Home
ಸುದ್ದಿಜಾಲ

ಮಾನಸಿಕ, ದೈಹಿಕ ಆರೋಗ್ಯ ಉತ್ತಮವಾಗಿರಬೇಕೆ?, ಹಾಗಿದ್ರೆ ಫೋನ್‌ನಲ್ಲಿ ಈ ಆಪ್‌ಗಳಿರಲಿ!

ಸ್ಮಾರ್ಟ್‌ಫೋನ್‌ಗಳ (smartphones) ಅತಿಯಾದ ಬಳಕೆ ಪ್ರತಿಯೊಬ್ಬರ ಜೀವನದಲ್ಲೂ ಸಹ ಹಲವಾರು ಸಮಸ್ಯೆಗಳನ್ನು ನಿರ್ಮಾಣ ಮಾಡುತ್ತದೆ. ಆದರೆ, ಇದೇ ಫೋನ್‌ ಅನ್ನು ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಿದರೆ ಫೋನ್‌ ಸಹ ನಿಮಗೆ ಉತ್ತಮ ಸಂಗಾತಿ ಆಗಬಹುದು. ಈ ನಡುವೆ ಸ್ಮಾರ್ಟ್‌ಫೋನ್‌‌ಗಳಲ್ಲಿ ವಿವಿಧ ರೀತಿಯ ಆಪ್‌ಗಳನ್ನು ಬಳಕೆ ಮಾಡಬಹುದಾಗಿದ್ದು, ಸಾಕಷ್ಟು ಪ್ರಯೋಜನ ಸಿಗಲಿದೆ.

ಹೌದು, ಸ್ಮಾರ್ಟ್‌ಫೋನ್‌ ಪರಿಪೂರ್ಣ ಫೋನ್‌ ಆಗಬೇಕು ಎಂದರೆ ಅದರಲ್ಲಿ ಆಪ್‌ಗಳು (apps) ಇರಲೇ ಬೇಕು. ಜನರು ಅವರ ಅಗತ್ಯಕ್ಕೆ ತಕ್ಕಂತೆ ಫೋನ್‌ನಲ್ಲಿ ಆಪ್‌ಗಳನ್ನು ಇನ್‌ಸ್ಟಾಲ್ (Install) ಮಾಡಿಕೊಂಡಿರುತ್ತಾರೆ. ಅದಾಗ್ಯೂ ನಾವಿಲ್ಲಿ ತಿಳಿಸಲು ಹೊರಟಿರುವ ಈ ಆಪ್‌ಗಳು ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಅತ್ಯಾನುಕೂಲ. ಈ ಆಪ್‌ಗಳ ಮೂಲಕ ನೀವು ಸದೃಢ ದೇಹವನ್ನು ಹೊಂದುವುದರ ಜೊತೆಗೆ ಉತ್ತಮ ಜೀವನ ನಡೆಸಲು ಸಹಕಾರಿಯಾಗಲಿದೆ. ಹಾಗಿದ್ರೆ, ಯಾವುವು ಈ ಆಪ್‌ಗಳು?, ಇವುಗಳಿಂದ ಏನೆಲ್ಲಾ ಪ್ರಯೋಜನ ಎಂಬುದನ್ನು ನೋಡೋಣ ಬನ್ನಿ.

ಮಾನಸಿಕ, ದೈಹಿಕ ಆರೋಗ್ಯ ಉತ್ತಮವಾಗಿರಬೇಕೆ?, ಹಾಗಿದ್ರೆ ಫೋನ್‌ನಲ್ಲಿ ಈ ಆಪ್‌ಗಳಿರಲಿ

ಸಾಮಾನ್ಯವಾಗಿ ಆಪ್‌ಗಳನ್ನು ಅಧಿಕೃತ ಮೂಲಗಳಾದ ಗೂಗಲ್‌ ಪ್ಲೇ ಸ್ಟೋರ್‌ ಹಾಗೂ ಆಪಲ್‌ ಸ್ಟೋರ್‌ (Google Play Store and Apple Store) ಮೂಲಕ ಇನ್‌ಸ್ಟಾಲ್‌ ಮಾಡಿಕೊಳ್ಳಲಾಗುತ್ತದೆ. ಈ ಸ್ಟೋರ್‌ಗಳಲ್ಲಿ ಸಾಕಷ್ಟು ಆಪ್‌ಗಳಿವೆ. ಅದರಲ್ಲೂ 2.5 ಮಿಲಿಯನ್‌ಗಿಂತಲೂ ಹೆಚ್ಚು ಆರೋಗ್ಯ ಮತ್ತು ಫಿಟ್‌ನೆಸ್ (Health and Fitness) ಆಪ್‌ಗಳಿದ್ದು, ಇವುಗಳಲ್ಲಿ ಯಾವುದು ಉತ್ತಮ ಆಪ್‌ ಎಂದು ಕಂಡುಕೊಳ್ಳಲು ನಿಮಗೆ ಕಷ್ಟವಾಗಬಹುದು. ಈ ಕಾರಣಕ್ಕೆ ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನೀವು ಈ ಆಪ್‌ಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು.

ಮೈ ಫಿಟ್‌ನೆಸ್‌ಪಾಲ್: ಈ ಆಪ್‌ (MyFitnessPal) ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲಿದೆ. ಅಂದರೆ ವ್ಯಾಯಾಮದ ಜೊತೆಗೆ ಆಹಾರ ಹಾಗೂ ಪಾನೀಯಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ನಿಮಗೆ ಇದು ಉತ್ತಮ ಆಯ್ಕೆ ಆಗಿರಲಿದೆ. ಈ ಆಪ್‌ನಲ್ಲಿ ನೀವು ತಿನ್ನುವ ಆಹಾರದ ಎಲ್ಲಾ ವಿವರಗಳನ್ನು ತಿಳಿದುಕೊಳ್ಳಬಹುದು. ಅಂದರೆ ಆ ಆಹಾರದಲ್ಲಿ ಎಷ್ಟು ಕ್ಯಾಲೊರಿಗಳಿವೆ ಮತ್ತು ಅದರಲ್ಲಿ ಯಾವ ಪೋಷಕಾಂಶಗಳಿವೆ ಎಂಬುದನ್ನು ಕಂಡುಕೊಳ್ಳಬಹುದು.

ಜೆಫಿಟ್: ಈ ಆಪ್ (Zephyt) ಸಹಾಯದಿಂದ ಇಡೀ ದಿನದ ವ್ಯಾಯಾಮದ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ಪಡೆದುಕೊಳ್ಳಬಹುದು. ಈ ಆಪ್‌ ಹಲವಾರು ವರ್ಕ್‌ಔಟ್ ಮೋಡ್‌ಗಳನ್ನು (Workout mode) ಹೊಂದಿದೆ. ಅವುಗಳನ್ನು ಅನುಸರಿಸುವ ಮೂಲಕ, ನೀವು ದೈಹಿಕವಾಗಿ ಸದೃಢವಾಗಬಹುದಾಗಿದೆ. ಅದರಲ್ಲೂ ಯಾವ ವ್ಯಾಯಾಮ ಎಷ್ಟು ಪ್ರಯೋಜನಕಾರಿ ಮತ್ತು ಅದನ್ನು ಏಕೆ ಮಾಡಬೇಕು ಎಂಬುದನ್ನು ಸಹ ಈ ಆಪ್‌ ಮೂಲಕ ತಿಳಿದುಕೊಳ್ಳಬಹುದು.

ನೈಕ್ ಟ್ರೈನಿಂಗ್ ಕ್ಲಬ್: ಈ (Nike Training Club) ಆಪ್‌ ಬರೋಬ್ಬರಿ 185 ಕ್ಕೂ ಹೆಚ್ಚು ವರ್ಕ್‌ಔಟ್ ಮೋಡ್‌ಗಳ ಆಯ್ಕೆ ಹೊಂದಿದ್ದು, ವಿವಿಧ ಯೋಗ ಆಸನಗಳೂ ಸಹ ಇದರಲ್ಲಿವೆ. ಈ ಆಪ್‌ ಮೂಲಕ ನೀವು ಇಡೀ ದಿನದ ವ್ಯಾಯಾಮದ ವಿವರಗಳನ್ನು ಮುಂಚಿತವಾಗಿ ಪಡೆಯಬಹುದು. ಜೊತೆಗೆ ಯಾವ ಸಮಯದಲ್ಲಿ ಯಾವ ವ್ಯಾಯಾಮ ಮಾಡಬೇಕು ಎಂಬ ಮಾಹಿತಿಯನ್ನೂ ಸಹ ಈ ಆಪ್ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಮಾನಸಿಕ, ದೈಹಿಕ ಆರೋಗ್ಯ ಉತ್ತಮವಾಗಿರಬೇಕೆ?, ಹಾಗಿದ್ರೆ ಫೋನ್‌ನಲ್ಲಿ ಈ ಆಪ್‌ಗಳಿರಲಿ

ಹೆಡ್‌ಸ್ಪೇಸ್: ಈ ಹೆಡ್‌ಸ್ಪೇಸ್ (Headspace) ಆಪ್‌ ಸಹ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಸಹಾಯ ಮಾಡಲಿದೆ. ಅಂದರೆ ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮದೊಂದಿಗೆ ಧ್ಯಾನವೂ (meditation) ಅತ್ಯಗತ್ಯ. ಹೀಗಾಗಿ ಇದು ಯಾವೆಲ್ಲಾ ವ್ಯಾವಾಯಮದೊಂದಿಗೆ ಯಾವ ಧ್ಯಾನ ಮಾಡಬೇಕು. ಆ ರೀತಿ ಮಾಡುವುದರಿಂದ ಆಗುವ ಪ್ರಯೋಜನಗಳು ಏನು ಎಂಬ ಮಾಹಿತಿಯನ್ನು ಈ ಆಪ್‌ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಸ್ಲೀಪ್‌ ಸೈಕಲ್‌: ಉತ್ತಮ ಆರೋಗ್ಯಕ್ಕೆ ನಿದ್ರೆ ಸಹ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸಾಕಷ್ಟು ನಿದ್ರೆಯು ನಿಮ್ಮನ್ನು ಸುಮಾರು 90 ಪ್ರತಿಶತದಷ್ಟು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ. ಉತ್ತಮವಾದ ನಿದ್ರೆ (good sleep) ಹಾರ್ಮೋನ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸ್ಲೀಪ್ ಸೈಕಲ್ ಆಪ್‌ ನಿದ್ರೆಯ ಗುಣಮಟ್ಟ ಮತ್ತು ನಿದ್ರೆಯ ವೇಳೆ ಹೃದಯ ಬಡಿತವನ್ನು ಟ್ರ್ಯಾಕ್‌ ಮಾಡಲಿದೆ. ಈ ಮೂಲಕ ನಿಮ್ಮ ಆರೋಗ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಸಹಕಾರಿ.

Best Mobiles in India

English summary
These apps that we are going to tell you are essential for your mental and physical health. These apps will help you to have a healthy body and lead a better life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+