ಸ್ಮಾರ್ಟ್‌ಫೋನ್ ರಕ್ಷಣೆಗೆ ಸರ್ಕಾರ-ಅನುಮೋದಿತ ಈ ಟೂಲ್ಸ್ ಬಳಕೆ ಮಾಡಿ!
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ (smartphone) ಹಾಗೂ ಕಂಪ್ಯೂಟರ್‌ಗಳ ಮೇಲೆ ಸ್ಕ್ಯಾಮರ್‌ಗಳು ವಿವಿಧ ರೀತಿಯಲ್ಲಿ ದಾಳಿ ಮಾಡುವ ಮೂಲಕ ನಿಮ್ಮ ಖಾಸಗಿ ಮಾಹಿತಿ ಹಾಗೂ ಬ್ಯಾಂಕ್ ವಿವರವನ್ನು ಕಲೆ ಹಾಕುತ್ತಿದ್ದಾರೆ. ಜೊತೆಗೆ ಕೋಟಿಗಟ್ಟಲೇ ಹಣ ವಂಚನೆ ಸಹ ಮಾಡಲಾಗಿದೆ. ಈ ಕಾರಣಕ್ಕೆ ನೀವು ನಿಮ್ಮ ಸ್ಮಾರ್ಟ್ ಡಿವೈಸ್‌ಗಳನ್ನು ಅತ್ಯಂತ ಜಾಗರೂಕತೆಯಿಂದ ಬಳಕೆ ಮಾಡಬೇಕಿದೆ.
ಹೌದು, ಈಗಂತೂ ಎಲ್ಲರೂ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಸ್ಕ್ಯಾಮರ್‌ಗಳು ನಿಮ್ಮ ಸ್ಮಾರ್ಟ್‌ಫೋನ್ ಒಳಗೆ ನುಸುಳಿ ಅವರಿಗೆ ಬೇಕಾದ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಆದರೆ, ನೀವು ಕೇಂದ್ರ ಸರ್ಕಾರ-ಅನುಮೋದಿತ ಈ ಟೂಲ್ಸ್‌ಗಳನ್ನು ಬಳಕೆ ಮಾಡುವುದರಿಂದಾಗಿ ನಿಮ್ಮ ಸ್ಮಾರ್ಟ್‌ಡಿವೈಸ್‌ಗಳನ್ನು ಅತ್ಯಂತ ಭದ್ರತೆಯಿಂದ ಕಾಪಾಡಿಕೊಳ್ಳಬಹುದಾಗಿದೆ. ಹಾಗಿದ್ರೆ, ಯಾವುದು ಟೂಲ್ಸ್‌ಗಳು?, ಹೇಗೆಲ್ಲಾ ಕಾರ್ಯನಿರ್ವಹಿಸುತ್ತವೆ ಎಂಬ ಬಗ್ಗೆ ತಿಳಿಯೋಣ ಬನ್ನಿ.

ಇನ್ನು ಸೈಬರ್ ಸ್ವಚ್ಛತಾ ಕೇಂದ್ರವು ರಾಷ್ಟ್ರೀಯ ಸೈಬರ್ ಏಜೆನ್ಸಿ CERT-In ಅಡಿಯಲ್ಲಿ ಕೆಲಸ ಮಾಡುತ್ತಿದ್ದು, ಸೈಬರ್ ಬೆದರಿಕೆಗಳು, ವಂಚನೆಗಳು ಮತ್ತು ಮಾಲ್‌ವೇರ್ ದಾಳಿಗಳಿಂದ ನಿಮ್ಮನ್ನು ಪಾರು ಮಾಡಲು ಹಲವಾರು ಅನುಕೂಲಕರ ಸೌಲಭ್ಯ ನೀಡಿದೆ. ಇನ್ನು ಭಾರತ ಸರ್ಕಾರವು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಈ ಭದ್ರತಾ ಸಂಸ್ಥೆಯನ್ನು ಸ್ಥಾಪಿಸಿದೆ.
ಸೈಬರ್ ಸ್ವಚ್ಛತಾ ಕೇಂದ್ರ ಎಂದು ಕರೆಯಲ್ಪಡುವ ಇದು ಬಾಟ್ನೆಟ್ ಕ್ಲೀನಿಂಗ್ ಮತ್ತು ಮಾಲ್ವೇರ್ ವಿಶ್ಲೇಷಣಾ ಕೇಂದ್ರವಾಗಿದ್ದು, ನಿಮ್ಮ ಕಂಪ್ಯೂಟರ್ ಮತ್ತು ಮೊಬೈಲ್ ಫೋನ್‌ಗಳಿಂದ ಮಾಲ್‌ವೇರ್ ಅನ್ನು ತೆಗೆದುಹಾಕಲು ಉಚಿತ ಪರಿಕರಗಳನ್ನು ಒದಗಿಸುತ್ತದೆ. ನಿಮ್ಮ ಕಂಪ್ಯೂಟರ್‌ನಿಂದ ಮಾಲ್‌ವೇರ್ ಅನ್ನು ತೆಗೆದುಹಾಕಲು ನೀವು ಬಳಸಬಹುದಾದ ಸೈಬರ್ ಸ್ವಚ್ಛತಾ ಕೇಂದ್ರ (CSK) ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಟೂಲ್ಸ್‌ಗಳ ಪಟ್ಟಿ ಇಲ್ಲಿದೆ ನೋಡಿ.

ಇಸ್ಕ್ಯಾನ್ ಆಂಟಿವೈರಸ್, K7 ಸೆಕ್ಯೂರಿಟಿ ಹಾಗೂ ಕ್ವಿಕ್ ಹೀಲ್ ಸೈಬರ್ ಸ್ವಚ್ಛತಾ ಕೇಂದ್ರ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಟೂಲ್ಸ್‌ಗಳ ವಿಭಾಗದಲ್ಲಿ ಮುಖ್ಯ ಸ್ಥಾನ ಪಡೆದುಕೊಂಡಿವೆ. ಹಾಗೆಯೇ ಆಂಡ್ರಾಯ್ಡ್ ಫೋನ್‌ನಿಂದ ಮಾಲ್‌ವೇರ್ ಅನ್ನು ತೆಗೆದುಹಾಕಲು M ಕವಚ್ 2 ಅನ್ನು ಬಳಕೆ ಮಾಡಬಹುದಾಗಿದೆ, ಇದನ್ನು C-ಡ್ಯಾಕ್ ಹೈದರಾಬಾದ್‌ನಿಂದ MeitY ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಇ ಸ್ಕ್ಯಾನ್ CERT ಇನ್ ಬಾಟ್ ರಿಮೂವಲ್ ಅಪ್ಲಿಕೇಶನ್ ಬಳಕೆ ಮಾಡಬಹುದು. ಇದರೊಂದಿಗೆ ಈ ಮೂರು ಟೂಲ್ಸ್ ಸಹ ಬಹಳ ಪ್ರಯೋಜನಕಾರಿ.
ಯುಎಸ್‌ಬಿ ಪ್ರತಿರೋಧ್: ಈ ಟೂಲ್ಸ್ ಡೆಸ್ಕ್‌ಟಾಪ್ ಭದ್ರತಾ ಪರಿಹಾರವಾಗಿದ್ದು, ಇದು ಪೆನ್ ಡ್ರೈವ್‌ಗಳು, ಬಾಹ್ಯ ಹಾರ್ಡ್ ಡ್ರೈವ್‌ಗಳು, ಸೆಲ್ ಫೋನ್‌ಗಳು ಮತ್ತು ಇತರ ಬೆಂಬಲಿತ ಯುಎಸ್‌ಬಿ ಮಾಸ್ ಸ್ಟೋರೇಜ್ ಡಿವೈಸ್‌ನಲ್ಲಿ ಕೆಲಸ ಮಾಡುತ್ತದೆ. ಅಂದರೆ ಸ್ಟೋರೇಜ್ ವಿಭಾಗದಲ್ಲಿ ಇದು ಕೆಲಸ ಮಾಡಲಿದ್ದು, ನಿಮ್ಮ ಸ್ಮಾರ್ಟ್‌ಡಿವೈಸ್ ಒಳಗೆ ಯಾವುದೇ ಮಾಲ್‌ವೇರ್ ಹಾಗೂ ಇನ್ನಿತರೆ ವೈರಸ್ ದಾಳಿ ಮಾಡದಂತೆ ತಡೆಯುತ್ತದೆ.
ಆಪ್ ಸಂವಿದ್: ಈ ಟೂಲ್ಸ್ ಅನ್ನು ವಿಂಡೋಸ್ ಆಪರೇಟಿಂಗ್ ಸಿಸ್ಟಮ್‌ಗಾಗಿ ಅಭಿವೃದ್ಧಿಪಡಿಸಲಾಗಿದೆ. ಜೊತೆಗೆ ಯಾವುದೇ ಪರಿಕರಗಳು ಅಥವಾ ಅಪ್ಲಿಕೇಶನ್‌ಗಳ ಬಳಕೆಯನ್ನು ಈಗಾಗಲೇ ಪರಿಶೀಲಿಸಿದ ಮತ್ತು ಅನುಮೋದಿಸಿದವರಿಗೆ ಮಾತ್ರ ನಿರ್ಬಂಧಿಸುವ ವಿಧಾನವನ್ನು ನೀಡಲಿದೆ. ಅಪ್ಲಿಕೇಶನ್‌ಗಳ ಪಟ್ಟಿಯನ್ನು ನಿರ್ವಹಿಸಲು ಮತ್ತು ಈ ನಿರ್ಬಂಧಗಳನ್ನು ಜಾರಿಗೊಳಿಸಲು ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಅಥವಾ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಅನ್ನು ನಿಯೋಜಿಸುವ ಮೂಲಕ ಸಂಸ್ಥೆಗಳು ಈ ವಿಧಾನವನ್ನು ಅಳವಡಿಸಿಕೊಳ್ಳುತ್ತವೆ.

ಬ್ರೌಸರ್ ಜೆಎಸ್ ಗಾರ್ಡ್: ಹ್ಯೂರಿಸ್ಟಿಕ್ಸ್ ಆಧಾರದ ಮೇಲೆ ವೆಬ್ ಬ್ರೌಸರ್ ಮೂಲಕ ಮಾಡಿದ ದುರುದ್ದೇಶಪೂರಿತ HTML ಮತ್ತು ಜಾವಾ ಸ್ಕ್ರಿಪ್ಟ್ ದಾಳಿಗಳನ್ನು ಪತ್ತೆ ಮಾಡುತ್ತದೆ. ಇದು ಯಾವುದೇ ದುರುದ್ದೇಶಪೂರಿತ ವೆಬ್ ಪುಟಗಳಿಗೆ ಭೇಟಿ ನೀಡಿದಾಗ ಬಳಕೆದಾರರನ್ನು ಎಚ್ಚರಿಸುತ್ತದೆ. ಜೊತೆಗೆ ವೆಬ್ ಪುಟದ ವಿವರವಾದ ವಿಶ್ಲೇಷಣೆ ಬೆದರಿಕೆ ವರದಿಯನ್ನು ನೀಡುತ್ತದೆ. ಈ ಮೂಲಕ ಮುನ್ನೆಚ್ಚರಿಕೆ ವಹಿಸಿಕೊಳ್ಳಬಹುದಾಗಿದೆ.


Click it and Unblock the Notifications








