ ಭಾರತೀಯರೇ ಕಂಡುಹಿಡಿದ ಆಧುನಿಕ ಒಳ ಉಡುಪುಗಳು ಸೇರ್ಪಡೆಗೊಂಡಿವೆ. ಈ ಒಳ ಉಡುಪಿನ ಮೇಲೆ 'ಒತ್ತಡ' ಬಿದ್ದೊಡನೇ ಶಾಕ್‌ ಹೊಡೆಯುತ್ತದೆ. ವಿಶೇಷವಾಗಿ ವಿದ್ಯಾರ್ಥಿಗಳೇ ರೂಪಿಸಿದ ಒಳ ಉಡುಪು ಈಗ ಮಾಧ್ಯಮದಲ್ಲಿ ಭಾರೀ ಚರ್ಚೆಯಾಗುತ್ತಿದೆ.ಹೀಗಾಗಿ ಗಿಝ್‌ಬಾಟ್‌ ಈ ವಿಶೇಷ ಒಳ ಉಡುಪಿನ ಬಗ್ಗೆ ಮಾಹಿತಿ ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಬೆಂಗಳೂರು ಪೋಲಿಗಳು ಫೇಸ್‌ಬುಕ್‌ನಲ್ಲಿ ಸೆರೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಈ ಆಧುನಿಕ ಒಳ ಉಡುಪಿನ ಕಾರ್ಯನಿರ್ವಹಣೆ ಹೇಗೆ?

ಈ ಆಧುನಿಕ ಒಳ ಉಡುಪಿನ ಕಾರ್ಯನಿರ್ವಹಣೆ ಹೇಗೆ?

ರೇಪ್ ಮಾಡಿದ್ರೆ ಶಾಕ್‌ ಹೊಡೆಯುತ್ತೆ ಈ ಒಳ ಉಡುಪು

ಒಳ ಉಡುಪಿನಲ್ಲಿ 'ಒತ್ತಡ' ಸಂವೇದನಾ ತಂತ್ರಜ್ಞಾನ ಅಳವಡಿಸಲಾಗಿಸಲಾಗಿದೆ. ಒಳಉಡುಪಿನ ಮೇಲೆ ಒತ್ತಡ ಬಿದ್ದಾಗ ಇದರಲ್ಲಿನ ಸೆನ್ಸರ್‌ಗಳು ಕ್ರಿಯಾಶೀಲಗೊಳ್ಳುತ್ತದೆ. ಜಿಪಿಎಸ್‌, ಜಿಎಸ್‌ಎಂ ಉಪಕರಣಗಳು ಇರುವುದರಿಂದ ಪೋಷಕರು ಹಾಗೂ ತುರ್ತು ಸಂಖ್ಯೆ '100' ಸಂದೇಶ ಹೋಗುತ್ತದೆ.ಅಲ್ಲದೇ ಜಿಪಿಎಸ್‌ನಿಂದಾಗಿ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಇರುವ ಸ್ಥಳವು ತಿಳಿಯುತ್ತದೆ.

 ಆಧುನಿಕ ಒಳ ಉಡುಪನ್ನು ಕಂಡುಹಿಡಿದವರು ಯಾರು ?

ಆಧುನಿಕ ಒಳ ಉಡುಪನ್ನು ಕಂಡುಹಿಡಿದವರು ಯಾರು ?

ರೇಪ್ ಮಾಡಿದ್ರೆ ಶಾಕ್‌ ಹೊಡೆಯುತ್ತೆ ಈ ಒಳ ಉಡುಪು

ಚೆನ್ನೈನ ಶ್ರೀರಾಮಸ್ವಾಮಿ ಸ್ಮಾರಕ ವಿಶ್ವವಿದ್ಯಾಲಯದ ಮೂವರು ಆಟೋಮೊಬೈಲ್‌ ಇಂಜಿನಿಯರಿಂಗ್‌ ವಿದ್ಯಾರ್ಥಿನಿಯರಾದ ಮನಿಷಾ,ರಿಂಪಿ ತ್ರಿಪಾಠಿ ಮತ್ತು ನೀಲಾದ್ರಿ ಬಸು ಪಾಲ್‌ ಸೇರಿ ಈ ಆಧುನಿಕ ಒಳ ಉಡುಪನ್ನು ವಿನ್ಯಾಸ ಮಾಡಿದ್ದಾರೆ

ಒಳ ಉಡುಪಿನ ವಿಶೇಷತೆ ಏನು ?

ಒಳ ಉಡುಪಿನ ವಿಶೇಷತೆ ಏನು ?

ರೇಪ್ ಮಾಡಿದ್ರೆ ಶಾಕ್‌ ಹೊಡೆಯುತ್ತೆ ಈ ಒಳ ಉಡುಪು

ಮಹಿಳೆಯರ ಮೇಲೆ ಬಲಾತ್ಕಾರಕ್ಕೆ ಯತ್ನ ನಡೆಸಿದರೆ 3,800 ಕಿಲೋ ವ್ಯಾಟ್‌ ವಿದ್ಯುತ್‌ ಶಾಕ್‌ ತಗಲುವಂತಹ ವ್ಯವಸ್ಥೆಯನ್ನು ಎಂಜಿನಿಯರ್‌ಗಳು ಅಭಿವೃದ್ಧಿಪಡಿಸಿದ್ದಾರೆ. ಅಷ್ಟೇ ಅಲ್ಲದೇ 82 ಭಾರೀ ಶಾಕ್ ಹೊಡೆಯುವ ಸಾಮರ್ಥ್ಯ ಈ ಆಧುನಿಕ ಒಳ ಉಡುಪಿಗಿದೆ.

ಉತ್ಪನ್ನದ ಹೆಸರು ಏನು ?

ಉತ್ಪನ್ನದ ಹೆಸರು ಏನು ?

ರೇಪ್ ಮಾಡಿದ್ರೆ ಶಾಕ್‌ ಹೊಡೆಯುತ್ತೆ ಈ ಒಳ ಉಡುಪು

ಈ ಉತ್ಪನ್ನಕ್ಕೆ ಇಂಗ್ಲಿಷ್‌ನ 'ಶಿ'(SHE) ಆಂದರೆ ಸೊಸೈಟಿ ಹರ್ನೆಶಿಂಗ್‌ ಇಕ್ವಿಪ್‌ಮೆಂಟ್‌ (Society Harnessing Equipment ) ಎಂದು ಹೆಸರಿಡಲಾಗಿದೆ.

ಈ ಉತ್ಪನ್ನ ಮಾರುಕಟ್ಟೆಗೆ ಯಾವಾಗ ಬರುತ್ತದೆ?

ಈ ಉತ್ಪನ್ನ ಮಾರುಕಟ್ಟೆಗೆ ಯಾವಾಗ ಬರುತ್ತದೆ?

ರೇಪ್ ಮಾಡಿದ್ರೆ ಶಾಕ್‌ ಹೊಡೆಯುತ್ತೆ ಈ ಒಳ ಉಡುಪು

ಈ ಸಂಶೋಧನೆಗೆ ಈ ವರ್ಷದ ಅಹಮದಾಬಾದ್‌ ಐಐಎಂನ ಗಾಂಧಿ ಯುವ ತಂತ್ರಜ್ಞಾನ ಪ್ರಶಸ್ತಿ ಲಭಿಸಿದೆ. ವಿಜ್ಞಾನಿಗಳು ಇವರ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಉತ್ಪನ್ನವನ್ನು ವಾಣಿಜ್ಯ ಉಪಯೋಗಕ್ಕೆ ಅಭಿವೃದ್ಧಿಪಡಿಸಲಾಗುತ್ತಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.

ಈ ಸಾಧನವನ್ನು ಹೇಗೆ ತಯಾರಿಸಲಾಗುತ್ತದೆ ?

ಈ ಸಾಧನವನ್ನು ಹೇಗೆ ತಯಾರಿಸಲಾಗುತ್ತದೆ ?

ರೇಪ್ ಮಾಡಿದ್ರೆ ಶಾಕ್‌ ಹೊಡೆಯುತ್ತೆ ಈ ಒಳ ಉಡುಪು

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್‌ ಫ್ಯಾಷನ್‌ ಟೆಕ್ನಾಲಜಿ (National Institute of Fashion Technology) ಸಂಸ್ಥೆಯ ಜೊತೆ ಚರ್ಚಿಸಿದ್ದು ಕ್ಲೀನ್‌ ಮಾಡಿದ್ರೆ ಕೊಳೆಗಳು ಹೋಗುವಂತ ಫ್ಯಾಬ್ರಿಕ್‌ಗಳನ್ನು ಬಳಸಿ ಈ ಆಧುನಿಕ ಒಳ ಉಡುಪನ್ನು ತಯಾರಿಸಲಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot