Home
ಸುದ್ದಿಜಾಲ

ಸ್ಮಾರ್ಟ್‌ವಾಚ್‌ ಕ್ರೇಜ್‌ ಇನ್ನೆಷ್ಟು ದಿನ..? ಬರಲಿವೆ ಸ್ಮಾರ್ಟ್‌ರಿಂಗ್‌ಗಳು: ಫೀಚರ್ಸ್ ಏನು?

ಸ್ಮಾರ್ಟ್‌ವಾಚ್‌ಗಳು ಇಂದು ಕೇವಲ ಸಮಯವನ್ನಷ್ಟೇ ತಿಳಿಸದೆ ಬಳಕೆದಾರರ ಆರೋಗ್ಯದ ಮೇಲೆ ಸಂಪೂರ್ಣವಾಗಿ ನಿಗಾ ಇಡುತ್ತವೆ. ಈ ವಾಚ್‌ಗಳ ಬಳಕೆ ಹೆಚ್ಚಾದಂತೆ ವಿವಿಧ ಕಂಪೆನಿಗಳು ವಿವಿಧ ಫೀಚರ್ಸ್ ಇರುವ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿದ್ದು, ಇನ್ಮುಂದೆ ಈ ಸ್ಮಾರ್ಟ್‌ವಾಚ್‌ಗಳು ತಮ್ಮ ಅಳಿವು ಉಳಿವಿನ ಬಗ್ಗೆ ಚಿಂತಿಸುವಂತೆ ಆಗಿದೆ.

ಹೌದು, ಸ್ಮಾರ್ಟ್‌ವಾಚ್‌ಗಳು ಇಂದು ಪ್ರತಿಯೊಬ್ಬರಿಗೂ ಅಗತ್ಯವಾದ ಸ್ಮಾರ್ಟ್‌ಡಿವೈಸ್‌ ಆಗಿದ್ದು, ಈ ಮೂಲಕ ಬಳಕೆದಾರರ ಅಗತ್ಯತೆಗಳನ್ನು ಪೂರೈಕೆ ಮಾಡುತ್ತಿವೆ. ಆದರೆ, ಇನ್ಮುಂದೆ ಈ ಎಲ್ಲಾ ಕೆಲಸವನ್ನು ಸ್ಮಾರ್ಟ್‌ರಿಂಗ್‌ಗಳು ಮಾಡಲಿವೆ. ಈ ಸ್ಮಾರ್ಟ್‌ರಿಂಗ್‌ಗಳ ಮೂಲಕ ನೀವು ತಂತ್ರಜ್ಞಾನ ಹೇಗೆ ಶೀಘ್ರಗತಿಯಲ್ಲಿ ಬದಲಾಗುತ್ತಿದೆ ಎನ್ನವುದನ್ನು ಅರ್ಥ ಮಾಡಿಕೊಳ್ಳಬಹುದು. ಹಾಗಿದ್ರೆ, ಈ ಸ್ಮಾರ್ಟ್‌ರಿಂಗ್‌ಗಳ ಫೀಚರ್ಸ್‌ ಏನು?, ಇವು ಹೇಗೆ ಕೆಲಸ ಮಾಡುತ್ತವೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ಸ್ಮಾರ್ಟ್‌ವಾಚ್‌ ಕ್ರೇಜ್‌ ಇನ್ನೆಷ್ಟು ದಿನ..? ಬರಲಿವೆ ಸ್ಮಾರ್ಟ್‌ರಿಂಗ್‌ಗಳು...

ಈ ಹಿಂದೆ, ಸಮಯವನ್ನು ನೋಡಲು ಕೈಗಡಿಯಾರಗಳನ್ನು ಕೈಯಲ್ಲಿ ಧರಿಸಲಾಗುತ್ತಿತ್ತು. ನಂತರ ಅದರ ಸ್ಥಾನವನ್ನು ಅನಲಾಗ್ ವಾಚ್‌ಗಳು ಆಕ್ರಮಿಸಿಕೊಂಡವು. ಬಳಿಕ ಸ್ಮಾರ್ಟ್ ವಾಚ್‌ಗಳ ಟ್ರೆಂಡ್ ಪ್ರಾರಂಭವಾಯಿತು ಮತ್ತು ಈಗ ಸ್ಮಾರ್ಟ್ ರಿಂಗ್‌ಗಳು ಮಾರುಕಟ್ಟೆಯಲ್ಲಿ ಅಬ್ಬರಿಸಲು ಮುಂದಾಗಿವೆ. ಪ್ರಸ್ತುತ, ಭಾರತದಲ್ಲಿ ಈ ಸ್ಮಾರ್ಟ್‌ರಿಂಗ್‌ಗಳು ಅಷ್ಟಾಗಿ ಜನಪ್ರಿಯವಾಗಿಲ್ಲವಾದರೂ ಸಹ ಮುಂದಿನ ದಿನಗಳಲ್ಲಿ ಇವುಗಳ ಬಳಕೆ ಖಂಡಿತಾ ಹೆಚ್ಚಾಗಲಿದೆ.

ಏನಿದು ಸ್ಮಾರ್ಟ್‌ರಿಂಗ್‌?: ವಾಚ್‌ಗಳಂತೆ ಸ್ಮಾರ್ಟ್ ರಿಂಗ್‌ಗಳು ಸಹ ಸೆನ್ಸರ್‌ ಆಯ್ಕೆಯನ್ನು ಹೊಂದಿರಲಿದ್ದು, ಎನ್‌ಎಫ್‌ಸಿ ಚಿಪ್‌ಗಳ ಮೂಲಕ ಕಾರ್ಯನಿರ್ವಹಿಸಲಿವೆ. ಈಗ ಸ್ಮಾರ್ಟ್ ವಾಚ್‌ಗಳು ಬಳಕೆದಾರರ ಆರೋಗ್ಯವನ್ನು ಟ್ರ್ಯಾಕ್ ಮಾಡುವಂತೆಯೇ, ಸ್ಮಾರ್ಟ್‌ರಿಂಗ್ ಕೂಡ ಕೆಲಸ ಮಾಡುತ್ತದೆ. ಈ ಎರಡೂ ಸ್ಮಾರ್ಟ್‌ ಡಿವೈಸ್‌ಗಳಿಗೆ ಇರುವ ವ್ಯಾತ್ಯಾಸ ಏನೆಂದರೆ ಸ್ಮಾರ್ಟ್‌ರಿಂಗ್‌ನ ಗಾತ್ರವು ಸ್ಮಾರ್ಟ್‌ವಾಚ್‌ಗಿಂತ ಚಿಕ್ಕದಾಗಿದೆ. ನಿಮ್ಮ ಬೆರಳಿಗೆ ಅನುಗುಣವಾಗಿ ನೀವು ಸ್ಮಾರ್ಟ್ ರಿಂಗ್ ಅನ್ನು ಖರೀದಿಸಬಹುದು.

ಈ ಸ್ಮಾರ್ಟ್‌ರಿಂಗ್‌ನಲ್ಲಿ ಏನೆಲ್ಲಾ ಫೀಚರ್ಸ್‌ ಇದೆ?: ಸ್ಮಾರ್ಟ್‌ವಾಚ್‌ನಂತೆ ಹೃದಯ ಬಡಿತ ಸೆನ್ಸರ್‌, ಪಲ್ಸ್ ರೇಟ್ ಮಾನಿಟರ್, ಸ್ಲೀಪ್ ಮಾನಿಟರ್, ಬ್ಲೂಟೂತ್ ಕನೆಕ್ಟಿವಿಟಿ, ಕಾಂಟ್ಯಾಕ್ಟ್ ವಿಷಯ ಸೇರಿದಂತೆ ಅನೇಕ ಫೀಚರ್ಸ್‌ಗಳನ್ನು ಇದು ಪಡೆದುಕೊಂಡಿದೆ. ಹಾಗೆಯೇ ಬ್ಲೂಟೂತ್‌ ಕನೆಕ್ಟಿವಿಟಿ ಆಯ್ಕೆ ಇರುವುದರಿಂದ ವಿವಿಧ ಡಿವೈಸ್‌ಗಳಿಗೆ ಈ ಸ್ಮಾರ್ಟ್‌ರಿಂಗ್‌ ಅನ್ನು ಕನೆಕ್ಟ್ ಮಾಡಬಹುದು.

ಸ್ಮಾರ್ಟ್‌ವಾಚ್‌ ಕ್ರೇಜ್‌ ಇನ್ನೆಷ್ಟು ದಿನ..? ಬರಲಿವೆ ಸ್ಮಾರ್ಟ್‌ರಿಂಗ್‌ಗಳು...

ಆಪ್‌ ಮೂಲಕ ಮಾಹಿತಿ ತಿಳಿದುಕೊಳ್ಳಬಹುದು: ಸ್ಮಾರ್ಟ್‌ವಾಚ್‌ಗಳು ಹೇಗೆ ಸಂಬಂಧಿತ ಆಪ್‌ಗಳ ಮೂಲಕ ಕೆಲಸ ಮಾಡುತ್ತವೆಯೋ ಅದೇ ರೀತಿ ಈ ಸ್ಮಾರ್ಟ್‌ರಿಂಗ್‌ ಸಹ ಕೆಲಸ ಮಾಡಲಿದ್ದು, ಬಳಕೆದಾರರು ತಮ್ಮ ಆರೋಗ್ಯ ಸಂಬಂಧಿ ಮಾಹಿತಿಯನ್ನು ಈ ಮೂಲಕ ತಿಳಿದುಕೊಳ್ಳಬಹುದು. ಈ ರೀತಿಯ ಸ್ಮಾರ್ಟ್‌ರಿಂಗ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವುದನ್ನು ಗಮನಿಸಬಹುದು.

ಸಂಪರ್ಕರಹಿತ ಪಾವತಿ ವ್ಯವಸ್ಥೆ: ಈ ವಾಚ್‌ನಲ್ಲಿ ಸಂಪರ್ಕರಹಿತ ಫೀಚರ್ಸ್‌ ಇದ್ದು, ಇದೀಗ ವಿದೇಶದಲ್ಲಿ ಇದು ಭಾರೀ ಟ್ರೆಂಡಿಂಗ್‌ನಲ್ಲಿದೆ. ಅಂದರೆ ಯುಕೆ, ಜಪಾನ್, ಫ್ರಾನ್ಸ್, ನೆದರ್‌ಲ್ಯಾಂಡ್‌, ರಷ್ಯಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿನ ಕೆಲವು ಬ್ಯಾಂಕ್‌ಗಳು ಈಗ ತಮ್ಮ ಗ್ರಾಹಕರಿಗೆ ವೀಸಾ ಮತ್ತು ಮಾಸ್ಟರ್‌ಕಾರ್ಡ್-ಸಕ್ರಿಯಗೊಳಿಸಿದ ಪಾವತಿ ಟರ್ಮಿನಲ್‌ಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಪಾವತಿಗಳಿಗಾಗಿ ಸಂಪರ್ಕರಹಿತ ಪಾವತಿ ರಿಂಗ್‌ ಅನ್ನು ಬಳಕೆ ಮಾಡಲು ಅನುಕೂಲ ಮಾಡಿಕೊಟ್ಟಿವೆ.

ಸ್ಮಾರ್ಟ್ ರಿಂಗ್‌ಗಳ ಬ್ಯಾಟರಿ ಸಾಮರ್ಥ್ಯ: ಫಿಟ್‌ನೆಸ್ ಬ್ಯಾಂಡ್‌ಗಳಂತಹ ಯಾವುದೇ ಧರಿಸಬಹುದಾದ ತಂತ್ರಜ್ಞಾನಕ್ಕಿಂತ ಕಡಿಮೆ ಬ್ಯಾಟರಿ ಸಾಮರ್ಥ್ಯ ಬಳಕೆ ಮಾಡುತ್ತವೆ. ಯಾಕೆಂದರೆ ಇವು ಡಿಸ್‌ಪ್ಲೇ ಆಯ್ಕೆ ಹೊಂದಿಲ್ಲ. ಇವುಗಳು ಚಿಕ್ಕ ಬ್ಯಾಟರಿಗಳನ್ನು ಪ್ಯಾಕ್ ಹೊಂದಿದ್ದರೂ ಸಹ ಸ್ಮಾರ್ಟ್ ವಾಚ್‌ಗಳು ಮತ್ತು ಫಿಟ್‌ನೆಸ್ ಬ್ಯಾಂಡ್‌ಗಳಿಗೆ ಹೋಲಿಸಿದರೆ ಹೆಚ್ಚಿನ ಸ್ಮಾರ್ಟ್ ರಿಂಗ್‌ಗಳು 3 ರಿಂದ 7 ದಿನಗಳವರೆಗೆ ಬ್ಯಾಕಪ್‌ ನೀಡಲಿವೆ.

ಸ್ಮಾರ್ಟ್‌ವಾಚ್‌ ಕ್ರೇಜ್‌ ಇನ್ನೆಷ್ಟು ದಿನ..? ಬರಲಿವೆ ಸ್ಮಾರ್ಟ್‌ರಿಂಗ್‌ಗಳು...

ಸ್ಮಾರ್ಟ್‌ರಿಂಗ್‌ ಬೆಲೆ ವಿವರ: ವಿವಿಧ ಕಂಪೆನಿಯ ಸ್ಮಾರ್ಟ್‌ರಿಂಗ್‌ಗಳು ವಿವಿಧ ರೀತಿಯ ಬೆಲೆಯನ್ನು ಹೊಂದಿವೆ. ಅದರಲ್ಲಿ ಮೋಟಿವ್ ರಿಂಗ್‌ನ ಬೆಲೆ $200(16,353 ರೂ.ಗಳು) ಮತ್ತು ಔರಾ ರಿಂಗ್‌ನ ಬೆಲೆ $300 (24,532ರೂ.ಗಳು). ಅದಾಗ್ಯೂ ಬಜೆಟ್‌ ಬೆಲೆಯಲ್ಲೂ ಈ ರಿಂಗ್‌ಗಳು ಲಭ್ಯ ಆಗುತ್ತಿದ್ದು, ಅದರಲ್ಲಿ 1,471ರೂ.ಗಳ ಆರಂಭಿಕ ಬೆಲೆಯನ್ನು ಹೊಂದಿವೆ. ಆದರೆ, ಈ ವಾಚ್‌ಗಳು ಅಷ್ಟೊಂದು ವಿಶೇಷ ಫೀಚರ್ಸ್‌ ಆಯ್ಕೆ ಹೊಂದಿರುವುದಿಲ್ಲ.

Best Mobiles in India

English summary
Smartwatches are a must-have smart device for everyone today, keeping track of the user's health forever. But from now on all this work will be done by SmartRings.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+