Home
ಸುದ್ದಿಜಾಲ

WhatsApp ನ ಈ ಉಪಯುಕ್ತ ಫೀಚರ್ಸ್‌ ನೀವಿನ್ನೂ ಬಳಕೆ ಮಾಡಿಲ್ಲವೇ?

ಮೆಟಾ ಒಡೆತನದ ವಾಟ್ಸಾಪ್‌ (WhatsApp) ಅಧಿಕ ಸಕ್ರಿಯ ಬಳಕೆದಾರರನ್ನು ಒಳಗೊಂಡ ಲೀಡಿಂಗ್‌ ಮೆಸೆಜಿಂಗ್ ಅಪ್ಲಿಕೇಶನ್ ಆಗಿ ಮುನ್ನಡೆದಿದೆ. ಇನ್ನು ವಾಟ್ಸಾಪ್‌ ಸದಾ ನೂತನ ಅಪ್‌ಡೇಟ್‌ ಮಾಡುವ ಮೂಲಕ ಬಳಕೆದಾರರಿಗೆ ಒಂದಿಲ್ಲೊಂದು ಅನುಕೂಲಕರ ಫೀಚರ್ಸ್‌ ಸೌಲಭ್ಯ ಒದಗಿಸುತ್ತಾ ಬಂದಿದೆ. ಅದೇ ರೀತಿ ವಾಟ್ಸಾಪ್‌ ಸಂಸ್ಥೆಯು ಇತ್ತೀಚಿಗೆ ಅಪ್‌ಡೇಟ್‌ ಆವೃತ್ತಿಗಳಲ್ಲಿ ಸೇರ್ಪಡೆ ಮಾಡಿರುವ ಕೆಲವು ಫೀಚರ್ಸ್‌ಗಳು ಈಗಾಗಲೇ ಬಳಕೆದಾರರಿಗೆ ಅಚ್ಚರಿ ಮೂಡಿಸಿದ್ದು, ಭಾರೀ ಉಪಯುಕ್ತ ಎನಿಸಿವೆ.

ಹೌದು, ಜನ್ರಪಿಯ ಇನ್‌ಸ್ಟಂಟ್‌ ವಾಟ್ಸಾಪ್‌ (WhatsApp) ಪ್ಲಾಟ್‌ಫಾರ್ಮ್‌ ಇತ್ತೀಚಿನ ಪರಿಚಯಿಸಿರುವ ಕೆಲವು ನೂತನ ಫೀಚರ್ಸ್‌ಗಳು ಬಳಕೆದಾರಿಗೆ ಉಪಯುಕ್ತ ಎನಿಸಿವೆ. ಚಾಟ್‌ ಲಾಕ್‌, ಸ್ಟೇಟಸ್‌ ಲಿಂಕ್ ಪ್ರೀವ್ಯೂವ್‌, ಸ್ಟೇಟಸ್‌ ಪ್ರೋಫೈಲ್‌ ರಿಂಗ್ಸ್‌, ಡೆಡಿಕೇಟೆಡ್‌ ವಿಡಿಯೋ ರೇಕಾರ್ಡಿಂಗ್ ಮೋಡ್‌, ವಾಟ್ಸಾಪ್‌ ಮೆಟಾ AI ಚಾಟ್‌ ನಂತಹ ಕೆಲವು ನೂತನ ಫೀಚರ್ಸ್‌ಗಳು ಸದ್ದು ಮಾಡುತ್ತಿವೆ. ಹಾಗಾದರೇ ವಾಟ್ಸಾಪ್‌ ಸೇರಿರುವ ಕೆಲವು ಹೊಸ ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ತಿಳಿಯಲು ಮುಂದೆ ಓದಿರಿ.

WhatsApp ನ ಈ ಉಪಯುಕ್ತ ಫೀಚರ್ಸ್‌ ನೀವಿನ್ನೂ ಬಳಕೆ ಮಾಡಿಲ್ಲವೇ?

ಸ್ಟೇಟಸ್‌ ಪ್ರೊಫೈಲ್ ರಿಂಗ್ಸ್

ಸ್ಟೇಟಸ್‌ ಪ್ರೊಫೈಲ್ ರಿಂಗ್‌ಗಳ ಫೀಚರ್‌ ಇತ್ತೀಚಿಗೆ ವಾಟ್ಸಾಪ್‌ ಸೇರಿರುವ ಆಯ್ಕೆ ಆಗಿದೆ. ಇದು ಬಳಕೆದಾರರ ಚಾಟ್ ಸ್ಕ್ರೀನ್ ನಿಂದ ನಿಮ್ಮ ಕಾಂಟ್ಯಾಕ್ಟ್‌ ಸ್ಟೇಟಸ್‌ ಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ನಿಮ್ಮ ಸ್ನೇಹಿತರು/ಬಂಧುಗಳು ಪೋಸ್ಟ್ ಮಾಡಿದಾಗ, ಅವರ ಪ್ರೊಫೈಲ್ ಫೋಟೋದ ಸುತ್ತಲೂ ಹಸಿರು ಕಲರ್ ರಿಂಗ್‌ ಕಾಣಬಹುದಾಗಿದೆ. ಈ ರೀತಿ ಕಾಣಿಸಿಲ್ಲ ಎಂದಾದರೇ, ನೀವು ನಿಮ್ಮ ವಾಟ್ಸಾಪ್‌ ಅಪ್‌ಡೇಟ್‌ ಮಾಡಿರಿ.

ಚಾಟ್‌ ಲಾಕ್‌ ಆಯ್ಕೆ

ವಾಟ್ಸಾಪ್‌ಗೆ ಇತ್ತೀಚೆಗೆ ಸೇರ್ಪಡೆ ಆಗಿರುವ ಫೀಚರ್ಸ್‌ಗಳಲ್ಲಿ ಚಾಟ್ ಲಾಕ್ ಸಹ ಒಂದು. ಬಳಕೆದಾರರು ಪರ್ಸನಲ್ ಚಾಟ್‌ಗಳನ್ನು ಲಾಕ್ ಮಾಡುವ ಅವಕಾಶ ಈ ಫೀಚರ್ಸ್‌ ನೀಡಲಿದೆ. ಅಂದಹಾಗೆ ಬಳಕೆದಾರರು ಈ ಫೀಚರ್ಸ್‌ ಆಕ್ಟಿವ್ ಮಾಡಲು ಹೀಗೆ ಮಾಡಿ ಚಾಟ್‌ನ ಪ್ರೊಫೈಲ್ ಆಯ್ಕೆ > ಚಾಟ್ ಲಾಕ್ ಫೀಚರ್ಸ್‌ ಅನ್ನು ಟ್ಯಾಪ್ ಮಾಡಿ. ಇನ್ನು ನೀವು ಚಾಟ್‌ ಲಾಕ್ ಮಾಡಬಯಸುವ ಚಾಟ್‌ಗೆ ಇದೇ ಹಂತವನ್ನು ಅನುಸರಿಸಿ.

ಸ್ಟೇಟಸ್‌ ಲಿಂಕ್ ಪ್ರೀವ್ಯೂವ್‌

ಸ್ಟೇಟಸ್ ಲಿಂಕ್ ಪ್ರೀವ್ಯೂವ್‌ ಫೀಚರ್‌ ಸಹ ವಾಟ್ಸಾಪ್‌ನಲ್ಲಿ ಗಮನ ಸೆಳೆದ ಹೊಸ ಫೀಚರ್ಸ್‌ಗಳಲ್ಲಿ ಒಂದೆನೆಸಿದೆ. ನೀವು ವಾಟ್ಸಾಪ್‌ (WhatsApp) ಆಪ್‌ನಲ್ಲಿ ನಿಮ್ಮ ಸ್ಟೇಟಸ್ ಗೆ ಲಿಂಕ್ ಅನ್ನು ಹಾಕಿದಾಗ, ಆಪ್‌ ಆ ಲಿಂಕ್‌ನ ಪ್ರೀವ್ಯೂವ್‌ ಮೂಲಕವೇ ಫೋಟೋ, ಹೆಡ್‌ಲೈನ್‌ ಮತ್ತು ವಿವರಣೆಯನ್ನು ಪಡೆದುಕೊಳ್ಳಬಹುದು. ಅರ್ಥಾತ್ ಯಾರಾದರೂ ನೀವು ಸ್ಟೇಟಸ್‌ಗೆ ಹಾಕಿದ ನಿಮ್ಮ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ಅವರು ಲಿಂಕ್‌ನ ಕಲ್ಪನೆಯನ್ನು ನೀಡುವ ಸಣ್ಣ ಫೋಟೋ ಮತ್ತು ಮಾಹಿತಿಯನ್ನು ಕಾಣುತ್ತಾರೆ.

ವಾಟ್ಸಾಪ್‌ Meta AI ಚಾಟ್

ವಾಟ್ಸಾಪ್‌ Meta AI ಆಯ್ಕೆಯು ಹೊಸದಾಗಿ ವಾಟ್ಸಾಪ್‌ ಸೇರಿದೆ. ಬಳಕೆದಾರರು ನೇರವಾಗಿ ವಾಟ್ಸಾಪ್‌ನಲ್ಲಿ Meta AI ಅನ್ನು ಬಳಸಬಹುದು. ಅಲ್ಲದೇ ಅಗತ್ಯ ಮಾಹಿತಿ, ಉಪಯುಕ್ತ ಸೇವೆ ಪಡೆಯಬಹುದು. ವಾಟ್ಸಾಪ್‌ನಲ್ಲಿ Meta AI ಚಾಟ್ ಬಳಕೆಯು ಬಳಕೆದಾರರಿಗೆ ನೂತನ ಅನುಭವ ನೀಡಲಿದೆ.

ಡೆಡಿಕೇಟೆಡ್‌ ವೀಡಿಯೊ ರೆಕಾರ್ಡಿಂಗ್ ಮೋಡ್

ವಾಟ್ಸಾಪ್‌ ಇತ್ತೀಚಿಗೆ ಲಾಂಚ್ ಮಾಡಿರುವ ಕೆಲವು ಫೀಚರ್ಸ್‌ಗಳ ಪೈಕಿ ಡೆಡಿಕೇಟೆಡ್‌ ವೀಡಿಯೊ ರೆಕಾರ್ಡಿಂಗ್ ಮೋಡ್ (Dedicated Video Recording Mode) ಸಹ ಒಂದು. ಈ ಮೊದಲು ವಾಟ್ಸಾಪ್‌ನಲ್ಲಿ ವೀಡಿಯೊ ರೆಕಾರ್ಡ್ ಮಾಡಲು, ಬಳಕೆದಾರರು ಕ್ಯಾಮೆರಾ ವಿಭಾಗದಲ್ಲಿನ ಶಟರ್ ಬಟನ್ ಅನ್ನು ಒತ್ತಿ ಹಿಡಿಯಬೇಕಾಗಿತ್ತು. ಆದರೆ ವಾಟ್ಸಾಪ್ ನೂತನ ವೀಡಿಯೊ ರೆಕಾರ್ಡಿಂಗ್ ಮೋಡ್‌ ಆಯ್ಕೆ ಪರಿಚಯಿಸಿದ್ದು, ಈಗ ವಿಡಿಯೋ ರೇಕಾರ್ಡಿಂಗ್ ಮತ್ತಷ್ಟು ಸುಲಭಗೊಳಿಸಿದೆ.

Best Mobiles in India

English summary
Useful WhatsApp Features You Must Know In 2024. check out all new whatsapp features with details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+