Home
ಸುದ್ದಿಜಾಲ

ಗೂಗಲ್‌ ಮ್ಯಾಪ್‌ನಲ್ಲಿನ ಈ ಟೆಕ್ನಿಕ್‌ ಬಳಸಿಕೊಂಡು ಸರಳ ಬೈಕ್‌ ಪ್ರಯಾಣ ಮಾಡಿ!

ಇಂದಿನ ದಿನಗಳಲ್ಲಿ ಬೈಕ್‌ ಸವಾರಿ ಒಂದು ಕ್ರೇಜ್‌ ಆಗಿದೆ. ಕೆಲವರು ಕೆಲಸ ಮಾಡಲು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬೈಕ್‌ ಬಳಕೆ ಮಾಡಿದರೆ ಇನ್ನೂ ಕೆಲವರು ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಬೈಕ್‌ ಮೊರೆ ಹೋಗುತ್ತಾರೆ. ಈ ನಡುವೆ ಭಾರತದಲ್ಲಂತೂ ಹಳ್ಳಿಗಾಡಿನ ಜನರಿಗೆ ಬೈಕ್‌ ಅಂತ್ಯಂತ ಅವಶ್ಯಕವಾಗಿದೆ. ಈ ನಡುವೆ ಗೂಗಲ್‌ ಸಹ ಬೈಕ್‌ ಸೇರಿದಂತೆ ಯಾವುದೇ ಪ್ರಯಾಣಕ್ಕೂ ಬಹಳಷ್ಟು ಸಹಕಾರಿ.

ಹೌದು, ಕೆಲವು ಆಧುನಿಕ ಬೈಕ್‌ಗಳು ಇನ್‌ಬಿಲ್ಟ್‌ ನ್ಯಾವಿಗೇಷನ್ ಸಿಸ್ಟಮ್‌ನೊಂದಿಗೆ ಬಂದಿವೆ. ಯಾಕೆಂದರೆ ಇಂದಿನ ದಿನಗಳಲ್ಲಿ ಹೆಚ್ಚಿನ ಬೈಕ್ ಸವಾರರು ದೈನಂದಿನ ಪ್ರಯಾಣಕ್ಕಾಗಿ ಗೂಗಲ್ ನಕ್ಷೆಗಳಂತಹ ಸೇವೆಗಳನ್ನು ಪಡೆದುಕೊಳ್ಳುವುದು ಹೆಚ್ಚಾಗಿದೆ. ಅದಾಗ್ಯೂ ಸ್ಮಾರ್ಟ್‌ ಫೋನ್‌ನಲ್ಲಿ ಗೂಗಲ್‌ ಮ್ಯಾಪ್‌ ಬಳಕೆ ಮಾಡಿಕೊಂಡು ಪ್ರಯಾಣವನ್ನು ಹೇಗೆ ಸುಖಕರವಾಗಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಲು ಈ ಲೇಖನ ಓದಿರಿ.

ಗೂಗಲ್‌ ಮ್ಯಾಪ್‌ನಲ್ಲಿನ ಈ ಟೆಕ್ನಿಕ್‌ ಬಳಸಿಕೊಂಡು ಸರಳ ಬೈಕ್‌ ಪ್ರಯಾಣ ಮಾಡಿ!

ಇತ್ತೀಚಿನ ಬೈಕ್‌ಗಳಲ್ಲಿ ಫೋನ್ ಸ್ಟ್ಯಾಂಡ್ ಆಯ್ಕೆ ಇದ್ದು, ಈ ಮೂಲಕ ನಿಮ್ಮ ಫೋನ್‌ ಅನ್ನು ಸುಲಭವಾಗಿ ಜೋಡಣೆ ಮಾಡಬಹುದು. ಇದರೊಂದಿಗೆ ಮಾರುಕಟ್ಟೆಯಲ್ಲೂ ಸಹ ಅಗ್ಗದ ಬೆಲೆಗೆ ಇವು ಲಭ್ಯ ಇದ್ದು, ಈ ಫೋನ್ ಕ್ಲಿಪ್ಪರ್‌ಗಳಲ್ಲಿ ಇನ್‌ಬಿಲ್ಟ್‌ ಚಾರ್ಜರ್‌ ಸೌಲಭ್ಯವನ್ನೂ ಸಹ ಪಡೆದುಕೊಂಡಿವೆ. ಈ ಮೂಲಕ ಪ್ರಯಾಣದಲ್ಲಿರುವ ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ರೀಚಾರ್ಜ್ ಮಾಡಿಕೊಳ್ಳಬಹುದು. ಅದೇನೆ ಇರಲಿ ಈಗ ಪ್ರಮುಖ ವಿಷಯಕ್ಕೆ ಬರೋಣ. ನೀವು ಗೂಗಲ್‌ ಮ್ಯಾಪ್ಸ್‌ ಅನ್ನು ಅವಲಂಬಿಸಿರುವ ಪ್ರಯಾಣಿಕರಾಗಿದ್ದರೆ, ನೀವು ತಿಳಿದಿರಲೇಬೇಕಾದ ಫೀಚರ್ಸ್‌ ಇವು.

ಆಫ್‌ಲೈನ್ ನಕ್ಷೆ ಸೌಲಭ್ಯ: ನೀವು ನಿಮ್ಮ ಬೈಕ್‌ನಲ್ಲಿ ಯಾವುದೇ ಸವಾರಿಯನ್ನು ಪ್ರಾರಂಭಿಸುವ ಮೊದಲು ಆಫ್‌ಲೈನ್ ನಕ್ಷೆಗಳನ್ನು ಡೌನ್‌ಲೋಡ್ ಮಾಡುವುದು ಉತ್ತಮವಾಗಿದೆ. ಯಾಕೆಂದರೆ ಫೋನ್ ಸೆಲ್ಯುಲಾರ್ ಸಿಗ್ನಲ್ ಅನ್ನು ಕಳೆದುಕೊಂಡಾಗಲೂ ನ್ಯಾವಿಗೇಟ್ ಮಾಡಲು ಅನುಕೂಲ ಆಗುತ್ತದೆ. ನಿರ್ದಿಷ್ಟ ನಗರಗಳ ನಕ್ಷೆಗಳನ್ನು ಡೌನ್‌ಲೋಡ್ ಮಾಡಲು ಗೂಗಲ್‌ ಬಳಕೆದಾರರನ್ನು ಅನುಮತಿಸುತ್ತದೆ ಮತ್ತು ಡಿವೈಸ್‌ ಸ್ಟೋರೇಜ್‌ ಮುಕ್ತಗೊಳಿಸಲು ಇವುಗಳ ಬಳಕೆ ನಂತರ ಅಳಿಸಬಹುದು.

ಸಾರಿಗೆ ವಿಧಾನವನ್ನು ಆಯ್ಕೆಮಾಡಿ: ವಾಹನ ಮತ್ತು ಟ್ರಾಫಿಕ್ ಪರಿಸ್ಥಿತಿಗಳಿಗೆ ಅನುಗುಣವಾಗಿ ಗೂಗಲ್‌ ಮ್ಯಾಪ್ಸ್‌ ಆಟೋಮ್ಯಾಟಿಕ್‌ ಆಗಿ ಉತ್ತಮ ಮಾರ್ಗಗಳನ್ನು ಸೂಚಿಸುತ್ತವೆ. ನಿಮ್ಮ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಅಲ್ಲಿ ಕಾಣಿಸಿಕೊಳ್ಳುವ ಬೈಕ್ ಚಿಹ್ನೆಯನ್ನು ಆಯ್ಕೆ ಮಾಡಿ. ಏಕೆಂದರೆ ಇದು ದ್ವಿಚಕ್ರ ವಾಹನಗಳಿಗೆ ವೇಗವಾಗಿ ಲಭ್ಯವಿರುವ ಮಾರ್ಗವನ್ನು ತೋರಿಸುತ್ತದೆ. ಆದಾಗ್ಯೂ, ನೀವು ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಕಾರ್ ಆಯ್ಕೆಯನ್ನು ಆರಿಸಿ.

ನಕ್ಷೆಗಳ ಪ್ರಕಾರವನ್ನು ಆಯ್ಕೆಮಾಡಿ: ನಕ್ಷೆಗಳಲ್ಲಿ ವಿವಿಧ ಆಯ್ಕೆ ಲಭ್ಯ ಇದ್ದು, ಅದರಲ್ಲಿ ನೀವೇನಾದರೂ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದರೆ, ಡೀಫಾಲ್ಟ್ ಮ್ಯಾಪ್ ಪ್ರಕಾರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಅಪಾರ್ಟ್ಮೆಂಟ್ ಅಥವಾ ನಿರ್ದಿಷ್ಟ ಸ್ಥಳವನ್ನು ಹುಡುಕಲು ಪ್ರಯತ್ನಿಸುತ್ತಿದ್ದರೆ ಉತ್ತಮ ಸೇವೆ ಪಡೆದುಕೊಳ್ಳುವ ಉದ್ದೇಶದಿಂದ ಯಾವಾಗಲೂ ಉಪಗ್ರಹ ನಕ್ಷೆಯ ಪ್ರಕಾರವನ್ನು ಆಯ್ಕೆಮಾಡಿ.

ಲೈವ್ ಟ್ರಾಫಿಕ್ ಅಪ್‌ಡೇಟ್‌ ಸಕ್ರಿಯಗೊಳಿಸಿ: ಇದೆಲ್ಲಕ್ಕಿಂತ ಮಿಗಿಲಾಗು ಮಹಾನಗರಗಳಲ್ಲಿ ನೀವು ಸಂಚಾರ ಮಾಡುತ್ತಿದ್ದರೆ ಜನ ದಟ್ಟಣೆ, ಟ್ರಾಫಿಕ್ ಮತ್ತು ಹೆಚ್ಚಿನವುಗಳ ಕುರಿತು ನೈಜ-ಸಮಯದ ನವೀಕರಣಗಳನ್ನು ಪಡೆಯಲುನಕ್ಷೆಗಳಲ್ಲಿ ದಟ್ಟಣೆಯನ್ನು ತೋರಿಸು ಎಂಬ ಆಯ್ಕೆಯನ್ನು ಸಕ್ರಿಯಗೊಳಿಸಿ. ಈ ಮೂಲಕ ಟ್ರಾಫಿಕ್ ಸ್ಟೇಟಸ್‌ ಅನ್ನು ಅವಲಂಬಿಸಿ ನಿಮ್ಮ ಪ್ರಯಾಣ ಎಷ್ಟು ಸಮಯ ಹಿಡಿಯಬಹುದು ಎಂದು ತಿಳಿಸುತ್ತದೆ.

ವಾಯ್ಸ್‌ ನ್ಯಾವಿಗೇಶನ್‌ ಆನ್‌ ಮಾಡಿ: ಗೂಗಲ್‌ ಮ್ಯಾಪ್ಸ್‌ನಲ್ಲಿ ವಾಯ್ಸ್‌ ನ್ಯಾವಿಗೇಶನ್‌ ಆಯ್ಕೆ ಇದ್ದು, ಇದು ಇದು ಬಳಕೆದಾರರಿಗೆ ಧ್ವನಿ ನಿರ್ದೇಶನಗಳನ್ನು ನೀಡುತ್ತದೆ. ನೀವು ಪ್ರಯಾಣ ಮಾಡುವಾಗ ಫೋನ್‌ ಡಿಸ್‌ಪ್ಲೇಯನ್ನೇ ನೋಡಿಕೊಂಡು ಸಂಚಾರ ಮಾಡಲು ಕಷ್ಟವಾಗಬಹುದು. ಅಂತಹ ಸಂದರ್ಭದಲ್ಲಿ ಈ ರೀತಿಯ ಫೀಚರ್ಸ್‌ ಬಹಳ ಪ್ರಯೋಜನಕಾರಿ. ಇದನ್ನು ಸೆಟ್ಟಿಂಗ್‌ ಆಯ್ಕೆಯಲ್ಲಿ ಹೊಂದಿಸಿಕೊಳ್ಳಬಹುದಾಗಿದೆ.

ಗೂಗಲ್‌ ಮ್ಯಾಪ್‌ನಲ್ಲಿನ ಈ ಟೆಕ್ನಿಕ್‌ ಬಳಸಿಕೊಂಡು ಸರಳ ಬೈಕ್‌ ಪ್ರಯಾಣ ಮಾಡಿ!

ಟೋಲ್ ದರವನ್ನು ಸಕ್ರಿಯಗೊಳಿಸಿ: ಭಾರತದಲ್ಲಿನ ಹೆಚ್ಚಿನ ರಸ್ತೆಗಳು ಬೈಕರ್‌ಗಳಿಂದ ಟೋಲ್‌ಗಳನ್ನು ಸಂಗ್ರಹಿಸುವುದಿಲ್ಲವಾದರೂ, ಗೂಗಲ್ ನಕ್ಷೆಗಳು ಒಂದು ಸ್ಥಳದಿಂದ ಇನ್ನೊಂದಕ್ಕೆ ಟೋಲ್ ಬೆಲೆಯ ಬಗ್ಗೆ ಮಾಹಿತಿಯನ್ನು ಒದಗಿಸಬಹುದು. ಇದು ನಿಮ್ಮ ಕಾರಿನ ಹಾಗೂ ಇನ್ನಿತರೆ ವಾಹನದ ಮೂಲಕ ಸವಾರಿ ಮಾಡುವಾಗ ಅನುಕೂಲ ಆಗುತ್ತದೆ. ಜೊತೆಗೆ ಯಾವ ಮಾರ್ಗದಲ್ಲಿ ಹೋದರೆ ಹಣ ಉಳಿತಾಯ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಬಹುದು.

ವೇಗ ಮಿತಿಯನ್ನು ಹೊಂದಿಸಿ : ಗೂಗಲ್‌ ಮ್ಯಾಪ್ಸ್‌ನಲ್ಲಿ ಸ್ಪೀಡೋಮೀಟರ್ ಅನ್ನು ಸಕ್ರಿಯಗೊಳಿಸಬಹುದು. ನೀವು ನಿರ್ದಿಷ್ಟ ವೇಗವನ್ನು ಮೀರಿದಾಗ ವೇಗವನ್ನು ಕಡಿಮೆ ಮಾಡಲು ಮೊಬೈಲ್‌ ಮೇಲೆ ನಿಮಗೆ ಎಚ್ಚರಿಕೆ ನೀಡುತ್ತಿರುತ್ತದೆ. ಈ ಮೂಲಕ ಎಚ್ಚೆತ್ತುಕೊಂಡು ನಿಮ್ಮ ವೇಗವನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ಉತ್ತಮ ಪ್ರಯಾಣ ನಿಮ್ಮದಾಗಿಸಿಕೊಳ್ಳಬಹುದು. ಇದಿಷ್ಟು ಮಾತ್ರವಲ್ಲದೆ ಗೂಗಲ್‌ಮ್ಯಾಪ್‌ನಲ್ಲಿ ಸಾಕಷ್ಟು ಫೀಚರ್ಸ್‌ ಇದ್ದು, ಬಳಕೆದಾರರು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದಾಗಿದೆ.

Best Mobiles in India

English summary
Some modern bikes come with an inbuilt navigation system. However, you make your journey more comfortable by using Google Maps on your smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+